ಬೆಂಗಳೂರು, ಮಾರ್ಚ್ 12: ಮನೆ ಹಣಕಾಸು ಸಂಸ್ಥೆಗಳ ಕ್ಷೇತ್ರದಲ್ಲಿ ದೇಶದ ಐದನೇ ಪ್ರಮುಖ ಸಂಸ್ಥೆಯಾಗಿರುವ ಪಿಎಎನ್ ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ತನ್ನ ವಿಭಾಗೀಯ ಕಚೇರಿ ಮತ್ತು ಪ್ರಾದೇಶಿಕ ಸಂಸ್ಕರಣಾ ಕೇಂದ್ರವನ್ನು ಉದ್ಘಾಟಿಸಿದೆ.
ಬಿಟಿಎಂ ಲೇಔಟ್ ನಲ್ಲಿ ಕಚೇರಿಯನ್ನು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹೌಸಿಂಗ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂಜಯ ಗುಪ್ತಾ ಉದ್ಘಾಟಿಸಿದರು. ವಿವಿಧ ರಿಯಲ್ ಎಸ್ಟೇಟ್ ಕಂಪೆನಿಗಳ ಪ್ರವರ್ತಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಂಜಯ ಗುಪ್ತಾ : 'ವಹಿವಾಟು ವಿಸ್ತರಣೆ ಉದ್ಯಮದಲ್ಲಿ ಪ್ರಮುಖವಾಗಿದ್ದು, ಪಿಎನ್‍ಬಿ ಹೌಸಿಂಗ್ ಈ ಮೂಲಕ ತನ್ನ ಪ್ರಗತಿಯನ್ನು ಬಿಂಬಿಸುತ್ತಿದೆ.ಗ್ರಾಹಕ ಬಲ ಇರುವೆಡೆಗೆ ವಿಸ್ತರಣೆ ಕಂಡುಕೊಳ್ಳುತ್ತಿದೆ.
ದಕ್ಷಿಣ ಭಾರತದಲ್ಲಿ ಸಾಕಷ್ಟು ಅವಕಾಶಗಳಿದ್ದು, ಈ ವಲಯವು ಹೆಚ್ಚು ಲಾಭಾಂಶವನ್ನು ತಂದುಕೊಡಲಿದೆ ಎಂಬ ವಿಶ್ವಾಸವಿದೆ. ಸೇರ್ಪಡೆಯುಕ್ತ ಅಭಿವೃದ್ಧಿಗೆ ಕುರಿತು ಇರುವ ಬದ್ಧತೆಯನ್ನು ಮುಂದುವರಿಸುತ್ತಾ,, ವಿಭಾಗೀಯ ಕಚೇರಿಯು ದಕ್ಷಿಣ ಭಾರತದ ಕಚೇರಿಗಳಿಗೆ ಪ್ರಮುಖ ಕಚೇರಿಯಾಗಿ ಕಾರ್ಯ ನಿರ್ವಹಿಸಲಿದ್ದು, ಈ ಭಾಗದ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸಲಿದೆ' ಎಂದರು.
ಮಾರುಕಟ್ಟೆಯ ಎಲ್ಲ ಅಗತ್ಯ ಪೂರೈಸುವ ಕೇಂದ್ರ
ಈ ವಿಭಾಗೀಯ ಕಚೇರಿಯು ದಕ್ಷಿಣ ಭಾರತದ ಮಾರುಕಟ್ಟೆಯ ಎಲ್ಲ ಅಗತ್ಯಗಳನ್ನು ಪೂರೈಸಲಿದ್ದು, ಪ್ರಾದೇಶಿಕ ಸಂಸ್ಕರತಣಾ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸಲಿದೆ. ಮೈಸೂರು, ಮಂಗಳೂರು ಮತ್ತಿತರ ನಗರಗಳ ಅಗತ್ಯಗಳಿಗೂ ಸ್ಪಂದಿಸಲಿದೆ. ಇದು,ಸಾಲ ವಿತರಣೆಯ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸಲಿದೆ.
ತಮ್ಮದೇ ಆದ ಮನೆಯನ್ನು ಹೊಂದುವ ಕನಸು
ಕಂಪೆನಿಯು ಜನರು ತಮ್ಮದೇ ಆದ ಮನೆಯನ್ನು ಹೊಂದುವ ಕನಸು ಈಡೇರಿಸಿಕೊಳ್ಳಲು ಸಹಕಾರ ನೀಡಲಿದೆ. ಪಿಎನ್‍ಬಿ ಹೌಸಿಂಗ್ ಇದರ ಜೊತೆಗೆ 3, 5 ಮತ್ತು 10 ವರ್ಷಗಳ ಅವಧಿಗೆ ನಿಶ್ಚಿತ ಬಡ್ಡಿ ದರವನ್ನು ಹೊಂದಿದೆ. ಇದರಿಂದ ಸಣ್ಣ ಆದಾಯ ಮೂಲಕ ಜನರಿಗೂ ಬಡ್ಡಿ ಏರಿಳಿತದ ಸಮಸ್ಯೆಯಿಂದ ಪರಿಹಾರ ಒದಗಿಸಲಿದೆ. ಕಂಪೆನಿಯು 30 ವರ್ಷ ಅವಧಿಯ ಸಾಲ ಮರುಪಾವತಿ ಯೋಜನೆ ಜಾರಿಗೊಳಿಸಿದ್ದು, ದೀರ್ಘ ಅವಧಿಗೆ ಜನರು ಇಎಂಐ ಮೂಲಕ ಸಾಲ ಮರುಪಾವತಿಸಲು ನೆರವಾಗಲಿದೆ.
ಪಿಎನ್ ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್
ಪಿಎನ್ ಬಿ ಹೌಸಿಂಗ್ ದೇಶದ 5ನೇ ಅತಿದೊಡ್ಡ ಗೃಹ ಹಣಕಾಸು ಸಂಸ್ಥೆಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ಅಂಗಸಂಸ್ಥೆಯಾಗಿರುವ ಇದು, ಕಾರ್ಲೆ ಸಮೂಹದ ಕ್ವಾಲಿಟಿ ಹೋಲ್ಡಿಂಗ್ ಇನ್ವೆಸ್ಟ್ ಮೆಂಟ್ ಪಾಲುದಾರಿಕೆ ಹೊಂದಿದೆ. ಗುಣ ಹಣಕಾಸು ವಲಯದಲ್ಲಿ ಪಿಪಿಪಿ ಮಾದರಿಯನ್ನು ಪರಿಚಯಸಿಇದ್ದು, ಪ್ರಮುಖ ನಗರಗಳಲ್ಲಿ ಕಚೇರಿ ಹೊಂದುವ ಮೂಲಕ ದೇಶವ್ಯಾಪ್ತಿ ಅಸ್ತಿತ್ವ ಹೊಂದಿದೆ.
ವಿವಿಧ ರೀತಿಯ ಸಾಲ ಒದಗಿಸಲಿದೆ
ಕಂಪೆನಿಯು ಗೃಹ ಸಾಲ, ನಿಶ್ಚಿತ ಠೇವಣಿ ಸೇವೆಯನ್ನು ಗ್ರಾಹಕರಿಗೆ ಒದಗಿಸಲಿದೆ. ಗೃಹ ಸಾಲ ವಲಯದಲ್ಲಿ ಕಂಪೆನಿಯು ಮನೆ ನಿರ್ಮಾಣ, ಖರಿದಿ, ದುರಸ್ತಿ, ವಿಸ್ತರಣೆಗೆ ಹಣಕಾಸು ನೆರವು ನೀಡಲಿದೆ. ಅಲ್ಲದೆ, ವಾಣಿಜ್ಯ ನಿವೇಶನ, ಅಸ್ತಿಗೆ ವಿರುದ್ಧವಾಗಿ ಸಾಲ, ನಿವೇಶನ ಖರೀದಿಗೆ ಸಾಲ ನೀಡಲಿದೆ. ಪಿಎನ್ ಬಿ ಹೌಸಿಂಗ್ ಪ್ರಸ್ತುತ ಬಿಡಿ ಠೇವಣಿ ವಿಷಯದಲ್ಲಿ 2ನೇ# ಅತಿದೊಡ್ಡ ಹಣಕಾಸು ಸಂಸ್ಥೆಯಾಗಿದೆ. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: www.pnbhousing.com


Click it and Unblock the Notifications