
ಟಿಡಿಎಸ್ ತಪ್ಪು ತಪ್ಪಾಗಿ ಮಾಹಿತಿ ತುಂಬಿ ಸಲ್ಲಿಸುವ ವ್ಯಕ್ತಿಗಳಿಗೆ ದಂಡ ವಿಧಿಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದ್ದು, ಈ ದಂಡದ ಪ್ರಮಾಣ 10 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಇರಲಿದೆ.
ತಪ್ಪು ಮಾಹಿತಿ ನೀಡಿರುವ ವಿಷಯವನ್ನು ತಿಳಿಸಿದ ಬಳಿಕವೂ ಮರು ಭರ್ತಿ ಮಾಡಿದ ಅರ್ಜಿಯಲ್ಲಿಯೂ ತಪ್ಪು ಮಾಡುವವರಿಗೆ ಈ ದಂಡ ವಿಧಿಸಲಾಗುತ್ತದೆ. ಜುಲೈ 1 ರಿಂದಲೇ ಈ ಕಾನೂನು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. [ಮೂಲದಲ್ಲಿ ತೆರಿಗೆ ಕಡಿತ(TDS) ಎಂದರೇನು?]
ವಿಳಂಬಕ್ಕೂ ದಂಡ: ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್) ಪಾವತಿ ಸಂಪೂರ್ಣವಾಗಿ ಅಥವಾ ಸರಿಯಾದ ಸಮಯಕ್ಕೆ ಕಟ್ಟದಿದ್ದರೆ ಅಂಥ ಕಂಪನಿಗಳಿಗೆ 200 ರು ನಿಂದ 1,00,000 ರುವರೆಗೂ ದಂಡ ವಿಧಿಸಲು ಕೇಂದ್ರ ನೇರ ತೆರಿಗೆ ಬೋಡ್(CBDT) ಶಿಫಾರಸು ಮಾಡಿದೆ.
ಟಿಡಿಎಸ್ ಅಥವಾ ಟಿಸಿಎಸ್ ನಿಯಂತ್ರಿಸಲು ಅಧಿಕಾರಿಗಳು ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 234ಇ ಹಾಗೂ 271ಇ ನಿಯಮ ಬಳಸುತ್ತಾರೆ. ಈ ಮೂಲಕ ಟಿಡಿಎಸ್ ವಿಳಂಬ ತಡೆಗೆ ಯತ್ನಿಸಲಾಗುತ್ತದೆ. ಉದ್ಯೋಗಿಗಳ ಸಂಬಳದಲ್ಲಿ ಟಿಡಿಎಸ್ ಕಡಿತಗೊಳಿಸಲು ಸಂಸ್ಥೆಗಳು ಟಿಡಿಎಸ್ ಪಾವತಿ ಮಾಡದೆ ವಿಳಂಬ ಮಾಡಿದ ಉದಾಹರಣೆಗಳು ಸಾಕಷ್ಟು ಸಿಕ್ಕಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
2012-13ರ ಆರ್ಥಿಕ ವರ್ಷದಲ್ಲಿ ಸುಮಾರು 5,58,970 ಕೋಟಿ ರು ಆದಾಯ ತೆರಿಗೆ ಮೊತ್ತ ಸಂಗ್ರಹವಾಗಿದೆ. ಇದರಲ್ಲಿ ಶೇ 41ರಷ್ಟು ಅಥವಾ 2,30,188 ಕೋಟಿ ರು ಟಿಡಿಎಸ್ ನಿಂದ ಬಂದಿದ್ದಾಗಿದೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications