For Quick Alerts
ALLOW NOTIFICATIONS  
For Daily Alerts

ರೆಪೊ ದರ ಬದಲಾವಣೆ ಇಲ್ಲ, ಆರ್‌ಬಿಐ ಸಭೆಯ ಮುಖ್ಯಾಂಶಗಳು

|

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನೀತಿ ನಿಯಮಗಳ ಬದಲಾವಣೆ, ದೇಶದ ಆರ್ಥಿಕ ವ್ಯವಸ್ಥೆ ಕುರಿತು ಮಂಗಳವಾರ ಸಭೆ ನಡೆಸಿತು. ಸಭೆಯಲ್ಲಿ ಅನೇಕ ಸಂಗತಿಗಳು ಚರ್ಚೆಗೆ ಒಳಪಟ್ಟವು. ಆರ್ ಬಿಐ ಸಭೆಯ ಮುಖ್ಯ ಅಂಶಗಳು ಇಲ್ಲಿವೆ.

 

* ಶೇ. 7.25 ಕ್ಕೆ ಸ್ಥಿರವಾದ ರೆಪೊ ದರ
ರೆಪೋ ದರದಲ್ಲಿ ಇದ್ದ ಸ್ಥಿತಿಯನ್ನೇ ಕಾಪಾಡಿಕೊಳ್ಳಲು ಆರ್ ಬಿಐ ಮುಂದಾಗಿದೆ. ಹಣದುಬ್ಬರದ ಏರಿಳಿತವೂ ಇದರ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು ಎಂಬ ಅಂಶದ ಹಿನ್ನೆಲೆಯನ್ನು ಇಟ್ಟುಕೊಂಡು ರೆಪೋ ದರ ಕಾಪಾಡಿಕೊಳ್ಳಲಾಗಿದೆ. ತಜ್ಞರು ಹೇಳುವಂತೆ ರೆಪೋ ದರ ಬದಲಾವಣೆ ಮಾಡದೇ ಇರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.[ಹಣ ಬಾರದಿದ್ದರೆ, ಕಾರ್ಡ್ ಸಿಕ್ಕಿಕೊಂಡರೆ ಯಾರು ಹೊಣೆ?]

 
ರೆಪೊ ದರ ಬದಲಾವಣೆ ಇಲ್ಲ, ಆರ್‌ಬಿಐ ಸಭೆಯ ಮುಖ್ಯಾಂಶಗಳು

* ಶೇ. 4 ಕ್ಕೆ ಸ್ಥಿರವಾದ ಸಿಆರ್ ಆರ್
ಬ್ಯಾಂಕ್ ಗಳ ಕ್ಯಾಶ್ ರಿಸರ್ವ್ ರೆಶಿಯೋ (ಸಿಆರ್ ಆರ್ ) ದಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಮಾರುಕಟ್ಟೆಯಲ್ಲಿ ಲಕ್ವಿಡಿಟಿ ಬದಲಾವಣೆಗಳು ಉತ್ತಮವಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಆರ್ ಬಿಐ ನಿರ್ದೇಶನದಂತೆ ಬ್ಯಾಂಕ್ ಗಳು ನಿರ್ದಿಷ್ಟ ಮೊತ್ತದ ಹಣವನ್ನು ಹೆಚ್ಚುವರಿಯಾಗಿ ಇಟ್ಟುಕೊಂಡಿರಬೇಕು ಇದನ್ನು ಸಿ ಆರ್ ಆರ್ ಎಂದು ಕರೆಯಲಾಗುತ್ತದೆ. ಇಲ್ಲಿ ಮಾಡುವ ಏರಿಕೆ ಇಳಿಕೆ ಎಲ್ಲ ವ್ಯವಹಾರಗಳ ಮೇಲೂ ಪರಿಣಾಮ ಬೀರುತ್ತದೆ.

* ಪ್ರಮುಖ ಬ್ಯಾಂಕ್ ಗಳ ಮೇಲೆ ಅಸಮಾಧಾನ
ಆರ್ ಬಿಐ ಹಿಂದಿನ ಬಾರಿ ತಾನು ಮಾಡಿದ್ದ ಬಡ್ಡಿ ಕಡಿತವನ್ನು ಎಲ್ಲ ಬ್ಯಾಂಕ್ ಗಳು ಸರಿಯಾಗಿ ಅನುಷ್ಠಾನ ಮಾಡಿಲ್ಲ ಅಥವಾ ಎಲ್ಲ ಗ್ರಾಹಕರಿಗೆ ತಲುಪಿಸುವುದರಲ್ಲಿ ಎಡವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಜನವರಿಯಿಂದ ಇಲ್ಲಿಯವರೆಗೆ ಆರ್ ಬಿಐ ಶೇ. 0.75 ಪ್ರಮಾಣದ ಬಡ್ಡಿ ದರ ಕಡಿತ ಮಾಡಿದೆ , ಆದರೆ ಇದರಿಂದ ನಿರೀಕ್ಷಿತ ಪ್ರಮಾಣದ ಪ್ರತಿಕ್ರಿಯೆ ಸಿಕ್ಕಿಲ್ಲ.[ಭಾರತದಲ್ಲಿ ಇ-ಇನ್ಶೂರೆನ್ಸ್ ಖಾತೆ ತೆರೆಯುವುದು ಹೇಗೆ?]

* ಹಣದುಬ್ಬರದ ಭಯ ಹಾಗೇ ಇದೆ
ಆಹಾರ ಮತ್ತು ಇಂಧನದ ದರದಲ್ಲಿ ಆಗುತ್ತಿರುವ ದಿಢೀರ್ ಬದಲಾವಣೆ, ಸೇವಾ ಶುಲ್ಕ ಹೆಚ್ಚಳ, ಪ್ರೋಟಿನ್ ಯುಕ್ತ ಆಹಾರ ಪದಾರ್ಥಗಳು, ಎಣ್ಣೆ ಕಾಳುಗಳ ಬೆಲೆ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವುದು ಹಣದುಬ್ಬರ ಬದಲಾವಣೆ ಭಯವನ್ನು ಹಾಗೇ ಇರಿಸಿದೆ.

* ಸುಧಾರಣೆ ಕಾಲ
ಎಲ್ಲ ಅಂಶಗಳನ್ನು ತಾಳೆಹಾಕಿದರೆ ಇದು ಸುಧಾರಣೆ ಸಮಯ ಎಂದೇ ವಿಶ್ಲೇಷಣೆ ಮಾಡಲಾಗಿದೆ. ಮಾನ್ಸೂನ್ ಮಾರುತಗಳು ಸರಿಯಾಗಿ ಮಳೆ ಸುರಿಸದರೆ 2015ರ ಅಂತ್ಯಕ್ಕೆ ದೇಶದ ಆರ್ಥಿಕ ವ್ಯವಸ್ಥೆ ಮತ್ತಷ್ಟು ಭದ್ರವಾಗಲಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಕೊನೆ ಮಾತು
ಕೇವಲ ಒಂದೆರಡು ಮಾನದಂಡದಿಂದ ದೇಶದ ಒಟ್ಟು ಆರ್ಥಿಕ ಸ್ಥಿತಿ ಲೆಕ್ಕ ಹಾಕಲು ಸಾಧ್ಯವಿಲ್ಲ. ಆದರೆ ಜಾಗತಿಕ ಬದಲಾವಣೆಗೆ ಹೋಲಿಸಿಕೊಂಡು ದೇಶದ ಮೇಲೆ ಅವು ಯಾವ ಪರಿಣಾಮ ಉಂಟುಮಾಡುತ್ತಿವೆ ಎಂದು ವಿಶ್ಲೇಷಿಸಿದರೆ ಪರಿಹಾರ ಮಾರ್ಗಗಳನ್ನು ಹುಡುಕಲು ಸಾಧ್ಯ. (ಗುಡ್ ರಿಟರ್ನ್ಸ್.ಇನ್)

English summary

5 Takeaways From The RBI Monetary Policy

The Reserve Bank of India (RBI) today held interest rates steady in its policy meet and also kept the CRR unchanged. Here are quick takeaways from the RBI Policy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X