ಹೊಸ ವರ್ಷದ ಆರಂಭ ಕಾಲ ಹತ್ತಿರ ಬರುತ್ತಿದೆ. ಆದರೆ ಷೇರು ಮಾರುಕಟ್ಟೆಯಲ್ಲಿ ಇಳಿಕೆಯ ಪರ್ವ ಮುಂದುವರಿದೇ ಇದೆ. ಬಿಹಾರ ಚುನಾವಣೆ ಫಲಿತಾಂಶ ಸಹ ಮಾರುಕಟ್ಟೆಗೆ ಸರಿಯಾದ ಹೊಡೆತವನ್ನೇ ನೀಡಿದೆ.
ಈ ಸಮಯದಲ್ಲಿ ಷೇರು ಮಾರುಕಟ್ಟೆಯಿಂದ ದೂರ ನಿಲ್ಲುವುದೇ ಒಳ್ಳೆಯದು. ಆಗುತ್ತಿರುವ ಬದಲಾವಣೆಗಳನ್ನು ಮಾತ್ರ ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಯಾಕೆ ಮಾರುಕಟ್ಟೆಯಿಂದ ದೂರ ಸರಿಯುವುದು ಒಳ್ಳೆಯದು ಎಂಬುದಕ್ಕೆ ಇಲ್ಲಿ 5 ಅಂಶಗಳ ಉತ್ತರ ನೀಡಲಾಗಿದೆ.[ಪ್ರಥಮ ಗುಟುಕಲ್ಲೇ 'ಕಹಿ'ಯಾದ 'ಕಾಫಿ' ಡೇ ಷೇರುಗಳು]

1. ಯುಎಸ್ ಫೆಡರಲ್ ಬ್ಯಾಂಕ್ ಬಡ್ಡಿ ದರ ಪರಿಷ್ಕರಣೆ
9 ವರ್ಷಗಳ ಸುದೀರ್ಘ ಅವಧಿಯ ನಂತರ ಯುಎಸ್ ಫೆಡರಲ್ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ನಿಚ್ಚಳವಾಗಿದೆ. ಬಡ್ಡಿ ದರ ಏರಿಕೆಯಾದರೆ ಭಾರತದ ಮಾರುಕಟ್ಟೆಗೆ ವರವಾಗಿ ಪರಿಣಮಿಸಬಹುದು. ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಫೆಡರಲ್ ಬ್ಯಾಂಕ್ ತನ್ನ ತೀರ್ಮಾನ ಹೇಳಲಿದ್ದು ಅಲ್ಲಿಯವರೆಗೆ ಸುಮ್ಮನಿರುವುದೇ ಒಳಿತು.
2. ಬಿಹಾರದಲ್ಲಿ ಎನ್ ಡಿಎಗೆ ಸೋಲು
ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಒಕ್ಕೂಟ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಯೋಜನೆಗಳು ಜನರನ್ನು ತಲುಪಿತ್ತಿಲ್ಲವೇ? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಮುಂದಿನ ಕೆಲ ತಿಂಗಳು ಕಾಲ ಸರ್ಕಾರ ಹೊಸ ಯೋಜನೆಗಳನ್ನು ಜಾರಿ ಮಾಡಲು ಹಿಂದೇಟು ಹಾಕಬಹುದು. [ಟೆಕ್ನಿಕಲ್ ಮತ್ತು ಫಂಡಮೆಂಟಲ್ ಅನಾಲಿಸಿಸ್ ನಡುವಿನ ವ್ಯತ್ಯಾಸವೇನು?]
3. ಅತಂತ್ರ ಸ್ಥಿತಿಯಲ್ಲಿ ತೆರಿಗೆ ಶಾಸನ
ಗುಡ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ ಗೆ ಸಂಬಂಧಿಸಿದ ಶಾಸನ ಇನ್ನು ಅತಂತ್ರ ಸ್ಥಿತಿಯಲ್ಲೇ ಇದೆ. ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಮತ್ತೆ ಸರ್ಕಾರದ ವಿರುದ್ಧ ಚಾಟಿ ಬೀಸಲು ಸಿದ್ಧತೆ ಮಾಡಿಕೊಂಡಿವೆ. ಈ ಎಲ್ಲ ಸಂಗತಿಗಳು ವಿದೇಶಿ ಹೂಡಿಕೆ ಮೇಲೆ ನೇರ ಪರಿಣಾಮ ಉಂಟುಮಾಡಬಲ್ಲದು.
4. ಕಾರ್ಪೋರೇಟ್ ಕಂಪನಿಗಳ ಕೆಟ್ಟ ಫಲಿತಾಂಶ
ಕಾರ್ಪೋರೇಟ್ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಎಲ್ ಎಂಡ್ ಟಿ ಅಂಥ ಕಂಪನಿಯೇ ಇದೆಲ್ಲ ಸರಿ ಹೋಗಲು ಇನ್ನು ಕೆಲ ತಿಂಗಳು ಕಾಲ ಬೇಕಾಗುವುದು ಎಂದು ಹೇಳಿದೆ. ಕಾರ್ಪೋರೇಟ್ ಸೆಕ್ಟರ್ ಅಭಿವೃದ್ದಿಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮದ ಹೊರತಾಗಿಯೂ ಕಳಪೆ ಸಾಧನೆ ಕಂಅಡುಬಂದಿದೆ.
5. ಬಡ್ಡಿ ದರ ಕಡಿತ ಇಲ್ಲ
ಈಗಾಗಲೇ ರಿಸರ್ವ್ ಬ್ಯಾಂಕ್ ಒಂದೇ ವರ್ಷದಲ್ಲಿ ನಾಲ್ಕು ಸಾರಿ ಮೂಲಾಂಶ ಕಡಿತ ಮಾಡಿದೆ. ಇನ್ನು ಮತ್ತೆ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.
ಕೊನೆ ಮಾತು:
ಮಾರುಕಟ್ಟೆಗೆ ಸಂಬಂಧಿಸಿ ತ್ವರಿತ ಅಥವಾ ಯೋಚನೆಯಿಲ್ಲದ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಇನ್ನು ಎರಡು ಅಥವಾ ಮೂರು ತಿಂಗಳು ಸುಮ್ಮನೆ ಕಾಯುವುದೇ ಉತ್ತಮ. ಮಾರಾಟ ಮತ್ತು ಖರೀದಿಗೆ ಇದು ಸಕಾಲ ಅಲ್ಲ ಎಂದೇ ವಿಶ್ಲೇಷಣೆ ಮಾಡಲಾಗಿದೆ.(ಗುಡ್ ರಿಟರ್ನ್ಸ್.ಇನ್)


Click it and Unblock the Notifications