ಜಿಯೋ ಸಮ್ಮರ್ ಆಫರ್ ಘೋಷಿಸಿದ ನಂತರ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಜಿಯೋಗೆ ಕೌಂಟರ್ ಕೊಡಲು ಮುಂದಾಗಿವೆ..! ಈಗಾಗಲೇ ಟೆಲಿಕಾಂ ರಂಗದಲ್ಲಿ ತೀವ್ರ ದರ ಸಮರದ ಅಲೆಗಳು ಅಪ್ಪಳಿಸುತ್ತಿವೆ..!!
ಜಿಯೋ ಸಮ್ಮರ್ ಆಫರ್ ಘೋಷಿಸಿದ ನಂತರ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು ಜಿಯೋಗೆ ಕೌಂಟರ್ ಕೊಡಲು ಮುಂದಾಗಿವೆ..! ಈಗಾಗಲೇ ಟೆಲಿಕಾಂ ರಂಗದಲ್ಲಿ ತೀವ್ರ ದರ ಸಮರದ ಅಲೆಗಳು ಅಪ್ಪಳಿಸುತ್ತಿವೆ..!!
ಹೌದು. ಈಗ ಜಿಯೋ ಅಲೆಯಿಂದ ತನ್ನ ಗ್ರಾಹಕರನ್ನು ಉಳಿಸಿಕೊಳ್ಳುವುದು ಎಲ್ಲಾ ಕಂಪನಿಗಳ ಮುಂದಿರುವ ದೊಡ್ಡ ಸವಾಲು. ಹೀಗಾಗಿ ಬಿಎಸ್ಎನ್ಎಲ್, ಏರ್ಟೆಲ್, ಐಡಿಯಾ, ವೋಡಾಫೋನ್ ಕಂಪನಿಗಳು ಜಿಯೋಗೆ ಸೆಡ್ಡು ಹೊಡೆಯಲು ತುದಿಗಾಲಲಿ ನಿಂತಿದ್ದು, ಜಿಯೋ ಸಮ್ಮರ್ ಆಫರ್ ಗೆ ವಿರುದ್ಧವಾಗಿ ಅನೇಕ ಆಫರ್ ಗಳನ್ನು ಘೋಷಿಸಿವೆ.
BSNL 300GB ಆಫರ್
ಸರ್ಕಾರಿ ಸ್ವಾಮ್ಯದ ಬಿಎಸ್ಎನ್‌ಎಲ್ ರೂ. 249ಗಳಿಗೆ ತಿಂಗಳಿಗೆ 300GB ಡೇಟಾ ಆಫರ್ ಪ್ರಕಟಿಸಿದೆ. ಅಂದರೆ ಈ ಯೋಜನೆ ಅಡಿ ಪ್ರತಿದಿನ 10GB ಡೇಟಾ ಸಿಗುತ್ತದೆ.
ಇದರ ಪ್ರಕಾರ ಗ್ರಾಹಕರು ಭಾನುವಾರದಂದು ಬೆಳಿಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಉಚಿತ ಅನಿಯಮಿತ ಕರೆ ಮಾಡಬಹುದಾಗಿದೆ. ಒಟ್ಟಿನಲ್ಲಿ ಪ್ರತಿದಿನ 10GB ಡೇಟಾ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಷ್ಟು ಕಡಿಮೆ ದರಕ್ಕೆ ಆಫರ್ ನೀಡುವ ಏಕೈಕ ಟೆಲಿಕಾಂ ಕಂಪನಿ ನಮ್ಮದಾಗಿದೆ ಎಂದು ಬಿಎಸ್ಎನ್ಎಲ್ ಹೇಳಿದೆ. BSNL ಸೂಪರ್ ಆಫರ್ ಧಮಾಕಾ...! ಪ್ರತಿದಿನ 2GB ಡೇಟಾ
ಏರ್ಟೆಲ್ ಆಫರ್
ಏರ್ಟೆಲ್ ಕೂಡ ವಿಶೇಷ ಆಫರ್ ಘೊಷಿಸಿದ್ದು, 345 ರೂ.ಗಳ ಏರಟೆಲ್ ಪ್ರೀಪೇಡ್ ರೀಚಾರ್ಜ್ ಪ್ಲಾನ್ ಮೂಲಕ ಪ್ರತಿದಿನ 1GB 4G ಡೇಟಾ ಹಾಗೂ ದೇಶದಾದ್ಯಂತ ಎಲ್ಲ ನೆಟ್ವರ್ಕ್ ಗಳೊಂದಿಗೆ ಉಚಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಒದಗಿಸುತ್ತದೆ. ಈ ಒಂದು GBಯಲ್ಲಿ 500MB ದಿನದ ಸಮಯದಲ್ಲಿ ಹಾಗೂ 500MB ರಾತ್ರಿ ಸಮಯದಲ್ಲಿ ಲಭ್ಯವಿರುತ್ತದೆ. ಗ್ರಾಹಕರು 4G ಸೌಲಭ್ಯ ಹೊಂದಿರುವ ಸ್ಮಾರ್ಟ್ ಫೋನ್ ಹೊಂದಿರಬೇಕಾಗುತ್ತದೆ. ಉಚಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಮತ್ತು 28 ದಿನಗಳ ಅವಧಿಗೆ 28GB ಅನ್ಲಿಮಿಟೆಡ್ ಆಗಿರುತ್ತದೆ. ಏರ್‌ಟೆಲ್ ಸರ್ಪ್ರೈಸ್ ಆಫರ್..! ಗ್ರಾಹಕರಿಗೆ ಉಚಿತ ಕೊಡುಗೆ
ಐಡಿಯಾ ಅನ್‌ಲಿಮಿಟೆಡ್ ಪ್ಲಾನ್
ಐಡಿಯಾ ಸೆಲ್ಯುಲರ್ ಕೂಡ ಜಿಯೋಗೆ ಪೈಪೋಟಿ ನೀಡಲು ಸಜ್ಜಾಗಿದ್ದು, ಪ್ರೀಪೇಡ್ ಗ್ರಾಹಕರಿಗೆ ರೂ. 348ರ ಪ್ಲಾನ್ ನಲ್ಲಿ ಕೆಲವೊಂದು ಹೊಸ ಸೌಲಭ್ಯಗಳನ್ನು ಸೇರಿಸಿದೆ. ದೇಶಾದ್ಯಂತ ಲಭ್ಯವಿರುವ ಅನಿಯಮಿತ ಧ್ವನಿ ಕರೆಗಳ ಜತೆಗೆ ಪ್ರತಿದಿನ 1GB 4G ಡೇಟಾ ನೀಡಲು ಐಡಿಯ ಮುಂದಾಗಿದೆ. 4G ಮೊಬೈಲ್ ಫೋನ್ ಹೊಂದಿರುವ ಗ್ರಾಹಕರು ಇದನ್ನು ಆನಂದಿಸಬಹುದಾಗಿದೆ.
ಐಡಿಯಾ ಉಚಿತ ಕರೆ ಸೌಲಭ್ಯ
ಇನ್ನೊಂದು ಮುಖ್ಯ ವಿಷಯವೆಂದರೆ ಐಡಿಯಾ ತನ್ನ ರೂ. 348 ಪ್ಲಾನ್ ಗೆ ಇನ್ನೊಂದು ಸೌಲಭ್ಯ ಸೇರಿಸಿದೆ. 50MB ಡೇಟಾದೊಂದಿಗೆ ದೇಶಾದ್ಯಂತ ಎಲ್ಲ ನೆಟ್ವರ್ಕ್ ಗಳೊಂದಿಗೆ ಉಚಿತ ಕರೆ ಸೌಕರ್ಯ ಒದಗಿಸಿದೆ. ಈ ಟ್ಯಾರಿಫ್ ಪ್ಲಾನ್ ಅಡಿಯಲ್ಲಿ ಐಡಿಯ ವಾಯ್ಸ್ ಬೆನಿಫಿಟ್ ಜತೆಗೆ ಪ್ರತಿದಿನಕ್ಕೆ 1GB ಡೇಟಾ ಸಿಗಲಿದ್ದು, ಈ ಪ್ಲಾನ್ 28 ದಿನಗಳವರೆಗೆ ಮಾತ್ರ ವ್ಯಾಲಿಡ್ ಆಗಿರುತ್ತದೆ.
ಅಂಬಾನಿ 'ಸಮ್ಮರ್ ಆಫರ್'?
ಈಗಾಗಲೇ ಅಂಬಾನಿ ಮತ್ತೆ "ಸಮ್ಮರ್ ಆಫರ್" ಪ್ರಕಟಿಸಿದ್ದಾರೆ. ಮಾರ್ಚ್ 31 ಕ್ಕೆ ಕೊನೆಯಾಗುತ್ತಿದ್ದ ಜಿಯೋ ಪ್ರೈಮ್ ಮೆಂಬರ್‌ಶಿಪ್ ರೀಚಾರ್ಜ್ ಕಾಲಾವಕಾಶವನ್ನು ಈಗ ಹೆಚ್ಚಿಸಿದ್ದು, ಏಪ್ರಿಲ್ 15ರ ವರೆಗೆ ಪ್ರೈಮ್ ಮೆಂಬರ್‌ಶಿಪ್ ಅವಧಿಯನ್ನು ವಿಸ್ತರಿಸಿದ್ದಾರೆ. ಇಲ್ಲಿಯವರೆಗೆ ಯಾರು ಪ್ರೈಮ್ ಮೆಂಬರ್‌ಶಿಪ್ ಸದಸ್ಯತ್ವ ಪಡೆದಿಲ್ಲವೂ ಅಂತವರಿಗೆ ಇನ್ನೂ ಏಪ್ರಿಲ್ 15ರವರೆಗೆ ಕಾಲಾವಕಾಶವಿದೆ. ಪ್ರೈಮ್ ಮೆಂಬರ್‌ಶಿಪ್ ಅಡಿಯಲ್ಲಿ 303 ರೂ. ಮೇಲ್ಪಟ್ಟು ರೀಚಾರ್ಜ್ ಮಾಡಿಸಿದರೆ ಗ್ರಾಹಕರು ಮತ್ತೆ ಮೂರು ತಿಂಗಳು ಜಿಯೋ ಸೇವೆಗಳನ್ನು ಆನಂದಿಸಬಹುದಾಗಿದೆ.!! ಅಂದರೆ ಜಿಯೋ ಫ್ರೈಮ್ ಮೆಂಬರ್ಸ್ ಗೆ ಮೊದಲ ಮೂರು ತಿಂಗಳು ಕೊಡುಗೆಯಾಗಿ ಉಚಿತ ಸೇವೆಗಳನ್ನು ನೀಡಲಿದೆ. ಜಿಯೋ 'ಸಮ್ಮರ್ ಆಫರ್'! ಮತ್ತೆ 3 ತಿಂಗಳು ಉಚಿತ ಕೊಡುಗೆ ಮುಂದುವರಿಕೆ!!


Click it and Unblock the Notifications