ಪೆಟಿಮ್ ವಾಲೆಟ್ ನಲ್ಲಿ ನೀವು ಹಣ ದಾಖಲು ಮಾಡಿ ಇಟ್ಟುಕೊಳ್ಳಬಹುದು. ಡೆಬಿಟ್ ಕಾರ್ಡ್ ಬಗೆಯಲ್ಲೇ ಇದನ್ನು ಬಳಕೆ ಮಾಡಬಹುದು. ಆದರೆ ಪೆಟಿಎಮ್ ವಾಲೆಟ್ ಗೆ ಹಣ ಹಾಕಬೇಕು ಎಂದಾದಲ್ಲಿ ನಿಮ್ಮ ಬಳಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇರಲೇಬೇಕು.
ಡಿಟಿಎಚ್ ರೀಚಾರ್ಜ್, ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವವರಿಗೆ ಇದು ವರದಾನವಾಗಿ ಪರಿಣಮಿಸಿದೆ. ಸ್ನೇಹಿತರಿಗೆ ಹಣ ರವಾನೆ ಮಾಡಲು, ಉಬರ್, ಮೇಕ್ ಮೈ ಟ್ರಿಪ್ ಸೇವೆ ಪಡೆಯಲು, ಬುಕ್ ಮೈ ಶೋದಲ್ಲಿ ಸಿನಿಮಾ ಟಿಕೆಟ್ ಕಾಯ್ದಿರಿಸಲು ಪೆಟಿಎಮ್ ಯುವಜನತೆಯ ಪ್ರೀತಿ ಪಾತ್ರವಾಗಿದೆ.

ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಬ್ಬ ವ್ಯಕ್ತಿ ತಿಂಗಳಿಗೆ ಇಂತಿಷ್ಟು ಹಣವನ್ನು ಮಾತ್ರ ಪೆಟಿಎಮ್ ನಲ್ಲಿ ತೊಡಗಿಸಲು ಸಾಧ್ಯ ಎಂದು ಮಿತಿ ಹೇರಿದೆ. ಸಾಮಾನ್ಯವಾಗಿ ಒಂದು ತಿಂಗಳಿಗೆ 10 ಸಾವಿರ ರು. ತೊಡಗಿಸಲು ಅವಕಾಶವಿದೆ. ನೀವು ಒಂದು ಲಕ್ಷ ತೊಡಗಿಸಲು ಬಯಸುವಿರಾದರೆ ನಿಮ್ಮ ಖಾತೆಯನ್ನು ಅಪ್ ಗ್ರೇಡ್ ಮಾಡಿಕೊಳ್ಳಬೇಕಾಗುತ್ತದೆ.
ಪೆಟಿಎಮ್ ಬಳಕೆ ಮಾಡುವುದು ಹೇಗೆ?
ಮೊದಲು ನೋಂದಣಿ ಮಾಡಿಕೊಂಡು ಸೌಲಭ್ಯ ಬಳಕೆಗೆ ಅರ್ಹರಾಗಬೇಕಾಗುತ್ತದೆ.
* ನಿಮ್ಮ ಖಾತೆಯ ನೋಂದಣಿ ಮತ್ತು ಪರಿಶೀಲನೆ
* ಪೆಟಿಎಮ್ ವಾಲೆಟ್ ಗೆ ಹಣ ಹಾಕುವುದು
* ಪೆಟಿಎಮ್ ವಾಲೆಟ್ ಬಳಸಿಕೊಂಡು ಹಣ ರವಾನೆ ಆರಂಭ
ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನ ಮಾಹಿತಿಗಳನ್ನು ದಾಖಲು ಮಾಡಿ ಓಟಿಪಿ ಬಳಸಿಕೊಂಡು ಹಣ ಹಾಕಲು ಸಾಧ್ಯವಿದೆ. ಒಮ್ಮೆ ವಾಲೆಟ್ ನಲ್ಲಿ ಹಣ ದಾಖಲಾದ ನಂತರ ಅದನ್ನು ಯಾವಾಗ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು.
ಆಫರ್ ಗಳು ಮತ್ತು ಲಾಭಗಳು
ಪೆಟಿಎಮ್ ನಿಮಗೆ ಕೂಪನ್ ಗಳನ್ನು ಸಹ ಕೊಡಮಾಡುತ್ತದೆ. ನಿಮ್ಮ ಇ ಮೇಲ್ ಗೆ ಸಹ ಆಫರ್ ಗಳ ಮಾಹಿತಿ ಇರುವ ಮೇಲ್ ಗಳು ಬರುತ್ತಿರುತ್ತವೆ.
ರೀಚಾರ್ಜ್ ಮಾಡುವ ವೇಳೆ ಪ್ರೋಮೋ ಕೋಡ್ ಗಳನ್ನು ಬಳಸಿಕೊಂಡು ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು. ಮೊಬೈಲ್ ನಲ್ಲಿ ಅಪ್ಲಿಕೇಶನ್ ಸಹ ಬಿಡುಗಡೆ ಮಾಡಲಾಗಿದ್ದು ಸರಳವಾಗಿದೆ. ಅಂತರ್ಜಾಲದಲ್ಲಿ ಸರ್ಚ್ ಮಾಡುವ ಮುಖೇನ ಪ್ರೋಮೋ ಕೋಡ್ ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಒಮ್ಮೆ ನೀವು ಈಅಪ್ಲಿಕೇಶನ್ ಗೆ ಪ್ರವೇಶ ಮಾಡಿದರೆ ಅದು ತನ್ನಿಂದ ತಾನೇ ಎಲ್ಲವನ್ನು ಕಲಿಸುತ್ತದೆ. (ಗುಡ್ ರಿಟರ್ನ್ಸ್ .ಇನ್)


Click it and Unblock the Notifications