ನೀವು ಒಂದು ಅತ್ಯುತ್ತಮ ದರ್ಜೆಯ ಷೇರು ಖರೀದಿ ಮುಂದಾಗುತ್ತಿದ್ದೀರಿ ಎಂದರೆ ನಿಮಗೆ ಟಾಟಾ ಮೋಟಾರ್ಸ್ ನ ಡಿವಿಆರ್ ಷೇರುಗಳಿಗಿಂತ ಅತ್ಯುತ್ತಮ ಆಯ್ಕೆ ಮತ್ತೊಂದಿಲ್ಲ.
ಬೋನಸ್, ಎಜಿಎಂ, ವೋಟಿಂಗ್ ರೈಟ್ಸ್ ಎಲ್ಲವೂ ಷೇರು ಖರೀದಿಯೊಂದಿಗೆ ಸಾಧ್ಯವಾಗಲಿದೆ. ಹಾಗಾದರೆ ಈ ಷೇರು ಇತರ ಷೇರುಗಳಿಗಿಂತ ಹೇಗೆ ಭಿನ್ನ? ಮೀರಿಸುವ ಗುಣಗಳು ಯಾವವು ಎಂಬುದನ್ನು ನೋಡಿಕೊಂಡು ಬರೋಣ.
ಇಲ್ಲಿ ನಿಮಗೆ ವೋಟಿಂಗ್ ಹಕ್ಕು ಬೇಕೆಂದರೆ ಹೆಚ್ಚು ಮೌಲ್ಯದ ಷೇರು ಖರೀದಿ ಮಾಡಬೇಕಾಗುತ್ತದೆ. ಸಾಮಾನ್ಯ ನಾಗರಿಕನಿಗೆ ಅದು ಸಾಧ್ಯವಿಲ್ಲ. ಆದರೆ ಉಳಿದ ಹಕ್ಕುಗಳಿಗೆ ಆತ ಪಾಲುದಾರನಾಗುತ್ತಾನೆ.[ಷೇರು ಅಡವಿಟ್ಟು ಸಾಲ ಬೇಡ ಎನ್ನಲು 5 ಕಾರಣ]
ಈಕ್ವಿಟಿ ಷೇರು ಮತ್ತು ಡಿವಿಆರ್ ಷೇರುಗಳ ನಡುವಿನ ವ್ಯತ್ಯಾಸ ತಿಳಿದುಕೊಳ್ಳಿ

ಟಾಟಾ ಮೋಟಾರ್ಸ್ ಷೇರಿನ ಲಾಭ ತರುವ ಗುಣಗಳು
1. ಶೇ. 5 ಹೆಚ್ಚುವರಿ ಡಿವಿಡೆಂಟ್
ಡಿವಿಆರ್ ಷೇರುದಾರರಿಗೆ ಶೇ. 5 ಹೆಚ್ಚುವರಿ ಡಿವಿಡೆಂಟ್ ದೊರೆಯುತ್ತದೆ. ಇದು ನಿಮಗೆ ಹೆಚ್ಚುವರಿ ರಿಟರ್ನ್ಸ್ ತಂದುಕೊಡುವುದರಲ್ಲಿ ಅನುಮಾನವಿಲ್ಲ.[ಷೇರು ಅಡವಿಟ್ಟು ಸಾಲ ಬೇಡ ಎನ್ನಲು 5 ಕಾರಣ]
2. ಅತಿ ಹೆಚ್ಚು ಡಿಸ್ಕೌಂಟ್
ಸದ್ಯ ಟಾಟಾ ಮೋಟಾರ್ಸ್ ಷೇರುಗಳು 401 ರು. ನಲ್ಲಿ ಬಿಕರಿಯಾಗುತ್ತಿವೆ. ಆದರೆ ಡಿವಿಆರ್ ಅಡಿಯಲ್ಲಿ ನಿಮಗೆ 293 ರು. ಗೆ ಸಿಗಲಿದೆ. ಅಂದರೆ ಶೇ. 25 ಕ್ಕೂ ಅಧಿಕ ರಿಯಾಯಿತಿ ಲಭ್ಯವಾಗುತ್ತಿದೆ. ಚಿಕ್ಕ ಪ್ರಮಾಣದ ಹೂಡಿಕೆದಾರರಿಗೆ ಇದು ಲಾಭ ತಂದುಕೊಡುತ್ತದೆ.
3. ಮಾರುಕಟ್ಟೆಯ ಸ್ಥಿತಿಗತಿ
380 ರು. ನಲ್ಲಿದ್ದ ಡಿವಿಆರ್ ಷೇರಿಗಳು 290 ಕ್ಕೆ ಕುಸಿದಿವೆ. ಹಾಗಾಗಿ ಖರೀದಿಗೆ ಇದು ಸುಸಂದರ್ಭ. ಉಳಿದ ಕಂಪನಿಗಳಿಗೆ ಹೋಲಿಕೆ ಮಾಡಿದರೆ ಟಾಟಾ ಮೋಟಾರ್ಸ್ ಪ್ರಗತಿ ಸಹನ ಉತ್ತಮವಾಗಿದೆ.[ಡಿಮಾಟ್ ಖಾತೆಗೂ ಮುನ್ನ ಈ 6 ಅಂಶ ತಿಳಿದುಕೊಂಡಿರಬೇಕು]
4. ಅಮೆರಿಕದ ಮಾರುಕಟ್ಟೆ ಬೆಳವಣಿಗೆ
ಕಂಪನಿಯ ಜಾಗ್ವಾರ್ ಲ್ಯಾಂಡ್ ರೋವರ್ ಅಮೆರಿಕದ ಮಾರುಕಟ್ಟೆಯಲ್ಲೂ ಸಹ ಪ್ರಗತಿ ಸಾಧಿಸುತ್ತಿದೆ. ಚೀನಾದಲಲ್ಲಿಯೂ ಕಂಪನಿ ಉತ್ಪನ್ನಗಳ ಮೇಲೆ ಉತ್ತಮ ಅಭಿಪ್ರಾಯವಿದೆ. ಮುಂದೆ ಸಹ ಟಾಟಾ ಮೋಟಾರ್ಸ್ ಬೆಳವಣಿಗೆ ಆಶಾದಾಯಕವಾಗಿದೆ. ಬ್ಯಾಂಡ್ ಬಿಲ್ಡಿಂಗ್ ಗೋಸ್ಕರ ಪುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಅವರನ್ನು ಬ್ಯಾಂಡ್ ಅಂಬಾಸಿಡರ್ ಆಗಿ ಮಾಡಿಕೊಳ್ಳಲಾಗಿದೆ.
5. ವೋಕ್ಸ್ವ್ಯಾಗನ್ ಡೀಸೆಲ್ ಗೊಂದಲಗಳು ಕಂಪನಿಗೆ ಕೊಂಚ ಮಟ್ಟಿನ ಹೊಡೆತ ನೀಡಿದ್ದರೂ ಜಾಗ್ವಾರ್ ಪ್ರಗತಿಗೆ ಅಡ್ಡಿಯಾಗಿಲ್ಲ. ಇಂಥ ಸಣ್ಣ ಪುಟ್ಟ ಸಂಗತಿಗಳು ಎನೇ ಇದ್ದರೂ ಟಾಟಾ ಮೋಟಾರ್ಸ್ ನ ಡಿವಿಆರ್ ಷೇರುಗಳು ಖರೀದಿಗೆ ಉತ್ತಮ ಎಂದೇ ಗುರುತಿಸಿಕೊಂಡಿವೆ.(ಗುಡ್ ರಿಟರ್ನ್ಸ್.ಇನ್)
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications