ಗ್ರೀಸ್ ಬಿಕ್ಕಟ್ಟು ಅಂತ್ಯ: ಚೇತರಿಸಿಕೊಂಡ ಷೇರು ಮಾರುಕಟ್ಟೆ

ಮುಂಬೈ, ಜು. 14: ಗ್ರೀಸ್ ಆರ್ಥಿಕ ಬಿಕ್ಕಟ್ಟು ಕೊನೆಗೊಂಡ ಪರಿಣಾಮ ಕೆಳ ಮುಖವಾಗಿ ಚಲಿಸುತ್ತಿದ್ದ ಭಾರತದ ಷೇರು ಮಾರುಕಟ್ಟೆ ಸುಧಾರಣೆ ಕಂಡಿದೆ. ಅಲ್ಲದೇ ಏಷ್ಯಾದ ಮಾರುಕಟ್ಟೆಯಲ್ಲೂ ಚೇತರಿಕೆ ಕಂಡುಬಂದಿದೆ. ಸೆನ್ಸೆಕ್ಸ್ ಮಂಗಳವಾರ ಸಂಜೆ ವೇಳೆಗೆ 27,932.90 ಅಂಕ ದಾಖಲು ಮಾಡಿತ್ತು.

ಗ್ರೀಸ್ ನಲ್ಲಿ ಉಂಟಾಗಿದ್ದ ಆರ್ಥಿಕ ಸಂಕಷ್ಟಕ್ಕೆ ತಾರ್ಕಿಕ ಅಂತ್ಯವೊಂದು ಸಿಕ್ಕಿದೆ. ಯುರೊ ಕರೆನ್ಸಿ ವಲಯದ ಸಾಲದಾತ ರಾಷ್ಟ್ರಗಳಿಂದ 3 ವರ್ಷಗಳ ಅವಧಿಗೆ 6.45 ಲಕ್ಷ ಕೋಟಿ ರೂ.(86 ಶತಕೋಟಿ ಯುರೊ) ಹಣವನ್ನು ಹೊಸ ಸಾಲವಾಗಿ ಪಡೆಯುವುದಕ್ಕೆ ಪ್ರತಿಯಾಗಿ ಗ್ರೀಸ್ ಕಠಿಣ ಆರ್ಥಿಕ ಸುಧಾರಣಾ ಕ್ರಮಗಳನ್ನು ಅನುಸರಿಸಲು ಮುಂದಾಗಿದೆ.[ಚಾಲ್ತಿಯಲ್ಲಿ ಇಲ್ಲದ ಷೇರುಗಳನ್ನು ಮಾರಾಟ ಮಾಡಬಹುದೆ?]

ಗ್ರೀಸ್ ಬಿಕ್ಕಟ್ಟು ಅಂತ್ಯ: ಚೇತರಿಸಿಕೊಂಡ ಷೇರು ಮಾರುಕಟ್ಟೆ

ಕಠಿಣ ಷರತ್ತಿಗೆ ಒಪ್ಪಿಗೆ ಸೂಚಿಸುವ ಮೂಲಕ ಗ್ರೀಸ್, ಯುರೊ ವಲಯದಿಂದ ಹೊರಹೋಗುವ ಗಂಡಾಂತರದಿಂದಲೂ ಸಹ ಪಾರಾಗಿದೆ. ಸಭೆ ಬಳಿಕ ಮಾತನಾಡಿದ ಗ್ರೀಸ್ ಪ್ರಧಾನಿ ಅಲೆಕ್ಸಿಸ್ ಸಿಪ್ರಸ್ ಅವರು 'ಪಿಂಚಣಿ ಯೋಜನೆಗಳ ರದ್ದು ಹಾಗೂ ತೆರಿಗೆ ಹೆಚ್ಚಳ'ದ ಕಠಿಣ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗುವುದು. ಇದ್ಕಕೆ ಪ್ರತಿಯಾಗಿ ಯುರೊ ಕರೆನ್ಸಿ ವಲಯದ ರಾಷ್ಟ್ರಗಳು ಗ್ರೀಸ್‌ಗೆ 3 ವರ್ಷಗಳ ಅವಧಿಗೆ ಹೊಸದಾಗಿ 86 ಶತಕೋಟಿ ಯುರೊ ಸಾಲ ನೀಡಲಿವೆ. ಅದರಲ್ಲಿ ದೇಶದ ಆಡಳಿತವನ್ನು ಸರಿದೂಗಿಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.

ಸದ್ಯ ಗ್ರೀಸ್ ಕಥೆ ಹೇಗಿದೆ?
ತೀವ್ರ ಹಣಕಾಸಿನ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಗ್ರೀಸ್‌ನ ಬ್ಯಾಂಕ್‌ಗಳು ಕಳೆದ 2 ವಾರಗಳಿಂದ ಮುಚ್ಚಿವೆ. ಹಣಕಾಸು ವಹಿವಾಟು ಸ್ಥಗಿತವಾಗಿದ್ದು ಜನ ಪರದಾಡುತ್ತಿದ್ದಾರೆ. ಇದೀಗ ದೇಶಕ್ಕೆ ಸಾಲ ಸಿಗಲಿದ್ದು ಪರಿಸ್ಥಿತಿ ಬದಲಾಗುವ ನಿರೀಕ್ಷೆ ಇದೆ.[ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಷೇರುಗಳ ಬಗ್ಗೆ ತಿಳಿದುಕೊಳ್ಳಿ]

ಜನಮತಗಣನೆಗೆ ತೆರಳಿದ್ದಾಗ ಜನರು ಕಠಿಣ ನಿಯಮಗಳನ್ನು ಒಪ್ಪಿಕೊಳ್ಳಬಾರದು ಎಂದು ಮತ ಚಲಾಯಿಸಿದ್ದರು. ಆದರೆ ದೇಶಕ್ಕೆ ಯಾವುದೇ ಹಾನಿ ಆಗದಂತೆ ವ್ಯವಹಾರ ನಡೆಸಲು ಈ ಕ್ರಮ ಅನಿವಾರ್ಯವಾಯಿತು. ಜನತೆ ಇದಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+