Englishहिन्दी മലയാളം தமிழ் తెలుగు

ಹೊಸ ನಿಯಮ: ಬ್ಯಾಂಕು ಮತ್ತು ಎಟಿಎಂ ವ್ಯವಹಾರಗಳ ಮೇಲೆ ಶುಲ್ಕ ಎಷ್ಟು?

Written By: Siddu
Subscribe to GoodReturns Kannada

ನೋಟು ರದ್ದತಿ ನಂತರದಲ್ಲಿ ಕೇಂದ್ರ ಸರ್ಕಾರ ಅನೇಕ ಹೊಸ ಯೋಜನೆ ಹಾಗೂ ನಿಯಮಗಳ ಅನುಷ್ಠಾನಕ್ಕೆ ಮುಂದಾಗಿದೆ. ನಗದು ರಹಿತ ವಹಿವಾಟಿಗೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಡಿಜಿಟಲ್ ಇಂಡಿಯಾದತ್ತ ದಾಪುಗಾಲು ಇಟ್ಟಿದೆ. ಅದರಲ್ಲಿ ಬ್ಯಾಂಕು ವ್ಯವಹಾರಗಳ ಮೇಲೆ ವಿಧಿಸುತ್ತಿರುವ ಶುಲ್ಕ ಹೊಸ ಸೇರ್ಪಡೆ.

ಹೀಗಾಗಿ ಈಗ ಇಡಿ ದೇಶದಾದ್ಯಂತ ಬ್ಯಾಂಕುಗಳು ನಗದು ವ್ಯವಹಾರಗಳ ಮೇಲೆ ವಿಧಿಸುತ್ತಿರುವ ಶುಲ್ಕದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

ಹೊಸ ನಿಯಮದ ಅನ್ವಯ ತಿಂಗಳಿಗೆ ನಾಲ್ಕು ಉಚಿತ ನಗದು ಸೇವೆಗಳು ಮುಗಿದ ನಂತರ ಮುಂದಿನ ವ್ಯವಹಾರಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ. 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

ಬ್ಯಾಂಕು ಶುಲ್ಕ ಎಷ್ಟು?

ಗ್ರಾಹಕರು ಒಂದು ತಿಂಗಳಿನಲ್ಲಿ 4 ಬಾರಿ ಉಚಿತವಾಗಿ ಖಾತೆಯಿಂದ ಹಣ ವಿತ್ ಡ್ರಾ ಮತ್ತು ಜಮಾ ಮಾಡಬಹುದು. ನಾಲ್ಕು ಬಾರಿ ವಹಿವಾಟು ನಡೆಸಿದ ನಂತರ ಪ್ರತಿ ವಹಿವಾಟಿನ ಮೇಲೆ ರೂ. 150 ಶುಲ್ಕ ಭರಿಸಬೇಕಾಗುತ್ತದೆ.

ಎಟಿಎಂ ಶುಲ್ಕ ಎಷ್ಟು?

ಈ ನಿಯಮ ಎಟಿಎಂಗಳಿಗೆ ಅನ್ವಯವಾಗುವುದಿಲ್ಲ. ಎಟಿಎಂಗಳಲ್ಲಿ ಪ್ರತಿ ತಿಂಗಳಿಗೆ 5 ಬಾರಿ ಹಣ ತೆಗೆಯುವುದು ಉಚಿತವಾಗಿದ್ದು, 6ನೇ ಬಾರಿ ಹಣ ವಿತ್ ಡ್ರಾ ಮಾಡುವಾಗ ಒಂದು ವ್ಯವಹಾರಕ್ಕೆ 20 ರೂ. ಶುಲ್ಕ ವಿಧಿಸಲಾಗುತ್ತದೆ. ಜತೆಗ ಬೇರೆ ಬ್ಯಾಂಕುಗಳ ಎಟಿಎಂಗಳನ್ನು ತಿಂಗಳಿಗೆ ಮೂರು ಬಾರಿ ಮಾತ್ರ ಉಚಿತ ಬಳಕೆ ಮಾಡಲು ಅವಕಾಶವಿರುತ್ತದೆ.

ICICI ಶುಲ್ಕ?

ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿನಲ್ಲಿ ಪ್ರತಿ ತಿಂಗಳಿಗೆ ನಾಲ್ಕು ಬಾರಿ ನಗದು ವಹಿವಾಟು ಉಚಿತವಾಗಿರುತ್ತದೆ. ತದನಂತರ ಮಾಡಲಾಗುವ ವ್ಯವಹಾರಗಳ ಮೇಲೆ 150 ರೂ. ಶುಲ್ಕ ವಿಧಿಸಲಾಗುತ್ತದೆ. ಆದರೆ ಹೋಮ್ ಬ್ರಾಂಚ್(ಅಕೌಂಟ್ ಓಪನ್ ಮಾಡಿದ ಮೂಲ ಶಾಖೆ) ನಲ್ಲಿ ಈ ರೀತಿ ನಗದು ವಹಿವಾಟುಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.

HDFC

ಎಚ್ಡಿಎಫ್ಸಿ ಬ್ಯಾಂಕಿನಲ್ಲೂ ಇದೇ ನಿಯ ಅನ್ವಯವಾಗುತಿದ್ದು, 4 ವ್ಯವಹಾರಗಳು ಮಾತ್ರ ಉಚಿತವಾಗಿರುತ್ತವೆ, ನಂತರದ ವ್ಯವಹಾರಗಳ ಮೇಲೆ 150 ರೂ. ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಎಚ್ಡಿಎಫ್ಸಿ ಹೋಮ್ ಬ್ರಾಂಚುಗಳಲ್ಲಿ 2 ಲಕ್ಷದವರೆಗೆ ಹಣ ಪಡೆಯಲು ಹಾಗೂ ಜಮೆ ಮಾಡಲು ಅವಕಾಶವಿರುತ್ತದೆ. ಇದಕ್ಕಿಂತ ಮೇಲ್ಪಟ್ಟ ವಹಿವಾಟಿಗೆ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

AXIS

ಮೇಲಿನ ಬ್ಯಾಂಕುಗಳಂತೆ ಎಕ್ಸಿಸ್ ಬ್ಯಾಂಕಿನಲ್ಲಿ ನಾಲ್ಕು ವ್ಯವಹಾರಗಳ ಮೇಲೆ ಶುಲ್ಕ ಇರುವುದಿಲ್ಲ. 5ನೇ ವಹಿವಾಟಿಗೆ 150 ರೂ. ಶುಲ್ಕ ವಸೂಲಿ ಮಾಡಲಾಗುತ್ತದೆ. ಎಕ್ಸಿಸ್ ನ ಹೋಮ್ ಬ್ರಾಂಚ್ ಮತ್ತು ಇತರೆ ಶಾಖೆಗಳಲ್ಲಿ ವ್ಯತ್ಯಾಸ ಇರುವುದಿಲ್ಲ. ಹೋಮ್ ಬ್ರಾಂಚಿನಲ್ಲೂ ಶುಲ್ಕ ಭರಿಸಬೇಕಾಗುತ್ತದೆ.

ಯಾವ ಖಾತೆಗಳಿಗೆ ಶುಲ್ಕ?

ಈ ಹೊಸ ಶುಲ್ಕ ಉಳಿತಾಯ, ಬೇಸಿಕ್ ಮತ್ತು ಸ್ಯಾಲರಿ ಖಾತೆಗಳಿಗೆ ವಿಧಿಸಲಾಗುತ್ತದೆ. ಉಳಿದ ಖಾತೆಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ. ಇನ್ನುಳಿದ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಮಾರ್ಚ್ 1ರ ವರೆಗೆ ಆರನೇ ವ್ಯವಹಾರಕ್ಕೆ 100 ರೂಪಾಯಿಗಳ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಆದರೆ ಈಗ ಇದನ್ನು ಮತ್ತಷ್ಟು ವಿಸ್ತರಿಸಲಾಗಿದೆ.

ಯಾರಿಗೆ ಕಷ್ಟ

ಡಿಜಿಟಲ್ ಪಾವತಿ ಉತ್ತೇಜನದ ದೃಷ್ಟಿಯಿಂದ ಇದು ಉತ್ತಮ ನಡೆಯಾಗಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬ್ಯಾಂಕು ಶಾಖೆಗಳ ಹಾಗೂ ಎಟಿಎಂಗಳ ಆಭಾವ ಇರುವುದರಿಂದ ಬ್ಯಾಂಕ್ ವಹಿವಾಟು ಕಷ್ಟವಾಗಬಹುದು.

English summary

Cash transaction charges levied by banks

Leading private sector banks – HDFC Bank , ICICI Bank and Axis Bank – have over the week announced new charges on cash transactions beyond certain lmits.
Story first published: Friday, March 3, 2017, 12:48 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC