For Quick Alerts
ALLOW NOTIFICATIONS  
For Daily Alerts

ರಿಲಾಯನ್ಸ್ ಜಿಯೊ 4ಜಿ ಫ್ರೀ ವೆಲ್‌ಕಮ್ ಆಫರ್ ಸ್ಟಾರ್ಟ್

By Siddu
|

ಟೆಲಿಕಾಂ ಕ್ಷೇತ್ರದ ದಿಗ್ಗಜ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್ ಅಂಬಾನಿ ಕನಸಿನ ಕೂಸಾದ ಜಿಯೊ 4ಜಿ ಆಫರ್ ಟೆಲಿಕಾಂ ಕ್ಷೇತ್ರದಲ್ಲಿ ಭಾರಿ ತಲ್ಲಣ ಉಂಟುಮಾಡಿದೆ. ಈಗ ಎಲ್ಲೆಡೆ ಜಿಯೊ ಕುರಿತಾಗಿಯೇ ಮಾತುಕತೆ ನಡೆದಿದೆ. ಇದು ಟೆಲಿಕಾಂ ಸಂಸ್ಥೆಗಳ ಮೇಲೂ ಭಾರಿ ಪರಿಣಾಮವನ್ನೇ ಉಂಟುಮಾಡುತ್ತಿದೆ.

 

ಕೆಲವರು ಈಗಾಗಲೇ ಜಿಯೊ ಸಿಮ್ ಪಡೆದು ಸೇವೆಗಳನ್ನು ಅನುಭವಿಸುತ್ತಿದ್ದಾರೆ. ಮತ್ತೆ ಕೆಲವರು ಸಿಮ್ ಪಡೆಯುವ ತವಕದಲ್ಲಿದ್ದಾರೆ. ಇನ್ನೂ ಕೆಲವರು ರಿಲಾಯನ್ಸ್ ಡಿಜಿಟಲ್ ಎಕ್ಷಪ್ರೆಸ್ ನಲ್ಲಿ ಟೋಕನ್ ಪಡೆದು ಸಿಮ್ ಗಾಗಿ ಕಾಯುವಂತಾಗಿದೆ.

ಜಿಯೊ ಫೋನ್ ಗಳಿಗೆ ಜೀವಿತಾವಧಿವರೆಗೆ ಉಚಿತ ಕರೆ ಸೌಲಭ್ಯ, ಕಡಿಮೆ ಬೆಲೆಗೆ ಡೆಟಾ ಸೇವೆ ಒದಗಿಸುವುದಾಗಿ ಅಂಬಾನಿ ಘೋಷಿಸಿದ್ದಾರೆ. ಇದರ ಜತೆಗೆ ಅನೇಕ ಸೇವೆಗಳು ರಿಲಾಯನ್ಸ್ ಜಿಯೊ ವೆಲ್‌ಕಮ್ ಆಫರ್ ನಲ್ಲಿ ಲಭ್ಯವಿದ್ದು ಅದರ ಚಿತ್ರಣ ಇಲ್ಲಿದೆ. ಜಿಯೊ ಜೀ ಭರಕೆ.....

ಜಿಯೊ ವೆಲ್ ಕಮ್ ಆಫರ್

ಜಿಯೊ ವೆಲ್ ಕಮ್ ಆಫರ್

ಸೆಪ್ಟಂಬರ್ 5 ರಿಂದ ಡಿಸೆಂಬರ್ 31ರ ವರೆಗೆ ರಿಲಾಯನ್ಸ್ ಜಿಯೊ ಜಿಯೊ ವೆಲ್ ಕಮ್ ಆಫರ್ ಎಲ್ಲರಿಗೂ ಉಚಿತವಾಗಿ ಇರಲಿದೆ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.

ಉಚಿತ ಸೇವೆಗಳು

ಉಚಿತ ಸೇವೆಗಳು

ಗ್ರಾಹಕರಿಗೆ ತನ್ನ 4ಜಿ ಸಿಮ್ ಕೊಡುಗೆ ಅಗಣಿತ ಉಚಿತ ಧ್ವನಿ ಮತ್ತು ಉಚಿತ ಅನಿಯಮಿತ ಡೇಟಾ, ಎಸ್ಎಂಎಸ್, ವಿಡಿಯೋ ಕರೆ, ಉಚಿತ ರೋಮಿಂಗ್ ಮತ್ತು ಜಿಯೊ ಆಪ್ಸ್ ಗಳನ್ನು ಒಳಗೊಂಡಿರುತ್ತದೆ. ಈ ಸೇವೆಗಳನ್ನು 90 ದಿನಗಳವರೆಗೆ ಉಚಿತವಾಗಿ ನೀಡಲಿದೆ.

ಹೊಸ ಸೇವೆಗಳು
 

ಹೊಸ ಸೇವೆಗಳು

ಸ್ಟ್ರೀಮಿಂಗ್ ಮ್ಯೂಸಿಕ್, ಹೈ ಡೆಫಿನಿಷನ್ ವಿಡಿಯೋ ಸ್ಟ್ರೀಮಿಂಗ್ ಮ್ಯೂಸಿಕ್ ಮತ್ತು ಡಿಜಿಟಲ್ ಹಣ ಪಾವತಿ ಒಳಗೊಂಡಂತೆ ಅನೇಕ ಸೇವೆಗಳನ್ನು ಒದಗಿಸುತ್ತಿದೆ. 15,000 ರೂ. ಮೌಲ್ಯದ ಸೇವೆಯನ್ನು ಡಿಸೆಂಬರ್ ೨೦೧೭ರ ವರೆಗೆ ಉಚಿತವಾಗಿ ನೀಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ಆಫರ್

ವಿದ್ಯಾರ್ಥಿಗಳಿಗೆ ಆಫರ್

ವಿದ್ಯಾರ್ಥಿಗಳಿಗೆ ಶೇ. 25ರಷ್ಟು ಹೆಚ್ಚು ಡೆಟಾ ಹಾಗೂ ದೇಶದಾದ್ಯಂತ 10 ಲಕ್ಷ ವೈಫೈ ಸ್ಥಾಪಿಸುವುದಾಗಿ ಹೇಳಿದ್ದಾರೆ. ಹೆಚ್ಚು ಡೆಟಾ ಬಳಸಿದಷ್ಟು ಪಾವತಿಸುವ ದರ ಕಡಿಮೆಯಾಗಲಿದೆ ಎಂದರು.

ಜಿಯೊ 18,000 ನಗರಗಳಿಗೆ

ಜಿಯೊ 18,000 ನಗರಗಳಿಗೆ

ರಿಲಾಯನ್ಸ್ ಜಿಯೊ 18,000 ನಗರ, ಪಟ್ಟಣ ಹಾಗೂ 2 ಲಕ್ಷ ಹಳ್ಳಿಗಳಿಗೆ ನೆಟ್ವರ್ಕ್ ಸಂಪರ್ಕ ಒದಗಿಸುತ್ತದೆ. 2017ರ ಮಾರ್ಚ್ ನಂತರ ಶೇ. 90ರಷ್ಟು ಭಾರತದ ಜನಸಂಖ್ಯೆಯನ್ನು ಕ್ರಮಿಸುತ್ತದೆ ಎಂದು ಅಂಬಾನಿ ಹೇಳಿದರು.

20 ಬ್ರ್ಯಾಂಡ್ ಗಳೊಂದಿಗೆ ಒಪ್ಪಂದ

20 ಬ್ರ್ಯಾಂಡ್ ಗಳೊಂದಿಗೆ ಒಪ್ಪಂದ

ಗ್ರಾಹಕರನ್ನು ಸೆಳೆಯಲು 20 ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳೊಂದಿಗೆ ರಿಲಾಯನ್ಸ್ ಜಿಯೊ ಒಪ್ಪಂದ ಮಾಡಿಕೊಂಡಿದೆ. ಸ್ಯಾಮ್ಸಂಗ್, ಎಲ್ ಜಿ, ಮೈಕ್ರೊಮ್ಯಾಕ್ಸ್ ಮತ್ತು ಪಾನಾಸೋನಿಕ್ ಪ್ರಮುಖ ಸಂಸ್ಥೆಗಳಾಗಿವೆ.

ಜಿಯೊ ವೈಶಿಷ್ಟತೆ ಏನು?

ಜಿಯೊ ವೈಶಿಷ್ಟತೆ ಏನು?

- ದೇಶದಾದ್ಯಂತ ಒಂದು ಮಿಲಿಯನ್ ವೈಫೈ ಹಾಟ್ ಸ್ಪಾಟ್ಸ್
- ಜಿಯೊಫೈ (JioFi) ರೂಟರ್ ಕೇವಲ 1,999 ರೂ.ಗೆ ಬಿಡುಗಡೆ
- ಹೊಸ Lyf ಡಿವೈಸ್ ಬೆಲೆ ಕೇವಲ 2,999 ರೂ.ಗಳಿಂದ ಪ್ರಾರಂಭ

ಜಿಯೊಗೆ ಹೊಸ ಸೇರ್ಪಡೆ

ಜಿಯೊಗೆ ಹೊಸ ಸೇರ್ಪಡೆ

2.8 ಮಿಲಿಯನ್ ಹಾಡು, 6000 ಚಲನಚಿತ್ರಗಳು ಮತ್ತು ಸಾವಿರಾರು ನಿಯತಕಾಲಿಕೆ ಮತ್ತು ಪತ್ರಿಕೆಗಳು ಜಿಯೊ ಗ್ರಾಹಕರಿಗೆ ಲಭ್ಯವಾಗಿರುತ್ತವೆ.

