For Quick Alerts
ALLOW NOTIFICATIONS  
For Daily Alerts

ಆನ್ ಲೈನ್ ನಲ್ಲಿ ಮ್ಯೂಚುವಲ್ ಫಂಡ್ ಖಾತೆ ತೆರೆಯೋದು ಹೇಗೆ?

|

ನಿಮಗೆ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಆಸಕ್ತಿ ಇರುತ್ತದೆ. ಆದರೆ ಸಮಯದ ಅಭಾವ ನಿಮ್ಮನ್ನು ಕಾಡುತ್ತಿದೆಯೇ? ಹಾಗಾದರೆ ಚಿಂತೆ ಬಿಡಿ, ಈಗ ಆನ್ ಲೈನ್ ಮುಖಾಂತರವೂ ಮ್ಯೂಚುವಲ್ ಫಂಡ್ ಖಾತೆ ತೆರೆಯಬಹುದಾಗಿದೆ.

 

ಅಸೆಟ್ ಮ್ಯಾನೆಜ್ ಮೆಂಟ್ ಕಂಪನಿಯೊಂದಿಗೆ (ಎಎಮ್ ಸಿ) ಸೇರಿ ಮ್ಯೂಚುವಲ್ ಫಂಡ್ ಖಾತೆ ತೆರೆಯಬಹುದು. ಅಥವಾ ಮಾರುಕಟ್ಟೆಯ ಅತಿದೊಡ್ಡ ದಲ್ಲಾಳಿ ಅಥವಾ ಸ್ವತಂತ್ರ ಸಂಸ್ಥೆ ಅಂದರೆ ಫಂಡ್ಸ್ ಸ್ಮಾರ್ಟ್ ಅಥವಾ ಫಂಡ್ಸ್ ಇಂಡಿಯಾ ನೆರವಿನಲ್ಲಿ ಖಾತೆ ತೆರೆಯಲು ಅವಕಾಶವಿದೆ.[ಬ್ಯಾಂಕ್ ಡಿಪಾಸಿಟ್ ಬಿಟ್ಟು ಹೂಡಿಕೆ ಮಾಡಲು ಜಾಗವಿದೆ]

 
ಆನ್ ಲೈನ್ ನಲ್ಲಿ ಮ್ಯೂಚುವಲ್ ಫಂಡ್ ಖಾತೆ ತೆರೆಯೋದು ಹೇಗೆ?

ಎಎಂಸಿ ನೆರವಿನಲ್ಲಿ ಮ್ಯೂಚುವಲ್ ಫಂಡ್ ಖಾತೆ ತೆರೆಯುವುದು ಹೇಗೆ?
1. ಮೊದಲು ಎಎಂಸಿಯ ಸೈಟ್ ಗೆ ಭೇಟಿ ನೀಡಿ. ಅದು ಎಚ್ ಡಿಎಫ್ ಸಿ, ಐಸಿಐಸಿಐ ಪ್ರುಫಂಡ್ ಅಥವಾ ಎಸ್ ಬಿಐಎಂಎಫ್ ಯಾವುದೇ ಆಗಿರಬಹುದು.
2. ಇನ್ ವೆಸ್ಟ್ ಆನ್ ಲೈನ್ ಆಯ್ಕೆಯನ್ನು ಆರಿಸಿಕೊಳ್ಳಿ
3. ನಂತರ ಅಪ್ಲಿಕೇಶನ್ ಫಾರ್ಮ್ ಡೌನ್ ಲೋಡ್ ಮಾಡಿಕೊಳ್ಳಿ
4. ನಂತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ[ಭಾರತದಲ್ಲಿ ಇ-ಇನ್ಶೂರೆನ್ಸ್ ಖಾತೆ ತೆರೆಯುವುದು ಹೇಗೆ?]
5. ಎಲ್ಲ ಕೆವೈಸಿ ಮಾಹಿತಿಯನ್ನು ನೀಡಿ ಜತೆಗಿನ ಕೆವೈಸಿ ಫಾರ್ಮ್ ಭರ್ತಿ ಮಾಡಲು ಮರೆಯಬೇಡಿ
6. ಅಡ್ರೆಸ್ ಫ್ರೂಪ್, ಐಡಿ ಮತ್ತು ಎರಡು ಪಾಸ್ ಪೋರ್ಟ್ ಸೈಜಿನ ಫೋಟೋ ಗಳನ್ನು ನೀಡಬೆಕಾಗುತ್ತದೆ.
7. ನಂತರ ಚೆಕ್ ಅಥವಾ ಡಿಡಿ ಪ್ರತಿಯನ್ನು ಸೇರಿಸಬೇಕಾಗುತ್ತದೆ.

ಈ ಎಲ್ಲ ದಾಖಲೆಗಳನ್ನು ನೀವು ಲಾಗ್ ಇನ್ ಆಗಿರುವ ತಾಣ ಸೂಚಿಸುವ ವಿಳಾಸಕ್ಕೆ ಕಳುಹಿಸಿಕೊಡಬೇಕಾಗುತ್ತದೆ. ನಿಮ್ಮ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದ ನಂತರ ಕಂಪನಿ ನಿಮಗೆ ಪಿನ್ ನಂಬರ್ ವೊಂದನ್ನು ಕಳುಹಿಸಿ ಕೊಡುತ್ತದೆ. ಇದರ ಮೂಲಕ ನೀವು ಹಣದ ರವಾನೆಯನ್ನು ಸ್ವತಂತ್ರವಾಗಿ ನಿರ್ವಹಿಸುವ ಸೌಲಭ್ಯ ಪಡೆದುಕೊಳ್ಳುತ್ತೀರಿ.[ಮುಸ್ಲಿಮರಿಗಾಗಿ ಎಸ್ ಬಿಐನಿಂದ ಮ್ಯೂಚುವಲ್ ಫಂಡ್]

ಸ್ವತಂತ್ರ ಹಣಕಾಸು ಸಂಸ್ಥೆಗಳಲ್ಲಿ ಮ್ಯೂಚುವಲ್ ಫಂಡ್ ಖಾತೆ ತೆರೆಯುವುದು ಹೇಗೆ?
1. ಮೊದಲೇ ಹೇಳಿದಂತೆ ಫಂಡ್ಸ್ ಸ್ಮಾರ್ಟ್ ಅಥವಾ ಫಂಡ್ಸ್ ಇಂಡಿಯಾ ಹೆಸರಿನಲ್ಲಿ ಖಾತೆ ತೆರೆಯಲು ಅವಕಾಶವಿದೆ.
2. ವೆಬ್ ತಾಣಕ್ಕೆ ಭೇಟಿ ನೀಡಿ ಆನ್ ಲೈನ್ ಅರ್ಜಿಯನ್ನು ಭರ್ತಿಮಾಡಿ
3. ಅಗತ್ಯ ದಾಖಲೆಗಳಾದ ಹೆಸರು. ವಿಳಾಸ, ಪ್ಯಾನ್ ಕಾರ್ಡ್ ನಂಬರ್, ಬ್ಯಾಂಕ್ ಖಾತೆ ಮಾಹಿತಿಗಳನ್ನು ದಾಖಲಿಸಿ
4. ಎಲ್ಲ ಮಾಹಿತಿ ಭರ್ತಿ ಮಾಡಿದ ನಂತರ ಒಂದು ಪ್ರಿಂಟ್ ಔಟ್ ತೆಗೆದುಕೊಳ್ಳಿ
5. ಅರ್ಜಿಗೆ ಇನ್ನು ಅಗತ್ಯವಿರುವ ಮಾಹಿತಿಯನ್ನು ದಾಖಲು ಮಾಡಿ
6. ಪೋರ್ಟಲ್ ಸೂಚಿಸುವ ಅಡ್ರೆಸ್ ಗೆ ಭರ್ತಿ ಮಾಡಿದ ಮಾಹಿತಿಯನ್ನು ಸೆಂಡ್ ಮಾಡಿ

ಇದಾದ ನಂತರ ನಿಮ್ಮ ಇ ಮೇಲ್ ಗೆ ಕನ್ ಫರ್ ಮೇಶನ್ ಮೇಲ್ ಒಂದು ಬರುತ್ತದೆ. ಅದರ ಮೂಲಕ ಲಾಗ್ ಇನ್ ಆದರೆ ಮುಂದಿನ ಎಲ್ಲ ಹಣಕಾಸು ಕೆಲಸಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆ.

ಕೊನೆ ಮಾತು
ಇದರಲ್ಲಿನ ಒಂದು ದೊಡ್ಡ ಸಮಸ್ಯೆ ಎಂದರೆ ಎಲ್ಲ ಮಾಹಿತಿಗಳನ್ನು ನೀವೇ ನಮೂದಿಸಬೆಕಾಗುತ್ತದೆ. ಯಾರೂ ಇಲ್ಲಿ ಮಾರ್ಗದರ್ಶನ ನೀಡುವಂತೆ ಇರುವುದಿಲ್ಲ. ತಪ್ಪು ಮಾಹಿತಿ ನೀಡಿದರೆ ಅಥವಾ ವ್ಯತ್ಯಾಸ ವಾದರೆ ಮತ್ತೆ ನೀವೇ ಉತ್ತರಿಸಿ ಸರಿ ಮಾಡಿಕೊಳ್ಳಬೇಕಾಗುತ್ತದೆ.(ಗುಡ್ ರಿಟರ್ನ್ಸ್. ಇನ್)

English summary

How To Open Mutual Fund Account Online?

Are you a busy individual who is interested in investing in a mutual fund but lacks the time to open an account? Here is an online way through which you can open the account and invest in mutual fund online. One can open an account with Asset Management company (AMC), with a large broker or an independent institution such as Fundsmart or Fundsindia.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X