For Quick Alerts
ALLOW NOTIFICATIONS  
For Daily Alerts

ರಿಲಾಯನ್ಸ್ ಜಿಯೊ-ಏರ್‌ಟೆಲ್‌ ನಡುವೆ ಸಮರ

By Siddu Thorat
|

ಭಾರ್ತಿ ಏರ್‌ಟೆಲ್‌ ಕಳೆದ ವಾರ ರಿಲಾಯನ್ಸ್ ಜಿಯೊಗೆ ತನ್ನ ನೆಟವರ್ಕ್ ನಲ್ಲಿ ಅಂತರ್ ಸಂಪರ್ಕ ಸಲುವಾಗಿ ಹೆಚ್ಚುವರಿ ಪಾಯಿಂಟ್ ಗಳನ್ನು ಕೊಡಲು ಒಪ್ಪಿಕೊಂಡು ಸೇವೆಯನ್ನು ಪೂರೈಸುತ್ತಿತ್ತು. ಆದರೆ ಈ ಒಪ್ಪಂದ ಈಗ ಹೊಸ ತಿರುವಿನತ್ತ ಮುಖ ಮಾಡಿ ಎರಡು ಟೆಲಿಕಾಂ ಸಂಸ್ಥೆಗಳ ಸಮರಕ್ಕೆ ಕಾರಣವಾಗಿದೆ. (ರಿಲಾಯನ್ಸ್ ಜಿಯೊ 4ಜಿ ಫ್ರೀ ವೆಲ್‌ಕಮ್ ಆಫರ್ ಸ್ಟಾರ್ಟ್)

 

ದೇಶದ ದೊಡ್ಡ ಟೆಲಿಕಾಂ ಸಂಸ್ಥೆಗಳೆನಿಸಿದ ಏರ್‌ಟೆಲ್‌ ಮತ್ತು ರಿಲಾಯನ್ಸ್ ಜಿಯೊ ನಡುವೆ ಭಾನುವಾರದಿಂದ ಸಮರ ಪ್ರಾರಂಭವಾಗಿ, ಹೊಸ ತಿರುವು ಪಡೆಯುತ್ತಿದೆ. ಅಂತರ್ ಸಂಪರ್ಕ ಪಾಯಿಂಟ್ [Points of Interconnect] ಬಗ್ಗೆ ಈ ಎರಡು ಕಂಪನಿಗಳು ಕಚ್ಚಾಡುವಂತಾಗಿದ್ದು, ಟೆಲಿಕಾಂ ರಂಗದಲ್ಲಿ ಹೊಸ ತಲ್ಲಣ ಉಂಟು ಮಾಡುವತ್ತ ಸಾಗುತ್ತಿವೆ. ಗ್ರಾಹಕರ ವಿಶ್ವಾಸ ಉಳಿಸುವಿಕೆಯಲ್ಲಿ ಯಾವ ಸಂಸ್ಥೆ ಸಫಲವಾಗುತ್ತದೆ ಎಂಬುದು ಗ್ರಾಹಕರ ಹಾಗೂ ವಿಶ್ಲೇಷಕರ ಕುತೂಹಲಕ್ಕೆ ಕಾರಣವಾಗಿದೆ.

1. ಜಿಯೊ ಆರೋಪ

1. ಜಿಯೊ ಆರೋಪ

ಭಾರ್ತಿ ಏರ್ಟೆಲ್ ಮತ್ತು ರಿಲಾಯನ್ಸ್ ಜಿಯೊ ಎರಡು ನೆಟ್ವರ್ಕ್ ಗಳ ನಡುವೆ ಪ್ರತಿದಿನ 2 ಕೋಟಿ ಕರೆಗಳು ವಿಫಲಗೊಳ್ಳುತ್ತಿವೆ. ಕಾರಣ ಏರ್ಟೆಲ್ ಸರಿಯಾಗಿ ಸಾಕಷ್ಟು ಪ್ರಮಾಣದ ಅಂತರ್ ಸಂಪರ್ಕ ಪಾಯಿಂಟ್ ಗಳನ್ನು[Points of Interconnect] ಪೂರೈಸುತ್ತಿಲ್ಲ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಆರೋಪಿಸಿದ್ದಾರೆ.

