Englishहिन्दी മലയാളം தமிழ் తెలుగు

BSNL ಸೂಪರ್ ಆಫರ್ ಧಮಾಕಾ...! ಪ್ರತಿದಿನ 2GB ಡೇಟಾ

Written By: Siddu
Subscribe to GoodReturns Kannada

ಜಿಯೋ ಉಚಿತ ಕೊಡುಗೆಗಳ ಎದುರು ದೇಶಿಯ ಟೆಲಿಕಾಂ ಕಂಪನಿಗಳು ದರ ಸಮರಕ್ಕೆ ಮುಂದಾಗಿದ್ದು ನಿಜ. ಏರ್ಟೆಲ್, ಐಡಿಯಾ, ಬಿಎಸ್ಎನ್ಎಲ್ ಮತ್ತು ಇತರೆ ಕಂಪನಿಗಳು ಜಿಯೋಗೆ ವಿರುದ್ಧವಾಗಿ ಹಲವಾರು ಆಫರ್ ಗಳನ್ನು ‍ಘೋಷಣೆ ಮಾಡುತ್ತಾ ಬಂದಿವೆ.

ಇದೀಗ ಮತ್ತೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಜಿಯೋ ಮತ್ತು ಏರ್ಟೆಲ್ ಗೆ ಸೆಡ್ಡು ಹೊಡೆದು ಭಾರೀ ಆಫರ್ ಘೋಷಣೆ ಮಾಡಿದೆ.

ಟೆಲಿಕಾಂ ಸಂಸ್ಥೆ BSNL ಪ್ರತಿದಿನ 2GB ಡೇಟಾ ಮತ್ತು ಅನ್ ಲಿಮಿಟೆಡ್ ಕರೆ ಮಾಡುವ ಕೊಡುಗೆಯನ್ನು 339 ರೂಪಾಯಿಗಳಿಗೆ ನೀಡುವುದಾಗಿ ಘೋಷಿಸಿದೆ. 

BSNL ಆಫರ್

ಗ್ರಾಹಕರು STV(special tariff voucher) ಅಡಿಯಲ್ಲಿ ಈ ಕೊಡುಗೆಗಳನ್ನು ಪಡೆಯಲಿದ್ದು, 339 ರೂ.ಗಳಿಗೆ ಬಿಎಸ್ಎನ್ಎಲ್ ನೆಟ್ವರ್ಕ್ ನಲ್ಲಿ ಅನಿಯಮಿತ ಕರೆಗಳನ್ನು ಹಾಗೂ ನ್ಯಾಯಯುತ ಬಳಕೆ ನೀತಿಯೊಂದಿಗೆ ಅನಿಯಮಿತ 2GB 3G ಡೇಟಾ ನೀಡಲಿದೆ. ಇದು 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಬಿಎಸ್ಎನ್ಎಲ್ ಉಚಿತ ಲೈಫ್ ಟೈಮ್ ಆಫರ್ ಘೋಷಣೆ!

ಜಿಯೋ ಆಫರ್

ರಿಲಾಯನ್ಸ್ ಜಿಯೋ ಪ್ರತಿದಿನ 1GB 4G ಡೇಟಾ ಮತ್ತು ಮಾರ್ಚ್ 31ರವರೆಗೆ ಅನಿಯಮಿತ ಕರೆಗಳನ್ನು ಮಾಡುವ ಅವಕಾಶ ನೀಡಿದೆ. ಏಪ್ರಿಲ್ 1ರಿಂದ ಜಿಯೋ ಪ್ರೈಮ್ ಸದಸ್ಯತ್ವ ಪಡೆಯುವುದರ ಮೂಲಕ ಮಾರ್ಚ್ 31, 2018ರ ವರೆಗೆ ಅನಿಯಮಿತ ಡೇಟಾ ಮತ್ತು ಕರೆಗಳನ್ನು ಪಡೆಯಬಹುದು. ಆದರೆ ಪ್ರೈಮ್ ಸದಸ್ಯತ್ವಕ್ಕಾಗಿಉ ಗ್ರಾಹಕರು ಒಂದು ಬಾರಿ 99 ರೂ.ಗಳನ್ನು ಪಾವತಿ ಮಾಡಬೇಕು. ಜತೆಗೆ ಪ್ರತಿ ತಿಂಗಳು ರೂ. 303 ಪಾವತಿ ಮಾಡಬೇಕಾಗಿದೆ. 'ಜಿಯೋ ಫ್ರೀ ಆಫರ್' ಮುಂದುವರೆಯುತ್ತೆ....

