ಜಗತ್ತಿನ ಅತಿ ಕಡಿಮೆ ಖರ್ಚಿನ ನಗರಗಳ ಪೈಕಿ ಮೊದಲ ಹತ್ತರ ಪಟ್ಟಿಯಲ್ಲಿ ದೇಶದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ವಿಶ್ವದ ಅತಿ ದುಬಾರಿ ನಗರಗಳ ಪೈಕಿ ಸಿಂಗಾಪುರ ಪ್ರಥಮ ಸ್ಥಾನದಲ್ಲಿದೆ.
ಜಗತ್ತಿನ ಅತಿ ಕಡಿಮೆ ಖರ್ಚಿನ ನಗರಗಳ ಪೈಕಿ ಮೊದಲ ಹತ್ತರ ಪಟ್ಟಿಯಲ್ಲಿ ದೇಶದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ವಿಶ್ವದ ಅತಿ ದುಬಾರಿ ನಗರಗಳ ಪೈಕಿ ಸಿಂಗಾಪುರ ಪ್ರಥಮ ಸ್ಥಾನದಲ್ಲಿದೆ.
ಜಗತ್ತಿನ ಅಗ್ರ ಹತ್ತು ಅಗ್ಗದ ನಗರಗಳಲ್ಲಿ ದೇಶದ ನಾಲ್ಕು ನಗರಗಳು ಸ್ಥಾನ ಪಡೆದಿವೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್(ಇಐಯು) ವರದಿ ಮಾಡಿದೆ. ಭಾರತದ 10 ದುಬಾರಿ ನಗರಗಳು ಯಾವುವು ಗೊತ್ತೆ?
ಭಾರತದ ಅಗ್ಗದ ನಗರಗಳು
ವಿಶ್ವದ ಮೊದಲ ಹತ್ತು ಅಗ್ಗದ ನಗರಗಳಲ್ಲಿ ಬೆಂಗಳೂರು(3ನೇ ಸ್ಥಾನ), ಚೆನ್ನೈ(6ನೇ ಸ್ಥಾನ), ಮುಂಬೈ(7ನೇ ಸ್ಥಾನ), ನವದೆಹಲಿ(10ನೇ) ಸ್ಥಾನ ಪಡೆದಿವೆ ಇಐಯು ವರದಿ ಮಾಡಿದೆ.
ಜಗತ್ತಿನ ಅಗ್ಗದ ನಗರಗಳು
ವಿಶ್ವದ ಅತ್ಯಂತ ಕಡಿಮೆ ಖರ್ಚಿನ ನಗರಗಳ ಪೈಕಿ ಕಜಕಸ್ತಾನದ ಆಲ್ಮಟಿ ಪ್ರಥಮ ಸ್ಥಾನದಲ್ಲಿದ್ದರೆ, ನೈಜೇರಿಯಾದ ಲಾಗೋಸ್ ನಂತರದ ಸ್ಥಾನದಲ್ಲಿದೆ. ಕರಾಚಿ(4ನೇ ಸ್ಥಾನ), ಅಲ್ಜೀರ್ಸ್(5 ನೇ ಸ್ಥಾನ), ಕೀವ್ (8ನೇ ಸ್ಥಾನ) ಮತ್ತು ಬುಚಾರೆಸ್ಟ್(9ನೇ) ಸ್ಥಾನದಲ್ಲಿವೆ.
ಮಾನದಂಡ
ಆಹಾರ, ನೀರು, ಉಡುಗೆ, ಸಾರಿಗೆ ಸಂಚಾರ, ಮನೆ ಬಾಡಿಗೆ, ಖಾಸಗಿ ಶಾಲೆ, ಯುಟಿಲಿಟಿ ಬಿಲ್, ದೇಶಿ ಸಹಾಯ, ಮನರಂಜನಾ ವೆಚ್ಚ ಸೇರಿದಂತೆ 160 ಉತ್ಪನ್ನ ಹಾಗೂ ಸೇವೆಗಳ ದರಗಳನ್ನು ಗಮನಿಸಿ ಜೀವನ ನಿರ್ವಹಣಾ ವೆಚ್ಚದ ಸಮೀಕ್ಷೆ ನಡೆಸಿ ವರದಿ ತಯಾರಿಸಲಾಗಿದೆ.
ವಿಶ್ವದ ಕಡಿಮೆ ಖರ್ಚಿನ ನಗರಗಳು
1. ಆಲ್ಮಟಿ, 2. ಲಾಗೋಸ್
3. ಬೆಂಗಳೂರು, 4. ಕರಾಚಿ
5. ಅಲ್ಜೀರ್ಸ್, 6. ಚೆನ್ನೈ
7. ಮುಂಬೈ, 8. ಕೀವ್
9. ಬುಚಾರೆಸ್ಟ್, 10. ನವದೆಹಲಿ
ವಿಶ್ವದ ದುಬಾರಿ ನಗರಗಳು
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್(ಇಐಯು) ವರದಿ ಪ್ರಕಾರ ಕಳೆದ ನಾಲ್ಕು ವರ್ಷಗಳಿಂದ ಸಿಂಗಾಪುರ್ ಜಗತ್ತಿನ ಅತಿ ದುಬಾರಿ ನಗರ ಎಂಬ ಹೆಗ್ಗಳಿಕೆ ಪಡೆದಿದೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಹಾಂಗ್ ಕಾಂಗ್ ಮತ್ತು ಜೂರಿಚ್ ಇವೆ. ಟೋಕಿಯೋ 4 ನೇ ಸ್ಥಾನದಲ್ಲಿ, ಒಸಾಕಾ(5 ನೇ), ಸಿಯೋಲ್(6 ನೇ), ಜಿನೀವಾ(7ನೇ), ಪ್ಯಾರಿಸ್(8 ನೇ), ನ್ಯೂಯಾರ್ಕ್(9 ನೇ)ಮತ್ತು ಕೋಪನ್ಹೇಗನ್ 10 ನೇ ಸ್ಥಾನದಲ್ಲಿವೆ.


Click it and Unblock the Notifications