ಅಂಬಾನಿ "ಸಮ್ಮರ್ ಆಫರ್" ಘೋಷಿಸಿದ್ದು, ಅದರ ಮುಂದಿನ ಉಚಿತ ಸೇವೆಗಳೆನು? ಮತ್ತೆ ಎಷ್ಟು ತಿಂಗಳ ಕಾಲ ಉಚಿತ ಆಫರ್ ಸಿಗಲಿದೆ? ಗ್ರಾಹಕರು ಮತ್ತೆ ಮೂರು ತಿಂಗಳ ಕಾಲ ಉಚಿತ ಸೇವೆಗಳನ್ನು ಬಹುತೇಕ ಉಚಿತವಾಗಿ ಪಡೆಯಬಹುದಾಗಿದೆ.
ಜಿಯೋ ಜೀ ಭರಕೆ.... ಟೆಲಿಕಾಂ ರಂಗವೇ ಜಿಯೋಮಯ... ಜಿಯೋ ಗ್ರಾಹಕರಿಗೆ ಮತ್ತೆ ಬಂಪರ್ ಆಫರ್ ನೀಡಿದ್ದಾರೆ ಅಂಬಾನಿ!!!!
ಅಂಬಾನಿ ಜಿಯೋ ಆಫರ್ ಗಳ ಬಗ್ಗೆ ಮೇಲಿಂದ ಮೇಲೆ ಪತ್ರಿಕಾ ಪ್ರಕಟಣೆಗಳನ್ನು ನೀಡುತ್ತಾ ಬಂದಿದ್ದು, ಇದೀಗ ಜಿಯೋ ಗ್ರಾಹಕರಿಗೆ ಮತ್ತೊಂದು ಕೊಡುಗೆಯ ಉಡುಗೊರೆ ನೀಡಿದ್ದಾರೆ.
ಜಿಯೋ ಫ್ರೈಮ್ ಸದಸ್ಯ ಗ್ರಾಹಕರಿಗೆ ಮೊದಲ ಮೂರು ತಿಂಗಳು ಕೊಡುಗೆಯಾಗಿ ಉಚಿತ ಸೇವೆಗಳನ್ನು ನೀಡಲಿದೆ.
ಅಂಬಾನಿ "ಸಮ್ಮರ್ ಆಫರ್" ಘೋಷಿಸಿದ್ದು, ಅದರ ಮುಂದಿನ ಉಚಿತ ಸೇವೆಗಳೆನು? ಮತ್ತೆ ಎಷ್ಟು ತಿಂಗಳ ಕಾಲ ಉಚಿತ ಆಫರ್ ಸಿಗಲಿದೆ? ಅದರ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ... ಉಚಿತ ಜಿಯೋ ಆಫರ್ ಇನ್ನಷ್ಟು ತಿಂಗಳು ಮುಂದುವರಿಯಲಿದೆ...!
ಹಿಂದಿನ ಅವಧಿ
ಕಳೆದ ವರ್ಷ ಸೆಪ್ಟಂಬರ್ 5 ರಿಂದ ಡಿಸೆಂಬರ್ 31ರ ವರೆಗೆ ರಿಲಾಯನ್ಸ್ ಜಿಯೊ ವೆಲ್ ಕಮ್ ಆಫರ್ ಎಲ್ಲರಿಗೂ ಉಚಿತವಾಗಿ ನೀಡಿ, ನಂತರ ಡಿಸೆಂಬರ್ 4, 2016ರಂದು ಹ್ಯಾಪಿ ನ್ಯೂ ಇಯರ್ ಆಫರ್ ಘೋಷಣೆ ಮಾಡಿತ್ತು. ಉಚಿತ ಕರೆ ಮತ್ತು ಡೇಟಾ ಪ್ಲಾನ್ ಅವಧಿಯನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿತ್ತು. ಮಾರ್ಚ್ 1ರಿಂದ ಜಿಯೋ ಪ್ರೈಮ್ ಮೆಂಬರ್ ಶಿಪ್ ಅಭಿಯಾನ ಆರಂಭಿಸಿತ್ತು.
