ಬಜೆಟ್ 2017: ಜನಸಾಮನ್ಯರ ಮೇಲಾಗುವ ಪರಿಣಾಮಗಳೇನು?

ಕೇಂದ್ರ ಬಜೆಟ್ 2017-18 ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಮಂಡಿಸಿದ್ದು, ವಿವಿಧ ವಲಯಗಳ, ಭಿನ್ನ ಆಯಾಮಗಳ ದೇಶದ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಯೋಜನೆಗಳನ್ನು ಪರಿಚಯಿಸಿದ್ದಾರೆ.

ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಕೇಂದ್ರ ಬಜೆಟ್ ಮಂಡಿಸಿದ್ದು, ವಿವಿಧ ವಲಯಗಳ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಹೊಂದಿರುವ ಯೋಜನೆಗಳನ್ನು ಪರಿಚಯಿಸಿದ್ದಾರೆ. ಅದರಲ್ಲೂ ರೈತರು, ಬಡವರ್ಗ, ಮಧ್ಯಮವರ್ಗ, ರೇಲ್ವೆ ಇಲಾಖೆ, ಮನೆ ನಿರ್ಮಾಣ ಮತ್ತು ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಬಜೆಟ್ 2017: ಪ್ರಮುಖ ಅಭಿವೃದ್ಧಿ ಯೋಜನೆಗಳ ವಿವರ ಇಲ್ಲಿದೆ...

ಜನಸಾಮಾನ್ಯರ ಮೇಲೆ ಬಜೆಟ್ 2017-18ರ ಪರಿಣಾಮಗಳೆನೆಂಬುದನ್ನು ಚರ್ಚಿಸೋಣ...

1. ತೆರಿಗೆ ದರ ಕಡಿತ

1. ತೆರಿಗೆ ದರ ಕಡಿತ

ರೂ. 2.5-5 ಲಕ್ಷದ ಮಿತಿಯೊಳಗೆ ಬರುವ ತೆರಿಗೆದಾರರು ಪಾವತಿಸಬೇಕಾದ ತೆರಿಗೆ ದರದಲ್ಲಿ ಕಡಿತ ಮಾಡಲಾಗಿದೆ. ಈ ಮೊದಲು ಶೇ. 10ರಷ್ಟಿದ್ದ ತೆರಿಗೆ ದರವನ್ನು ಶೇ. 5ಕ್ಕೆ ಇಳಿಸಲಾಗಿದೆ. ಅಂದರೆ ರೂ. 5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಪ್ರತಿ ವರ್ಷಕ್ಕೆ ರೂ. 12,500ರಷ್ಟು ಮೊತ್ತ ಉಳಿತಾಯ ಮಾಡಬಹುದು. ಉದ್ಯೋಗಿಗಳಿಗೆ ಇದು ಸಂತಸದ ವಿಷಯ ಎಂದೇ ಹೇಳಬಹುದು.

2. 50 ಲಕ್ಷಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಮೇಲ್ತೆರಿಗೆ

2. 50 ಲಕ್ಷಕ್ಕಿಂತ ಮೇಲ್ಪಟ್ಟ ಆದಾಯಕ್ಕೆ ಮೇಲ್ತೆರಿಗೆ

ನಿಮ್ಮ ಆದಾಯ 50 ಲಕ್ಷಕ್ಕಿಂತ ಹೆಚ್ಚಿದ್ದರೆ ಶೇ. 10ರಷ್ಟು ಮೇಲ್ತೆರಿಗೆಯನ್ನು ಪಾವತಿಸಬೇಕು. 50 ಲಕ್ಷದಿಂದ 1 ಕೋಟಿ ಆದಾಯ ಹೊಂದಿರುವವರಿಗೆ ಇದು ಅನ್ವಯವಾಗುತ್ತದೆ. ಹಣಕಾಸು ಸಚಿವರು 2.5 ಮತ್ತು 10 ಲಕ್ಷದ ಕೆಟಗರಿಯವರಿಗೆ ಹೆಚ್ಚಿನ ಲಾಭಗಳನ್ನು ಒದಗಿಸಿ ಇದನ್ನು ಸರಿದೂಗಿಸಲು ಪ್ರಯತ್ನಿಸಿದ್ದಾರೆ.

3. ನಗದು ವ್ಯವಹಾರಕ್ಕೆ ಮಿತಿ

3. ನಗದು ವ್ಯವಹಾರಕ್ಕೆ ಮಿತಿ

ಪ್ರಸ್ತುತ ಕೇಂದ್ರ ಬಜೆಟ್ ನಲ್ಲಿ 3 ಲಕ್ಷಕ್ಕಿಂತ ಹೆಚ್ಚು ಮೊತ್ತದ ವ್ಯವಹಾರ ಮಾಡುವಾಗ ನಗದು ರೂಪದಲ್ಲಿ ಪಾವತಿಸಲು ಅನುಮತಿ ಇರುವುದಿಲ್ಲ. ಆದ್ದರಿಂದ ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಗಮನಿಸಿ ವ್ಯವಹರಿಸಬೇಕು.

4. ಸ್ಥಿರಾಸ್ತಿ ಖರೀದಿ/ಮಾರಾಟ

4. ಸ್ಥಿರಾಸ್ತಿ ಖರೀದಿ/ಮಾರಾಟ

ನೀವು ಸ್ಥಿರಾಸ್ತಿ ಖರೀದಿ ಮಾಡಿ ಮೂರು ವರ್ಷಗಳ ನಂತರ ಮಾರಾಟ ಮಾಡಿದಾಗ ದೀರ್ಘಕಾಲದ ಬಂಡವಾಳ ತೆರಿಗೆ ಲಾಭಗಳು ಅನ್ವಯವಾಗುತ್ತಿದ್ದವು. ಈಗ ಈ ಅವಧಿಯನ್ನು ಮೂರು ವರ್ಷದಿಂದ ಎರಡು ವರ್ಷಗಳಿಗೆ ಇಳಿಸಲಾಗಿದೆ.

4. ರೇಲ್ವೆ ಇ-ಬುಕಿಂಗ್

4. ರೇಲ್ವೆ ಇ-ಬುಕಿಂಗ್

ಈ ಬಜೆಟ್ ನಲ್ಲಿ ಇ-ರೇಲ್ವೆ ಟಿಕೆಟ್ ಗಳ ಮೇಲೆ ರಿಯಾಯಿತಿ ನೀಡಲಾಗಿದೆ. ಸರ್ಕಾರದ ಅಧಿಕೃತ ಇಲಾಖೆ IRCTC ಮೂಲಕ ರೇಲ್ವೆ ಟಿಕೇಟ್ ಗಳನ್ನು ಬುಕಿಂಗ್ ಮಾಡಿದರೆ ಸೇವಾ ತೆರಿಗೆ ಅನ್ವಯವಾಗುವುದಿಲ್ಲ. ಆನ್ಲೈನ್ ಮೂಲಕ ಟಿಕೇಟ್ ಪಡೆದರೆ ಶೇ. 15ರಷ್ಟು ಉಳಿತಾಯ ಮಾಡಬಹುದು.

5. ರಿಯಲ್ ಎಸ್ಟೇಟ್ ಕೊಂಚ ಅಗ್ಗ

5. ರಿಯಲ್ ಎಸ್ಟೇಟ್ ಕೊಂಚ ಅಗ್ಗ

ಮುಖ್ಯವಾಗಿ ಪ್ರಸ್ತುತ ಬಜೆಟ್ ನಲ್ಲಿ ಕೈಗೆಟಕುವ ವಸತಿ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಕೈಗೆಟಕುವ ವಸತಿ ಸೌಲಭ್ಯ ಪೂರೈಸಲು ಸಹಭಾಗಿತ್ವದಲ್ಲಿರುವ ಕಂಪನಿಗಳು ಅಥವಾ ಸಂಸ್ಥೆಗಳು ಸಾಲವನ್ನು ಅಗ್ಗವಾಗಿ ಪಡೆಯಲಿವೆ. ಇದರ ಪರಿಣಾಮವಾಗಿ ರಿಯಲ್ ಎಸ್ಟೇಟ್ ಸಲ್ಪ ಪ್ರಮಾಣದಲ್ಲಿ ಅಗ್ಗವಾಗಲಿದೆ.

6. ಆರೋಗ್ಯ ರಕ್ಷಣೆ

6. ಆರೋಗ್ಯ ರಕ್ಷಣೆ

ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚು ಮಹತ್ವ ನೀಡಿದೆ. ಟಿಬಿ, ಕುಷ್ಠರೋಗ, ದಡಾರ ನಂತಹ ಮಾರಕ ಕಾಯಿಲೆಗಳನ್ನು ತೊಡೆದು ಹಾಕಲು ಮಹತ್ವದ ಯೋಜನೆಗಳನ್ನು ರೂಪಿಸಲಾಗಿದೆ. ಹೀಗಾಗಿ ಆರೋಗ್ಯ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

7. ಹಸಿರು ಕ್ರಾಂತಿ ಉತ್ತೇಜನ

7. ಹಸಿರು ಕ್ರಾಂತಿ ಉತ್ತೇಜನ

ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ ರೂ. 6,500 ಕೋಟಿ ಮೀಸಲಿಟ್ಟಿದ್ದು, ಹಸಿರು ಕ್ರಾಂತಿ ಉತ್ತೇಜನಕ್ಕಾಗಿ ರೂ. 13,741 ಕೋಟಿ ಮೀಸಲಿರಿಸಿದೆ. ಹೈನುಗಾರಿಕೆಗೆ ಪ್ರೋತ್ಸಾಹಕ್ಕಾಗಿ ರೂ. 1,634 ಕೋಟಿ ಮೀಸಲು ಇರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+