For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ಷೇರು 'ಬಾಹುಬಲಿ' ಯಂಥ ಜಿಗಿತ ಕಂಡಿದ್ದೇಕೆ?

By Mahesh
|

ರಾಜಮೌಳಿ ಚಿತ್ರದಲ್ಲಿ ನಾಯಕ 'ಬಾಹುಬಲಿ' ಅಲಿಯಾಸ್ ಶಿವುಡು ಬೃಹತ್ ಬೆಟ್ಟ ಹತ್ತಿ ಜಲಪಾತದ ಹಿನ್ನೆಲೆಯಲ್ಲಿ ಒಂದು ಕಡೆಯಿಂದ ಇನ್ನೊಂದೆಡೆಗೆ ಹಾರುವ ದೃಶ್ಯ ನೆನಪಿರಬಹುದು. ಈಗ ದೇಶದ ಪ್ರತಿಷ್ಠಿತ ಸಾಫ್ಟ್ ವೇರ್ ಸಂಸ್ಥೆಯ ಮುಖ್ಯಸ್ಥರು ಕೂಡಾ ಅದೇ ರೀತಿ ಹಾರಾಡುತ್ತಿದ್ದಾರೆ.

ಮಂಗಳವಾರ(ಜುಲೈ 21) ಪ್ರಕಟಗೊಂಡ ಮೊದಲ ತೈಮಾಸಿಕದಲ್ಲಿ ಭರ್ಜರಿ ಅದಾಯ, ತಕ್ಕಮಟ್ಟಿನ ನಿವ್ವಳ ಲಾಭ ಗಳಿಸಿದ್ದಲ್ಲದೆ, ಷೇರುಪೇಟೆಯಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.

ಸದ್ಯಕ್ಕೆಮಂಗಳವಾರದ ಐಟಿ ಷೇರುಗಳ ಪೈಕಿ ಇನ್ಫೋಸಿಸ್ ಟಾಪ್ ಗಳಿಕೆದಾರ ಎನಿಸಿಕೊಂಡಿದೆ. ಏನಿಲ್ಲವೆಂದರೂ ಶೇ 8 ರಿಂದ 15 ರಷ್ಟು ಏರಿಕೆ ಕಂಡಿದ್ದು, ಷೇರುಪೇಟೆಯಲ್ಲಿ ಭಾರಿ ಸುದ್ದಿಯಾಗುತ್ತಿದೆ. [ಷೇರು ಪೇಟೆಯಲ್ಲಿ ಇನ್ಫೋಸಿಸ್ ಸೂಚ್ಯಂಕ ಸಮಗ್ರ ಅಂಕಿ ಅಂಶ]

ಇನ್ಫೋಸಿಸ್ ಸಂಸ್ಥೆ ರುಪಾಯಿ ಮೌಲ್ಯದಲ್ಲಿ 3,030 ಕೋಟಿ ರು ನಿವ್ವಳ ಲಾಭ, 14,354 ಆದಾಯ ಗಳಿಸಿದೆ. ಮಾರುಕಟ್ಟೆ ತಜ್ಞರು ಜೂನ್ ತ್ರೈಮಾಸಿಕಕ್ಕೆ 3,019 ಕೋಟಿ ರು ನಿವ್ವಳ ಲಾಭ ನಿರೀಕ್ಷಿಸಿದ್ದರು. ನಿರೀಕ್ಷೆ ಮೀರಿ ಲಾಭ ಗಳಿಸಿದ ವಿಶಾಲ್ ಸಿಕ್ಕಾ ಕಂಪನಿ ಷೇರುಗಳನ್ನು ಹೊಂದಿರುವವನೇ ಜಾಣ ಎನಿಸಿಕೊಂಡಿದ್ದಾನೆ. [ಇನ್ಫೋಸಿಸ್ Q1: ಆದಾಯ 12%, ಲಾಭ 5% ಏರಿಕೆ]

