For Quick Alerts
ALLOW NOTIFICATIONS  
For Daily Alerts

ದೇಶದ ಶೇ. 70 ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಇಲ್ಲ!

|

ಭಾರತದಲ್ಲಿ ಚಿನ್ನಾಭರಣಗಳ ಶುದ್ಧತೆ ಗುರುತಿಸುವ ಹಾಲ್‌ಮಾರ್ಕ್‌ ಖಾತರಿ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದು ಭಾರತ ಅದರಲ್ಲಿ ಕೆಲ ಸುಧಾರಣೆ ಮಾಡಿಕೊಳ್ಳಬೇಕು ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ಸಲಹೆ ನೀಡಿದೆ.

 

ಚಿನ್ನಾಭರಣ ತಯಾರಿಕೆಯಲ್ಲಿ ಹಲವಾರು ಬದಲಾವಣೆ ಅಳವಡಿಸಿಕೊಳ್ಳಬೇಕು, ಪರಿಶುದ್ಧತೆಯ ಮಾನದಂಡವನ್ನು ಪರಾಮರ್ಶೆಗೆ ಒಳಪಡಿಸಬೇಕು ಎಂದು ಸಮಿತಿ ತಿಳಿಸಿದೆ.[ಭಾರತದ ಚಿನ್ನದ ದರ ಬದಲಾವಣೆ ಹಿಂದಿನ ರಹಸ್ಯವೇನು?]
ಇಂದಿನ ಚಿನ್ನದ ದರ ನಿಮ್ಮ ನಗರದಲ್ಲಿ ಎಷ್ಟು?

 

ದೇಶದ ಶೇ. 70 ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಇಲ್ಲ!


ಭಾರತದಲ್ಲಿ ಚಾಲ್ತಿಯಲ್ಲಿರುವ ಶೇ 30ರಷ್ಟು ಚಿನ್ನಾಭರಣಗಳಿಗೆ ಮಾತ್ರ ಹಾಲ್‌ಮಾರ್ಕ್‌ ಇದೆ. ಇದು ಹಾಲ್‌ಮಾರ್ಕ್‌ ಕೇಂದ್ರಗಳ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ವ್ಯಕ್ತವಾಗುವಂತೆ ಮಾಡಿದೆ ಎಂದಿದೆ.

ಹಾಲ್‌ಮಾರ್ಕ್‌ಗೆ ಸಂಬಂಧಿದ ರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್ಸ್ (ಬಿಐಎಸ್) ವಿಫಲವಾಗಿದೆ. ಅಲ್ಲದೇ ದರ ಪಟ್ಟಿಯಲ್ಲೂ ವ್ಯತ್ಯಾಸವಿದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.[ಪ್ಯೂಚರ್ ಮಾರುಕಟ್ಟೆಯಿಂದ ಚಿನ್ನ ಖರೀದಿ ಹೇಗೆ?]

ಹಾಲ್‌ಮಾರ್ಕ್ ಕಡ್ಡಾಯ ಮಾಡಿದರೆ ಸಾಲದು. ಅದನ್ನು ಕಟ್ಟು ನಿಟ್ಟಾದ ಅನುಷ್ಠಾನಕ್ಕೆ ಒಳಪಡಿಸಬೇಕು. ಸರ್ಕಾರಗಳು ಈ ನಿಟ್ಟಿನಲ್ಲಿ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.

ಚಿನ್ನದ ಮಾರುಕಟ್ಟೆಯಲ್ಲಿ ಏರುಪೇರಾದರೆ, ಅಥವಾ ನಕಲಿ ಆಭರಣಗಳು ಮಾರುಕಟ್ಟೆ ಪ್ರವೇಶ ಮಾಡಿದರೆ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಉಂಟುಮಾಡಹುದು. ಇಲ್ಲಿ ಗ್ರಾಹಕರ ಹಿತದೊಂದಿಗೆ ದೇಶದ ಹಿತವೂ ಮುಖ್ಯವಾಗುತ್ತದೆ. (ಗುಡ್ ರಿಟರ್ನ್ಸ್.ಇನ್)

English summary

Only 30 Per cent Of Gold jewellery Is Hallmarked In India: WGC

India needs improvements in the hallmarking system which is essential to a successful gold monetisation scheme, the World Gold Council (WGC) said in its latest report. It recommends a number of steps to enhance the current system which, if implemented, would rebuild trust in the purity of Indian gold, giving consumers greater confidence in the caratage of their gold purchases, the WGC said in the press release.
Story first published: Friday, July 31, 2015, 15:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X