Englishहिन्दी മലയാളം தமிழ் తెలుగు

ಭಾರತದ 10 ದುಬಾರಿ ನಗರಗಳು ಯಾವುವು ಗೊತ್ತೆ?

Written By: Siddu
Subscribe to GoodReturns Kannada

ಭಾರತ ಜಾಗತಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ. ಪ್ರತಿವರ್ಷ ಸಾವಿರಾರು ಜನರು ಕೆಲಸವನ್ನು ಹುಡುಕುತ್ತಾ ಹೆಚ್ಚೆಚ್ಚು ಹಣ ಗಳಿಸುವುದಕ್ಕಾಗಿ ನಗರಗಳ ಕಡೆಗೆ ಮುಖಮಾಡಿ ಸಾಗುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಕೆಲ ದಶಕಗಳಿಂದ ಭಾರತದಲ್ಲಿನ ಹಲವು ನಗರಗಳ ಜೀವನ ವೆಚ್ಚ ಏರುತ್ತಲೇ ಸಾಗಿದೆ. ಹೀಗಾಗಿ ನಗರಗಳಲ್ಲಿನ ಸೌಕರ್ಯಗಳ ವೆಚ್ಚ, ಆಹಾರ, ಸಾರಿಗೆ ಮತ್ತು ಆರೋಗ್ಯ ವೆಚ್ಚ ಹೆಚ್ಚಾಗುತ್ತಿದೆ.

ಅಲ್ಲದೆ ಈ ನಗರಗಳಲ್ಲಿ ಐಟಿ/ಸಾಪ್ಟವೇರ್ ಕೇಂದ್ರಗಳು ಇರುವುದರಿಂದ ಉದ್ಯೋಗ ಅವಕಾಶಗಳು ಹೇರಳವಾಗಿದ್ದು, ಉತ್ತಮ ಸಂಬಳ ಕೂಡ ಸಿಗುತ್ತಿದೆ.

ಭಾರತದಲ್ಲಿ ಅತಿ ಹೆಚ್ಚು ದುಬಾರಿಯಾಗಿರುವ ನಗರಗಳ ವಿವರವನ್ನು ಇಲ್ಲಿ ನೀಡಲಾಗಿದೆ.

1. ಮುಂಬೈ (ಜೀವನ ವೆಚ್ಚ: 22,650.13 - 80,088.44)

ಬಾಲಿವುಡ್ ತವರು ಮನೆ ಹಾಗೂ ಹಣಕಾಸು ರಾಜಧಾನಿ ಖ್ಯಾತಿಯ ಮುಂಬೈ ಬಾರತದಲ್ಲಿನ ಅತಿ ಹೆಚ್ಚು ದುಬಾರಿ ನಗರ ಎನಿಸಿದೆ. ಜತೆಗೆ ಜಗತ್ತಿನ ಹತ್ತನೇ ದುಬಾರಿ ನಗರ ಎಂಬ ಪ್ರಸಿದ್ದಿ ಕೂಡ ಮುಂಬೈದಾಗಿದೆ. ಇದು ಮಹಾರಾಷ್ಟ್ರ ರಾಜ್ಯದ ರಾಜಧಾನಿ.
ದೇಶದ ಹಲವು ಭಾಗಗಳಿಂದ ಜನರು ಕೆಲಸಕ್ಕಾಗಿ ಇಲ್ಲಿ ಬರುತ್ತಾರೆ.
ಮುಂಬೈ 209 ಬಿಲಿಯನ್ USD ಜಿಡಿಪಿ ಹೊಂದಿದ್ದು, ವಾಣಿಜ್ಯ, ಪ್ಯಾಷನ್, ಎಂಟರ್ಟೇನ್ಮೆಂಟ್, ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠ ಮತ್ತು ಪ್ರಖ್ಯಾತ ನಗರ. ಮುಂಬೈ ಎನ್ಎಸ್ಇ, ಬಿಎಸ್ಇ, ಆರ್ಬಿಐ ಮತ್ತು ಇನ್ನಿತರ ಅನೇಕ ಮಹತ್ವದ ಕಂಪನಿ, ವ್ಯವಹಾರಗಳಿವೆ. ದೇಶದ ಅತಿ ದೊಡ್ಡ ಕಂಪನಿಗಳಾದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟಾಟಾ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಇಲ್ಲಿವೆ.

2. ದೆಹಲಿ (ಜೀವನ ವೆಚ್ಚ: 22,778.59 - 78,648.02)

ದೆಹಲಿ ಭಾರತದ ರಾಜಧಾನಿ. ದೇಶದ ಇನ್ನಿತರ ನಗರಗಳಿಗಿಂತ ಅತಿದೊಡ್ಡ ಮೆಟ್ರೊಪಾಲಿಟನ್ ಹಾಗೂ ಕೈಗಾರಿಕಾ ಬೆಳವಣಿಗೆಯ ಪ್ರಧಾನ ನಗರವಾಗಿದೆ. ನುರಿತ ಕೆಲಸಗಾರರನ್ನು ಹೊಂದಿರುವ ದೆಹಲಿ ವಿದೇಶಿ ಹೂಡಿಕೆದಾರರಿಗೆ ಆಕರ್ಷಣೀಯ ನಗರ ಎಂಬುದರಲ್ಲಿ ಎರಡು ಮಾತಿಲ್ಲ. ಟೆಲಿಕಮ್ಯೂನಿಕೇಷನ್ ಮತ್ತು ಐಟಿ ವ್ಯವಹಾರದ ಮುಖ್ಯ ಕೇಂದ್ರ. ಇಲ್ಲಿ ದೇಶದ ಅತ್ಯುತ್ತಮ ಆಸ್ಪತ್ರೆಗಳು, ಹೋಟೆಲ್ ಮತ್ತು ಉತ್ಪಾದನಾ ಕೇಂದ್ರಗಳಿವೆ.
ದೆಹಲಿಯ ಜಿಡಿಪಿ 167 ಬಿಲಿಯನ್ USD ಹೊಂದಿದ್ದು, ಅತಿ ಹೆಚ್ಚಿನ ಸರ್ಕಾರಿ ಉದ್ಯೋಗಿ ಮತ್ತು ಅರೆ ಸರ್ಕಾರಿ ಉದ್ಯೋಗಿಗಳನ್ನು ಹೊಂದಿರುವ ನಗರ. ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಲಾಭದಾಯಕದಲ್ಲಿರುವ ದೆಹಲಿ ವಿದೇಶಿ ನೇರ ಬಂಡವಾಳ ವನ್ನು ಆಕರ್ಷಿಸುತ್ತದೆ.

3. ಬೆಂಗಳೂರು (ಜೀವನ ವೆಚ್ಚ: 20,560.31 - 73,840.32)

ಸಿಲಿಕಾನ್ ಸಿಟಿ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಕರ್ನಾಟಕದ ರಾಜಧಾನಿಯಾಗಿದೆ. ಏಕೆಂದರೆ ಅನೇಕ ಐಟಿ ವಲಯದ ಪ್ರಸಿದ್ದ ಕಂಪನಿಗಳಿಗೆ ಜನ್ಮ ನೀಡಿದ ನಗರ ಇದು. ಇದರ ಜಿಡಿಪಿ ಪ್ರಮಾಣ 83 ಬಿಲಿಯನ್ USD ಆಗಿದೆ.
ದೇಶದಲ್ಲಿ ಶೆ 35ರಷ್ಟು ಐಟಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಿಂದ ವಿದೇಶಕ್ಕೆ ಹೋಗುವ ತಂತ್ರಜ್ಞರಲ್ಲಿ ಹೆಚ್ಚಿನವರು ಬೆಂಗಳೂರಿನವರೆ ಆಗಿದ್ದಾರೆ.
ಬೆಂಗಳೂರಿನಲ್ಲಿ ಆರ್ ಮತ್ತು ಡಿ ಹಾಗೂ ಎಂಜಿನೀಯರಿಂಗ್ ಕೇಂದ್ರಗಳಾದ ಬೋಯಿಂಗ್, ಏರ್ಬಸ್, ಜಿಇ ಏವಿಯೆಷನ್ ಕೇಂದ್ರಗಳಿವೆ. ಜತೆಗೆ ಜಾಗ್ವಾರ್, ಸುಖೋಯ್ 30 ನಂತಹ ಪ್ರಸಿದ್ದ ವಿಮಾನಗಳನ್ನು ತಯಾರಿಸುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿದೆ. ರೇಷ್ಮೆ ಉದ್ಯಮದ 35 ಬಿಲಿಯನ್ ನಷ್ಟು ಕೆಲಸ ಬೆಂಗಳೂರಿನಿಂದಲೇ ನಡೆಯುತ್ತದೆ.
ಪ್ರಸ್ತುತ ವಾರ್ಷಿಕವಾಗಿ 10.3% ಆರ್ಥಿಕ ಬೆಳವಣಿಗೆಯಾಗುತ್ತಿದ್ದು, ಮುಂದಿನ ದಶಕದಲ್ಲಿ ಜಗತ್ತಿನಲ್ಲಿ ಅತಿ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ನಗರ ಎಂಬ ಖ್ಯಾತಿ ಪಡೆಯಲಿದೆ.

4. ಪುಣೆ( ಜೀವನ ವೆಚ್ಚ: 20,135.65 - 71,846.75)

ಪುಣೆ ಮಹಾರಾಷ್ಟ್ರದ ಎರಡನೇ ಅತಿದೊಡ್ಡ ನಗರ. ಬಹು ಆಟೋಮೊಬೈಲ್ ಮತ್ತು ಉತ್ಪಾದನಾ ಕೈಗಾರಿಕೆಗಳ ತವರೂರು. ಕಳೆದ ಒಂದು ದಶಕದಿಂದ ಇಲ್ಲಿ ಅನೇಕ ಐಟಿ ಮತ್ತು ಆಟೋಮೊಬೈಲ್ ಕಚೇರಿಗಳು ಹಠಾತ್ ಆಗಿ ಏರಿಕೆ ಕಂಡಿರುವುದರಿಂದ ತುಂಬಾ ಪ್ರಸಿದ್ದಿ ಪಡೆಯುತ್ತಿದೆ.
ಪುಣೆಯಲ್ಲಿ ಆಹಾರ ಮತ್ತು ತರಕಾರಿ ಸಂಸ್ಕರಣೆ ಘಟಕ ಸ್ಥಾಪಿಸಲು ವಿಶ್ವ ಬ್ಯಾಂಕ್ ಹೂಡಿಕೆ ಮಾಡುತ್ತಿದೆ. 250ಕ್ಕಿಂತಲೂ ಹೆಚ್ಚಿನ ಜರ್ಮನಿ ಕಂಪನಿಗಳು ಪುಣೆಯಲ್ಲಿ ತಮ್ಮ ಕಚೇರಿಗಳನ್ನು ತೆರೆಯುತ್ತಿವೆ. ಹೀಗಾಗಿ ಉದ್ಯೋಗಿಗಳ ಆಕರ್ಷಣೀಯ ನಗರವಾಗಿ ಬದಲಾಗುತ್ತಿದೆ.

5. ಕೊಲ್ಕತ್ತಾ (ಜೀವನ ವೆಚ್ಚ: 20,107.56 - 70,618.91)

ಬ್ರಿಟಿಷರ ಆಳ್ವಿಕೆ ಕಾಲದ ಮುಖ್ಯ ಕೇಂದ್ರವಾಗಿದ್ದ ಕೊಲ್ಕತ್ತಾ, ಪಶ್ಚಿಮ ಬಂಗಾಳದ ರಾಜಧಾನಿ ಹಾಗೂ ಭಾರತದ ಹಿಂದಿನ ರಾಜಧಾನಿ ಕೇಂದ್ರ. ಇದು ದೇಶದ ಐದನೇ ಅತಿ ದುಬಾರಿ ನಗರ ಎಂಬ ಖ್ಯಾತಿ ಪಡೆದಿದೆ.
ಪ್ರಮುಖ ಬಂದರುಗಳನ್ನು ಹೊಂದಿರುವ ಇದು ಈಶ್ಯಾನ್ಯ ಭಾರತದ ಪ್ರಸಿದ್ದ ವಾಣಿಜ್ಯ ಕೇಂದ್ರವಾಗಿದೆ. ಐಟಿ ಕಂಪನಿ ಮತ್ತು ಬಿಪಿಒ ಸೇರಿದಂತೆ ಅನೇಕ ವ್ಯವಹಾರಗಳ ಆಕರ್ಷಕ ಕೇಂದ್ರವಾಗಿ ಬದಲಾಗುತ್ತಿದೆ. ಐಟಿಸಿ ಲಿಮಿಟೆಡ್, ಅಲಹಾಬಾದ್ ಬ್ಯಾಂಕ್, ಮತ್ತು ಯುಕೊ ಬ್ಯಾಂಕು ಸೇರಿದಂತೆ ಅನೇಕ ಜಾಗತಿಕ ಕಂಪನಿಗಳಿಗೆ ನಿಚ್ಚಿನ ತಾಣವಾಗಿದೆ.

ಪ್ರಸ್ತುತ ಐಟಿ ವಲಯವು 70% ವೇಗವಾಗಿ ಅಭಿವೃದ್ಧಿಯೆತ್ತ ಸಾಗುತ್ತಿದ್ದು, ರಿಯಲ್ ಎಸ್ಟೇಟ್, ಉತ್ಪಾದನೆ, ಹಾಸ್ಪಿಟಾಲಿಟಿ ಹಾಗೂ ರಿಟೇಲ್ ವಲಯಗಳಲ್ಲಿ ಮಹತ್ತರ ಬೆಳವಣಿಗೆ ಸಾಧಿಸುತ್ತಿದೆ.

6. ಚೆನ್ನೈ(ಜೀವನ ವೆಚ್ಚ: 20,151.70 - 70,384.17)

ಬಂಗಾಳಿ ಕೊಲ್ಲಿಯ ಮಗ್ಗುಲಲ್ಲಿರುವ ಚೆನ್ನೈ ತಮಿಳುನಾಡಿನ ರಾಜಧಾನಿಯಾಗಿದ್ದು, ದಕ್ಷಿಣ ಭಾರತದ ಬಂದರು ನಗರವಾಗಿದೆ. ಇದು ದೇಶೀ ಮತ್ತು ವಿದೇಶಿ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣ.
ಅಟೋಮೊಬೈಲ್ಸ್, ವಾಹನಗಳು, ತಂತ್ರಾಂಶ ಸೇವೆಗಳು, ವೈದ್ಯಕೀಯ ಪ್ರವಾಸೋದ್ಯಮ, ಯಂತ್ರಾಂಶ ಉತ್ಪಾದನೆ ಮತ್ತು ಆರ್ಥಿಕ/ಹಣಕಾಸು ಸೇವೆಗಳು ಈ ನಗರದ ಪ್ರಮುಖ ಶಕ್ತಿ. ಇದು ಐಟಿ ಸಂಬಂಧಿತ ಸೇವೆಗಳ ಎರಡನೇ ಅತಿದೊಡ್ಡ ರಪ್ತುದಾರ ಹಾಗೂ ಭಾರತದ ಅತಿದೊಡ್ಡ ಇಲೆಕ್ಟ್ರಾನಿಕ್ ರಪ್ತುದಾರ ಕೇಂದ್ರವಾಗಿದೆ.

7. ಚಂಡಿಗಡ (ಜೀವನ ವೆಚ್ಚ: 20,011.93 - 69,588.35)

ಉತ್ತರ ಭಾರತದ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣದ ರಾಜಧಾನಿ ಚಂಡಿಗಡ. ಚಂಡಿಗಡ ಅದ್ಬುತವಾದ ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಆಧುನೀಕರಣಕ್ಕೆ ಪ್ರಸಿದ್ದಿ ಪಡೆದಿದೆ. ಇತರ ನಗರಗಳಿಗಿಂತ ತುಬಾ ಸ್ವಚ್ಛವಾಗಿರುವ ಸಂತೋಷದಾಯಕ ನಗರಿ ಎಂಬ ಪ್ರಖ್ಯಾತಿ ಪಡೆದಿದೆ.
ಪೇಪರ್ ಉತ್ಪಾದನೆ, ಲೋಹಶಾಸ್ತ್ರ, ಮೆಷಿನರಿ ಮತ್ತು ವೈದ್ಯಶಾಸ್ತ್ರದ ಪ್ರಮುಖ ಕೈಗಾರಿಕೆಗಳನ್ನು ಹೊಂದಿದೆ.

8. ಹೈದರಾಬಾದ್(ಜೀವನ ವೆಚ್ಚ: 18,102.62 - 64,267.71)

ನಿಜಾಂ ರಾಜವಂಶದ ವಾಸ್ತುಶಿಲ್ಪಗಳ ಮೂಲಕ ಖ್ಯಾತಿವೆತ್ತ ದೇಶದ ಮುತ್ತುಗಳ ನಗರ ಎಂದು ಪ್ರಸಿದ್ದಿ ಪಡೆದಿರುವ ಹೈದರಾಬಾದ್ ಆಂದ್ರಪ್ರದೇಶದ ರಾಜಧಾನಿ.
ಹೈದರಾಬಾದ್ ಮತ್ತು ಅದರ ಉಪನಗರಗಳು ಭಾರತದಲ್ಲಿ ಹೆಚ್ಚಿನ ವಿಶೇಷ ಆರ್ಥಿಕ ವಲಯಗಳನ್ನು ಹೊಂದಿದೆ.
ಹೊಸದಾಗಿ ರೂಪಗೊಂಡ ತೆಲಂಗಾಣ ರಾಜಧಾನಿ ವಿಶ್ವದ ಔಷದಿಯ ಹಾಗೂ ಬಯೊಟೆಕ್ನಾಲಜಿ ಉದ್ಯಮ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಪ್ರಮುಖ ಐಟಿ ನಗರ ಆಗಿರುವ ಹೈದರಾಬಾದ್ ಗೂಗಲ್, ಅಮೆಜಾನ್, ಐಬಿಎಮ್ ಹಾಗೂ ವಿವಿಧ ಅಂತರ್ರಾಷ್ತ್ರೀಯ ಕಂಪನಿಗಳು ಕಚೇರಿಗಳನ್ನು ಹೊಂದಿವೆ.

