ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಇವತ್ತಿನ ತಮ್ಮ ಕೊನೆಯ ಹಣಕಾಸು ನೀತಿಯ ವಿಮರ್ಶೆಯಲ್ಲಿ 'ಯತಾಸ್ಥಿತಿ ನೀತಿ'ಯ ಸ್ಥಿತಿಯನ್ನು ಪ್ರಕಟಿಸಿದರು. ಅವರು ಸಮಾಲೋಚಿಸಿದ ಕೆಲ ಪ್ರಮುಖ ಅಂಶಗಳಿಗೆ ಒತ್ತುಕೊಡಲಾಗಿದ್ದು, ಅವುಗಳಲ್ಲಿ 7 ಅಂಶಗಳನ್ನು ಇಲ್ಲಿ ಕೊಡಲಾಗಿದೆ.
ಆರ್ಬಿಐ ಬಡ್ಡಿದರ ಸ್ಥಿರವಾಗಿ ಇಡುತ್ತದೆ
ಆರ್ಬಿಐ ಬಡ್ಡಿದರ ಸ್ಥಿರವಾಗಿ ಇಡುತ್ತದೆ ಮತ್ತು ಅದನ್ನು ಕಡಿತಗೊಳಿಸುವುದಿಲ್ಲ. ಅದನ್ನು ರೆಪೋ ದರ ಅಥವಾ ಬಡ್ಡಿದರ ಎಂದು ಕರೆಯಲಾಗುತ್ತಿದ್ದು, ಆರ್ಬಿಐ ಬ್ಯಾಂಕುಗಳಿಗೆ ಸಾಲ ನೀಡುತ್ತದೆ.
ರೆಪೋ ದರ ಶೇ.6.50ರಷ್ಟು ಸ್ಥಿರವಾಗಿ ಕಾಪಾಡಿಕೊಂಡಿದೆ.
ರೆಪೋ ದರದಲ್ಲಿ ಹೆಚ್ಚಳವಾದಾಗ ಬಡ್ಡಿದರದಲ್ಲೂ ಹೆಚ್ಚಳವಾಗುತ್ತದೆ. ಇಳಿಕೆಯಾದಾಗ ಬಡ್ಡಿದರದಲ್ಲೂ ಇಳಿಕೆಯಾಗುತ್ತದೆ.
ಆದರಿಂದಾಗಿ ಸಾಲದ ಬಡ್ಡಿದರ ಬಹುಶಹ ಹೆಚ್ಚಳವಾಗುವುದಿಲ್ಲ. ಇಲ್ಲದಿದ್ದರೆ ಬ್ಯಾಂಕು ಠೇವಣಿ ಬಡ್ಡಿದರ ಇಳಿಮುಖವಾಗುತ್ತದೆ.
ನಗದು ಮೀಸಲು ಅನುಪಾತ ಬದಲಾಗದು
ಬ್ಯಾಂಕುಗಳು ಆರ್ಬಿಐ ನಲ್ಲಿಡಬೇಕಾದ ಠೇವಣಿಗಳಲ್ಲಿ ಯಾವುದೇ ಬದಲಾವಣೆ ಅಥವಾ ನಗದು ಮೀಸಲು ಅನುಪಾತದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
ಕೊನೆಯ ಪಾಕ್ಷಿಕ ಗವರ್ನರ್ ನಿರ್ಧಾರದಂತೆ
ಮುಂದಿನ ಅಕ್ಟೋಬರ್ ೪ರ ಸಮಾಲೋಚನೆ ಕೊನೆಯ ಪಾಕ್ಷಿಕ ಹಣಕಾಸು ನೀತಿಯಾಗಿದ್ದು, ಆರ್ಬಿಐ ಗವರ್ನರ್ ಹಾಗೂ ಆರು ಸದಸ್ಯರ ಪ್ಯಾನೆಲ್ ಇದರ ಮುಖ್ಯ ಭೂಮಿಕೆಯನ್ನು ವಹಿಸಿ ನಿರ್ಧರಿಸಲಿದ್ದಾರೆ.
ಆದರಿಂದ ಮುಂದಿನ ಬಾರಿ ಬಡ್ಡಿದರ ಪರಿಶೀಲಿಸಲು ಫಲಕ ಬರಲಿದೆ.
