For Quick Alerts
ALLOW NOTIFICATIONS  
For Daily Alerts

ಜಿಯೋ ಗ್ರಾಹಕರಿಗೆ ಶಾಕ್! ಸಮ್ಮರ್ ಆಫರ್ ಗೆ ಬಿದ್ದಿದೆ ಬ್ರೇಕ್!!

ಜಿಯೋ ಟೆಲಿಕಾಂ ರಂಗ ಪ್ರವೇಶ ಮಾಡಿದಾಗಿನಿಂದ ಇಲ್ಲಿಯವರೆಗೆ ಆಫರ್ ಗಳ ಮೇಲೆ ಆಫರ್ ಕೊಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದ ರಿಲಯನ್ಸ್ ಜಿಯೋ ಗೆ ಬ್ರೇಕ್ ಬಿದ್ದಿದೆ.!!

By Siddu
|

ಟೆಲಿಕಾಂ ರಂಗ ಪ್ರವೇಶ ಮಾಡಿದಾಗಿನಿಂದ ಇಲ್ಲಿಯವರೆಗೆ ಆಫರ್ ಗಳ ಮೇಲೆ ಆಫರ್ ಕೊಟ್ಟು ಗ್ರಾಹಕರನ್ನು ಸೆಳೆಯುತ್ತಿದ್ದ ರಿಲಯನ್ಸ್ ಜಿಯೋ ಸಮ್ಮರ್ ಆಫರ್ ಗೆ ಬ್ರೇಕ್ ಬಿದ್ದಿದೆ.! ಹೀಗಾಗಿ ಜಿಯೋ ಮೂಲಕ ಭರ್ಜರಿ ಕೊಡುಗೆಗಳನ್ನು ಸವಿಯುತ್ತಿದ್ದ ಗ್ರಾಹಕರಿಗೆ ಈಗ ನಿರಾಶೆ ಎದುರಾಗಿದೆ.!!

ಮಾರ್ಚ್ 31ಕ್ಕೆ ಜಿಯೋ 'ಸಮ್ಮರ್ ಸರ್ಪ್ರೈಸ್ ಆಫರ್' ಘೋಷಣೆ ಮಾಡಿತ್ತು. ಆದರೆ ಇದೀಗ ಟ್ರಾಯ್ ಸಮ್ಮರ್ ಆಫರ್ ಹಿಂದಕ್ಕೆ ಪಡೆಯುವಂತೆ ಸೂಚಿಸಿದೆ.

ಟ್ರಾಯ್ ಆದೇಶ, ಜಿಯೋ ಸ್ಪಂದನೆ, ಟೆಲಿಕಾಂ ಕಂಪನಿಗಳ ದೂರು, ಟೆಲಿಕಾಂ ಹೊಸ ನಿಯಮ ಹಾಗೂ ಈಗಾಗಲೇ ಸಮ್ಮರ್ ಆಫರ್ ಪಡೆಯುತ್ತಿರುವ ಗ್ರಾಹಕರಿಗೆ ಟ್ರಾಯ್ ಹೇಳಿದ್ದೇನು? ಇತ್ಯಾದಿ ಕುತೂಹಲಕಾರಿ ಅಂಶಗಳ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ... ರಿಲಾಯನ್ಸ್ ಜಿಯೊ 4ಜಿ ಮತ್ತು 'ಫ್ರೀ ಹೈಪ್' ಬಗ್ಗೆ ನಿಮಗೆ ಗೊತ್ತಿರದ ಕೆಲ ಅಂಶಗಳು

ಟ್ರಾಯ್ ಆದೇಶ

ಟ್ರಾಯ್ ಆದೇಶ

ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಸಮ್ಮರ್ ಆಫರ್ ಮೂಲಕ ಘೋಷಣೆ ಮಾಡಿದ್ದ ಮೂರು ತಿಂಗಳ ಪೂರಕ ಪ್ರಯೋಜನಗಳನ್ನು ಹಿಂದಕ್ಕೆ ಪಡೆಯುವಂತೆ ರಿಲಯನ್ಸ್ ಜಿಯೋಗೆ ಆದೇಶ ನೀಡಿದೆ.