2. ಏರ್ಟೆಲ್ ಪ್ರತ್ಯುತ್ತರ

2. ಏರ್ಟೆಲ್ ಪ್ರತ್ಯುತ್ತರ

ರಿಲಾಯನ್ಸ್ ಜಿಯೊ ಮಾಡಿದ ಈ ಆರೋಪವನ್ನು ತಳ್ಳಿ ಹಾಕಿದ ಏರ್ಟೆಲ್ ಇದಕ್ಕೆ ಜಿಯೊ ಅಂತರ್ ಸಂಪರ್ಕದಲ್ಲಿನ ನ್ಯೂನತೆಯಿಂದಾಗಿ ಕರೆಗಳು ವಿಫಲಗೊಳ್ಳುತ್ತಿವೆ ಎಂದು ಪ್ರತ್ಯುತ್ತರ ನೀಡಿದೆ. ಇದರಲ್ಲಿ ಏರ್ಟೆಲ್ ಸಂಸ್ಥೆಯ ತಪ್ಪು ಏನಿಲ್ಲ ಎಂದು ತಿಳಿಸಿದೆ.

3. ದುರುಪಯೋಗ
 

3. ದುರುಪಯೋಗ

ದೇಶದ ಅತಿದೊಡ್ಡ ಟೆಲಿಕಾಂ ಆಯೋಜಕರು ತಮ್ಮ ನಾಯಕತ್ವದ ಸ್ಥಾನಮಾನವನ್ನು ಹಾಗೂ ಟೆಲಿಕಾಂ ರಂಗದಲ್ಲಿನ ಪ್ರಖ್ಯಾತಿ, ಪ್ರಭಾವವನ್ನು ದುರುಪಯೋಗ ಮಾಡುತ್ತಿವೆ ಎಂದು ರಿಲಾಯನ್ಸ್ ಹೇಳಿದೆ.

4. ಸ್ಪರ್ಧೆಯ ವಿರುದ್ದ ವರ್ತನೆ

4. ಸ್ಪರ್ಧೆಯ ವಿರುದ್ದ ವರ್ತನೆ

ರಿಲಾಯನ್ಸ್ ಜಿಯೊ ನೀಡುತ್ತಿರುವ ಉನ್ನತ ಗುಣಮಟ್ಟದ ೪ಜಿ ಸೇವೆ ಮತ್ತು ಉಚಿತ ಧ್ವನಿ ಸೇವೆಗಳ ಪ್ರಯೋಜನಗಳು ಗ್ರಾಹಕರಿಗೆ ಸಿಗದಿರಲಿ ಎಂಬ ಕಾರಣದಿಂದ ಕೆಲ ಸ್ಪರ್ಧಿಗಳು ಇದಕ್ಕೆ ವಿರುದ್ದವಾಗಿ ವರ್ತನೆ ಹಾಗೂ ಕುತಂತ್ರ ಮಾಡುತ್ತಿದ್ದಾರೆ ಎಂದು ರಿಲಾಯನ್ಸ್ ಹೇಳಿದೆ.

