ಚಿನ್ನದ ಅಮದು ಮತ್ತು ಬೇಡಿಕೆ ಕುಸಿತ

ಪ್ರಸ್ತುತ 2016-17ನೇ ಹಣಕಾಸು ವರ್ಷದ 8 ತಿಂಗಳ ಅವಧಿಯಲ್ಲಿ(ಏಪ್ರಿಲ್‌–ನವೆಂಬರ್‌) ಚಿನ್ನದ ಆಮದು ಪ್ರಮಾಣದಲ್ಲಿ ಶೇ. 30.5ರಷ್ಟು ಕುಸಿತ ಕಂಡಿದ್ದು, ರೂ. 1.08 ಲಕ್ಷ ಕೋಟಿ ಇಳಿಕೆಯಾಗಿದೆ.

ಪ್ರಸ್ತುತ 2016-17ನೇ ಹಣಕಾಸು ವರ್ಷದ 8 ತಿಂಗಳ ಅವಧಿಯಲ್ಲಿ(ಏಪ್ರಿಲ್‌-ನವೆಂಬರ್‌) ಚಿನ್ನದ ಆಮದು ಪ್ರಮಾಣದಲ್ಲಿ ಶೇ. 30.5ರಷ್ಟು ಕುಸಿತ ಕಂಡಿದ್ದು, ರೂ. 1.08 ಲಕ್ಷ ಕೋಟಿ ಇಳಿಕೆಯಾಗಿದೆ. ಅತಿಹೆಚ್ಚು ಬಂಗಾರ ಹೊಂದಿರುವ ಜಗತ್ತಿನ 10 ದೇಶಗಳು

ಕಳೆದ ವರ್ಷದ ಇದೇ ಹಣಕಾಸು ಅವಧಿಯಲ್ಲಿ ಒಟ್ಟು ರೂ. 1.56 ಲಕ್ಷ ಕೋಟಿ ಮೊತ್ತದ ಚಿನ್ನ ಆಮದು ಮಾಡಲಾಗಿತ್ತು. ಬ್ಯಾಂಕುಗಳಲ್ಲಿ ಚಿನ್ನ ಉಳಿತಾಯ ಖಾತೆ ತೆರೆಯುವುದು ಹೇಗೆ?

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಮಾತ್ರ ಚಿನ್ನದ ಆಮದು ಶೇ. 23 ರಷ್ಟು ಹೆಚ್ಚಾಗಿತ್ತು. ಆದರೆ ಏಪ್ರಿಲ್‌-ಜುಲೈ ಅವಧಿಯಲ್ಲಿ ಚಿನ್ನದ ಆಮದು 250 ಟನ್‌ಗಳಿಂದ 60 ಟನ್‌ಗಳಿಗೆ ಭಾರಿ ಇಳಿಕೆ ಕಂಡಿದೆ.

ಚಿನ್ನದ ಅಮದು ಮತ್ತು ಬೇಡಿಕೆ ಕುಸಿತ

ಕುಸಿದ ಚಿನ್ನದ ಬೇಡಿಕೆ
ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಏರಿಕೆ ಹಾಗೂ ಭಾರತದಲ್ಲಿ 2016ರ ಮೂರನೇ ತ್ರೈಮಾಸಿಕದಲ್ಲಿ ಬೆಲೆಗಳ ಹೆಚ್ಚಳದಿಂದಾಗಿ ಚಿನ್ನದ ಬೇಡಿಕೆ ಶೇ. 28ರಷ್ಟು ಕುಸಿದಿದೆ. 2016ರ ಮೂರನೇ ತ್ರೈಮಾಸಿಕದಲ್ಲಿ ಜಾಗತಿಕ ಚಿನ್ನದ ಬೇಡಿಕೆ 993 ಟನ್ ತಲುಪಿತು. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ. 10ರಷ್ಟು ಇಳಿಕೆ ಕಂಡಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್(WGC) ತನ್ನ ಇತ್ತಿಚಿನ ವರದಿಯಲ್ಲಿ ತಿಳಿಸಿತ್ತು.

ಮೂರನೇ ತ್ರೈಮಾಸಿಕದಲ್ಲಿ ಒಟ್ಟು ಮೈನಿಂಗ್ ಪೂರೈಕೆಯಲ್ಲಿ 832 ಟನ್ ಗಳಷ್ಟು (ಶೇ. 4) ಕುಸಿತ ಕಂಡಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 866 ಟನ್ ಗಳಷ್ಟಿತ್ತು. ಭಾರತದಲ್ಲಿನ ಹೆಚ್ಚು ಕಟ್ಟುನಿಟ್ಟಾದ ಸರ್ಕಾರದ ನೀತಿಗಳು, ಹೆಚ್ಚಿನ ಚಿನ್ನದ ಬೆಲೆ ಮತ್ತು ಗ್ರಾಮೀಣ ಆದಾಯ ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿತ್ತು.

ನೋಟು ನಿಷೇಧಧ ಪರಿಣಾಮ ದೇಶದ ಆರ್ಥಿಕತೆ ಮೇಲೆ ಹಲವು ಧನಾತ್ಮಕ ಹಾಗು ನಕರಾತ್ಮಕ ಪರಿಣಾಮಗಳಿಗೆ ಕಾರಣವಾಗಿದ್ದು, ಅದರಲ್ಲೂ ಚಿನ್ನ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆಯ ಮೇಲೆ ನೇರವಾದ ಪರಿಣಾಮ ಬೀರಿದೆ. ಹಳೆ ರೂ. 500, 1000 ನೋಟುಗಳ ರದ್ದತಿಯಿಂದ ಚಿನ್ನದ ಬೇಡಿಕೆ ಮತ್ತು ಆಮದು ಹಲವು ಏರಿಳಿತಗಳಿಗೆ ಒಳಗಾಗಿದೆ.

ಚಿನ್ನದ ಅಮದು ಮತ್ತು ಬೇಡಿಕೆ ಕುಸಿತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+