Englishहिन्दी മലയാളം தமிழ் తెలుగు

ಪಿಎಫ್ UAN ಖಾತೆಗೆ ಆಧಾರ್ ಲಿಂಕ್ ಮಾಡಿಲ್ಲವೆ?

Written By: Siddu
Subscribe to GoodReturns Kannada

ಸಾರ್ವತ್ರಿಕ ಖಾತೆ ಸಂಖ್ಯೆ(UAN) ತುಂಬಾ ಮಹತ್ವದ್ದಾಗಿದ್ದು, ಉದ್ಯೋಗಿಗಳಿಗೆ ಕೆಲಸದ ಸಂದರ್ಭದಲ್ಲಿ, ಉದ್ಯೋಗ ಬದಲಾಯಿಸುವಾಗ, ಇಪಿಎಫ್ ವರ್ಗಾವಣೆ ಮಾಡುವಾಗ ಮಹತ್ವದ ಪಾತ್ರ ವಹಿಸುತ್ತದೆ. ಜತೆಗೆ ಆಧಾರ್ ನಂಬರ್ ಕೂಡ ಇನ್ನೊಂದು ಮಹತ್ವದ ದಾಖಲೆಯಾಗಿದ್ದು, ಭಾರತೀಯರು ವ್ಯವಹಾರದ ಸಂದರ್ಭದಲ್ಲಿ ಬಳಸಬೇಕಾಗುತ್ತದೆ.

ಸಾರ್ವತ್ರಿಕ ಖಾತೆ ಸಂಖ್ಯೆ(ಯುನಿವರ್ಸಲ್ ಅಕೌಂಟ್ ನಂಬರ್) ಕಾರ್ಮಿಕ ಭವಿಷ್ಯ ನಿಧಿ ಖಾತೆ ನಿರ್ವಹಣೆ ಹಾಗೂ ಗ್ರಾಹಕರ ಸೇವಾ ಗುಣಮಟ್ಟ ಹೆಚ್ಚಿಸುವ ದೃಷ್ಟಿಯಿಂದ ದೇಶದ ಪ್ರತಿಯೊಬ್ಬ ಕಾರ್ಮಿಕನಿಗೂ ನೀಡಲು ಭವಿಷ್ಯ ನಿಧಿ ಇಲಾಖೆ ಕಾರ್ಯಪ್ರವೃತ್ತವಾಗಿರುವುದು ನಮಗೆಲ್ಲಾ ಗೊತ್ತಿರುವ ವಿಚಾರ. (ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ)

ಬ್ಯಾಂಕು ಖಾತೆ, ಎಲ್ಪಿಜಿ ಖಾತೆ, ಆದಾಯ ತೆರಿಗೆ ಇತ್ಯಾದಿ ಸಂದರ್ಭದಲ್ಲಿ ಆಧಾರ್ ನಂಬರ್ ಲಿಂಕ್ ಮಾಡುವುದರಿಂದ ವ್ಯವಹಾರ ಕಾರ್ಯ ಸುಲಭವಾಗಲಿದೆ. ನಿಮ್ಮ ಆಧಾರ್ ಸಂಖ್ಯೆಯನ್ನು UAN ಜತೆ ಲಿಂಕ್ ಮಾಡಿಕೊಂಡಿದ್ದರೆ ಯಾವುದೇ ದೃಢೀಕರಣ ಇಲ್ಲದೇ ನೇರವಾಗಿ ಇಪಿಎಫ್ಒ ಗೆ ಸಲ್ಲಿಸಬಹುದು. 

ಪಿಎಫ್ ಯುಎಎನ್ ಖಾತೆಗೆ ಆಧಾರ್ ಲಿಂಕ್ ಮಾಡಿದರೆ ಸಿಗುವ ಪ್ರಯೋಜನಗಳ ಪಕ್ಷಿನೋಟ ಇಲ್ಲಿದೆ.

ನಾಮಿನೆಷನ್ ಆನ್ಲೈನ್ ಅಪ್ಡೆಟ್

ಸಾರ್ವತ್ರಿಕ ಖಾತೆ ಸಂಖ್ಯೆ(UAN)ಯನ್ನು ನೀವು ಸಕ್ರಿಯಗೊಳಿಸಿದಲ್ಲಿ ಆನ್ಲೈನ್ ಮೂಲಕ ಎಷ್ಟು ಬಾರಿಯಾದರೂ ನಾಮಿನೆಷನ್ಸ್ ಗಳನ್ನು ಬದಲಾಯಿಸಬಹುದಾಗಿದೆ. ಒಂದು ಸಲ ಆನ್ಲೈನ್ ಮೂಲಕ ಸಲ್ಲಿಸಿದ ನಂತರ, ಅದು ಉದ್ಯೋಗದಾತರಿಗೆ ಕಳುಹಿಸಲ್ಪಡುತ್ತದೆ. ಅದನ್ನು ಉದ್ಯೋಗದಾತರು ಒಪ್ಪಬಹುದು ಇಲ್ಲವೇ ತಿರಸ್ಕರಿಸಬಹುದು.

ಪಾಸ್ಬುಕ್ ಡೌನ್ಲೋಡ್ ಮಾಡಿ

ಪಾಸ್ಬುಕ್ ಡೌನ್ಲೋಡ್ ಮಾಡುವ ಮುನ್ನ ನೀವು ಯುಎಎನ್ ನಂಬರ್ ಮತ್ತು ಇತರೆ ಪಿಎಫ್ ವಿವರಗಳು ಇರಬೇಕಾದದ್ದು ತುಂಬಾ ಮುಖ್ಯವಾಗಿರುತ್ತದೆ.
ಯುಎನ್ಎ ಮತ್ತು ಪಾಸ್ವರ್ಡ್ ಮೂಲಕ ನೀವು ಮೆಂಬರ್ ಪೋರ್ಟಲ್ ಗೆ ಲಾಗಿನ್ ಆಗಬೇಕಾಗುತ್ತದೆ. ನಂತರ ಡೌನ್ಲೋಡ್ ಮೇನು ಗೆ ಹೋಗಿ ಡೌನ್ಲೋಡ್ ಪಾಸ್ಬುಕ್ ಆಯ್ಕೆ ಮಾಡಿಕೊಳ್ಳಬೇಕು. ಡೌನ್ಲೋಡ್ ಮಾಡಿಕೊಳ್ಳಲು ಪಿಡಿಎಫ್ ಲಿಂಕ್ ಕೂಡ ಕೊಟ್ಟಿರುತ್ತಾರೆ.

ಬಹು ಇಪಿಎಫ್ ಖಾತೆಗಳಿಗೆ ಲಿಂಕ್

ಪಿಎಫ್ ಖಾತೆ ನಂಬರುಗಳನ್ನು ಯುಎನ್ಎದೊಂದಿಗೆ ಲಿಂಕ್ ಮಾಡುವಂತೆ ಇಪಿಎಫ್ಒ ತನ್ನ ಎಲ್ಲಾ ಸದಸ್ಯರಿಗೆ ಸಲಹೆ ನೀಡುತ್ತದೆ. ಅಲ್ಲದೇ ಕೆವಾಯ್ಸಿ ಡೆಟಾವನ್ನು ಸಹ ನೀಡಬೇಕಾಗುತ್ತದೆ.

ಕೆವಾಯ್ಸಿ (KYC) ವಿವರ ನಮೂದಿಸಿ ಮತ್ತು ಅಪ್ಡೇಟ್ ಮಾಡಿ

ಲಾಗಿನ್ ಆದ ನಂತರ ಪ್ರೋಫೈಲ್ ಮೇನು ಗೆ ಹೋಗಿ ಮತ್ತು ಅಪ್ಡೇಟ್ ಕೆವಾಯ್ಸಿ ಇನ್ಪಾರ್ಮೇಷನ್ ಆಯ್ಕೆ ಮಾಡಿ. ಡಾಕ್ಯುಮೆಂಟ್ ಮೇಲೆ ಇರುವಂತೆ ಹೆಸರನ್ನು ತಪ್ಪಾಗದಂತೆ ನಮೂದಿಸಿ, ಡಾಕ್ಯುಮೆಂಟ್ ನಂಬರ್ ಒದಗಿಸಿ. ನಂತರ ಉದ್ಯೋಗದಾತರಿಂದ ಪರಿಶೀಲಿಸಲ್ಪಟ್ಟ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.

ಆನ್ಲೈನ್ ವರ್ಗಾವಣೆ ತಪಾಸಣೆ

ಯುಎಎನ್ ಮೆಂಬರ್ ಪೋರ್ಟಲ್ ನೊಂದಿಗೆ ನೋಂದಣಿ ಮಾಡಿಕೊಂಡ ಇಪಿಎಫ್ಒ(EPFO) ಸದಸ್ಯರು ಇಪಿಎಫ್ ಆನ್ಲೈನ್ ವರ್ಗಾವಣೆ ಮತ್ತು ಆನ್ಲೈನ್ ವಿವರಗಳನ್ನು ತಪಾಸಣೆ ಮಾಡಬಹುದಾಗಿದೆ.

ವೈಯಕ್ತಿಕ ವಿವರ ಬದಲಾಯಿಸಿ

ಉದ್ಯೋಗಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಬದಲಾಯಿಸಬಹುದಾಗಿದೆ. ಅಂದರೆ ಮೆಂಬರ್ ಪೋರ್ಟಲ್ ನಲ್ಲಿರುವ ಪ್ರೊಫೈಲ್ ಮೇನುಗೆ ಹೋಗಿ ಮೊಬೈಲ್ ನಂಬರ್ ಅಥವಾ ಇ-ಮೇಲ್ ಐಡಿಯನ್ನು ಬದಲಿಸಬಹುದು.

ಯುಎಎನ್(UAN) ಕಾರ್ಡ್ ಡೌನ್ಲೋಡ್ ಮಾಡಿ

ಒಂದು ಬಾರಿ ನೀವು ಲಾಗಿನ್ ಆದ ನಂತರ 'ಡೌನ್ಲೋಡ್ ಯುಎಎನ್ ಕಾರ್ಡ್' ಮೇನು ಮೇಲೆ ಕ್ಲಿಕ್ ಮಾಡಿದರೆ ಅದು ತೆರೆದುಕೊಳ್ಳುತ್ತದೆ. ನಂತರ ಪಿಡಿಎಫ್ ರೂಪದಲ್ಲಿ ಡೌನ್ಲೋಡ್ ಮಾಡಿಕೊಳ್ಳಲು 'ಡೌನ್ಲೋಡ್ ಕಾರ್ಡ್' ಮೇಲೆ ಕ್ಲಿಕ್ ಮಾಡಿ.

ಯುಎಎನ್ ಸಂಖ್ಯೆ ಸಕ್ರಿಯಗೊಳಿಸುವಿಕೆ

ಐಎಫ್ಎಸ್ಸಿ ಕೋಡ್ ನೊಂದಿಗೆ ಬ್ಯಾಂಕ್ ಖಾತೆ ಸಂಖ್ಯೆ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ವಾಹನ ಚಾಲನಾ ಪರವಾನಗಿ ಪತ್ರಗಳಲ್ಲಿ ಒಂದನ್ನು ಯುಎಎನ್ ಸಂಖ್ಯೆಗೆ ಲಿಂಕ್ ಮಾಡಿ ವೆಬ್ಸೈಟ್ ಗೆ ಅಪ್ಲೋಡ್ ಮಾಡಿದರೆ ಯುಎಎನ್ ಸಂಖ್ಯೆ ಸಕ್ರಿಯಗೊಳಿಸಬಹುದು.

ಯುಎಎನ್ ವೈಶಿಷ್ಟ್ಯ

ಸೇವಾ ಅವಧಿಯಲ್ಲಿ ನೌಕರ ಅಥವಾ ಕಾರ್ಮಿಕ ಎಷ್ಟೇ ಕಂಪನಿ ಬದಲಾಯಿಸಿದರೂ ಪಿಎಫ್ ಸಂಖ್ಯೆ ಒಂದೇ ಆಗಿರಲಿದೆ. ಇದಕ್ಕೆ ಪೂರಕವಾಗಿ ೧೨ ಅಂಕೆಗಳಿರುವ ಸಾರ್ವತ್ರಿಕ ಖಾತೆ ಸಂಖ್ಯೆ(ಯುಎಎನ್) ಪ್ರತಿಯೊಬ್ಬರಿಗೆ ನೀಡಲಾಗುತ್ತದೆ.

Read More:ಆಧಾರ್ e-KYC ಸೇವೆ ಆಯ್ಕೆ ಮಾಡಲು 8 ಕಾರಣಗಳು

English summary

Benefits Of Aadhaar Backed EPF UAN

Universal Account Number (UAN) is a very important number for working employees as it will ease many process related to job change, EPF transfer, etc,. Aadhaar number is another vital number for most Indians as it needed in most of the transactions.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns