For Quick Alerts
ALLOW NOTIFICATIONS  
For Daily Alerts

ಐಡಿಯಾ-ವೋಡಾಫೋನ್ ವಿಲೀನ: 42% ಮಾರುಕಟ್ಟೆ ಪಾಲು!

ವೋಡಾಫೋನ್ ಜತೆ ವಿಲೀನ ಪ್ರಕ್ರಿಯೆ ಮುಂದುವರೆಸುವುದಾಗಿ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಐಡಿಯಾ ಸೆಲ್ಯುಲಾರ್ ಒಪ್ಪಿಗೆ ಸೂಚಿಸಿದೆ.

By Siddu
|

ವೋಡಾಫೋನ್ ಜತೆ ವಿಲೀನ ಪ್ರಕ್ರಿಯೆ ಮುಂದುವರೆಸುವುದಾಗಿ ದೇಶದ ಪ್ರಮುಖ ಟೆಲಿಕಾಂ ಸಂಸ್ಥೆ ಐಡಿಯಾ ಸೆಲ್ಯುಲಾರ್ ಒಪ್ಪಿಗೆ ಸೂಚಿಸಿದೆ.

ವೋಡಾಫೋನ್ ಇಂಡಿಯ ಮತ್ತು ವೋಡಾಫೋನ್ ಮೊಬೈಲ್ ಸರ್ವಿಸ್ ಅಂಗಸಂಸ್ಥೆಗಳ ಜತೆಗಿನ ಈ ವಿಲೀನದೊಂದಿಗೆ ವೋಡಾಫೋನ್ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಲಿದೆ. BSNL ಸೂಪರ್ ಆಫರ್ ಧಮಾಕಾ...! ಪ್ರತಿದಿನ 2GB ಡೇಟಾ

ವೋಡಾಫೋನ್ ಆಸ್ತಿ

ವೋಡಾಫೋನ್ ಆಸ್ತಿ

ಸಂಯೋಜಿತ ಸಂಸ್ಥೆಯ ವಾರ್ಷಿಕ ಆದಾಯ ಸರಿಸುಮಾರು 80,000 ಸಾವಿರ ಕೋಟಿ ದಾಟಲಿದ್ದು, 400 ಮಿಲಿಯನ್ ಗ್ರಾಹಕರನ್ನು ಹೊಂದಲಿದೆ. ಈ ಆದಾಯಗಳಿಂದ ಶೇ. 41ರಷ್ಟು ಮಾರುಕಟ್ಟೆ ಪಾಲು ಮತ್ತು ಚಂದಾದಾರರ ಮೂಲಕ ಶೇ. 35 ಮಾರುಕಟ್ಟೆ ಪಾಲನ್ನು ಹೊಂದಲಿದೆ.

ವೋಡಾಫೋನ್ ಅತಿದೊಡ್ಡ ಟೆಲಿಕಾಂ ಸಂಸ್ಥೆ!

ವೋಡಾಫೋನ್ ಅತಿದೊಡ್ಡ ಟೆಲಿಕಾಂ ಸಂಸ್ಥೆ!

 ಜಿಯೋ ಧಮಾಕಾ..! 'ಫ್ರೈಮ್ ಆಫರ್' ಮೂಲಕ ಹೊಸ ಕೊಡುಗೆ ಘೋಷಣೆ ಜಿಯೋ ಧಮಾಕಾ..! 'ಫ್ರೈಮ್ ಆಫರ್' ಮೂಲಕ ಹೊಸ ಕೊಡುಗೆ ಘೋಷಣೆ

ಶೇ. 42ರಷ್ಟು ಪಾಲು

ಶೇ. 42ರಷ್ಟು ಪಾಲು

ಈ ಮೂಲಕ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ. 23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ. 19ರಷ್ಟು ಪಾಲು ಹೊಂದಿರುವ ಐಡಿಯಾ ವಿಲೀನವಾಗಿವೆ. ವಿಲೀನದ ನಂತರ ವೊಡಾಫೋನ್ ಸಂಸ್ಥೆ ಮಾರುಕಟ್ಟೆಯಲ್ಲಿ ಶೇ. 42ರಷ್ಟು ಪಾಲು ಹೊಂದಿ ಅಗ್ರ ಸ್ಥಾನಕ್ಕೇರಲಿದೆ. ಪ್ರಸ್ತುತ ಶೇ. 33ರಷ್ಟು ಪಾಲುಹೊಂದಿರುವ ಏರ್ಟೆಲ್ ಮೊದಲ ಸ್ಥಾನದಲ್ಲಿದೆ. ಈ ವಿಲೀನದ ನಂತರ ಅದು ಎರಡನೇ ಸ್ಥಾನಕ್ಕೆ ಕುಸಿಯಲಿದೆ.

ಜಿಯೋ ಎಫೆಕ್ಟ್

ಜಿಯೋ ಎಫೆಕ್ಟ್

ಜಿಯೋ 'ವೆಲ್‌ಕಮ್ ಆಫರ್' ಹೆಸರಿನಲ್ಲಿ ಮೂರು ತಿಂಗಳ ಕಾಲ ಉಚಿತ 4G ಡೇಟಾ ಮತ್ತು ಉಚಿತ ಅನಿಯಮಿತ ಕರೆ ಮಾಡುವ ಸೇವೆಗಳನ್ನು ನೀಡಿದೆ. ರಿಲಯನ್ಸ್ ಜಿಯೋ ಈ ಉಚಿತ ಕರೆ ಹಾಗೂ ಡೇಟಾ ಸೇವೆಗಳನ್ನು ಮಾರ್ಚ್ 2017ರ ತನಕ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳ ನಡುವೆ ಬಾರೀ ಪೈಪೋಟಿ ಹೆಚ್ಚಾಗಿದ್ದು, ದರ ಸಮರದಲ್ಲಿ ತೊಡಗಿ ಹೊಸ ಹೊಸ ಆಫರ್ ಗಳನ್ನು ಘೋಷಣೆ ಮಾಡತೊಡಗಿವೆ. 'ಜಿಯೋ ಫ್ರೀ ಆಫರ್' ಮುಂದುವರೆಯುತ್ತೆ....

Read more about: reliance jio telecom vodafone airtel
English summary

Idea approves merger with Vodafone India, to create India's largest telco

The Idea Cellular board on Monday approved the merger of Vodafone India and its subsidiary Vodafone Mobile Services with itself, in the process creating the country's largest telecom entity. The merger will be effected through the issue of new shares in Idea to Vodafone.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X