ಗವರ್ನರ್ ರಾಜನ್ ಕೊನೆಯ ಹಣಕಾಸು ನೀತಿ
ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾದ ಪ್ರಸ್ತುತ ಗವರ್ನರ್ ಆದ ರಘುರಾಮ್ ರಾಜನ್ ರವರ ಕೊನೆಯ ಹಣಕಾಸು ನೀತಿ ಇದಾಗಲಿದೆ.
ಇವರ ಅಧಿಕಾರಾವಧಿ ಸೆಪ್ಟಂಬರ್ 3, 2016೬ರಂದು ಕೊನೆಗಳ್ಳಲಿದೆ. ಅವರ ಉತ್ತರಾಧಿಕಾರಿಯನ್ನು ಇನ್ನು ನಿರ್ಧರಿಸಿಲ್ಲ.
ಹಣದುಬ್ಬರದ ಬಗ್ಗೆ ಚಿಂತೆ
ಪ್ರಸ್ತುತ ಆರ್ಬಿಐ ಹಣದುಬ್ಬರದ ಬಗ್ಗೆ ಚಿಂತೆ ಮಾಡುತ್ತಿದೆ. ಅಂದರೆ ಚಿಲ್ಲರೆ ಹಣದುಬ್ಬರ ಏರಿದ ಸ್ಥಿತಿಯಲ್ಲಿಯೇ ಉಳಿದರೆ ಬಹುಶಹ ಹೆಚ್ಚಿನ ಬಡ್ಡಿದರ ಕಡಿತವಾಗುವುದಿಲ್ಲ.
ಚಿಲ್ಲರೆ ಹಣದುಬ್ಬರವನ್ನು ಗ್ರಾಹಕ ಬೆಲೆ ಸೂಚ್ಯಂಕದ(CPI) ಮೂಲಕ ಮಾಪನ ಮಾಡಲಾಗುತ್ತದೆ.
ಈ ವರ್ಷದಲ್ಲಿ ಆಹಾರ ಮತ್ತು ತರಕಾರಿ ಬೆಲೆ ಸಾಮಾನ್ಯ ದರಕ್ಕಿಂತಲೂ ಹೆಚ್ಚು ಏರಿಕೆಯಾಗಿರುವುದರಿಂದಾಗಿ ಹಣದುಬ್ಬರದ ಭಯ ಇದೆಯೆಂದು ಆರ್ಬಿಐ ವರದಿ ಮಾಡಿದೆ.
7ನೇ ವೇತನ ಆಯೋಗದಿಂದ ಹಣದುಬ್ಬರ
7ನೇ ವೇತನ ಆಯೋಗದಿಂದ ಹಣದುಬ್ಬರ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಆರ್ಬಿಐ ಚಿಂತಿತವಾಗಿದೆ.
7ನೇ ಕೇಂದ್ರ ವೇತನ ಆಯೋಗದ ಹೊಸ ಶಿಫಾರಸ್ಸುಗಳ ಅನುಷ್ಠಾನದಿಂದ ಸಿಪಿಸಿ ಮೇಲೆ ನೇರವಾದ ಪರಿಣಾಮ ಬೀರಲಿದೆ.
ಜಿಎಸ್ಟಿ ಪರಿಣಾಮ
ರಾಜಕೀಯ ಒಮ್ಮತದಿಂದ ಸರಕು ಮತ್ತು ಸೇವಾ ತೆರಿಗೆ ಮಸೂದೆ ಅಂಗೀಕಾರವಾಗಿರುವುದು ಆರ್ಥಿಕ ಸುಧಾರಣೆಗೆ ಸಹಕಾರಿಯಾಗಲಿದೆ. ಸಕಾಲಕ್ಕೆ ಜಿಎಸ್ಟಿ ಮಸೂದೆಯನ್ನು ಅನುಷ್ಠಾನಕ್ಕೆ ತರುವುದು ಸಹ ಸವಾಲಿನ ಕೆಲಸ ಎಂದು ಕೇಂದ್ರ ಬ್ಯಾಂಕು ತಿಳಿಸಿದೆ.


Click it and Unblock the Notifications