ಮುಂದಿನ ಎಂಟು ವರ್ಷಗಳಲ್ಲಿ ಭಾರತದ ಜಿಡಿಪಿ 7.9 ರಷ್ಟು ಏರಿಕೆಯಾಗಲಿದ್ದು ಚೀನಾವನ್ನು ಹಿಂದಿಕ್ಕಲಿದೆ ಎಂದು ಹಾರ್ವಡ್ ವಿಶ್ವವಿದ್ಯಾಲಯದ ಅಧ್ಯಯನವೊಂದು ಹೇಳಿದೆ.
ಹಾರ್ವಡ್ ವಿಶ್ವವಿದ್ಯಾಲಯ ದ ಸೆಂಟರ್ ಆಫ್ ಇಂಟರ್ ನ್ಯಾಶನಲ್ ಡೆವಲಪ್ ಮೆಂಟ್(ಸಿಐಡಿ) ಈ ಬಗ್ಗೆ ಅಧ್ಯಯನ ನಡೆಸಿ ವರದಿಯೊಂದನ್ನು ನೀಡಿದೆ. 2023 ರ ವೇಳೆಗೆ ಏಷ್ಯಾ ಖಂಡದಲ್ಲಿ ಭಾರತ ಪ್ರಥಮ ಸ್ಥಾನ ಪಡೆದುಕೊಳ್ಳಲಿದೆ ಎಂದು ಹೇಳಿದೆ.[ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಲೋಪಗಳು ಇವೆ]

ಚೀನಾ ಸದ್ಯ ವಾರ್ಷಿಕವಾಗಿ ಶೇ. 4.6 ಬೆಳವಣಿಗೆ ಸಾಧಿಸುತ್ತಿದೆ. ಭಾರತ ಶೇ. 7.9 ರ ಬೆಳವಣಿಗೆಯಲ್ಲಿಯೇ ಮುಂದುವರಿಯಲಿದೆ. ಅಂದರೆ ಚೀನಾಕ್ಕಿಂತ ಸುಮಾರು ಎರಡು ಪಟ್ಟು ವೇಗದಲ್ಲಿ ಭಾರತದ ಆರ್ಥಿಕತೆ ಅಭಿವೃದ್ಧಿಯಾಗುತ್ತಿದೆ ಎಂದು ಹಾರ್ವಡ್ ವಿಶ್ವವಿದ್ಯಾಲಯ ಪ್ರೋಫೆಸರ್ ರಿಚಾರ್ಡ್ ಹುನ್ಸ್ ಮಾನ್ ತಿಳಿಸಿದ್ದಾರೆ.[ಪ್ರಾಪರ್ಟಿ ಕೊಳ್ಳುವ ಮೊದಲು ಈ 8 ದಾಖಲೆ ಪರಿಶೀಲಿಸಿ]
ಯುರೋಪಿಯನ್ ದೇಶಗಳಿಗೆ ಹೋಲಿಕೆ ಮಾಡಿದರೂ ಭಾರತದ ಆರ್ಥಿಕತೆ ಅಭಿವೃದ್ಧಿಯಲ್ಲಿ ಕ್ಷಿಪ್ರ ಬೆಳವಣಿಗೆಯಾಗುತ್ತಿದೆ. 2023 ರ ವೇಳೆಗೆ ಅಮೆರಿಕ 2.4 ಬೆಳವಣಿಗೆ ಸಾಧಿಸಬಹುದು ಆದರೆ ಇದು ಭಾರತದ ದರಕ್ಕೆ ಸಾಟಿಯಾಗುವುದಿಲ್ಲ ಎಂದು ತಿಳಿಸಿದೆ.
ಉಳಿದಂತೆ 2023ರ ವೇಳೆಗೆ ಇಟಲಿ, ಸ್ಪೇನ್ ಸಹ 3.7 ದರದ ಬೆಳವಾಣಿಗೆ ಕಾಣಲಿವೆ. ಭಾರತ, ಕೀನ್ಯಾ, ಫಿಲಿಫೈನ್ಸ್ ನಂಥ ದೇಶಗಳ ಬೆಳವಣಿಗೆ ವೇಗವಾಗಿದೆ ಎಂದು ವರದಿ ಹೇಳಿದೆ.
ಈ ಬೆಳವಣಿಗೆ ಆಯಾ ದೇಶಗಳ ಸ್ಥಿತಿ ಸುಧಾರಣೆ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಗುರುತಿಸುವಿಕೆಗೆ ಕಾರಣವಾಗುತ್ತದೆ. ಆರ್ಥಿಕ ಅಭಿವೃದ್ಧಿ ದರದ ಲೆಕ್ಕದಲ್ಲಿ ಆಫ್ರಿಕಾದ ದೇಶಗಳು ಅಗ್ರ ಸ್ಥಾನ ಪಡೆದುಕೊಳ್ಳಲಿವೆ ಎಂದು ತಿಳಿಸಿದೆ.


Click it and Unblock the Notifications