ಸರ್ಕಾರಿ ನೌಕರರಿಗೆ ಸರ್ಕಾರ ಮತ್ತೊಂದು ಕೊಡುಗೆ ನೀಡಿದೆ. ಉದ್ಯೋಗಿಗಳಿಗೆ ನೀಡುತ್ತಿದ್ದ ತುಟ್ಟಿಭತ್ಯೆಯನ್ನು ಶೇ,6 ರಷ್ಟು ಹೆಚ್ಚು ಮಾಡಲಾಗಿದೆ. ಅಂದರೆ ಈ ಮೊದಲು ಶೇ. 107 ಇದ್ದ ತುಟ್ಟಿಭತ್ಯೆಯನ್ನು ಶೇ. 113 ಕ್ಕೆ ಏರಿಸಲಾಗಿದೆ.
ಡಿಎ ಅಥವಾ ತುಟ್ಟಿ ಭತ್ಯೆಯಲ್ಲಿ ಮಾಡಿರುವ ಹೆಚ್ಚಳ ಜನವರಿ 01, 2015 ರಿಂದಲೇ ಚಾಲ್ತಿಗೆ ಬಂದಿದೆ. ಈ ಕಾರಣದಿಂದ ಸರ್ಕಾರಿ ನೌಕರರು ತಿಂಗಳ ಅಂತ್ಯಕ್ಕೆ ಪಡೆಯುತ್ತಿದ್ದ ವೇತನದಲ್ಲಿಯೂ ಏರಿಕೆಯಾಗಿದೆ.[ಹೆಚ್ಚಳವಾಗಲಿದೆ ಸರ್ಕಾರಿ ನೌಕರರ ಟೇಕ್ ಹೋಮ್ ಸ್ಯಾಲರಿ]
ಕೇಂದ್ರ ಸರ್ಕಾರದ ನೌಕರರು ಮತ್ತು ಪೆನ್ಶನ್ ಪಡೆಯುವವರು ಸಹ ಈ ಲಾಭ ಪಡೆದುಕೊಳ್ಳಲಿದ್ದಾರೆ. 6 ನೇ ವೇತನ ಆಯೋಗದ ಶಿಫಾರಸ್ಸಿನ ಮೇಲೆ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.[ಬಜೆಟ್ ಏಫೆಕ್ಟ್, ಯಾವುದು ಹೆಚ್ಚು? ಯಾವುದು ಕಡಿಮೆ?]
ಸರ್ಕಾರದ ಈ ನೀತಿಯಿಂದ ಪ್ರತಿವರ್ಷ ತುಟ್ಟಿಭತ್ಯೆ ಕಾರಣಕ್ಕೆ ವೆಚ್ಚವಾಗುತ್ತಿದ್ದ 6762 ಕೋಟಿಗೆ ಬದಲಾಗಿ 7889 ಕೋಟಿ ರೂ. ನೀಡಬೇಕಾಗುತ್ತಿದೆ. ಇದು ಸುಮಾರು 48 ಲಕ್ಷ ಜನ ಸರ್ಕಾರಿ ನೌಕರರು ಮತ್ತು 55 ಲಕ್ಷ ಜನ ನಿವೃತ್ತಿ ವೇತನ ದಾರರಿಗೆ ಲಾಭ ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ. (ಗುಡ್ ರಿಟರ್ನ್ಸ್.ಇನ್)