ಟ್ರಾಯ್ ಗೆ ಜಿಯೋ ಸ್ಪಂದನೆ

ಟ್ರಾಯ್ ಗೆ ಜಿಯೋ ಸ್ಪಂದನೆ

ಟ್ರಾಯ್ ಆದೇಶವನ್ನು ಜಿಯೋ ಸ್ವೀಕರಿಸಿದ್ದು, ಸಂಪೂರ್ಣವಾಗಿ ಅನುಸರಿಸುವ ಪ್ರಕ್ರಿಯೆಯಲ್ಲಿ ಇದೆ. ಜಿಯೋ ಸಮ್ಮರ್ ಆಫರ್ ಮೂಲಕ ಘೋಷಣೆ ಮಾಡಿರುವ ಮೂರು ತಿಂಗಳ ಉಚಿತ ಕೊಡುಗೆಗಳನ್ನು ಮುಂದಿನ ಕೆಲ ದಿನಗಳಲ್ಲಿ ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದೆ. ಆ ನಿಟ್ಟಿನ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ತಿಳಿದು ಬಂದಿದೆ.

ಟೆಲಿಕಾಂ ಕಂಪನಿಗಳಿಂದ ಟ್ರಾಯ್ ಗೆ ದೂರು

ಟೆಲಿಕಾಂ ಕಂಪನಿಗಳಿಂದ ಟ್ರಾಯ್ ಗೆ ದೂರು

ರಿಲಾಯನ್ಸ್ ಜಿಯೊ ದೂರು: ಏರ್ಟೆಲ್, ವೊಡಾಫೋನ್, ಐಡಿಯಾಗೆ 3050 ಕೋಟಿ ದಂಡರಿಲಾಯನ್ಸ್ ಜಿಯೊ ದೂರು: ಏರ್ಟೆಲ್, ವೊಡಾಫೋನ್, ಐಡಿಯಾಗೆ 3050 ಕೋಟಿ ದಂಡ

ಜಿಯೋ ವಿರುದ್ದ ಕೋರ್ಟ್ ದೂರು

ಜಿಯೋ ವಿರುದ್ದ ಕೋರ್ಟ್ ದೂರು

ದೇಶದ ಏಏರ್ಟೆಲ್, ವೋಡಾಫೋನ್, ಐಡಿಯಾ ಇತರ ಪ್ರಮುಖ ಟೆಲಿಕಾಂ ಕಂಪನಿಗಳು ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿ(ಟ್ರಾಯ್) ರಿಲಾಯನ್ಸ್ ಜಿಯೋಗೆ ಸಹಕಾರಿಯಾಗಿದೆ ಎಂದು ಹಿಂದೆ ಕೋರ್ಟ್ ಮೆಟ್ಟಿಲೇರಿದ್ದವು. ಜಿಯೋಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ರಾಯ್ ಮತ್ತೆ ಕೆಲವು ಟೆಲಿಕಾಂ ನಿಯಮಗಳನ್ನು ಬದಲಾವಣೆಗಳನ್ನು ಮಾಡಿದೆ ಎಂದು ದೂರಿದ್ದವು.

ಟೆಲಿಕಾಂ ಕಂಪನಿಗಳಿಗೆ ರೀಲಿಪ್

ಟೆಲಿಕಾಂ ಕಂಪನಿಗಳಿಗೆ ರೀಲಿಪ್

ಟ್ರಾಯ್ ಪ್ರಕಟಿಸಿರುವ ಈ ಆದೇಶದಿಂದ ಟೆಲಿಕಾಂ ಕಂಪನಿಗಳಿಗೆ ಕೊಂಚ ರೀಲಿಪ್ ಸಿಕ್ಕಂತಾಗಿದೆ. ಇದು ಜಿಯೋ ಗ್ರಾಹಕರಿಗೆ ಕೆಟ್ಟ ಸುದ್ದಿಯಾಗಿದ್ದರೂ ಟೆಲಿಕಾಂ ಉದ್ಯಮಕ್ಕೆ ಸಿಹಿಸುದ್ದಿ ಆಗಿದೆ ಎಂದು ಸೆಲ್ಯೂಲರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (COAI)ಡೈರೆಕ್ಟರ್ ಜನರಲ್ ರಾಜನ್ ಮ್ಯಾಥ್ಯೂಸ್ ಹೇಳಿದ್ದಾರೆ.

ಈಗಾಗಲೇ ಸಮ್ಮರ್ ಆಫರ್ ಪಡೆದವರಿಗೆ ಸಮಸ್ಯೆ ಇಲ್ಲ!

