ಮುಂಬೈ, ಜೂ. 29 : ತನ್ನ ಬಂಡವಾಳವನ್ನು ಹೆಚ್ಚಿಸಿಕೊಳ್ಳಲು ಕೆಫೆ ಕಾಫಿ ಡೇ ಷೇರು ಮಾರುಕಟ್ಟೆಗೆ ಕಾಲಿಡುವ ಇಂಗಿತ ವ್ಯಕ್ತಪಡಿಸಿದೆ. 1,150 ಕೋಟಿ ರು. ಬಂಡವಾಳ ಸಂಗ್ರಹಿಸುವ ಗುರಿ ಹೊಂದಿದ್ದು ಸಾರ್ವಜನಿಕ ಷೇರು ಮಾರಾಟಕ್ಕೆ (ಐಪಿಒ) ಅವಕಾಶ ನೀಡುವಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ)ಗೆ ಮನವಿ ಸಲ್ಲಿಸಿದೆ.
ಬೆಂಗಳೂರು ಮೂಲದ ಸಂಸ್ಥೆ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡಿದೆ. ಐಪಿಒ ಬಿಡುಗಡೆಗೆ ಅಗತ್ಯವಾದ ಎಲ್ಲ ದಾಖಲೆಗಳನ್ನು ಕಂಪನಿ ಸೆಬಿಗೆ ಸಲ್ಲಿಕೆ ಮಾಡಿದೆ. ಕೊಟಕ್ ಮಹೀಂದ್ರ ಕ್ಯಾಪಿಟಲ್, ಮಾರ್ಗನ್ ಸ್ಟ್ಯಾನ್ಸಿ, ಸಿಟಿ ಗ್ರೂಪ್ ಎಡೆಲ್‍ವೇಸ್ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.[ಚಾಲ್ತಿಯಲ್ಲಿ ಇಲ್ಲದ ಷೇರುಗಳನ್ನು ಮಾರಾಟ ಮಾಡಬಹುದೆ?]

ಕೆಫೆ ಕಾಫಿ ಡೇ ಮಾತೃಸಂಸ್ಥೆ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್(ಸಿಡಿಇಎಲ್)ನಲ್ಲಿ ಹೂಡಿಕೆ ಸಂಸ್ಥೆಗಳಾದ ಕೆಕೆಆರ್ ಅಡ್ವೈಸರ್ಸ್, ನ್ಯೂ ಸಿಲ್ಕ್ ರೂಟ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಕಂಪನಿಗಳು 149.07 ದಶಲಕ್ಷ ಡಾಲರ್ ತೊಡಗಿಸಿದ್ದು ಕಾಫಿ ಡೆ ವ್ಯವಹಾರ-ವಹಿವಾಟು ಚೆನ್ನಾಗಿದೆ.[ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಷೇರುಗಳ ಬಗ್ಗೆ ತಿಳಿದುಕೊಳ್ಳಿ]
ಕಾಫಿ ಡೇ ಕಂಪೆನಿಯ ಮುಖ್ಯ ಪ್ರವರ್ತಕ ವಿ.ಜಿ. ಸಿದ್ದಾರ್ಥ ಶೇ 54.78, ಕೆಕೆಆರ್ ಶೇ 3.43 ಮತ್ತು ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನಿಲೇಕಣಿ ಶೇ 1.77 ಷೇರು ಹೊಂದಿದ್ದಾರೆ. ಕಾಫಿ ಡೇ ತನ್ನ ಸಿಬ್ಬಂದಿಗಾಗಿ 15 ಕೋಟಿ ರು. ಮೌಲ್ಯದ ಷೇರುಗಳನ್ನು ಕಾಯ್ದಿರಿಸಿದೆ.1996 ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಕಂಪನಿ ಸದ್ಯ ದೇಶಾದ್ಯಂತ 1500 ಕ್ಕೂ ಅಧಿಕ ಶಾಖೆ ಹೊಂದಿದೆ.


Click it and Unblock the Notifications