ಮುಂಬೈ ಷೇರು ಮಾರುಕಟ್ಟೆ ಸತತವಾಗಿ ಕುಸಿತದ ಹಾದಿಯಲ್ಲಿ ಸಾಗಿದೆ. ಬಂಡವಾಳ ಹೂಡಿಕೆದಾರರಿಗೆ ಹೊಸ ವರ್ಷ ಭರ್ಜರಿ ಹೊಡೆತ ನೀಡಿದೆ. ಭಾರತದ ಮಾರುಕಟ್ಟೆ ಕಳೆದ ಒಂದು ವರ್ಷದಲ್ಲಿಯೇ ಕನಿಷ್ಠ ಅಂಕ ದಾಖಲು ಮಾಡಿರುವುದು ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.
ಮಾರುಕಟ್ಟೆ ಈ ಬಗೆಯಾಗಿ ಕುಸಿಯಲು ಏನು ಕಾರಣ ಎಂಬುದನನ್ನು ಲೆಕ್ಕ ಹಾಕಿದರೆ ಅನೇಕ ಅಂಶಗಳು ನಮ್ಮ ಎದುರಿಗೆ ಬಂದು ನಿಲ್ಲುತ್ತವೆ. ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ವ್ಯವಸ್ಥೆಯಲ್ಲಿ ತೆಗೆದುಕೊಂಡ ಬದಲಾವಣೆಗಳು. ಮಿಡ್ ಕ್ಯಾಪ್ ಷೇರುಗಳಲ್ಲಾದ ಸ್ಥಿತ್ಯಂತರ ಎಲ್ಲವೂ ಷೇರು ಕುಸಿಯಲು ಒಂದೆಲ್ಲಾ ಒಂದು ರೀತಿಯಲ್ಲಿ ಕಾರಣವಾಯಿತು.[ಈ ಎಲ್ಲ ವ್ಯವಹಾರಕ್ಕೆ ಪಾನ್ ಕಾರ್ಡ್ ಬೇಕು]
ಏಷ್ಯಾದ ಮಾರುಕಟ್ಟೆಯಲ್ಲಿನ ಹಿಂಜರಿತ ಪ್ರಮುಖ ಕಾರಣ ಎಂದು ಹೇಳಬಹುದು. ಹಾಂಕಾಂಗ್ ನ ಹಾಂಗ್ ಸೆಲ್ ಶೇಕಡಾ 2.61 ಅಂಕಗಳಷ್ಟು ಕುಸಿತ ಕಂಡರೆ, ಶಾಂಘೈ ಶೇಕಡಾ 2.40ರಷ್ಟು ಕುಸಿತ ಕಂಡಿದೆ. ಅಮೆರಿಕದ ಡೋವ್ ಜೋನ್ಸ್ ಕೈಗಾರಿಕಾ ವಲಯ ಶೇಕಡಾ 1.02ರಷ್ಟು ಕುಸಿತ ಕಂಡು ಬಂದಿದ್ದು ಭಾರತದ ಮಾರುಕಟ್ಟೆ ಮೇಲೆ ನೇರ ಪರಿಣಾಮ ಉಂಟುಮಾಡಿದೆ. ಷೇರು ಮಾರುಕಟ್ಟೆ ಕುಸಿಯಲು ಕಾರಣಗಳನ್ನು ಮುಂದೆ ನೀಡಲಾಗಿದೆ.
ರಜಾ ದಿನಗಳು
ವರ್ಷದ ಕೊನೆ ಹಿನ್ನೆಲೆಯಲ್ಲಿ ಸಾಲು ಸಾಲು ರಜಾದಿನಗಳು ಎದುರಾಗಿದ್ದು ಮಾರುಕಟ್ಟೆ ಮೇಲೆ ಪರಿಣಾಮ ಬೀರಿತು. ಹೂಡಿಕೆದಾರರಿಗೆ ನಿರ್ದಿಷ್ಟ ಯೋಜನೆ ರೂಪಿಸಲು ಸಾಧ್ಯವಾಗಲಿಲ್ಲ.
ಪರ್ಯಾಯ ಹೂಡಿಕೆಯತ್ತ ಚಿತ್ತ
ಮಿಡ್ ಕ್ಯಾಪ್ ಷೇರು ಪಾತಾಳಕ್ಕೆ ತಲುಪಿದೆ. ಜನವರಿ ಆರಂಭದಿಂದಲೂ ಮಾರುಕಟ್ಟೆ ಕುಸಿತದ ಹಾದಿಯಲ್ಲೇ ಸಾಗಿದ್ದು ಬಂಡವಾಳ ಹೂಡಿಕೆದಾರರು ಪರ್ಯಾಯ ಕ್ರಮಗಳತ್ತ ಚಿತ್ತ ಹರಿಸಿದ್ದು ಕುಸಿಯಲು ಮುಖ್ಯ ಕಾರಣ
ಹೆಚ್ಚಿನ ಬೆಲೆ ಕಟ್ಟಿದರು
ನಿರ್ದಿಷ್ಟ ಮುಖಬೆಲೆಯ ಷೇರೊಂದು 18 ರಿಂದ 20 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು. ಹಣ ಮಾಡುವ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಕಡಿಮೆ ಮುಖಬೆಲೆಗೆ ಖರೀದಿಸಿ ಹೆಚ್ಚಿನದಕ್ಕೆ ಮಾರಾಟ ಮಾಡುವ ಸಮುದಾಯವೇ ಹುಟ್ಟಿಕೊಂಡಿತ್ತು. ವಾರಕ್ಕಿಂತ ಹೆಚ್ಚಿನ ಕಾಲ ಯಾರೂ ಷೇರು ಇಟ್ಟುಕೊಳ್ಳಲಿಲ್ಲ.
ಪರಿಣಾಮ ಬೀರದ ಫೆಡರಲ್ ಬ್ಯಾಂಕ್
ಅಮೆರಿಕದ ಫೆಡರಲ್ ಬ್ಯಾಂಕ್ ಬಡ್ಡಿ ದರದಲ್ಲಿ ಬದಲಾವಣೆ ಮಾಡಿದ್ದು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿತ್ತು, ಆದರೆ ಭಾರತದ ಮಾರುಕಟ್ಟೆ ಅದಕ್ಕೆ ವಿರುದ್ಧವಾಗಿ ನಡೆದುಕೊಂಡಿತು.
ಆಹಾರ ಉತ್ಪನ್ನಗಳ ದರ ಏರಿಕೆ
ಇನ್ನೊಂದೆಡೆ ಆಹಾರ ಉತ್ಪನ್ನಗಳಾದ ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳಲ್ಲಿನ ದರ ಏರಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತು. ಆಮದು ಮತ್ತು ರಫ್ತಿನಲ್ಲಾದ ಬದಲಾವಣೆ ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು.
ತೈಲ ದರ ಕುಸಿತ
ಕಚ್ಚಾ ತೈಲದ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಗೆ 35 ಡಾಲರ್ ಗಿಂತ ಕಡಿಮೆಗೆ ಬಂದು ನಿಂತಿದೆ. ಹೂಡಿಕೆದಾರರು ಪಟ್ರೊಲಿಯಂ ಸೆಕ್ಟರ್ ನಿಂದ ಹಿಂದಕ್ಕೆ ಸರಿದು ಆಭರಣಗಳತ್ತ ಚಿತ್ತ ಹರಿಸಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ.


Click it and Unblock the Notifications