ನಿಫ್ಟಿ ಇಂಡೆಕ್ಸ್ ನಲ್ಲಿ 50ಷೇರುಗಳ ಗಳಿಕೆ ಹೆಚ್ಚಿಸಿಕೊಂಡಿರುವ ಇನ್ಫೋಸಿಸ್ ಈಗ ಐಟಿ ಷೇರುಗಳ ಖರೀದಿ- ಮಾರಾಟಕ್ಕೆ ಹೆದ್ದಾರಿ ತೆರೆದಿದೆ. ನಿಫ್ಟಿಯಲ್ಲಿ ಎಚ್ ಡಿಎಫ್ಸಿಯ ಎರಡು ಷೇರು ಮೌಲ್ಯಗಳನ್ನು ಬಿಟ್ಟರೆ ಇನ್ಪೋಸಿಸ್ ಮೌಲ್ಯವೇ ಅಧಿಕವಾಗಿದೆ. ಹೀಗಾಗಿ ಐಟಿ ಷೇರುಗಳಿಗೆ ಶುಭಕಾಲ ಬಂದೈತೆ. ಇಷ್ಟಕ್ಕೂ ಇನ್ಫೋಸಿಸ್ ಷೇರುಗಳು ಈ ಪರಿ ಏರಲು ಏನು ಕಾರಣ ಮುಂದೆ ಓದಿ..

5 ತ್ರೈಮಾಸಿಕದಲ್ಲಿ ಕಂಡಿರದ ದಾಖಲೆ ಆದಾಯ

5 ತ್ರೈಮಾಸಿಕದಲ್ಲಿ ಕಂಡಿರದ ದಾಖಲೆ ಆದಾಯ

ಕಳೆದ 15 ತ್ರೈಮಾಸಿಕದಲ್ಲಿ ಕಂಡಿರದ ದಾಖಲೆ ಮೊತ್ತ ಆದಾಯ ಈ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್ ಪಡೆದುಕೊಂಡಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ 7ರಷ್ಟು ಆದಾಯ ಬಂದಿದೆ. ಬೆಂಗಳೂರು ಮೂಲದ ಸಂಸ್ಥೆ ನಿವ್ವಳ ಆದಾಯ ಈ ತ್ರೈಮಾಸಿಕಕ್ಕೆ ಶೇ12.4ರಷ್ಟು ಏರಿಕೆಯಾಗಿದ್ದು, 14,354 ಕೋಟಿ ರು ನಷ್ಟಿದೆ.

19 ತ್ರೈಮಾಸಿಕದಲ್ಲಿ ಕಾಣದಿದ್ದ ಮೌಲ್ಯವರ್ಧನೆ

19 ತ್ರೈಮಾಸಿಕದಲ್ಲಿ ಕಾಣದಿದ್ದ ಮೌಲ್ಯವರ್ಧನೆ

ಕಳೆದ 19 ತ್ರೈಮಾಸಿಕದಲ್ಲಿ ಕಾಣದಿದ್ದ ಮೌಲ್ಯವರ್ಧನೆ ಈ ತ್ರೈಮಾಸಿಕದಲ್ಲಿ ಕಂಡು ಬಂದಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೆ 5.4ರಷ್ಟು ಏರಿಕೆಯಾಗಿದೆ.

ಕ್ಲೈಂಟುಗಳ ಸಂಖ್ಯೆ ಭರ್ಜರಿಯಾಗಿ ಏರಿಕೆ

ಕ್ಲೈಂಟುಗಳ ಸಂಖ್ಯೆ ಭರ್ಜರಿಯಾಗಿ ಏರಿಕೆ

ಸುಮಾರು 300 ಮಿಲಿಯನ್ ಡಾಲರ್ ಮೌಲ್ಯದ ದೊಡ್ಡ ಕ್ಲೈಂಟು ಕಂಪನಿಗಳು, 200 ಮಿಲಿಯನ್ ಡಾಲರ್ ಕೆಟಗೆರಿಯಲ್ಲಿ ಇಬ್ಬರು ಗ್ರಾಹಕರು ಸೇರಿದಂತೆ ಒಟ್ಟಾರೆ ಜೂನ್ ತ್ರೈಮಾಸಿಕದಲ್ಲಿ ಒಟ್ಟು 6 ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಟಿವಿಸಿ ಜೊತೆ 688 ಮಿಲಿಯನ್ ಡಾಲರ್ ಮಹತ್ವದ್ದಾಗಿದೆ. 79 ಹೊಸ ಕ್ಲೈಂಟುಗಳನ್ನು ಪಡೆಯಲಾಗಿದೆ. ಎಲ್ಲಾ ಸೇರಿ 987ಕ್ಕೂ ಅಧಿಕ ಕ್ಲೈಂಟ್ ಗಳನ್ನು ಹೊಂದಿದೆ.

ಆಟ್ರಿಷನ್ ರೇಟ್ ಭಾರಿ ಪ್ರಮಾಣದಲ್ಲಿ ಇಳಿಕೆ

ಆಟ್ರಿಷನ್ ರೇಟ್ ಭಾರಿ ಪ್ರಮಾಣದಲ್ಲಿ ಇಳಿಕೆ

ಆಟ್ರಿಷನ್ ರೇಟ್ ಭಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಸಂಸ್ಥೆಯ ಆಟ್ರಿಷನ್ ದರ ಕಳೆದ ವರ್ಷಕ್ಕೆ ಹೋಲಿಸಿದರೆ ತಗ್ಗಿದ್ದು 24.4 % ನಿಂದ 14.2%ಗೆ ಇಳಿದಿದೆ. ವಿಶಾಲ್ ಸಿಕ್ಕಾ ಅವರು ಅಧಿಕಾರ ವಹಿಸಿಕೊಂಡ ಮೇಲೆ ಉದ್ಯೋಗಿಗಳು ಸಕತ್ ಖುಷಿಯಾಗಿರುವುದು ಇದರಿಂದ ಕಂಡು ಬಂದಿದೆ.

2015-16ಕ್ಕೆ ಉತ್ತಮ ಆದಾಯ ಮಾರ್ಗದರ್ಶಿ

2015-16ಕ್ಕೆ ಉತ್ತಮ ಆದಾಯ ಮಾರ್ಗದರ್ಶಿ

2015-16ಕ್ಕೆ ಉತ್ತಮ ಆದಾಯ ಮಾರ್ಗದರ್ಶಿ ಸೂಚನೆ ನೀಡಿದ್ದಾರೆ. ಆದಾಯ ಮಾರ್ಗದರ್ಶಿ ಶೇ 10 ರಿಂದ 12ರಷ್ಟಿದ್ದು, ಇನ್ಫೋಸಿಸ್ ಆದಾಯ ಮಾರ್ಗದರ್ಶಿಗೆ ರ್ವಿಶ್ಲೇಷಕರಿಂದ ಮೆಚ್ಚುಗೆ ಸಿಕ್ಕಿದೆ. ಈ ಎಲ್ಲಾ ಕಾರಣಗಳಿಂದ ಷೇರುಗಳು ಏರುತ್ತಿವೆ. ಇನ್ನೂ ಕೆಲ ಕಾಲ ಇನ್ಫೋಸಿಸ್ ಷೇರು ಮೇಲ್ಮುಖದಲ್ಲೇ ಸಂಚರಿಸಲಿದೆ.

English summary

5 Reasons Why Infosys Shares Jumped 10% After Q1 2015-16 Numbers

It was a sterling financial performance by Infosys for the quarter ending June 30, 2015 (Q1 2015-16). The share has jumped a huge 10 per cent following the results. Here are 5 reasons why the stock markets cheered the numbers.
Story first published: Tuesday, July 21, 2015, 12:48 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X