ಶೀಘ್ರದಲ್ಲೇ 2000 ಮುಖಬೆಲೆ ನೋಟು ಚಲಾವಣೆಗೆ!

ದೇಶದಲ್ಲಿ ಹೆಚ್ಚಾಗಿರುವ ನಕಲಿ ನೋಟುಗಳ ಹಾವಳಿ ತಡೆಯಲು ಆರ್‌ಬಿಐ ಹೊಸ ತಂತ್ರಕ್ಕೆ ಮುಂದಾಗಿದೆ.2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಈ ಕ್ರಮ ಕೈಗೊಂಡಿದೆ.

ದೇಶದಲ್ಲಿ ಹೆಚ್ಚಾಗಿರುವ ನಕಲಿ ನೋಟುಗಳ ಹಾವಳಿ ತಡೆಯಲು ಆರ್‌ಬಿಐ ಹೊಸ ತಂತ್ರಕ್ಕೆ ಮುಂದಾಗಿದೆ.
2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಈ ಕ್ರಮ ಕೈಗೊಂಡಿದೆ.

2000 ರೂ. ಮುಖಬೆಲೆಯ ನೋಟುಗಳನ್ನು ಈಗಾಗಲೇ ಮುದ್ರಣ ಮಾಡಲಾಗಿದ್ದು, ಶೀಘ್ರವೇ ಈ ನೋಟುಗಳನ್ನು ಚಲಾವಣೆಗೆ ತರಲಾಗುವುದು. ಈಗಾಗಲೇ ಮೈಸೂರು ಮುದ್ರಣಾಲಯದಲ್ಲಿ 2000 ರೂ. ಮುಖಬೆಲೆಯ ನೋಟುಗಳು ಮುದ್ರಣವಾಗಿದ್ದು ಚಾಲನೆಗೆ ಬರೋದಷ್ಟೇ ಬಾಕಿ ಇದೆ. ಪ್ರಸ್ತುತ 500 ರೂ. ಹಾಗೂ 1,000 ರೂ. ಮುಖಬೆಲೆಯ ಶೇ. 86 ರಷ್ಟು ನೋಟುಗಳು ಚಲಾವಣೆಯಾಗುತ್ತಿವೆ.

ಶೀಘ್ರದಲ್ಲಿ 2000 ರೂ. ಮುಖ ಬೆಲೆಯ ನೋಟುಗಳು ಚಲಾವಣೆಗೆ ಬಂದರೆ, ನೋಟುಗಳ ಮುದ್ರಣ ವೆಚ್ಛ ಕಡಿಮೆಯಾಗಲಿದ್ದು, ನಕಲಿ ನೋಟುಗಳ ಹಾವಳಿಗೆ ಕಡಿವಾಣ ಹಾಕಬಹುದಾಗಿದೆ. ಈ ಹಿನ್ನಲೆಯಲ್ಲಿ ಆರ್ಬಿಐ ಶೀಘ್ರವೇ 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರುವ ಕ್ರಮಕ್ಕೆ ಮುಂದಾಗಲಿದೆ.

ಶೀಘ್ರದಲ್ಲೇ 2000 ಮುಖಬೆಲೆ ನೋಟು ಚಲಾವಣೆಗೆ!

ವರದಿಯ ಪ್ರಕಾರ 1000 ರೂ. ಮುಖಬೆಲೆಯ ನೋಟು ಮುದ್ರಿಸಲು ಸುಮಾರು 3 ರೂಪಾಯಿಯಷ್ಟು ವೆಚ್ಚವಾಗುತ್ತದೆ. ನೋಟಿನ ಮುಖಬೆಲೆ ಹಾಗೂ ಮುದ್ರಣ ವೆಚ್ಚದ ಅನುಪಾತದಲ್ಲಿ ಇದು ಅತ್ಯಂತ ಕಡಿಮೆ ಖರ್ಚು ಎನ್ನಲಾಗಿದೆ. ಇದಕ್ಕಿಂತಲೂ ಕಡಿಮೆ ಮುಖಬೆಲೆಯ ನೋಟು ಮುದ್ರಿಸಲು ಸ್ವಲ್ಪ ಹೆಚ್ಚು ಹಣ ಖರ್ಚಾಗುತ್ತದೆ ಎಂಬುದಾಗಿ ವರದಿಯಲ್ಲಿ ತಿಳಿಸಿದೆ.

ಆರ್ಬಿಐ ಸಲಹೆ ಮೇರೆಗೆ ಸರ್ಕಾರ ವಿತರಿಸಬೇಕಾದ ನೋಟಿನ ಮುಖಬೆಲೆಯನ್ನು ನಿರ್ಧರಿಸಲಿದೆ. ಮಾರ್ಚ್ 2016ಕ್ಕೆ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಮೊತ್ತ 16,41,500 ಲಕ್ಷ ಕೋಟಿ ರೂಪಾಯಿ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 14.9 ರಷ್ಟು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+