9. ಅಹಮ್ಮದಾಬಾದ್(ಜೀವನ ವೆಚ್ಚ: 18,566.07 - 64,023.6)

ಅಹಮ್ಮದಾಬಾದ್ ಗುಜರಾತಿನ ಅತಿದೊಡ್ಡ ಹಾಗೂ ಶಕ್ತಿಶಾಲಿ ನಗರ ಎಂದು ಕರೆಯಲ್ಪಟ್ಟಿದೆ. ಪಶ್ಚಿಮ ಭಾರತದ ಆರ್ಥಿಕ ಅಭಿವೃದ್ಧಿಯ ಹೃದಯ ಭಾಗವಾಗಿದೆ. ಜವಳಿ ಉದ್ಯಮದ ಪ್ರಮುಖ ನಗರವಾಗಿರುವ ಇದು ಭಾರತದ ಮ್ಯಾಂಚೆಸ್ಟರ್ ಎಂಬ ಖ್ಯಾತಿ ಹೊಂದಿದೆ.
ರಿಯಲ್ ಎಸ್ಟೇಟ್, ಹೌಸಿಂಗ್, ಟೆಲಿಕಮ್ಯೂನಿಕೆಷನ್ ಮತ್ತು ಕನ್ಟ್ರಕ್ಷನ್ ವಲಯದಲ್ಲಿ ತೀವ್ರ ಬೆಳವಣಿಗೆ ಸಾಧಿಸುತ್ತಿದೆ.
ಅದಾನಿ ಗ್ರೂಪ್, ನಿರ್ಮಾ, ಅರವಿಂದ ಮಿಲ್ಸ್, ಕ್ಯಾಡಿಲಾ, ಮತ್ತು ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಇಂತಹ ಅನೇಕ ಅಂತರ್ರಾಷ್ಟ್ರೀಯ ಕಂಪನಿಗಳು ಈ ನಗರದಲ್ಲಿವೆ. ಅಹಮ್ಮದಾಬಾದ್ ಡೆನಿಮ್, ರತ್ನಗಳು ಮತ್ತು ಆಭರಣಗಳನ್ನು ರಪ್ತು ಮಾಡುವ ಅತಿದೊಡ್ಡ ನಗರವಾಗಿದೆ.

10. ಜೈಪುರ(ಜೀವನ ವೆಚ್ಚ: 19,661.50 - 67,879)

ಭಾರತದ ಅತಿದೊಡ್ಡ ರಾಜ್ಯದ ಅತಿದೊಡ್ಡ ನಗರ ಜೈಪುರ.
ಜೈಪುರ ರಾಜಸ್ಥಾನದ ರಾಜಧಾನಿ ಹಾಗೂ ಇತಿಹಾಸ ಪ್ರಸಿದ್ದ ನಗರವಾಗಿದೆ. ಇದು ಪಿಂಕ್ ಸಿಟಿ ಎಂದೇ ಪ್ರಸಿದ್ದಿ ಹೊಂದಿದ್ದು, ಜೈಪುರ ಹತ್ತನೇ ದುಬಾರಿ ನಗರ ಎನಿಸಿದೆ.
ಇತಿಹಾಸ ಪ್ರಸಿದ್ದ ನಗರವಾಗಿದ್ದು, ರತ್ನ, ಐಷಾರಾಮಿ ಜವಳಿ ಹಾಗೂ ಅಪರೂಪದ ಆರ್ಟ್ಸ್ ಮತ್ತು ಕ್ರಾಪ್ಟ್ ಉತ್ಪಾದನೆ ಮಾಡುತ್ತದೆ. ಜೈಪುರದಲ್ಲಿ ಕೆಲ ದುಬಾರಿ ಹೋಟೆಲ್ ಗಳನ್ನು ಹೊಂದಿದೆ.

English summary

Top 10 Most Expensive Cities In India

India is one of the fastest growing country in the world. every year million of people with the ability to spend money are moving into the cities.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns