ತೆರಿಗೆ ಮಂಡಳಿಯ ಹೊಸ ನೀತಿ 'ನೇಮ್ ಆಂಡ್ ಶೇಮ್'

ತೆರಿಗೆ ಸುಸ್ತಿದಾರರಿಂದ ಸಾಕಷ್ಟು ಇರಿಸು ಮುರಿಸಿಗೆ ತುತ್ತಾಗಿರುವ ಆದಾಯ ತೆರಿಗೆ ಮಂಡಳಿ ತೆರಿಗೆ ಬಾಕಿ ಇರಿಸಿಕೊಳ್ಳುವವರ ಮಾನ ಹರಾಜು ಹಾಕಲು ಮುಂದಾಗಿದೆ. ಈ ಹಣಕಾಸು ವರ್ಷದಿಂದಲೇ "ನೇಮ್ ಆಂಡ್ ಶೇಮ್" ಹೆಸರಿನಲ್ಲಿ ಹೆಸರು ಪ್ರಕಟ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಈ ಬಗ್ಗೆ ಸಿದ್ಧತೆಯನ್ನು ಮಾಡಿಕೊಂಡಿದ್ದು ತೆರಿಗೆ ಬಾಕಿ ಉಳಿಸಿಕೊಂಡಿರುವ 67 ಜನರ ಹೆಸರನ್ನು ಜತೆಗೆ ಅವರ ವಿಳಾಸ, ಪಾನ್ ಕಾರ್ಡ್ ಸೇರಿದಂತೆ ಇತರ ದಾಖಲೆಯನ್ನು ಜನರೆದುರು ಇಡಲು ಮುಂದಾಗಿದೆ.[ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 31 ಡೆಡ್‌ಲೈನ್]

ತೆರಿಗೆ ಮಂಡಳಿಯ ಹೊಸ ನೀತಿ 'ನೇಮ್ ಆಂಡ್ ಶೇಮ್'

ಮೊದಲಿಗೆ 20-30 ಕೋಟಿ ಬಾಕಿ ಇರಿಸಿಕೊಂಡವರ ಹೆಸರು ಪ್ರಕಟ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ ಈಗ ಒಂದು ಕೋಟಿಗೂ ಅಧಿಕ ಮೊತ್ತ ಬಾಕಿ ಇರಿಸಿಕೊಂಡವರ ಹೆಸರು ಜನರ ಮುಂದೆ ಬರಲಿದೆ.[ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಡೌನ್ ಲೋಡ್ ಹೇಗೆ?]

2016-17 ರ ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ 1 ಕೋಟಿಗೂ ಅಧಿಕ ತೆರಿಗೆ ಬಾಕಿ ಇರಿಸಿಕೊಂಡವರ ಹೆಸರು ನೇಮ್ ಆಂಡ್ ಶೇಮ್ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿದೆ.

ತೆರಿಗೆ ಪಾವತಿ ಸರಿಯಾಗಿ ಮಾಡಲು ಮತ್ತು ತೆರಿಗೆ ಬಾಕಿ ಇರಿಸಿಕೊಂಡು ತಲೆನೋವಾಗಿ ಪರಿಣಮಿಸುವವರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲು ಆದಾಯ ತೆರಿಗೆ ಮಂಡಳಿ ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+