ನಿವೃತ್ತಿ ನಂತರ ಒಂದು ಅತ್ಯುತ್ತಮ ರೀತಿಯ ರಿಟರ್ನ್ಸ್ ಪಡೆದುಕೊಳ್ಳಲು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅತ್ಯುತ್ತಮ ತಾಣ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಭಾರತೀಯ ಅಂಚೆ ಮತ್ತು ವಿವಿಧ ಬ್ಯಾಂಕ್ ಗಳು ಸಹ ಪಿಪಿಎಫ್ ಸೌಲಭ್ಯ ಕೊಡಮಾಡುತ್ತಿವೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಜತೆ ಖಾಸಗಿ ಬ್ಯಾಂಕ್ ಗಳು ಯೋಜನೆಯ ಮೇಲೆ ವಿಶೇಷ ದರದ ಬಡ್ಡಿ ನೀಡುತ್ತಿವೆ. ಹಾಗಾದರೆ ನೂರಾರು ಯೋಜನೆಗಳಲ್ಲಿ ಅತ್ಯುತ್ತಮವಾದದ್ದು ಯಾವುದು ಎಂಬುದನ್ನು ತಿಳಿದುಕೊಳ್ಳಬೇಕಿದೆ. [ಎಸ್‌ಬಿಐ ಬ್ಯಾಂಕಲ್ಲಿ ಪಿಪಿಎಫ್ ಖಾತೆ ತೆರೆಯುವುದು ಹೇಗೆ?]

ನಿಮಗೆ 80 ಸಿ ಅನ್ವಯ ತೆರಿಗೆ ವಿನಾಯಿತಿಯನ್ನು ಪಡೆದುಕೊಳ್ಳಲು ಪಿಪಿಎಫ್ ನೆರವಾಗುತ್ತದೆ. ಯಾವ ಯಾವ ಬ್ಯಾಂಕ್ ಗಳು ಉತ್ತಮ ಯೋಜನೆಯನ್ನು ನೀಡುತ್ತಿವೆ ಎಂಬುದನ್ನು ಒಂದು ಸುತ್ತು ನೋಡಿಕೊಂಡು ಬರೋಣ...
ಎಲ್ಲೆಲ್ಲಿ ಪಿಪಿಎಫ್ ಖಾತೆ ತೆರೆಯಲು ಸಾಧ್ಯವಿದೆ?
* ಎಸ್ ಬಿಐ
* ಅಲಹಾಬಾದ್ ಬ್ಯಾಂಕ್
* ಐಸಿಐಸಿಐ ಬ್ಯಾಂಕ್
* ಎಸ್ ಬಿಐ ನ ಅಧೀನ ಬ್ಯಾಂಕ್ ಗಳು
* ಬ್ಯಾಂಕ್ ಆಫ್ ಬರೋಡಾ
* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
* ಇಂಡಿಯನ್ ಓವರ್ ಸೀಸ್ ಬ್ಯಾಂಕ್
* ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ
* ವಿಜಯಾ ಬ್ಯಾಂಕ್
* ಯುಸಿಒ ಬ್ಯಾಂಕ್
* ಪಂಜಾಬ್ ನ್ಯಾಶನಲ್ ಬ್ಯಾಂಕ್
* ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್
* ಬ್ಯಾಂಕ್ ಆಫ್ ಮಹಾರಾಷ್ಟ್ರ
* ಕೆನರಾ ಬ್ಯಾಂಕ್
* ಐಡಿಬಿಐ ಬ್ಯಾಂಕ್
* ಕಾರ್ಪೋರೇಶನ್ ಬ್ಯಾಂಕ್
* ದೇನಾ ಬ್ಯಾಂಕ್
* ಇಂಡಿಯನ್ ಬ್ಯಾಂಕ್
* ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ
* ಎಕ್ಸಿಸ್ ಬ್ಯಾಂಕ್
* ಬ್ಯಾಂಕ್ ಆಫ್ ಇಂಡಿಯಾ
ಮೇಲನ ಎಲ್ಲ ಬ್ಯಾಂಕ್ ಗಳಲ್ಲಿ ಪಿಪಿಎಫ್ ಖಾತೆ ತೆರೆಯಲು ಸಾಧ್ಯವಿದೆ. ಖಾಸಗಿ ವಲಯದ ಬಹುದೊಡ್ಡ ಬ್ಯಾಂಕ್ ಎಂದು ಕರೆಸಿಕೊಂಡಿರುವ ಎಚ್ ಡಿಎಫ್ ಸಿ ಯಲ್ಲಿ ಪಿಪಿಎಫ್ ಖಾತೆ ತೆರೆಯಲು ಅವಕಾಶವಿಲ್ಲ.[ಪಿಪಿಎಫ್ ಖಾತೆಗೆ ಆನ್ ಲೈನ್ ಹಣ ರವಾನೆ ಹೇಗೆ?]
ಉತ್ತಮ ಬ್ಯಾಂಕ್ ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಮೇಲಿನ ಪಟ್ಟಿಯ ಯಾವುದಾದರೂ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ ಅಲ್ಲಿಯೇ ಖಾತೆ ತೆರೆಯುವುದು ಉತ್ತಮ. ಆದರೆ ಇದು ಕಡ್ಡಾಯವೇನಲ್ಲ. ನೀವು ಎಲ್ಲಿ ಬೇಕಾದರೂ ಖಾತೆ ತೆರೆಯಲು ಸ್ವತಂತ್ರರು. ಯಾವ ಬ್ಯಾಂಕ್ ಎಲ್ಲ ಬಗೆಯ ತಂತ್ರಜ್ಞಾನವನ್ನು ಅಳವಡಿಸಿಕೊಡಿದೆ. ವ್ಯಾಪ್ತಿ ದೊಡ್ಡದಿದೆ ಎಂಬುದನ್ನು ನೋಡಿಕೊಂಡೆ ಖಾತೆ ಮಾಡಿಕೊಳ್ಳಬಹುದು. (ಗುಡ್ ರಿಟ
್ನ್ಸ್.ಇನ್)


Click it and Unblock the Notifications