5. ಅಗತ್ಯಕ್ಕಿಂತ ಕಡಿಮೆ ಪಾಯಿಂಟ್

5. ಅಗತ್ಯಕ್ಕಿಂತ ಕಡಿಮೆ ಪಾಯಿಂಟ್

ಅಂತರ್ ಸಂಪರ್ಕ ಸಲುವಾಗಿ ಪಾಯಿಂಟ್ ಗಳನ್ನು ಕೊಡಲು ಒಪ್ಪಿಕೊಂಡಿದ್ದಕ್ಕಿಂತ ಹಾಗೂ ಅಗತ್ಯಕ್ಕಿಂತ ಗಣನೀಯವಾಗಿ ಕಡಿಮೆ ಪಾಯಿಂಟ್ ಗಳನ್ನು ಏರ್ಟೆಲ್ ಬಿಡುಗಡೆಗೊಳಿಸುತ್ತಿದೆ. ಎರಡು ಜಾಲಗಳ ನಡುವಿನ ಪ್ರಸ್ತುತ ಅಂತರ್ ಸಂಪರ್ಕ ಸಂಚಾರದ ಸಾಮರ್ಥ್ಯ 4/1ಕ್ಕಿಂತ ಕಡಿಮೆ ಇದೆಯೆಂದು ಜಿಯೊ ಹೇಳಿದೆ.

6. 2 ಕೋಟಿ ಕರೆ ವಿಫಲ

6. 2 ಕೋಟಿ ಕರೆ ವಿಫಲ

ಪ್ರತಿದಿನ ಎರಡು ಕೋಟಿ ಕರೆಗಳು ಜಿಯೊ ಮತ್ತು ಏರ್ಟೆಲ್ ಜಾಲಗಳ ನಡುವೆ ವಿಫಲಗೊಳ್ಳುತ್ತಿವೆ. ಹೀಗಾಗಿ ಗುಣಮಟ್ಟದ ಸೇವೆ ಮತ್ತು ಎಚ್ಚರಿಕೆಯ ಪ್ರಮಾಣದಿಂದ ಇವು ತುಂಬಾ ದೂರ ಉಳಿದಂತಾಗಿದೆ. ಇದರಿಂದಾಗಿ ಗ್ರಾಹಕರು ಉತ್ತಮ ಅಂತರ್ ಸಂಪರ್ಕ ಸೇವೆ ಇಲ್ಲದೆ ಪರದಾಡುವಂತಾಗಿದೆ.

7. ಜಿಯೊ ತಾಂತ್ರಿಕ ಸಮಸ್ಯೆ

7. ಜಿಯೊ ತಾಂತ್ರಿಕ ಸಮಸ್ಯೆ

ಈ ವಿಷಯದ ಮೇಲೆ ಜಿಯೊ ಯಾವಾಗಲೂ ಆರೋಪಗಳನ್ನು ಮಾಡುತ್ತಲೇ ಇದೆ. ಆದರೆ ಸಹಕಾರವನ್ನು ಮಾತ್ರ ನೀಡುತ್ತಿಲ್ಲ.
ಜಿಯೊ ನೆಟವರ್ಕ್ ನಲ್ಲಿ ತಾಂತ್ರಿಕ ಸಮಸ್ಯೆಗಳಿರುವುದರಿಂದ ಕರೆಗಳು ವಿಫಲಗೊಳ್ಳುತ್ತಿವೆ. ಅದೆಲ್ಲವನ್ನು ಯೋಚಿಸದೆ ನಿರಂತರವಾಗಿ ಅಪರೇಟರ್ಸ್ ಗಳ ಮೇಲೆ ಮಾತ್ರ ಸುಮ್ಮನೆ ಆರೋಪ ಮಾಡುತ್ತಲೇ ಇದೆ ಎಂದು ಏರ್ಟೆಲ್ ತಿಳಿಸಿದೆ.

8. ಬಲವರ್ಧನೆ ಕೊರತೆ

8. ಬಲವರ್ಧನೆ ಕೊರತೆ

ಕರೆಗಳ ವೈಫಲ್ಯ, ಹೆಚ್ಚು ಪ್ರಮಾಣದ ಅಂತರ್ ಸಂಪರ್ಕ ಪಾಯಿಂಟ್ ಅಥವಾ ವೋಲ್ಟ್ ಸ್ಥೀರಿಕರಣದ ಕೊರತೆಯ ವಿಚಾರದ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಇದನ್ನು ತ್ವರಿತವಾಗಿ ಹಾಗೂ ಪ್ರತಿನಿತ್ಯವಾಗಿ ಬಲವರ್ಧನೆ ಮಾಡುತ್ತಿರಬೇಕು ಎಂದು ಏರ್ಟೆಲ್ ಅಭಿಪ್ರಾಯಿಸಿದೆ.

9. ಏರ್ಟೆಲ್ 15 ಮಿಲಿಯನ್ ಗ್ರಾಹಕರು

9. ಏರ್ಟೆಲ್ 15 ಮಿಲಿಯನ್ ಗ್ರಾಹಕರು

ಭಾರ್ತಿ ಏರ್ಟೆಲ್ ೧೫ ಮಿಲಿಯನ್ ಗ್ರಾಹಕರಿಗೆ ಸಾಕಾಗುವಷ್ಟು ಅಂತರ್ ಸಂಪರ್ಕ ಪಾಯಿಂಟ್ ಗಳನ್ನು[Points of Interconnect] ಒದಗಿಸುತ್ತಿದ್ದು, ಇದು ಪ್ರಸ್ತುತ ಜಿಯೊ ತನ್ನ 10 ಮಿಲಿಯನ್ ಚಂದಾದಾರರಿಗೆ ನೀಡುವುದಕ್ಕಿಂತ ಹೆಚ್ಚಿನದಾಗಿದೆ ಎಂದಿದೆ.

10. ತಪ್ಪು, ದುರದೃಷ್ಟಕರ ಹೇಳಿಕೆ

10. ತಪ್ಪು, ದುರದೃಷ್ಟಕರ ಹೇಳಿಕೆ

ಏರ್ಟೆಲ್ ಹೇಳಿಕೆಯನ್ನು ಜಿಯೊ ತಪ್ಪು ದಾರಿಗೆಳೆಯುವ ಮತ್ತು ದುರದೃಷ್ಟಕರ ಎಂದು ಹೇಳಿದ್ದು, ತನ್ನ ನೆಟವರ್ಕ್ ನಲ್ಲಿ ಕರೆಗಳ ಮತ್ತು ತಾಂತ್ರಿಕ ವೈಫಲ್ಯತೆ ಇಲ್ಲ ಎಂದು ಸಮಜಾಯಿಸಿದೆ. ಜಿಯೊ ನೆಟವರ್ಕ್ ನಲ್ಲಿನ ಶೂನ್ಯ ಕರೆ ವಿಫಲತೆ ಖಚಿತಪಡಿಸಲು ಮೂರನೇ ವ್ಯಕ್ತಿಯಿಂದ ತಪಾಸಣೆ ಮಾಡಿಸಲು ಜಿಯೊ ಮುಂದಾಗಿದೆ.

11. ಸ್ಥಳೀಯ ನಿರ್ವಾಹಕರಿಗೆ ಸೂಚನೆ

11. ಸ್ಥಳೀಯ ನಿರ್ವಾಹಕರಿಗೆ ಸೂಚನೆ

ಕರೆ ವೈಫಲ್ಯಗಳ ಹಿನ್ನಲೆಯಲ್ಲಿ ಜಿಯೊ ತನ್ನ ಸ್ಥಾನಿಕ ನಿರ್ವಾಹಕರಿಗೆ ಗ್ರಾಹಕರನ್ನು ಪ್ರೋತ್ಸಾಹಿಸುವಂತೆ, ನೆಟವರ್ಕ್ ಸಂಬಂಧಿತ ಗೊಂದಲಗಳನ್ನು ಪರಿಹರಿಸುವಂತೆ ಹಾಗೂ ಸ್ಥಾನಿಕ ಸೇವಾಕರ್ತೃಗಳ ಕುತಂತ್ರ ಮತ್ತು ಪೈಪೋಟಿ ವಿರುದ್ದದ ವ್ಯವಹಾರಗಳಿಗೆ ಬಲಿಯಾಗದಂತೆ ಎಚ್ಚರವಹಿಸುವಂತೆ ಎಂದು ಸಲಹೆ ನೀಡಿದೆ.

