ಬೆಂಗಳೂರು, ಆಗಸ್ಟ್ 03: ಇತ್ತೀಚೆಗೆ ಇನ್ಫೋಸಿಸ್ ತನ್ನ ಮೊದಲ ತ್ರೈಮಾಸಿಕ ವರದಿಯಲ್ಲಿ ಭರ್ಜರಿ ಲಾಭ ಗಳಿಸಿದ್ದಲ್ಲದೆ, ಐಟಿ ಷೇರು ಹೊಂದಿರುವವರಿಗೆ ಆಶಾಕಿರಣ ಮೂಡಿಸಿತ್ತು. ಮಾರುಕಟ್ಟೆ ತಜ್ಞರು ಕೂಡಾ ಐಟಿ ಷೇರುಗಳ ಟ್ರೆಂಡ್ ಹೀಗೆ ಮುಂದುವರೆಯುವ ನಿರೀಕ್ಷೆ ಹೊಂದಿದ್ದರು. ಅದರೆ, ಸೋಮವಾರ ಎಚ್ ಸಿಎಲ್ ಟೆಕ್ನಾಲಜೀಸ್ ಎಲ್ಲವನ್ನು ಹುಸಿಗೊಳಿಸಿತು.
ಭಾರತ ನಾಲ್ಕನೇ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ, ನೋಯ್ಡಾ ಮೂಲದ ಎಚ್ ಸಿಎಲ್ ಟೆಕ್ನಾಲಜೀಸ್ 2015-16ರ ಆರ್ಥಿಕ ವರ್ಷದಲ್ಲಿ 7,254 ಕೋಟಿ ರು ನಿವ್ವಳ ಲಾಭ ಗಳಿಸಿ, ವರ್ಷದಿಂದ ವರ್ಷಕ್ಕೆ ಶೇ 14ರಷ್ಟು ಪ್ರಗತಿ ಕಂಡಿದೆ.[ಎಚ್ ಸಿಎಲ್ ಸಂಸ್ಥೆಗೆ ಈ ವರ್ಷ ಶೇ 14ರಷ್ಟು ನಿವ್ವಳ ಲಾಭ]
ಅದರೆ, ಜೂನ್ 30ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ಎಚ್ ಸಿಎಲ್ ನ ನಾಲ್ಕನೇ ತ್ರೈಮಾಸಿಕ (ಏಪ್ರಿಲ್- ಜೂನ್ ) ವರದಿಯಲ್ಲಿ ನಿವ್ವಳ ಲಾಭ ಶೇ 2.8ರಷ್ಟು ಇಳಿಕೆಯಾಗಿ 1,783 ಕೋಟಿ ರು ಮಾತ್ರ ಪಡೆದುಕೊಂಡಿದ್ದು, ಹಾಗೂ ಸರಿಯಾದ ಅಂದಾಜು ಮಾರ್ಗದರ್ಶಿ ಇಲ್ಲದಿರುವುದರಿಂದ ಷೇರುಪೇಟೆಯಲ್ಲಿ ಸರಿ ಸುಮಾರು ಶೇ 6ರಷ್ಟು ಇಳಿಕೆ ಕಂಡಿದೆ.

ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 1,834 ಕೋಟಿ ರು ಗಳಿಸಿತ್ತು. ಈ ಬಾರಿ ನಿವ್ವಳ ಲಾಭ 9,777 ಕೋಟಿ ರು ನಂತೆ ಶೇ 16.1ರಷ್ಟು ಗಳಿಸಿದ್ದೇ ಸಾಧನೆಯಾಗಿದೆ. [ಷೇರು ಪೇಟೆಯಲ್ಲಿ ಎಚ್ ಸಿಎಲ್ ಸಮಗ್ರ ಅಂಕಿ ಅಂಶ]
ಕಳೆದ ಒಂದು 12 ತಿಂಗಳಿನಲ್ಲಿ ಯುಎಸ್ ನಲ್ಲಿ ಶೇ 14 ಹಾಗೂ ಯುರೋಪಿನಲ್ಲಿ ಶೇ 18.7ರಷ್ಟು ಪ್ರಗತಿ ಹೊಂದಲಾಗಿದೆ. 5 ಬಿಲಿಯನ್ ಡಾಲರ್ ಮೌಲ್ಯದ 58 ಹೊಸ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಕೊನೆ ತ್ರೈಮಾಸಿಕದ ಲಾಭ ಇಳಿಕೆ ಅನಿರೀಕ್ಷಿತ ಎಂದು ಸಿಇಒ ಅನಂತ್ ಗುಪ್ತಾ ಹೇಳಿದ್ದಾರೆ. [ಇನ್ಫೋಸಿಸ್ ಷೇರು 'ಬಾಹುಬಲಿ' ಯಂಥ ಜಿಗಿತ ಕಂಡಿದ್ದೇಕೆ?]
ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟಾರೆ 40 ಮೂಲಾಂಶ ಕಳೆದುಕೊಂಡಿದೆ. 800 ರಿಂದ 900 ರು ಇರುವುದು ಷೇರುದಾರರನ್ನು ಆಕರ್ಷಿಸುತ್ತದೆ. ಅದರೆ, ಸದ್ಯಕ್ಕಂತೂ ಹೆಚ್ಚಿನ ಮಂದಿ ಷೇರು ಖರೀದಿಗೆ ಉತ್ಸುಕತೆ ತೋರುವಂತೆ ಕಾಣುತ್ತಿಲ್ಲ. ಇದು ಇತರೆ ಐಟಿ ಕಂಪನಿ ಷೇರುಗಳ ಮೇಲೂ ಪರಿಣಾಮಕಾರಿಯಾಗಬಹುದು ಎಂದು ಎಚ್ ಆರ್ ಬಿವಿ ಕ್ಲೈಂಟ್ ಸಲ್ಯೂಷನ್ಸ್ ಪ್ರೈ ಲಿ ನ ಟಿಎಸ್ ಹರಿಹರ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಬೆಳಗ್ಗೆ ಬಿಎಸ್ ಇನಲ್ಲಿ 957 ರು ನಂತೆ ಆರಂಭವಾದ ಎಚ್ ಸಿಎಲ್ ಷೇರುಗಳು ಒಟ್ಟಾರೆ 59.20 ರು ಕಳೆದುಕೊಂಡು ಶೇ 6ರಷ್ಟು ಕುಸಿತ ಕಂಡಿದೆ. ಎನ್ ಎಸ್ ಇನಲ್ಲಿ 952.45 ರು ನಂತೆ ಆರಂಭವಾಗಿ 59.40 ರು ಕಳೆದುಕೊಂಡು ಶೇ 5.95 ರಷ್ಟು ಇಳಿಕೆ ಕಂಡಿದೆ.


Click it and Unblock the Notifications