
ಜೊತೆಗೆ 500 ರು ಹಾಗೂ 10 ರು ಮೌಲ್ಯದ ನೋಟಿನ ಮೇಲೆ ರುಪಾಯಿ ಚಿನ್ಹೆ ಸರಣಿ ಆರಂಭಿಸಲಾಗುತ್ತದೆ.
2009ರ ಮಾರ್ಚ್ ತಿಂಗಳಿನಿಂದ 10 ರುಪಾಯಿ ನಾಣ್ಯ ಚಲಾವಣೆಯಲ್ಲಿದೆ ಎಂದು ಲೋಕಸಭೆಯಲ್ಲಿ ಹಣಕಾಸು ಖಾತೆ ಸಹಾಯಕ ಸಚಿವ ನಮೋ ನರೈನ್ ಹೇಳಿದರು.
ಆರ್ ಬಿಐ ಪ್ರಕಾರ 10 ರುಪಾಯಿ ನೋಟಿನ ಸರಾಸರಿ ಆಯುಷ್ಯ ಕೇವಲ 9 ರಿಂದ 10 ತಿಂಗಳು ಮಾತ್ರ.
ಪ್ರತಿ ನೋಟಿನ ಮುದ್ರಣಕ್ಕೆ 96 ಪೈಸೆ ವೆಚ್ಚವಾಗುತ್ತದೆ. ಪ್ರತಿ 10 ರು ನಾಣ್ಯ ಟಂಕಿಸಲು 6.10 ರು ವೆಚ್ಚವಾಗುತ್ತದೆ. ನೋಟಿನ ಆಯುಷ್ಯ ಕಮ್ಮಿ ಇರುವುದರಿಂದ ನಾಣ್ಯ ಬಳಕೆ ಹೆಚ್ಚಿಸಲು ಆರ್ ಬಿಐ ಚಿಂತಿಸಿದೆ.
ಇದರ ಜೊತೆಗೆ ನೋಟಿನ ಆಯುಷ್ಯ ವೃದ್ಧಿಸಲು 10 ಲಕ್ಷ ರು ಮುಖಬೆಲೆಯ 10 ಲಕ್ಷ ಪಾಲಿಮಾರ್/ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡಲು ಯೋಜಿಸಿದೆ ಎಂದು ಸಚಿವ ನರೈನ್ ಹೇಳಿದರು.
ನಾನಾ ಮುಖಬೆಲೆಯ ಸುಮಾರು 17,600 ದಶಲಕ್ಷ ನೋಟುಗಳನ್ನು ದೇಶದ ನಾಲ್ಕು ಪ್ರೆಸ್ ಗಳಲ್ಲಿ ಮುದ್ರಿಸಲಾಗುತ್ತಿದೆ. ನೋಟು ಮುದ್ರಣ ವಿಷಯದಲ್ಲಿ ಭಾರತ ಸ್ವಾವಲಂಬಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವ್ ಪಿ ಚಿದಂಬರಂ ಹೇಳಿದರು.
10 ರು ಮೌಲ್ಯದ 'ಎ' ಸರಣಿಯ ಮಹಾತ್ಮಾ ಗಾಂಧೀಜಿ ಚಿತ್ರವುಳ್ಳ ಸರಣಿಯಲ್ಲಿ ಡಿ ಸುಬ್ಬರಾವ್ ಅವರ ಸಹಿ ಇರಲಿದೆ. 2012ರಲ್ಲಿ ಇದು ಮುದ್ರಣವಾಗಿದೆ ಎಂಬುದನ್ನು ಗಮನಿಸಬಹುದು ಎಂದು ಸಚಿವ ಚಿದಂಬರಂ ತಿಳಿಸಿದರು.


Click it and Unblock the Notifications