ಏಪ್ರಿಲ್ 15ರ ವರೆಗೆ ಅವಧಿ ವಿಸ್ತಾರ
ಮಾರ್ಚ್ 01 ರಿಂದ ಮಾರ್ಚ್ 31ರ ವರೆಗೆ ಪ್ರೈಮ್ ಸದಸ್ಯತ್ವ ಅಭಿಯಾನ ನಡೆಸಿತ್ತು. ಮಾರ್ಚ್ 31 ಕ್ಕೆ ಕೊನೆಯಾಗುತ್ತಿದ್ದ ಜಿಯೋ ಪ್ರೈಮ್ ಮೆಂಬರ್‌ಶಿಪ್ ರೀಚಾರ್ಜ್ ಕಾಲಾವಕಾಶವನ್ನು ಈಗ ಹೆಚ್ಚಿಸಿದ್ದು, ಏಪ್ರಿಲ್ 15ರ ವರೆಗೆ ಪ್ರೈಮ್ ಮೆಂಬರ್‌ಶಿಪ್ ಅವಧಿಯನ್ನು ವಿಸ್ತರಿಸಿದ್ದಾರೆ. ಇಲ್ಲಿಯವರೆಗೆ ಯಾರು ಪ್ರೈಮ್ ಮೆಂಬರ್‌ಶಿಪ್ ಸದಸ್ಯತ್ವ ಪಡೆದಿಲ್ಲವೂ ಅಂತವರಿಗೆ ಇನ್ನೂ 15 ದಿನಗಳ ಕಾಲಾವಕಾಶವಿದೆ. ಈ 15 ದಿನಗಳಲ್ಲಿ ಪ್ರೈಮ್ ಮೆಂಬರ್‌ಶಿಪ್ ಪಡೆಯದಿದ್ದರೆ ಜಿಯೋ ನೀಡಲಿರುವ ಪ್ರಮುಖ ಆಫರ್‌ಗಳನ್ನು ನೀವು ಮಿಸ್ ಮಾಡಿಕೊಳ್ಳಲಿದ್ದಾರೆ.
ಅಂಬಾನಿ 'ಸಮ್ಮರ್ ಆಫರ್'?
ಈಗಾಗಲೇ ಅಂಬಾನಿ ವೆಲ್ ಕಂ, ಹ್ಯಾಪಿ ನ್ಯೂ ಇಯರ್ ಆಫರ್, ಪ್ರೈಮ್ ಮೆಂಬರ್‌ಶಿಪ್ ಆಫರ್ ಗಳನ್ನು ಘೋಷಣೆ ಮಾಡಿದ್ದು, ಇದೀಗ ಮತ್ತೆ "ಸಮ್ಮರ್ ಆಫರ್" ಪ್ರಕಟಿಸಿದ್ದಾರೆ. ಪ್ರೈಮ್ ಮೆಂಬರ್‌ಶಿಪ್ ಅಡಿಯಲ್ಲಿ 303 ರೂ. ಮೇಲ್ಪಟ್ಟು ರೀಚಾರ್ಜ್ ಮಾಡಿಸಿದರೆ ಗ್ರಾಹಕರು ಮತ್ತೆ ಮೂರು ತಿಂಗಳು ಜಿಯೋ ಸೇವೆಗಳನ್ನು ಆನಂದಿಸಬಹುದಾಗಿದೆ.!! ಅಂದರೆ ಜಿಯೋ ಫ್ರೈಮ್ ಮೆಂಬರ್ಸ್ ಗೆ ಮೊದಲ ಮೂರು ತಿಂಗಳು ಕೊಡುಗೆಯಾಗಿ ಉಚಿತ ಸೇವೆಗಳನ್ನು ನೀಡಲಿದೆ. ಜಿಯೋ 'ಫ್ರೈಮ್ ಮೆಂಬರ್‌ಶಿಪ್ ಆಫರ್' ಈಗ ಉಚಿತ!!
ತಿಂಗಳಿಗೆ ಕೇವಲ 101 ರೂ. ಮಾತ್ರ
ಅಂಬಾನಿಯ ಪ್ರಕಟಿಸಿರುವ 'ಸಮ್ಮರ್ ಆಫರ್' ಪ್ಲಾನ್ ಪ್ರಕಾರ ಜಿಯೋ ಗ್ರಾಹಕರು ಮುಂದಿನ ಮೂರು ತಿಂಗಳು ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ ಪಡೆಯಲಿದ್ದಾರೆ. ಅಂದರೆ ತಿಂಗಳಿಗೆ ಕೇವಲ 101 ರೂಪಾಯಿ ಪಾವತಿಸಿದಂತಾಗುತ್ತದೆ. ಈ ಹಿಂದೆ ಅಂಬಾನಿ ತಿಂಗಳಿಗೆ 303 ರೂಪಾಯಿ ಪಾವತಿಸಬೇಕು ಎಂದಿದ್ದರು. ಆದರೆ ಈಗ ಅದೇ 303 ರೂ.ಗಳನ್ನು ಒಂದು ಬಾರಿ ರೀಚಾರ್ಜ್ ಮಾಡಿದರೆ ಮೂರು ತಿಂಗಳು ಸೌಲಭ್ಯಗಳನ್ನು ಆನಂದಿಸಬಹುದು.
