ನವದೆಹಲಿ, ಜೂ. 08: ಸಾಲ ಪಡೆಯುವವರಿಗೊಂದು ಸಿಹಿಸುದ್ದಿ. ಆರ್ ಬಿಐ ರೆಪೊ ದರ ಇಳಿಕೆ ನಂತರ ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್ ಗಳು ಸಾಲದ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಿವೆ. ಹೊಸ ಬಡ್ಡಿದ ದರ ಜೂನ್ 8 ರಿಂದಲೇ ಅನ್ವಯವಾಗಲಿದೆ.
ಇಂಡಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಸಿಬಿಐ) ಸಾಲದ ಮೇಲಿನ ಬಡ್ಡಿದರದಲ್ಲಿ ಇಳಿಕೆ ಮಾಡಿವೆ. ಇಂಡಿಯನ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರದಲ್ಲಿ ಶೇ 0.30ರಷ್ಟು ಇಳಿಕೆ ಮಾಡಿದ್ದು ಶೇ. 10.25 ರಿಂದ 9.95ಕ್ಕೆ ದರ ಇಳಿಕೆಯಾದಂತೆ ಆಗಿದೆ.[ಹಣದುಬ್ಬರವನ್ನು ಮೀರಿ ನಡೆವ ಮೂರು ಹೂಡಿಕೆಗಳು]

ಸಿಂಡಿಕೇಟ್ ಬ್ಯಾಂಕ್ ಶೇ 0.25ರಷ್ಟು ಬಡ್ಡಿ ತಗ್ಗಿಸಿದ್ದು, ಬ್ಯಾಂಕಿನ ಸಾಲದ ಮೇಲಿನ ಮೂಲದರ ಶೇ 10ಕ್ಕೆ ಇಳಿದಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇ 0.3ರಷ್ಟು ಬಡ್ಡಿ ಇಳಿಸಿದೆ. ಇದರಿಂದ ಸಾಲದ ಮೇಲಿನ ಮೂಲದರ ಶೇ 9.95ಕ್ಕೆ ಇಳಿಕೆಯಾಗಿದೆ.[ಚಿನ್ನದ ದರ ಬದಲಾವಣೆ ಹಿಂದಿನ ರಹಸ್ಯವೇನು?]
ಠೇವಣಿ ಮೇಲಿನ ಬಡ್ಡಿಯೂ ಇಳಿಕೆ:
ಬ್ಯಾಂಕ್ ಆಫ್ ಬರೋಡಾ (ಬಿಒಬಿ) ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ವಿವಿಧ ಠೇವಣಿಗಳ ಮೇಲಿನ ಬಡ್ಡಿದರದಲ್ಲಿ ಇಳಿಕೆ ಮಾಡಿವೆ. ಬ್ಯಾಂಕ್ ಆಫ್ ಬರೋಡಾ 1 ಕೋಟಿಗೂ ರು. ಕಡಿಮೆ ಮೊತ್ತದ ಠೇವಣಿಗೆ ಶೇ 0.25ರಷ್ಟು ಬಡ್ಡಿ ಇಳಿಸಿದೆ. ಒಂದು ಕೋಟಿಯಿಂದ ಹತ್ತು ಕೋಟಿ ರು. ವರೆಗಿನ ಠೇವಣಿ ಯೋಜನೆಗೆ ಬಡ್ಡಿ ಇದ್ದ ಬಡ್ಡಿಯನ್ನು ಶೇ. 0.10 ತಗ್ಗಿಸಿದೆ. (ಶೇ8.35 ಇದ್ದದ್ದು ಶೇ 8.25 ತಗ್ಗಿದೆ).[ಹೆಚ್ಚು ರಿಟರ್ನ್ಸ್ ನೀಡುವ 7 ಹೂಡಿಕೆ ಟಿಪ್ಸ್]
ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ 270 ದಿನಗಳಿಂದ 10 ವರ್ಷ ಗಳ ವರೆಗಿನ ಅವಧಿಯ 1 ಕೋಟಿ ರು.ಗೂ ಕಡಿಮೆ ಮೊತ್ತದ ಠೇವಣಿಗೆ ಇದ್ದ ಶೇ. 0.25 ಬಡ್ಡಿ ದರವನ್ನು ರಿಂದ ಶೇ. 0.5ಕ್ಕೆ ಇಳಿಸಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications