ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ತಲ್ಲಣವೋ ತಲ್ಲಣ. 807 ಪಾಯಿಂಟ್ಸ್ ಗಳ ಕುಸಿತ ಕಂಡ ಸೆನ್ಸೆಕ್ಸ್ ಹೂಡಿಕೆದಾರರಲ್ಲಿ ಆತಂಕ ಹುಟ್ಟುಹಾಕಿದೆ. ಸೂಚ್ಯಂಕ 22951 ಕ್ಕೆ ತಲುಪಿದೆರೆ 239 ಅಂಕ ಕಳೆದುಕೊಂಡ ನಿಫ್ಟಿ 7 ಸಾವಿರದ ಕೆಳಗೆ ಬಂದಿತು.[ಷೇರು ಮಾರುಕಟ್ಟೆ ರಜಾದಿನಗಳ ಪಟ್ಟಿ-2016]
2014 ರ ನಂತರದಲ್ಲಿ ಇದು ಮಹಾಪತನವಾಗಿದ್ದು ನಿಜಕ್ಕೂ ಷೇರು ಮಾರುಕಟ್ಟೆ ಕುಸಿಯಲು ಏನು ಕಾರಣ ಎಂಬುದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೀವ್ರ ಹಿನ್ನಡೆ ಪ್ರಮುಖ ಕಾರಣ ಎಂದು ಹೇಳಬಹುದು. ಷೇರು ಮಾರುಕಟ್ಟೆ ಮಹಾ ಪತನಕ್ಕೆ ಕಾರಣವಾದ 5 ಅಂಶಗಳನ್ನು ನೋಡಿಕೊಂಡು ಬನ್ನಿ....(ಗುಡ್ ರಿಟರ್ನ್ಸ್.ಇನ್)
ಫೆಡರಲ್ ಬ್ಯಾಂಕ್ ಕಮೆಂಟ್
ಯುಎಸ್ ಫೆಡರಲ್ ಬ್ಯಾಂಕ್ ಅಧ್ಯಕ್ಷೆ ಜನೆಟ್ ಯೆಲ್ಲನ್ ಮಾರುಕಟ್ಟೆಯ ಹಿನ್ನಡೆ ಬಗ್ಗೆ ಕಮೆಂಟ್ ಮಾಡಿದರು. ತೈಲ ಮತ್ತು ಇಂಧನ ಕ್ಷೇತ್ರದಲ್ಲಿನ ತಲ್ಲಣಗಳ ಬಗ್ಗೆ ಮಾತನಾಡಿದರು.
ಕೆಳಕ್ಕೆ ಬಿದ್ದ ಬ್ಯಾಂಕಿಂಗ್ ಷೇರುಗಳು
ಯುರೋಪು ಮೂಲದ ಬ್ಯಾಂಕಿಂಗ್ ಷೇರುಗಳು ತೀವ್ರ ಹಿನ್ನಡೆ ಅನುಭವಿಸಿದವು. ಸೊಸೈಟಿ ಜನರಲ್ ಶೇ. 10 ರಷ್ಟು ನಷ್ಟವನ್ನು ಅನುಭವಿಸಿತು.
ಎಸ್ ಬಿಐಎಂ ವರದಿ
ಶೇ. 3ಕ್ಕಿಂತ ಅಧಿಕ ಕುಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ವರ್ಷದ ಅತಿ ಕಳಪೆ ಸಾಧನೆ ತೋರಿದವು. ಉಳಿದಂತೆ ಭಾರತೀಯ ಹೂಡಿಕೆದಾರರಿಗೆ ಆಗಿದ್ದು ಬರಿ ನಷ್ಟವೇ.
ಭಾರತದ ಮಾರುಕಟ್ಟೆ ನಿರ್ಲಕ್ಷ್ಯ
ವಿದೇಶಿ ಹೂಡಿಕೆದಾರರು ಭಾರತd ಮಾರುಕಟ್ಟೆಯತ್ತ ಸುಳಿಯಲೇ ಇಲ್ಲ. ಹೂಡಿಕೆ ಅತಿ ಕಡಿಮೆ ಪ್ರಮಾಣದಲ್ಲಿತ್ತು. ವಾರದಿಂದ ಮಾರುಕಟ್ಟೆ ಇಳಿಕೆ ಹಾದಿಯಲ್ಲೇ ಇದೆ.
ಮಿಡ್ ಕ್ಯಾಪ್ ಕುಸಿತ
ಪ್ರಮುಖ ಮಿಡ್ ಕ್ಯಾಪ್ ಷೇರುಗಳು ಶೇ. 10 ಕ್ಕೂ ಅಧಿಕ ನಷ್ಟ ಮಾಡಿಕೊಂಡವು. ಜುಬ್ಲಿಯಂಟ್ ಫುಡ್ ವರ್ಕ್ಸ್, ಟಾಟಾ ಗ್ಲೋಬಲ್, ಒರಿಯಂಟಲ್ ಬ್ಯಾಂಕ್ ತೀವ್ರ ನಷ್ಟಕ್ಕೆ ಗುರಿಯಾದವು.