ಈಗಾಗಲೇ ಪ್ರೈಮ್ ಸದಸ್ಯತ್ವ ಪಡೆದಿದ್ದರೆ?
ಈಗಾಗಲೇ ಪ್ರೈಮ್ ಮೆಂಬರ್‌ಶಿಪ್ ಅಭಿಯಾನದ ಅಡಿಯಲ್ಲಿ ರೀಚಾರ್ಜ್ ಮಾಡಿಸಿದ್ದರೆ ಜಿಯೋ ಗ್ರಾಹಕರು ಏಪ್ರಿಲ್ 15ರವರೆಗೆ ಜಿಯೋ ಉಚಿತ ಆಫರ್ ಗಳನ್ನುಬಳಕೆ ಮಾಡಬಹುದಾಗಿದೆ. ಏಪ್ರಿಲ್ 15ರ ನಂತರ ಜಿಯೋವಿನ ಸಮ್ಮರ್ ಆಫರ್ ರೀಚಾರ್ಜ್ ಮಾಡಿಸಿದರೆ ಮತ್ತೆ ಮೂರು ತಿಂಗಳು ಜಿಯೋ ಸೌಲಭ್ಯಗಳನ್ನು ಆನಂದಿಸಬಹುದು.
ಜಿಯೋ ಫ್ರೈಮ್ ಗ್ರಾಹಕರಿಗೆ 28GB ಡೇಟಾ
ಜಿಯೋ ಫ್ರೈಮ್ ಗ್ರಾಹಕರು 28 ದಿನಗಳ ಅವಧಿಗೆ 28GB ಡೇಟಾ ಪಡೆಯಲಿದ್ದಾರೆ. ಅಂದರೆ ಪ್ರತಿ ದಿನ 1GB ಡೇಟಾ ಸಿಗಲಿದೆ. ಜಿಯೋ ಫ್ರೈಮ್ ಗ್ರಾಹಕರಲ್ಲದವರು ಕೇವಲ 2.5gb ಡೇಟಾ ಪಡೆಯಲಿದ್ದಾರೆ.
ಪ್ರೈಮ್ ಸದಸ್ಯತ್ವ ಪಡೆಯದಿದ್ದರೆ?
ಏಪ್ರಿಲ್ 15ರವರೆಗೆ ಜಿಯೋ ಪ್ರೈಮ್ ಸದಸ್ಯತ್ವಕ್ಕಾಗಿ ರೀಚಾರ್ಜ್ ಕಾಲಾವಕಾಶ ನೀಡಲಾಗಿದೆ. ಈ ಅವಧಿಯೊಳಗಾಗಿ ಯಾರು ಪ್ರೈಮ್ ಮೆಂಬರ್‌ಶಿಪ್ ಪಡೆಯುವುದಿಲ್ಲವೂ ಅಂತವರು 'ಸಮ್ಮರ್ ಆಫರ್' ಪ್ಲಾನ್ ಸೌಲಭ್ಯ ಕಳೆದುಕೊಳ್ಳಲಿದ್ದಾರೆ. ಜಿಯೋ ಧಮಾಕಾ..! 'ಫ್ರೈಮ್ ಆಫರ್' ಮೂಲಕ ಹೊಸ ಕೊಡುಗೆ ಘೋಷಣೆ
ನಾನ್ ಪ್ರೈಮ್ ಕಸ್ಟಮರ್?
1. ಉಚಿತ ಕರೆ
2. 2.5GB ಡೇಟಾ
3. ಪ್ರತಿ ದಿನ 100 ಎಸ್ಎಂಎಸ್ ಉಚಿತ
4. ಜಿಯೋ ಪೂರಕ ಚಂದಾದಾರಿಕೆ(complimentary subscription)
5. ಆಪ್ಸ್ ವಾಲಿಡಿಟಿ 28 ದಿನಗಳು
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ



Click it and Unblock the Notifications