ಬ್ಯಾಂಕುಗಳಲ್ಲಿ ಡಿ. 31ರ ನಂತರವೂ ನಗದು ಸಮಸ್ಯೆ

ಡಿಸೆಂಬರ್ 31ರ ನಂತರವೂ ನಗದು ಸಮಸ್ಯೆ ಮುಂದುವರೆಯಲಿದ್ದು, ಬ್ಯಾಂಕುಗಳಿಂದ ಹಣ ಪಡೆಯುವ ಮಿತಿಯನ್ನು ಡಿಸೆಂಬರ್ 31ರ ನಂತರವೂ ಮುಂದುವರೆಸಬೇಕೆಂದು ಬ್ಯಾಂಕುಗಳು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿವೆ.

ಪ್ರಸ್ತುತ ಇರುವ ನಗದು ಸಮಸ್ಯೆ ಡಿಸೆಂಬರ್ 31ರ ನಂತರವೂ ಮುಂದುವರೆಯಲಿದ್ದು, ಬ್ಯಾಂಕುಗಳಿಂದ ಹಣ ಪಡೆಯುವ ಮಿತಿಯನ್ನು ಡಿಸೆಂಬರ್ 31ರ ನಂತರವೂ ಮುಂದುವರೆಸಬೇಕೆಂದು ಬ್ಯಾಂಕುಗಳು ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿವೆ.

ಹಳೆ ನೋಟುಗಳ ನಿಷೇಧದ ನಂತರ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ನಿಯಂತ್ರಣ ತರಲು ಕೇಂದ್ರ ಸರ್ಕಾರ ಹರಸಾಹಸ ಮಾಡುತ್ತಿದ್ದರು ಸಮತೋಲನ ಸಾಧ್ಯವಾಗುತ್ತಿಲ್ಲ.

ಬ್ಯಾಂಕುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹೊಸ ನೋಟುಗಳು ಇನ್ನೂ ಪೂರೈಕೆಯಾಗುತ್ತಿಲ್ಲ. ಕೇಂದ್ರ ಸರ್ಕಾರ ಒಂದು ವೇಳೆ ಬ್ಯಾಂಕುಗಳಿಂದ ಹಣ ವಿತ್‍ಡ್ರಾ ಮಾಡುವ ಮಿತಿಯನ್ನು ಹಿಂದಕ್ಕೆ ಪಡೆದರೆ, ಜನರು ಡಿಸೆಂಬರ್ 30ರ ನಂತರ ಹೆಚ್ಚಿನ ಮೊತ್ತವನ್ನು ವಿತ್‍ಡ್ರಾ ಮಾಡಲು ಬ್ಯಾಂಕುಗಳಿಗೆ ಧಾವಿಸಲಿದ್ದಾರೆ. ಆದರೆ ಗ್ರಾಹಕರಿಗೆ ಬೇಕಾಗುವಷ್ಟು ನಗದು ಬ್ಯಾಂಕುಗಳಲ್ಲಿ ಇಲ್ಲ.

ಹೀಗಾಗಿ ಪ್ರಸ್ತುತ ಇರುವ ವಿತ್‍ಡ್ರಾ ಮಿತಿಯನ್ನು ಡಿಸೆಂಬರ್ 30ರ ನಂತರವೂ ಮುಂದುವರಿಸಬೇಕೆಂದು ಬ್ಯಾಂಕುಗಳು ಕೇಳಿಕೊಂಡಿವೆ. ಪ್ರಸ್ತುತ ಎಟಿಂಎಂಗಳಿಂದ ಒಂದು ದಿನ ರೂ. 2500 ಹಾಗೂ ಬ್ಯಾಂಕುಗಳಿಂದ ವಾರಕ್ಕೆ ರೂ. 24,000 ನಗದು ಪಡೆಯಬಹುದಾಗಿದೆ.

ಬ್ಯಾಂಕುಗಳಲ್ಲಿ ಡಿ. 31ರ ನಂತರವೂ ನಗದು ಸಮಸ್ಯೆ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+