ನವದೆಹಲಿ, ಮಾ, 12 : ಜಪಾನ್ ನ ಸುಮಿಟೊಮೊ ಮಿಸ್ಟುಯ್ ಟ್ರಸ್ಟ್ ಬ್ಯಾಂಕ್ ರಿಲಯನ್ಸ್ ಕ್ಯಾಪಿಟಲ್ ನ ಶೇ. 2.77 ಬಂಡವಾಳವನ್ನು ಅಂದರೆ 371 ಕೋಟಿ ರೂ. ಪಾಲನ್ನು ಕೊಂಡುಕೊಳ್ಳಲು ತೀರ್ಮಾನ ಮಾಡಿದೆ. ಅಲ್ಲದೇ ಬ್ಯಾಂಕ್ ನ ಪಾಲುದಾರಿಕೆಯಲ್ಲೂ ರಿಲಯನ್ಸ್ ಜತೆ ಹೆಜ್ಜೆ ಇಡುವ ಸಾಧ್ಯತೆಯಿದೆ.
ಕಂಪನಿಯ ಶೇ. 277 ಪಾಲನ್ನು ಜಪಾನ್ ನ ಎಸ್ ಎಂಟಿಬಿ ಖರೀದಿಗೆ ಮುಂದಾಗಿದೆ ಎಂದು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕ್ಯಾಪಿಟಲ್ ಗ್ರೂಪ್ ನ ಪ್ರಕಟಣೆ ತಿಳಿಸಿದೆ.[ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?]

ಜಪಾನ್ ನ ಸುಮಿಟೊಮೊ ಮಿಸ್ಟುಯ್ ಟ್ರಸ್ಟ್ ಬ್ಯಾಂಕ್ ನ ಸಹಕಾರದಲ್ಲಿ ರಿಲಯನ್ಸ್ ಕ್ಯಾಪಿಟಲ್ ಭಾರತದಲ್ಲಿ ಹೊಸ ಬ್ಯಾಂಕ್ ವೊಂದನ್ನು ಸ್ಥಾಪನೆ ಮಾಡುವ ಚಿಂಯನೆಯಿದೆ. ಇದಕ್ಕೆ ಆರ್ ಬಿಐ ಸಮ್ಮತಿಸಿದರೆ ನಮ್ಮ ಪಾಲುದಾರಿಕೆಯಲ್ಲಿ ಅವಕಾಶ ಕಲ್ಪಿಸಿಕೊಡಬಹುದು ಎಂದು ರಿಲಯನ್ಸ್ ಕ್ಯಾಪಿಟಲ್ ಸಿಇಒ ಸಾಮ್ ಘೋಷ್ ಹೇಳಿದ್ದಾರೆ.
ನಾವು ಈ ಬಗ್ಗೆ ಹೆಚ್ಚಿನ ವಿಶ್ವಾಸ ಹೊಂದಿದ್ದೇವೆ. ಹೊಸ ಅವಕಾಶಗಳನ್ನು ತೆರೆಯಲು ಉತ್ಸುಕರಾಗಿದ್ದೇವೆ. ಇನ್ಶೂರೆನ್ಸ್, ಮ್ಯೂಚುವಲ್ ಫಂಡ್, ವಾಣಿಜ್ಯ ಮತ್ತು ಗೃಹ ಸಾಲಗಳು ಮುಂತಾದ ಸಂಗತಿಗಳ ಆಧಾರದಲ್ಲಿ ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡುವ ಬ್ಯಾಂಕ್ ಒಂದನ್ನು ಸ್ಥಾಪಿಸಬೇಕೆಂದಿದ್ದೇವೆ. ಇದಕ್ಕೆ ಆರ್ ಬಿಐ ಒಪ್ಪಿಗೆ ನೀಡಲಿದೆ ಎಂಬ ವಿಶ್ವಾಸವನ್ನು ಘೋಷ್ ವ್ಯಕ್ತಪಡಿಸಿದ್ದಾರೆ.[ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ನಡುವಿನ ವ್ಯತ್ಯಾಸವೇನು?]
ಸಿಸಿಐ ವ್ಯಾಪಾರ ಕಾನೂನಿನ ಅನ್ವಯ, ಎರಡು ಕಂಪನಿಯ ಷೇರುದಾರರು ಮತ್ತು ಆಳಿತ ಮಂಡಳಿ ಒಪ್ಪಿಗೆಯೊಂದಿಗೆ ಒಂದು ದೀರ್ಘಕಾಳದ ಸಂಬಂಧವನ್ನು ಗಟ್ಟಿಗೊಳಿಸಬಹುದು ಎಂದು ಘೋಷ್ ಹೇಳಿದ್ದಾರೆ. ಎರಡು ಕಂಪನಿಗಳು ಒಂದಾಗಿ ಭಾರತ ಮತ್ತು ಜಪಾನ್ ಎರಡೂ ದೇಶದಲ್ಲಿನ ತಮ್ಮ ಗ್ರಾಹಕರಿಗೆ ಪರಿಹಾರಾತ್ಮಕ ಕೊಡುಗೆಗಳನ್ನು ನೀಡಬಹುದು ಎಂದು ತಿಳಿಸಿದ್ದಾರೆ.
ಜಪಾನ್ ನ ನಾಲ್ಕನೇ ಅತಿದೊಡ್ಡ ಗ್ರೂಪ್ ಆಗಿರುವ ಎಸ್ ಎಂಟಿಬಿ 682 ಬಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ರಿಲಯನ್ಸ್ ಕ್ಯಾಪಿಟಲ್ ಜಪಾನ್ ನ ಇನ್ನೊಂದು ಕಂಪನಿ ನಿಪ್ಪೋನ್ ಜತೆ ವಿಮಾ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ. ಎನರ್ಜಿ, ಪವರ್, ಮೂಲ ಸೌಕರ್ಯ, ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದ ಮೇಲೂ ರಿಲಯನ್ಸ್ ಕ್ಯಾಪಿಟಲ್ ಬಂಡವಾಳ ಹೂಡಿಕೆ ಮಾಡುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ(ಪಿಟಿಐ)


Click it and Unblock the Notifications