ದೂರಸಂಪರ್ಕ ಸೇವೆಗಳನ್ನು ಒದಗಿಸುವ ದೇಶದ ದೊಡ್ಡ ಟೆಲಿಕಾಂ ಕಂಪನಿ ಏರ್‌ಟೆಲ್ ಉಚಿತ 4ಜಿ ಡೆಟಾ ಪ್ಯಾಕ್ 90 ದಿನಗಳ ಅವಧಿಗೆ ಘೋಷಿಸಿದೆ.
ರಿಲಾಯನ್ಸ್ ಜಿಯೊ ಬಿರುಗಾಳಿಗೆ ಸಿಲುಕಿರುವ ಟೆಲಿಕಾಂ ಸಂಸ್ಥೆಗಳು ಅನೇಕ ಉಚಿತ ಆಫರ್ ಗಳನ್ನು ನೀಡಲು ಮುಂದಾಗುತ್ತಿವೆ. ಐಡಿಯಾ, ಬಿಎಸ್ಎನ್ಎಲ್ ಸೇರಿದಂತೆ ಈಗ ಏರ್‌ಟೆಲ್ ಕೂಡ ಮುಂದಾಗಿದೆ. ರಿಲಾಯನ್ಸ್ ಜಿಯೊ-ಏರ್‌ಟೆಲ್ ನಡುವೆ ಸಮರ
1. 30GB ಡೆಟಾ ಉಚಿತ
ಈಗಾಗಲೇ ಏರ್‌ಟೆಲ್ ಸೇವೆ ಬಳಸುತ್ತಿರುವ ಗ್ರಾಹಕರಿಗೆ ಈ ಪ್ಯಾಕ್ ಬೆಲೆ ರೂ. 1495 ಹಾಗೂ ಹೊಸ ಬಳಕೆದಾರರಿಗೆ ರೂ. 1494 ಆಗಿರಲಿದೆ. ಈ ಆಫರ್ ಹಿನ್ನೆಲೆಯಲ್ಲಿ ಗ್ರಾಹಕರು ತಿಂಗಳಿಗೆ 30GB ಡೆಟಾ ಉಚಿತವಾಗಿ ಬಳಸಬಹುದು.
2. ದೆಹಲಿಯಲ್ಲಿ ಲಭ್ಯ
ಸದ್ಯಕ್ಕೆ ಈ ಸೌಲಭ್ಯ ದೆಹಲಿಯ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲಿಯೇ ದೇಶದ ಇನ್ನಿತರ ನಗರಗಳಿಗೂ ಬಿಡುಗಡೆಯಾಗಲಿದೆ.
3. ಜಿಯೊ ಡೆಟಾಕ್ಕೆ ಸರಿಸಮ
1495 ರೂ.ಗಳ ೪ಜಿ ಪ್ಲಾನ್ ತಿಂಗಳಿಗೆ ರೂ. 500ರಂತೆ 10gb ಡೆಟಾವನ್ನು ಮೂರು ತಿಂಗಳಿಗೆ ವರ್ಗಿಕರಿಸುತ್ತದೆ. ಇದು ರಿಲಾಯನ್ಸ್ ಜಿಯೊ 4ಜಿ ಘೋಷಿಸಿದ ರೂ. 50ಕ್ಕೆ 1gb ಡೆಟಾಕ್ಕೆ ಸಮವಾಗಿದೆ. (ರಿಲಾಯನ್ಸ್ ಜಿಯೊ 4ಜಿ ಫ್ರೀ ವೆಲ್‌ಕಮ್ ಆಫರ್ ಸ್ಟಾರ್ಟ್)
4.FUP (Fair Usage Policy) ಸೌಲಭ್ಯ
ಈ ಪ್ಯಾಕ್ FUP (Fair Usage Policy) ಒಳಗೊಂಡಿದ್ದು, 90 ದಿನಗಳ ಅವಧಿಯಲ್ಲಿ 30gb ಡೆಟಾ ಬಳಸಿದ ನಂತರ ಕಡಿಮೆ ವೇಗದಲ್ಲಿ ಇಂಟರ್ನೆಟ್ ಬ್ರೌಸ್ ಆಗುವಂತೆ ಬಳಕೆದಾರರನ್ನು FUP ಒತ್ತಾಯಿಸುತ್ತದೆ.
5. 4ಜಿ ಹ್ಯಾಂಡ್ ಸೆಟ್
ಗ್ರಾಹಕರಿಗೆ ಹೆಚ್ಚಿನ ಮೌಲ್ಯ ನೀಡಲಾಗುತ್ತದೆ. ೪ಜಿ ಹ್ಯಾಂಡ್ ಸೆಟ್ ಇರುವ ಗ್ರಾಹಕರು ಹೆಚ್ಚಿನ ಪ್ರಮಾಣದ ಡೆಟಾವನ್ನು ಬಳಸಬಹುದಾಗಿದೆ. ಈ ಪ್ರತಿಪಾದನೆ ವಿಶೇಷವಾಗಿ ಗ್ರಾಹಕರಿಗಾಗಿಯೇ ಮಾಡಲಾಗಿದೆ ಎಂದು ಏರ್‌ಟೆಲ್ ತಿಳಿಸಿದೆ.
6. ಏರ್‌ಟೆಲ್, ವೋಡಾಫೋನ್ ಕೊಡುಗೆ
ರಿಲಾಯನ್ಸ್ ಜಿಯೊ ನೆಟ್ವರ್ಕ್ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲಿನಿಂದಲೂ ಏರ್‌ಟೆಲ್, ವೋಡಾಫೋನ್ ತನ್ನ ಗ್ರಾಹಕರಿಗೆ ಹಲವು ಆಫರ್ ಗಳನ್ನು ನೀಡುತ್ತಾ ಬಂದಿದೆ. ಈ ಹೊಸ ಕೊಡುಗೆಯನ್ನು ಗ್ರಾಹಕರ ಡೆಟಾ ಅಗತ್ಯತೆಯನ್ನು ಆಧರಿಸಿ ಹಾಗೂ ಜಿಯೊಗೆ ಹೊಗದಿರಲಿ ಎಂಬ ಉದ್ದೇಶದಿಂದ ನೀಡಲಾಗುತ್ತಿದೆ.
7. ಜಿಯೊ ಆಫರ್
ರಿಲಾಯನ್ಸ್ ಕಂಪನಿ 'ಜಿಯೊ ವೆಲ್ ಕಮ್ ಆಫರ್' ಅಡಿಯಲ್ಲಿ ಅನಿಯಮಿತ 4ಜಿ ಇಂಟರ್ನೆಟ್ ಸೌಲಭ್ಯವನ್ನು ಡಿಸೆಂಬರ್ 31 ರವರೆಗೆ ಪ್ರತಿ ದಿನಕ್ಕೆ 4ಜಿಬಿ ಡೆಟಾದಂತೆ ನೀಡುತ್ತಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications