ಶನಿವಾರ, ಭಾನುವಾರ ಬ್ಯಾಂಕು ಸೇವೆ ಲಭ್ಯ

ಕೇಂದ್ರ ಸರ್ಕಾರ ಈಗಾಗಲೇ ಜನರಲ್ಲಿರುವ ಆತಂಕವನ್ನು ಬಗೆಹರಿಸಲು ಅನೇಕ ಕ್ರಮಗಳಿಗೆ ಮುಂದಾಗಿದೆ. ಇದೇ ಶನಿವಾರ, ನವೆಂಬರ್ 12 ಹಾಗೂ ಭಾನುವಾರ 13 ರಂದು ಸಾರ್ವಜನಿಕರ ಸೇವೆಗೆ ಬ್ಯಾಂಕುಗಳು ಲಭ್ಯ ಇರುತ್ತವೆ.

ರೂ. 500, 1000 ಮುಖಬೆಲೆಯ ನೋಟುಗಳ ನಿಷೇಧ ದೇಶದಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದು, ಜನಸಾಮಾನ್ಯರು ಪರದಾಡುವಂತಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಜನರಲ್ಲಿರುವ ಆತಂಕವನ್ನು ಬಗೆಹರಿಸಲು ಅನೇಕ ಕ್ರಮಗಳಿಗೆ ಮುಂದಾಗಿದೆ.

ಇದೇ ಶನಿವಾರ, ನವೆಂಬರ್ 12 ಹಾಗೂ ಭಾನುವಾರ 13 ರಂದು ಸಾರ್ವಜನಿಕರ ಸೇವೆಗೆ ಬ್ಯಾಂಕುಗಳು ಲಭ್ಯ ಇರುತ್ತವೆ.

ಬ್ಯಾಂಕುಗಳ ಪೂರ್ವ ತಯಾರಿ

ಬ್ಯಾಂಕುಗಳ ಪೂರ್ವ ತಯಾರಿ

ಗ್ರಾಹಕರು ಹೊಸ ನೋಟುಗಳನ್ನು ಪಡೆಯಲು, ನೋಟುಗಳ ಬದಲಾವಣೆ ಹಾಗೂ ಡಿಪಾಸಿಟ್ ಇಡಲು ಬ್ಯಾಂಕುಗಳಿಗೆ ಧಾವಿಸುವ ನಿರೀಕ್ಷೆ ಇರುವುದರಿಂದ ಸೇವೆಗಳನ್ನು ಸಮರ್ಥವಾಗಿ ನಿಭಾಯಿಸಲು ಬ್ಯಾಂಕುಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿವೆ.

ಆರ್ಬಿಐ ಸೂಚನೆ

ಆರ್ಬಿಐ ಸೂಚನೆ

ಭಾರತೀಯ ರಿಸರ್ವ್ ಬ್ಯಾಂಕು ಹೊಸ ನೋಟುಗಳನ್ನು ದೇಶದಾದ್ಯಂತ ಪೂರೈಸಲು ಹಲವಾರು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಶನಿವಾರ, ನವೆಂಬರ್ 12 ಹಾಗೂ ಭಾನುವಾರ 13 ರಂದು ಎಲ್ಲ ಬ್ಯಾಂಕುಗಳ ಶಾಖೆಗಳನ್ನು ಸಾರ್ವಜನಿಕ ವ್ಯವಹಾರಕ್ಕಾಗಿ ತೆರೆದಿಡಬೇಕು ಎಂದು ಆರ್ಬಿಐ ಸೂಚನೆ ನೀಡಿದೆ.

ಎಟಿಎಂ ಹಾಗೂ ಬ್ಯಾಂಕಿನಿಂದ ಹಣ ಪಡೆಯುವ ಮಿತಿ ಎಷ್ಟು?

ಎಟಿಎಂ ಹಾಗೂ ಬ್ಯಾಂಕಿನಿಂದ ಹಣ ಪಡೆಯುವ ಮಿತಿ ಎಷ್ಟು?

- ಒಂದು ದಿನಕ್ಕೆ ಎಟಿಎಂನಿಂದ ಗರಿಷ್ಠ ರೂ. 2000 ಮಾತ್ರ ಡ್ರಾ ಮಾಡಿಕೊಳ್ಳಬಹುದು. ಬರುವ ದಿನಗಳಲ್ಲಿ ಇದರ ಪ್ರಮಾಣ ರೂ. 4000 ಹೆಚ್ಚಿಸುವ ನಿರೀಕ್ಷೆ ಇದೆ.
- ಒಂದು ದಿನಕ್ಕೆ ಬ್ಯಾಂಕುಗಳಿಂದ ಗ್ರಾಹಕರು ಗರಿಷ್ಠ ರೂ. 10000 ಹಾಗೂ ಒಂದು ವಾರಕ್ಕೆ ರೂ. 20000 ಗಳನ್ನು ಡ್ರಾ ಮಾಡಿಕೊಳ್ಳಬಹುದು.
- ಹಣ ಡ್ರಾ ಮಾಡಿಕೊಳ್ಳಲು ಸರ್ಕಾರ ವಿಧಿಸಿರುವ ಮಿತಿಗಳನ್ನು ಬರುವ ದಿನಗಳಲ್ಲಿ ಏರಿಸಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

ಮಿತಿಯಿಲ್ಲದ ವ್ಯವಹಾರ

ಮಿತಿಯಿಲ್ಲದ ವ್ಯವಹಾರ

ಎಟಿಎಂ ಮತ್ತು ಬ್ಯಾಂಕು ವಹಿವಾಟಿಗೆ ಮಿತಿ ನಿರ್ಬಂಧಿಸಲಾಗಿದೆ ಆದರೆ ಚೆಕ್, ಡಿಡಿ, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಮೂಲಕ ನಡೆಸುವ ವ್ಯವಹಾರಗಳಿಗೆ ಯಾವುದೇ ಮಿತಿಗಳು ಇರುವುದಿಲ್ಲ. ಜತೆಗೆ ವಿದ್ಯುನ್ಮಾನ ಹಣ ವರ್ಗಾವಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ.

ಹಳೆ ನೋಟು ಚಲಾವಣೆಗೆ ಅವಕಾಶ ಎಲ್ಲಿ?

ಹಳೆ ನೋಟು ಚಲಾವಣೆಗೆ ಅವಕಾಶ ಎಲ್ಲಿ?

ರೂ. ರೂ. 500, 1000 ಮುಖಬೆಲೆಯ ನೋಟುಗಳ ಚಲಾವಣೆಗೆ ಆಸ್ಪತ್ರೆ, ಪೆಟ್ರೋಲ್ ಬಂಕ್, ಮೆಟ್ರೊ ರೈಲು, ಸರ್ಕಾರಿ ಬಸ್, ರೇಲ್ವೆ ಮತ್ತು ವಿಮಾನ ಟಿಕೆಟ್ ಬುಕಿಂಗ್ ಕೌಂಟರ್ ಗಳಲ್ಲಿ ನವೆಂಬರ್ 11 ರ ಮಧ್ಯರಾತ್ರಿವರೆಗೆ ಸಮಯವಕಾಶ ಒದಗಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+