ಇಂಡಸ್ಟ್ರಿಯಲ್ಲೆ BSNL ಬೆಸ್ಟ್ ಆಫರ್

ಈ ಆಫರ್ 90 ದಿನಗಳಿಗೆ ಸೀಮಿತವಾಗಿರುತ್ತದೆ. ಪ್ರತಿದಿನ 2GB ಡೇಟಾ ಆಫರ್ ಟೆಲಿಕಾಂ ಇಂಡಸ್ಟ್ರಿಯಲ್ಲಿಯೇ ಅತ್ಯುತ್ತಮವಾಗಿದೆ ಎಂದು BSNL ಹೇಳಿದೆ. ಬೇರೆ ಯಾವುದೇ ಕಂಪನಿಗಳು ದಿನವೊಂದಕ್ಕೆ 2gb ಡೇಟಾ ನೀಡುತ್ತಿಲ್ಲ. ನಮ್ಮ ಗ್ರಾಹಕರಿಗೆ ಎಲ್ಲಾ ವಿಭಾಗದಲ್ಲಿ ಕೈಗೆಟಕುವ ಮತ್ತು ಅತ್ಯುತ್ತಮ ಸೇವೆಗಳನ್ನು ಒದಗಿಸಲು ಬದ್ದರಾಗಿರುತ್ತೇವೆ. ಬಾರತ ಟೆಲಿಕಾಂ ರಂಗದ ಪ್ರಸ್ತುತ ವಿದ್ಯಮಾನಗಳನ್ನು ಪರಿಗಣಿಸಿ ನಮ್ಮ ಗ್ರಾಹಕರಿಗೆ ಉತ್ತಮ ಬೆಲೆಯ ಆಫರ್ ಗಳನ್ನು ನೀಡುತ್ತೇವೆ ಎಂದು BSNL ಸಂಸ್ಥೆಯ RK ಮಿತ್ತಲ್ ಹೇಳಿದ್ದಾರೆ.

ಉಚಿತ ಕರೆಗಳು

ಹೊಸ ಯೋಜನೆಯ ಅಡಿಯಲ್ಲಿ BSNL ಗ್ರಾಹಕರು ಬೇರೆ ನೆಟ್ವರ್ಕ್ ನೊಂದಿಗೆ ಪ್ರತಿದಿನ 25 ನಿಮಿಷ ಉಚಿತ ಕರೆಗಳನ್ನು ಪಡೆಯಲಿದ್ದಾರೆ. ತದನಂತರ ಪ್ರತಿ ನಿಮಿಷಕ್ಕೆ 25 ಪೈಸೆ ಚಾರ್ಜ್ ಮಾಡಲಾಗುತ್ತದೆ.

ಏರ್‌ಟೆಲ್ ಆಫರ್

ಜಿಯೋ ಹಾಗೂ ಬಿಎಸ್ಎನ್ಎಲ್ ಗೆ ಸ್ಪರ್ಧಿಯಾಗಿ ಏರ್ಟೆಲ್ ಕೂಡ 345 ರೂ.ಗಳಿಗೆ 28 ದಿನಗಳ ಅವಧಿಗೆ ಪ್ರತಿದಿನ 1GB 4G ಡೇಟಾ ಮತ್ತು ಅನಿಯಮಿತ ಕರೆ ಮಾಡುವ ಕೊಡುಗೆ ಘೋಷಿಸಿದೆ. ಏರ್‌ಟೆಲ್ ಸರ್ಪ್ರೈಸ್ ಆಫರ್..! ಗ್ರಾಹಕರಿಗೆ ಉಚಿತ ಕೊಡುಗೆ

English summary

BSNL Launches Rs 339 Plan To Counter Jio: 2GB Data Per Day

To counter the threat from Reliance Jio, state-run telecom firm BSNL launched a new plan that offers 2 GB of 3G data per day and unlimited calling within its network for Rs. 339.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC