ಸೋಮವಾರ ಷೇರು ಮಾರುಕಟ್ಟೆ ತನ್ನ ಹಳೆಯ ದಾರಿಗೆ ಮರಳಿದಂತೆ ಕಂಡಿತು. ಸೆನ್ಸೆಕ್ಸ 246 ಅಂಕಗಳ ಏರಿಕೆ ಸಾಧಿಸಿದರೆ, ನಿಫ್ಟಿ 82 ಅಂಕಗಳ ಏರಿಕೆ ಸಾಧಿಸಿತು.
ಜಾಗತಿಕ ಮಾರುಕಟ್ಟೆ, ಏಷ್ಯಾ ಮತ್ತು ಜಪಾನ್ ಮಾರುಕಟ್ಟೆಗಳು ಸಹ ಗಳಿಕೆ ಸಾಧಿಸಿದವು. ಯುರೋಪ್ ನ ಮಾರುಕಟ್ಟೆಯಲ್ಲಿ ಸಹ ತೇಜಿ ಕಂಡುಬಂತು. ಹಾಗಾದರೆ ಸೋಮವಾರದ ಮಾರುಕಟ್ಟೆಯಲ್ಲಿ ಯಾವ ಷೇರುಗಳು ಗಳಿಕೆ ಸಾಧಿಸಿದವು ಎಂಬುದನ್ನು ನೋಡಿಕೊಂಡು ಬರೋಣ.

ಅಮ್ಟೆಕ್ ಆಟೋ
ಅಮ್ಟೇಕ್ ಆಟೋದ ಷೇರುಗಳು ಸೋಮವಾರ ಶೇ. 18 ರಷ್ಟು ಏರಿಕೆ ಸಾಧಿಸಿ ದಾಖಲೆ ನಿರ್ಮಿಸಿದವು. ಒಮ್ಮೆ 57.90 ರು ಮುಟ್ಟಿದ ಷೇರು ಅಂತಿಮವಾಗಿ 52.80 ರಲ್ಲಿ ಕೊನೆಯಾಯಿತು.
ಕೆಶೋರಾಮ್
ಕೆಶೋರಾಮ್ ಷೇರುಗಳು ತೀವ್ರ ತೆರೆನಾದ ಏರಿಕೆ ಸಾಧಿಸಿದವು. ಜೆಕೆ ಟೈಯರ್ಸ್ ಗೆ ತನ್ನ ಶಾಖೆಯನ್ನು ಮಾರಾಟ ಮಾಡಿದ್ದು ಏರಿಕೆಗೆ ಕಾರಣ ಎಂದು ಹೇಳಬಹುದು. ಶೇ. 1.07 ಏರಿಕೆ ಸಾಧಿಸಿದ ಷೇರು 103 ರು. ನಲ್ಲಿ ವ್ಯವಹಾರ ಮುಗಿಸಿತು.
ಎಲ್ ಅಂಡ್ ಟಿ ಫೈನಾನ್ಸ್
ಬೈನ್ ಕ್ಯಾಪಿಟಲ್ ಎಲ್ ಅಂಡ್ ಟಿ ಫೈನಾನ್ಸ್ ನ ಒಂದು ಭಾಗವನ್ನು ಖರೀದಿ ಮಾಡಲಿದೆ ಎಂಬ ಸುದ್ದಿ ಹರಿದಾಡಿದ ತಕ್ಷಣ ಕಂಪನಿಯ ಷೇರುಗಳು ಏರಿಕೆ ಸಾಧಿಸಿದವು. ದಿನದ ಕೊನೆಗೆ ಶೇ. 4.37 ಏರಿಕೆ ಸಾಧಿಸಿ 66.90ರು. ನಲ್ಲಿ ಅಂತ್ಯವಾಯಿತು.
ಜಸ್ಟ್ ಡೈಲ್
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೊಸ್ ಅಪ್ಲಿಕೇಶನ್ ಬಿಡುಗಡೆ ಮಾಡಿದ ಜಸ್ಟ್ ಡೈಲ್ ಷೇರುಗಳು ಏರಿಕೆಯ ಹಾದಿಯಲ್ಲಿ ಮುಂದೆ ಸಾಗಿದವು. ಶೇ.13.6 ಏರಿಕೆ ಸಾಧಿಸಿದ ಷೇರು 923 ರು. ನಲ್ಲಿ ಅಂತ್ಯವಾಯಿತು.
ರೋಲ್ಟಾ ಇಂಡಿಯಾ
ಇಂಣಂಜಿನಿಯರಿಂಗ್ ಇನ್ ಫಾರ್ ಮೇಶನ್ ಗೆ ಸಂಬಂಧಿಸಿ 13 ಮಿಲಿಯನ್ ಡಾಲರ್ ಪಡೆದುಕೊಂಡಿರುವುದಾಗಿ ರೋಲ್ಟಾ ಇಂಡಿಯಾ ಹೇಳಿದ ನಂತರ ಷೇರುಗಳು ಏರಿಕೆ ಸಾಧಿಸಿದವು. ಶೇ. 3.37 ಏರಿಕೆ ದಾಖಲಿಸಿ 103.70 ದಲ್ಲಿ ಕೊನೆಯಾಯಿತು.(ಗುಡ್ ರಿಟರ್ನ್ಸ್.ಇನ್)


Click it and Unblock the Notifications