ಏಪ್ರಿಲ್ 1 ರಿಂದ ವಾಹನದ ವಿಮೆ ಕಂತು ಶೇ. 40 ಅಧಿಕ

ಬಜೆಟ್ ನಂತರದಲ್ಲಿ ಹಲವಾರು ಬದಲಾವಣೆಗಳಾಗುವುದು ಸಾಮಾನ್ಯ. ಆದರೆ ಇದೀಗ ವಾಹನ ಸವಾರರ ಕಿಸೆಗೆ ಸರ್ಕಾರಗಳು ಸರಿಯಾಗೇ ಕನ್ನ ಹಾಕಿವೆ.

ವಾಹನ ಅದು ಬೈಕ್ ಇರಲಿ ಇಲ್ಲಾ ನಾಲ್ಕು ಚಕ್ರದ ವಾಹನವಿರಲಿ ಇನ್ಶೂರೆನ್ಸ್ ಮುಂದೆ ದುಬಾರಿಯಾಗಲಿದೆ. ಬರೋಬ್ಬರಿ ಶೇ. 40 ರಷ್ಟು ಏರಿಕೆ ಮಾಡಲಾಗಿದೆ. ಏಪ್ರಿಲ್ 1ರಿಂದ ಹೊಸ ನೀತಿ ಜಾರಿಗೆ ಬರಲಿದೆ.

ಏಪ್ರಿಲ್ 1 ರಿಂದ ವಾಹನದ ವಿಮೆ ಕಂತು ಶೇ. 40 ಅಧಿಕ

ಚಿಕ್ಕ ಕಾರುಗಳಿಗೆ (1000ಸಿಸಿ) ಥರ್ಡ್ ಪಾರ್ಟಿ ಮೋಟಾರ್ ಇನ್ಶೂರೆನ್ಸ್ ಶೇ.39.9 ಏರಿಕೆಯಾಗಿದೆ. 1,468 ರು. ಇದ್ದದ್ದು 2,055 ರು. ಆಗಿದೆ. ಉಳಿದಂತೆ ಹೆಚ್ಚು ಸಿಸಿ ಕಾರುಗಳ ವಿಮೆಯ ಮೇಲೆ ಬರೋಬ್ಬರಿ ಶೇ.40 ಏರಿಕೆಯಾಗಿದೆ.

ಆದರೆ ಐಷರಾಮಿ ಕಾರುಗಳ (ಎಸ್ ಯುವಿ, 1500 ಸಿಸಿಗೂ ಮೇಲ್ಪಟ್ಟು) ಶೇ. 25 ಏರಿಕೆಯಾಗಿದೆ. 4,931 ಇದ್ದ ಪ್ರೀಮಿಯಂ ಬರೋಬ್ಬರಿ 6,164 ರು ಆಗಿದೆ. ಇದರೊಂದಿಗೆ ದ್ವಿಚಕ್ರ ವಾಹನಗಳ ಪ್ರಿಮಿಯಂ ಸಹ ಏರಿಕೆಯಾಗಿದೆ. 75 ಸಿಸಿ ಮೇಲಿನ ವಾಹನಗಳಿಗೆ ಏರಿಕೆ ಭಾಗ್ಯ ಸಿಕ್ಕಿದೆ. 519 ಇದ್ದ ಪ್ರೀಮಿಯಂ 569 ರು. ಆಗಿದೆ.(ಗುಡ್ ರಿಟರ್ನ್ಸ್. ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+