ಈಗಾಗಲೇ ಸಮ್ಮರ್ ಆಫರ್ ಪಡೆದವರಿಗೆ ಸಮಸ್ಯೆ ಇಲ್ಲ!

ಈಗಾಗಲೇ ಸಮ್ಮರ್ ಆಫರ್ ನ್ನು ರೀಚಾರ್ಜ್ ಮಾಡಿ ಚಂದಾದಾರರಾಗಿರುವ ಗ್ರಾಹಕರಿಗೆ ಯಾವುದೇ ಸಮಸ್ಯೆ ಇಲ್ಲ. ಈ ಮೊದಲು ಘೋಷಿಸಿದ್ದಂತೆ 3 ತಿಂಗಳ ಉಚಿತ ಡೇಟಾ, ಕರೆ ಆಫರ್ ಮುಂದುವರಿಯಲಿದೆ. ಉಚಿತ ಕರೆ ಮತ್ತು ಡೇಟಾ ಸೇವೆ ಹೊಂದಿರುವ ಜಿಯೋ ಸಮ್ಮರ್ ಆಫರ್ ನ್ನು ಮೂರು ತಿಂಗಳು ವಿಸ್ತರಿಸಿರುವ ಬಗ್ಗೆ ಯಾವುದೇ ತಪ್ಪುಗಳು ಕಂಡು ಬಂದಿಲ್ಲ ಎಂದು ಟ್ರಾಯ್ ಹೇಳಿದೆ.

ಹೊಸ ಗುಣಮಟ್ಟದ ಕಾನೂನು ಜಾರಿ

ಹೊಸ ಗುಣಮಟ್ಟದ ಕಾನೂನು ಜಾರಿ

ಶೀಘ್ರದಲ್ಲೇ ಉತ್ತಮ ಸೆಲ್ಯೂಲರ್ ಸೇವೆಗಾಗಿ ಹೊಸ ಗುಣಮಟ್ಟದ ನಿಯಮಗಳನ್ನು ಜಾರಿ ಮಾಡಲಾಗುವುದು ಎಂದು ದೂರಸಂಪರ್ಕ ನಿಯಂತ್ರಣ ಮಂಡಳಿ(ಟ್ರಾಯ್) ಹೇಳಿದೆ. ಹೊಸ ತಂತ್ರಜ್ಞಾನದ ಮಾನದಂಡಗಳು ಸೇರಿದಂತೆ ಮೊಬೈಲ್ ಸೇವೆಗಳಿಗೆ ಸಂಬಂಧಿತ ಪರಿಷ್ಕೃತ ನಿಯಮಗಳನ್ನು ಮುಂದಿನ ಕೆಲ ವಾರಗಳಲ್ಲಿ ಜಾರಿ ತರಲಾಗುವುದು. ಪ್ರಸ್ತುತ ಸಮಸ್ಯೆಗಳಿಗೆ ಅನುಗುಣವಾಗಿ ಉನ್ನತ ಗುಣಮಟ್ಟದ ಸೇವೆಗಾಗಿ ಸೇವಾ ವಲಯ ಅಥವಾ ಟವರ್ ಅಥವಾ ಜಿಲ್ಲಾ ಸಂಬಂಧಿತ ಕರೆಗಳ ಗುಣಮಟ್ಟವನ್ನು ಅಳೆಯಲಾಗುವುದು.

ಏನಿದು ಜಿಯೋ ಸಮ್ಮರ್ ಆಫರ್?

ಏನಿದು ಜಿಯೋ ಸಮ್ಮರ್ ಆಫರ್?

ಅಂಬಾನಿ 'ಸಮ್ಮರ್ ಆಫರ್' ಪ್ರಕಾರ ಪ್ರೈಮ್ ಮೆಂಬರ್‌ಶಿಪ್ ಅಡಿಯಲ್ಲಿ 303 ರೂ. ಮೇಲ್ಪಟ್ಟು ರೀಚಾರ್ಜ್ ಮಾಡಿಸಿದರೆ ಗ್ರಾಹಕರು ಮತ್ತೆ ಮೂರು ತಿಂಗಳು ಜಿಯೋ ಸೇವೆಗಳನ್ನು ಆನಂದಿಸಬಹುದಾಗಿತ್ತು. ಅಂದರೆ ಸಮ್ಮರ್ ಆಫರ್' ಪ್ಲಾನ್ ಪ್ರಕಾರ ಜಿಯೋ ಗ್ರಾಹಕರು ಮುಂದಿನ ಮೂರು ತಿಂಗಳು ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯ ಪಡೆಯಬಹುದಾಗಿತ್ತು. ಅಂದರೆ ತಿಂಗಳಿಗೆ ಕೇವಲ 101 ರೂಪಾಯಿ ಪಾವತಿಸಿದಂತಾಗುತ್ತಿತ್ತು. ಈ ಹಿಂದೆ ಅಂಬಾನಿ ತಿಂಗಳಿಗೆ 303 ರೂಪಾಯಿ ಪಾವತಿಸಬೇಕು ಎಂದಿದ್ದರು. ಆದರೆ ಈಗ ಅದೇ 303 ರೂ.ಗಳನ್ನು ಸಮ್ಮರ್ ಆಫರ್' ಮೂಲಕ ಒಂದು ಬಾರಿ ರೀಚಾರ್ಜ್ ಮಾಡಿಸಿದ್ದರೆ ಮೂರು ತಿಂಗಳು ಸೌಲಭ್ಯಗಳನ್ನು ಆನಂದಿಸಬಹುದಾಗಿತ್ತು.

ಸಮ್ಮರ್ ಆಫರ್ ಅವಧಿ

ಸಮ್ಮರ್ ಆಫರ್ ಅವಧಿ

ಮಾರ್ಚ್ 31 ಕ್ಕೆ ಜಿಯೋ ಪ್ರೈಮ್ ಮೆಂಬರ್‌ಶಿಪ್ ರೀಚಾರ್ಜ್ ಕಾಲಾವಕಾಶ ಕೊನೆಯಾದ ಮೇಲೆ ಏಪ್ರಿಲ್ 15ರ ವರೆಗೆ ಪ್ರೈಮ್ ಮೆಂಬರ್‌ಶಿಪ್ ಅವಧಿಯನ್ನು ವಿಸ್ತರಿಸಲಾಗಿತ್ತು. ಅಂದರೆ ಇಲ್ಲಿಯವರೆಗೆ ಯಾರು ಪ್ರೈಮ್ ಮೆಂಬರ್‌ಶಿಪ್ ಸದಸ್ಯತ್ವ ಪಡೆದಿಲ್ಲವೂ ಅಂತವರಿಗೆ ಇನ್ನೂ 15 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು.

ಪ್ರೈಮ್ ಸದಸ್ಯತ್ವ ಪಡೆದಿದ್ದರೆ?

ಪ್ರೈಮ್ ಸದಸ್ಯತ್ವ ಪಡೆದಿದ್ದರೆ?

ಈಗಾಗಲೇ ಪ್ರೈಮ್ ಮೆಂಬರ್‌ಶಿಪ್ ಅಭಿಯಾನದ ಅಡಿಯಲ್ಲಿ ರೀಚಾರ್ಜ್ ಮಾಡಿಸಿದ್ದರೆ ಜಿಯೋ ಗ್ರಾಹಕರು ಏಪ್ರಿಲ್ 15ರವರೆಗೆ ಜಿಯೋ ಉಚಿತ ಆಫರ್ ಗಳನ್ನು ಬಳಕೆ ಮಾಡಬಹುದಾಗಿದೆ. ಏಪ್ರಿಲ್ 15ರ ನಂತರ ಜಿಯೋವಿನ ಸಮ್ಮರ್ ಆಫರ್ ರೀಚಾರ್ಜ್ ಮಾಡಿಸಿದರೆ ಮತ್ತೆ ಮೂರು ತಿಂಗಳು ಜಿಯೋ ಸೌಲಭ್ಯಗಳನ್ನು ಆನಂದಿಸಬಹುದಾಗಿದೆ ಎಂದು ಅಂಬಾನಿ ಹೇಳಿದ್ದರು. ಜಿಯೋ 'ಸಮ್ಮರ್ ಆಫರ್'! ಮತ್ತೆ 3 ತಿಂಗಳು ಉಚಿತ ಕೊಡುಗೆ ಮುಂದುವರಿಕೆ!!

English summary

Reliance Jio stopping 3-month complimentary Summer Surprise offer

The telecom regulator ordered Reliance Jio Infocomm to withdraw its Summer Surprise plan that offered three months of free services to a user who paid an initial fee by April 15, dealing a setback to the newcomer's bid to rapidly add to its subscriber base.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X