12. ಜಿಯೊ-ಏರ್ಟೆಲ್ ನೆಟವರ್ಕ್ ಪರಿಶೀಲನೆ

12. ಜಿಯೊ-ಏರ್ಟೆಲ್ ನೆಟವರ್ಕ್ ಪರಿಶೀಲನೆ

ಅಂತರ್ ಸಂಪರ್ಕ ಪಾಯಿಂಟ್ ಗಳನ್ನು(PoIs) ಪ್ರತ್ಯಕ್ಷ ಹಾಗೂ ದೈಹಿಕವಾಗಿ ಪರೀಕ್ಷಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಾವು ಈಗಾಗಲೇ ಜಿಯೊ ಸಹಕಾರವನ್ನು ಬಯಸಿದ್ದು, ಏರ್ಟೆಲ್ ತಂಡ ಈಗಾಗಲೇ ಪರೀಕ್ಷೆಗೆ ಸಿದ್ದವಾಗಿದ್ದು, ಜಿಯೊಗಾಗಿ ಕಾಯುತ್ತಿದೆ ಎಂದು ಏರ್ಟೆಲ್ ತಿಳಿಸಿದೆ.

13. ಪೋರ್ಟೆಬಲ್ ನಿರ್ಬಂಧ

13. ಪೋರ್ಟೆಬಲ್ ನಿರ್ಬಂಧ

ಅಡಿಪಾಯ ರಹಿತ ರುಜುವಾತು ಆಧಾರದ ಮೇಲೆ ಜಿಯೊ ಗೆ ಪೋರ್ಟೆಬಲ್ ಆಗಬಯಸುವ ಚಂದಾದಾರರ ನಂಬರ್ ಗಳ ಪೋರ್ಟೆಬಿಲಿಟಿ ಸೌಲಭ್ಯವನ್ನು ಏರ್ಟೆಲ್ ಬ್ಲಾಕ್ ಮಾಡುತ್ತಿದ್ದು, ಪೋರ್ಟ್ ಆಗಲು ಬಿಡುತ್ತಿಲ್ಲ. ಇದು ಸಹ ಸ್ಪರ್ಧೆ ವಿರುದ್ಧ ನೀತಿಯಾಗಿದ್ದು, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದುದ್ದಾಗಿದೆ ಎಂದು ಜಿಯೊ ಆರೋಪಿಸಿದೆ.

14. ಸಾವಿರಾರು ಗ್ರಾಹಕರು ಏರ್ಟೆಲ್ ಗೆ ಪೋರ್ಟ್

14. ಸಾವಿರಾರು ಗ್ರಾಹಕರು ಏರ್ಟೆಲ್ ಗೆ ಪೋರ್ಟ್

ಏರ್ಟೆಲ್ ಯಾವಾಗಲೂ ಕಾನೂನು ಬದ್ದವಾಗಿಯೇ ತನ್ನ ಎಲ್ಲ ಪ್ರಕ್ರಿಯೆಗಳನ್ನು ಮಾಡುತ್ತದೆ. ಪ್ರತಿನಿತ್ಯ ಬೇರೆ ಸಂಪರ್ಕಗಳಿಂದ ಸಾವಿರಾರು ಗ್ರಾಹಕರು ಏರ್ಟೆಲ್ ಗೆ ಪೋರ್ಟ್ ಆಗುತ್ತಿದ್ದಾರೆ. ಹೀಗಾಗಿ ಕಾನೂನು ವಿರುದ್ಧವಾದ ಚಟುವಟಿಕೆಗಳನ್ನು ಮಾಡಬೇಕಾದ ಅಗತ್ಯ ನಮಗಿಲ್ಲ ಎಂದು ಏರ್ಟೆಲ್ ಪ್ರತ್ಯುತ್ತರ ನೀಡಿದೆ.

English summary

Reliance Jio, Bharti Airtel War Erupts Again

Reliance Jio and Bharti Airtel continue to be at loggerheads with the Mukesh Ambani-led firm now alleging that more than two crore calls are failing daily between the two networks due to insufficient number of interconnection points provided by Bharti Airtel.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X