
ಹೊಸ ನಿಧಿ ಯೋಜನೆಯ ಪ್ರತಿ ಯೂನಿಟ್ ಗೆ 10 ರು ದರದಂತೆ ಸಿಗಲಿದೆ . New Fund Offer (NFO) ಚಂದಾದಾರರಾಗಲು ಫೆಬ್ರವರಿ 25 ಕೊನೆ ದಿನಾಂಕ.
ಸೆಬಿ ನೀಡಿರುವ ಮಾಹಿತಿ ಪ್ರಕಾರ ಆರಂಭಿಕ ಶುಲ್ಕ ಇರುವುದಿಲ್ಲ. ಈ ಯೋಜನೆ ಸ್ಟಾಕ್ ಎಕ್ಸ್ ಚೇಂಜ್ ಅಥವಾ ಇತರೆ ಷೇರು ವ್ಯವಹಾರದಲ್ಲಿ ಕಾಣಿಸಿಕೊಳ್ಳುವುದರಿಂದ ನಿರ್ಗಮನ ಶುಲ್ಕ ಕೂಡಾ ವಿಧಿಸಲಾಗುತ್ತಿಲ್ಲ. ಈ ಯೋಜನೆಯಿಂದ ನಿರ್ಗಮಿಸ ಬಯಸುವ ಹೂಡಿಕೆದಾರರು ಕೂಡಾ ಸ್ಟಾಕ್ ಎಕ್ಸ್ ಚೇಂಜ್ ಮೂಲಕ ನಿರ್ಗಮಿಸಬಹುದು.
ಕನಿಷ್ಠ ಅರ್ಜಿ ಮೊತ್ತ 10,000 ರು ಆಗಿದ್ದು ತದನಂತರ 10 ರ ಹತ್ತರ ಗುಣಕದಂತೆ ಲೆಕ್ಕಚಾರ ಹಾಕಲಾಗುತ್ತೆ. ಈ ಯೋಜನೆಯಲ್ಲಿ ಪ್ರಗತಿ ಹಾಗೂ ಡಿವಿಡೆಂಡ್ ಎರಡೂ ಆಯ್ಕೆಗಳೂ ಇದೆ. CRISIL ನ ಕಡಿಮೆ ಅವಧಿ ಬಾಂಡ್ ನಿಧಿ ಸೂಚ್ಯಂಕದಂತೆ ಗುಣಮಟ್ಟಕಾಯ್ದುಕೊಳ್ಳಲಾಗಿದೆ. ವೈಡಿ ಪ್ರಸನ್ನ ಯೋಜನೆಯ ವ್ಯವಸ್ಥಾಪಕರಾಗಿರುತ್ತಾರೆ.
ನಿಧಿ ಹಂಚಿಕೆ: ಬಡ್ಡಿದರ ಇಳಿಕೆಯಲ್ಲಿನ ತೊಂದರೆಗಳನ್ನು ನಿವಾರಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಂಡವಾಳ ಹೂಡಿಕೆ ಹಾಗೂ ಶಾಶ್ವತ ಆದಾಯ ಭದ್ರತಾ ಹೂಡಿಕೆಗಳನ್ನು ಹಣ ತೊಡಗಿಸಲಾಗುತ್ತದೆ. ಹೀಗಾಗಿ ಶೇ 0 ರಿಂದ 100ರವರೆಗೆ ಆಸ್ತಿಯನ್ನು ಸಾಲ ಹಾಗೂ ಹಣಕಾಸು ಮಾರುಕಟ್ಟೆ ಉಪಕರಣಗಳನ್ನು ತೊಡಗಿಸಲಾಗುತ್ತದೆ. 367 ದಿನಗಳ ನಂತರ ಯೋಜನೆ ಸಾಕಾರಗೊಳ್ಳುತ್ತದೆ. RGESS ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ
RGESS ನಲ್ಲಿ ಗರಿಷ್ಠ ಮೊತ್ತ 50,000 ರು ತೊಡಗಿಸಬಹುದು 50 ಸಾವಿರದಿಂದ 10 ಲಕ್ಷ ಒಳಗಿನ ಸಂಬಳ ಹೊಂದಿರುವವರಿಗೆ ಇದು ಸೂಕ್ತವಾದ ಯೋಜನೆಯಾಗಿದೆ. ಹಾಗೂ ಈ ಯೋಜನೆಯ ಡಿವಿಡೆಂಡ್ ಪಾವತಿ ತೆರಿಗೆ ರಹಿತವಾಗಿದೆ. ಲಾಗ್ ಇನ್ ಅವಧಿ 3 ವರ್ಷಗಳಾಗಿದ್ದು, 80 ಸಿ ಅಡಿಯಲ್ಲಿ ತೆರಿಗೆ ವಿನಾಯತಿ ಪಡೆಯಬಹುದಾಗಿತ್ತು.


Click it and Unblock the Notifications