ಬ್ಯಾಂಕು ಖಾತೆ ಮುಚ್ಚುವ ಮುನ್ನ KYC ಅಪ್ಡೇಟ್ ಮಾಡಿ

ಇಲ್ಲಿಯವರೆಗೆ ಯಾರು ತಮ್ಮ ಖಾತೆಗಳ KYC (know your customer) ಅಪ್ಡೇಟ್ ಮಾಡಿಲ್ಲವೋ ಅಂತಹ ಗ್ರಾಹಕರು ಅಕ್ಟೋಬರ್ 1ರ ಒಳಗಾಗಿ KYC(ನಿಮ್ಮ ಗ್ರಾಹಕ ಗುರುತಿಸಿ) ಅಪ್ಡೇಟ್ ಮಾಡಬೇಕು. ಇಲ್ಲದಿದ್ದರೆ ಬ್ಯಾಂಕು ವ್ಯವಹಾರಗಳನ್ನು ಬ್ಲಾಕ್ ಮಾಡಲಾಗುವುದು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತಿಳಿಸಿದೆ. ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

KYC ಎನ್ನುವುದು ಗ್ರಾಹಕರ ಮಾಹಿತಿಯನ್ನು ಅಪ್ಡೇಟ್ ಮಾಡುವ ಪ್ರಕ್ರಿಯೆ ಆಗಿದ್ದು, ಬ್ಯಾಂಕು ಸೇವೆಗಳನ್ನು ದುರುಪಯೋಗ ಪಡಿಸಲಾಗುತ್ತಿಲ್ಲ ಎಂಬುದನ್ನು ಖಚಿತಪಡಿಸುವುದಾಗಿದೆ.

1. KYC ಅಪ್ಡೇಟ್ ಮಾಡದಿದ್ದರೆ ಏನಾಗುತ್ತೆ?

1. KYC ಅಪ್ಡೇಟ್ ಮಾಡದಿದ್ದರೆ ಏನಾಗುತ್ತೆ?

ಗ್ರಾಹಕರು ಅಕ್ಟೋಬರ್ 1, 2016ರ ಒಳಗಾಗಿ KYC ಅಪ್ಡೇಟ್ ಮಾಡದಿದ್ದರೆ ಎಟಿಎಂ, ಖಾತೆ ಮಾರಾಟ, ಇಂಟರ್ನೆಟ್/ಮೊಬೈಲ್ ಬ್ಯಾಂಕಿಂಗ್ ವ್ಯವಹಾರಗಳನ್ನು ನಿರ್ಬಂಧಗೊಳಿಸುವ ಹಕ್ಕನ್ನು ಹೊಂದಿರುತ್ತದೆ ಎಂದು ಬ್ಯಾಂಕು ಸಂವಹನದಲ್ಲಿ ಹೇಳಿದೆ.

2. ಆರ್ಬಿಐ ಸೂಚನೆ

2. ಆರ್ಬಿಐ ಸೂಚನೆ

ಭಾರತೀಯ ರಿಸರ್ವ್ ಬ್ಯಾಂಕಿನ ಸೂಚನೆ ಪ್ರಕಾರ ಆಯಾ ಬ್ಯಾಂಕುಗಳ ಗ್ರಾಹಕರು ಕಾಲಕ್ಕನುಗುಣವಾಗಿ KYC ಅಪ್ಡೇಟ್ ಮಾಡಬೇಕಾಗಿರುವುದು ಕಡ್ಡಾಯವಾಗಿದೆ.

3. ಪಂಜಾಬ್ ಬ್ಯಾಂಕ್ ಕೋರಿಕೆ

3. ಪಂಜಾಬ್ ಬ್ಯಾಂಕ್ ಕೋರಿಕೆ

KYC ಅಪ್ಡೇಟ್ ಮಾಡುವುದಕ್ಕಾಗಿ ಅಧಿಕೃತ ದಾಖಲೆ ಪತ್ರ, ವಿಳಾಸ ಗುರುತಿನ ಚೀಟಿಗಳನ್ನು ಗ್ರಾಹಕರು ತಮಗೆ ಸಂಬಂಧಿಸಿದ ಶಾಖೆಗಳಿಗೆ ಸಲ್ಲಿಸುವಂತೆ ಪಂಜಾಬ್ ಬ್ಯಾಂಕು ತನ್ನ ಗ್ರಾಹಕರನ್ನು ಕೇಳಿಕೊಂಡಿದೆ.

4. ವೈಯಕ್ತಿಕ ಖಾತೆದಾರರು

4. ವೈಯಕ್ತಿಕ ಖಾತೆದಾರರು

ವೈಯಕ್ತಿಕ ಖಾತೆ ಹೊಂದಿರುವವರು ಪಾನ್ ಕಾರ್ಡ್, ಪಾಸ್ಫೋರ್ಟ್, ಆಧಾರ್ ಕಾರ್ಡ್, ಚುನಾವಣಾ ಚೀಟಿ, ಡ್ರೈವಿಂಗ್ ಲೈಸೆನ್ಸ್, ನರೇಗಾ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದರ ಛಾಯಾಪ್ರತಿಯನ್ನು ಸಲ್ಲಿಸಬಹುದು.

5. ಚಾಲ್ತಿ ಖಾತೆದಾರರು

5. ಚಾಲ್ತಿ ಖಾತೆದಾರರು

ಚಾಲ್ತಿ ಖಾತೆಗಳ್ನು ಹೊಂದಿರುವ ಗ್ರಾಹಕರು ಹಾಗೂ ಮಾಲೀಕರು ಅಸ್ತಿತ್ವ ಮತ್ತು ವಿಳಾಸ ಪುರಾವೆಗಳಿಗೆ ಸಂಬಂಧಿತ ಗುರುತು ಚೀಟಿಗಳನ್ನು ಸಲ್ಲಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+