ಜಿಯೊ ಮನಿ ಸೌಲಭ್ಯ

ಜಿಯೊ ಮನಿ ಸೌಲಭ್ಯ

ಗ್ರಾಹಕರು ಜಿಯೊ ಮನಿ ಡಿಜಿಟಲ್ ವ್ಯಾಲೆಟ್ ಮೂಲಕ ಹಣವಿಲ್ಲದೆಯೇ ಖರೀದಿ ಮಾಡುವ ಸೌಲಭ್ಯವನ್ನು ರಿಲಾಯನ್ಸ್ ಒದಗಿಸಲು ಮುಂದಾಗಿದ್ದು, ಜಿಯೊ ಮನಿ ಬಿಡುಗಡೆ ಮಾಡಿದೆ.

ಶುಲ್ಕ ಇರುವುದಿಲ್ಲ

ಶುಲ್ಕ ಇರುವುದಿಲ್ಲ

ಜಿಯೊ ಗ್ರಾಹಕರಿಗೆ ಯಾವುದೇ ಬ್ಯಾಕ್ ಔಟ್ ದಿನಾಂಕಗಳು ಇರುವುದಿಲ್ಲ. ಹಬ್ಬ ಹರಿ ದಿನಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕಗಳಿರುವುದಿಲ್ಲ. ಗ್ರಾಹಕರು ವ್ಯವಹಾರ ಮಾಡಿದ ನಂತರ ಯಾವಾಗ ಬೇಕಾದರೂ ಬಿಲ್ ಪಾವತಿಸಬವಹುದು.

50 ರೂ.ಗೆ 1 ಜಿಬಿ

50 ರೂ.ಗೆ 1 ಜಿಬಿ

ಜಿಯೊ ಸೇವೆಯಲ್ಲಿ ಪ್ರತಿ ಒಂದು ಎಂಬಿ ಡೆಟಾ ಗೆ 5 ಪೈಸೆ ಅಥವಾ ಪ್ರತಿ ಒಂದು ಜಿಬಿಗೆ ರೂ. 50ರಂತೆ ಕಡಿಮೆ ಬೆಲೆಯಲ್ಲಿ ಒದಗಿಸಲಾಗುತ್ತದೆ.

ಆಧಾರ್ ಕಾರ್ಡ್ ನೊಂದಿಗೆ ಸಂಪರ್ಕ

ಆಧಾರ್ ಕಾರ್ಡ್ ನೊಂದಿಗೆ ಸಂಪರ್ಕ

ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದಲ್ಲಿ 15 ನಿಮಿಷಗಳ ಒಳಗಾಗಿ ನಿಮಗೆ ಆಧಾರ್ ಸಂಪರ್ಕ ಮಾಡಿಕೊಡಲಾಗುತ್ತದೆ.

100 ಮಿಲಿಯನ್ ಗ್ರಾಹಕರು

100 ಮಿಲಿಯನ್ ಗ್ರಾಹಕರು

ಹೌದು. ದೇಶದಾದ್ಯಂತ ನೂರು ಮಿಲಿಯನ್ ಗ್ರಾಹಕರನ್ನು ಅತಿ ಕಡಿಮೆ ಅವಧಿಯಲ್ಲಿ ಜಿಯೊ ಅಡಿಯಲ್ಲಿ ತರಬೇಕೆಂಬುದು ಮುಖೇಶ್ ಅಂಬಾನಿಯವರ ಗುರಿಯಾಗಿದೆ.

ವಾಣಿಜ್ಯಾತ್ಮಕ ಬಿಡುಗಡೆ

ವಾಣಿಜ್ಯಾತ್ಮಕ ಬಿಡುಗಡೆ

ರಿಲಾಯನ್ಸ್ ಜಿಯೊ ವಾಣಿಜ್ಯಾತ್ಮಕವಾಗಿ ಡಿಸೆಂಬರ್ 2016ರಲ್ಲಿ ಲಾಂಚ್ ಮಾಡಲಾಗುವುದು. ಅಲ್ಲಿಯವರೆಗೆ ಇದು ಫ್ರೀವೀವ್ ಲಾಂಚ್ ಅಥವಾ ವೆಲ್ ಕಮ್ ಆಫರ್ ಆಗಿರುತ್ತದೆ.

ರಿಲಾಯನ್ಸ್ ಡಿಜಿಟಲ್ ಎಕ್ಷಪ್ರೇಸ್ ನಲ್ಲಿ ಲಭ್ಯ

ರಿಲಾಯನ್ಸ್ ಡಿಜಿಟಲ್ ಎಕ್ಷಪ್ರೇಸ್ ನಲ್ಲಿ ಲಭ್ಯ

ರಿಲಾಯನ್ಸ್ ಡಿಜಿಟಲ್ ಎಕ್ಷಪ್ರೇಸ್ ಮಳಿಗೆಗಳಲ್ಲಿ ಗ್ರಾಹಕರು ಜಿಯೊ ಸಿಮ್ ಪಡೆಯಬಹುದಾಗಿದೆ.

English summary

Reliance Jio Announced 4g Welcome Offer

Mukesh Ambani today outlined the detail plans of the much awaited Reliance Jio plans at the company's annual general body meeting (AGM). Ambani unleashed his telecom disruptor Jio, announcing free voice calls and zero roaming charges for its customers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X