
ನಿಶ್ಚಿತ ಠೇವಣಿ ಇಡಲು ಯಾವ ಬ್ಯಾಂಕ್ ಸೂಕ್ತ ಎಂಬ ಲೇಖನದ ಮುಂದುವರೆದ ಭಾಗದಂತೆ ಈ ಲೇಖನವನ್ನು ಓದಬಹುದು. ನಿಶ್ಚಿತ ಠೇವಣಿ ಇಡುವ ಪ್ರಯೋಜನವನ್ನು ಹಾಗೂ ನಿಶ್ಚಿತ ಠೇವಣಿ ಮೂಲಕ ತೆರಿಗೆ ಉಳಿತಾಯ ಪಡೆಯುವುದು ಹೇಗೆ? ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಆದಾಯ ತೆರಿಗೆ ಇಲಾಖೆ ಕಾಯ್ದೆಯ 80C ಪ್ರಕಾರ ನಿಶ್ಚಿತ ಠೇವಣಿ ಕೂಡಾ ತೆರಿಗೆ ಉಳಿಸಬಲ್ಲದು. ಹೂಡಿಕೆ ಮಾಡಲು ಅತ್ಯಂತ ಸುಲಭ ಹಾಗೂ ಹಳೆಯ ವಿಧಾನವಾದ ನಿಶ್ಚಿತ ಠೇವಣಿ(fixed deposit). ಒಂದು ನಿಶ್ಚಿತ ಅವಧಿಯವರೆಗೂ ಬ್ಯಾಂಕಿನಲ್ಲಿ ನಿಮ್ಮ ಹಣ ಇಡಲಾಗುತ್ತೆ. ಬಹುತೇಕ ನಿಶ್ಚಿತವಾದ ಬಡ್ಡಿದರ ಇರುತ್ತದೆ.
ಹತ್ತು ಹಲವು ವಿದೇಶಿ ಮೂಲದ ಬ್ಯಾಂಕುಗಳು, ದೇಶಿ ಬ್ಯಾಂಕ್ ಗಳು, ಸಹಕಾರಿ ಸಂಘದ ಬ್ಯಾಂಕುಗಳು ಹೀಗೆ ವಿವಿಧ ಬ್ಯಾಂಕ್ ಗಳ ವಿವಿಧ ಬಡ್ಡಿದರ ನೋಡಿದರೆ ಯಾವುದು ಹೆಚ್ಚಿನ ಲಾಭ ತರಬಲ್ಲದು ಎಂಬುದನ್ನು ಒಮ್ಮೆಗೆ ನಿರ್ಧರಿಸುವುದು ಎಲ್ಲರಿಗೂ ಕಷ್ಟ. ಇದಕ್ಕಾಗಿ ನಿಶ್ಚಿತ ಠೇವಣಿ ಇಡುವ ಗ್ರಾಹಕರಿಗೆ ಬ್ಯಾಂಕ್ ಗಳು ನೀಡುವ ಬಡ್ಡಿದರದ ಪಟ್ಟಿ ನೋಡಿ ನಿರ್ಧರಿಸಿಕೊಳ್ಳಿ
80C ವ್ಯಾಪ್ತಿಯಲ್ಲಿ ಬ್ಯಾಂಕುಗಳಲ್ಲಿನ ನಿಶ್ಚಿತ ಠೇವಣಿ ಜೊತೆಗೆ ULIPS ಕೂಡಾ ಬರುತ್ತದೆಯಾದರೂ ನಿಶ್ಚಿತ ಠೇವಣಿ ಸರಳ ಹಾಗೂ ಸುಲಭ ವಿಧಾನವಾಗಿದೆ.
ತೆರಿಗೆ ಉಳಿತಾಯ ನಿಶ್ಚಿತ ಠೇವಣಿಗೆ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ರಿಟರ್ನ್ಸ್ ನಲ್ಲಿ ವಿನಾಯಿತಿ ಪಡೆಯಬಹುದಾಗಿದೆ. ಆದರೆ, ನಿಶ್ಚಿತ ಠೇವಣಿಯಾದರೆ 5 ವರ್ಷ ಅವಧಿಯ ಠೇವಣಿಯಾಗಿರಬೇಕು ನಿಯಮವಿದೆ. ULIPs ಹಾಗೂ ELSS ಆದರೆ ಮೂರು ವರ್ಷ ಅವಧಿಯ ಹೂಡಿಕೆಯಾಗಿರುತ್ತದೆ.
ನಿಶ್ಚಿತ ಠೇವಣಿ ವಿಶೇಷಗಳು:
* ಎಲ್ಲಾ ಪ್ರಮುಖ ಬ್ಯಾಂಕ್ ಗಳಲ್ಲಿ ತೆರಿಗೆ ಉಳಿತಾಯ ನಿಶ್ಚಿತ ಠೇವಣಿ ಹೂಡಿಕೆ ಲಭ್ಯವಿರುತ್ತದೆ
* IT ಕಾಯ್ದೆ ಪ್ರಕಾರ 80C ವಿನಾಯಿತಿ ಪಡೆಯಲು 1 ಲಕ್ಷದವರೆಗೂ ಹೂಡಿಕೆ ಸಾಧ್ಯವಿದೆ
* ಜಂಟಿ ಖಾತೆ ಹೊಂದಿದ್ದರೆ ಮೊದಲ ಖಾತೆದಾರರನ್ನು ಮಾತ್ರ ತೆರಿಗೆ ವಿನಾಯಿತಿಗೆ ಪರಿಗಣಿಸಲಾಗುತ್ತದೆ.
* ನಿಶ್ಚಿತ ಠೇವಣಿಯ ಬಡ್ಡಿದರ ತೆರಿಗೆ ಒಳಪಟ್ಟಿರುತ್ತದೆ.
* ಸ್ವೀಪ್ -ಇನ್ ಸೌಲಭ್ಯ ಇರುವುದಿಲ್ಲ.
* ಓವರ್ ಡ್ರಾಫ್ಟ್ ಸೌಲಭ್ಯ ಕೂಡಾ ಅನ್ವಯಿಸುವುದಿಲ್ಲ
ಸಾಮಾನ್ಯ FD ಗಳಲ್ಲಿ TDS ಕಟ್ ಆಗಲಿದೆ. 10,000 ರು.ಗೂ ಅಧಿಕ ಮೊತ್ತದ ಬಡ್ಡಿ ದರ ಕೂಡಾ TDS ಗೆ ಒಳಪಡಲಿದೆ. ನಿವ್ವಳ ಆದಾಯ ತೆರಿಗೆ ಮಿತಿ ಮೀರಿದ್ದರೆ TDS ಕಟ್ ವಿನಾಯತಿಗೆ ಅರ್ಜಿ ಸಲ್ಲಿಸಬಹುದು ಎಂದು ಆದಾಯ ತೆರಿಗೆ ಕಾಯ್ದೆ ಹೇಳುತ್ತದೆ.
ವಿವಿಧ ಬ್ಯಾಂಕುಗಳ ಬಡ್ಡಿದರ ತುಲನೆ ಇಲ್ಲಿದೆ ನೋಡಿ. ಇದರಲ್ಲಿ 2 ರಿಂದ 3 ವರ್ಷಗಳ ಹೂಡಿಕೆ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.
| ಬ್ಯಾಂಕ್ | 2 ರಿಂದ 3 ವರ್ಷಗಳು |
| ಆಕ್ಸಿಸ್ ಬ್ಯಾಂಕ್ | 9.00 |
| ಬ್ಯಾಂಕ್ ಆಫ್ ಬರೋಡಾ | 9.00 |
| ಬ್ಯಾಂಕ್ ಆಫ್ ಇಂಡಿಯ | 9.00 |
| ಕೆನರಾ ಬ್ಯಾಂಕ್ | 9.05 |
| ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ | 8.75 |
| ಕಾರ್ಪೊರೇಷನ್ ಬ್ಯಾಂಕ್ | 8.75 |
| ಎಚ್ ಡಿಎಫ್ ಸಿ ಬ್ಯಾಂಕ್ | 8.75 |
| ಐಸಿಐಸಿಐ ಬ್ಯಾಂಕ್ | 8.75 |
| ಐಡಿಬಿಐ ಬ್ಯಾಂಕ್ | 9.00 |
| ಐಎನ್ ಜಿ ವೈಶ್ಯ ಬ್ಯಾಂಕ್ | 9.25 |
| ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ | 8.75 |
| ಸಿಂಡಿಕೇಟ್ ಬ್ಯಾಂಕ್ | 8.75 |
| ಫೆಡರಲ್ ಬ್ಯಾಂಕ್ | 9.00 |
| ಯೂನಿಯನ್ ಬ್ಯಾಂಕ್ ಆಫ್ ಇಂಡಿಯ | 9.00 |
| ವಿಜಯ ಬ್ಯಾಂಕ್ | 9.00 |


Click it and Unblock the Notifications