For Quick Alerts
ALLOW NOTIFICATIONS  
For Daily Alerts

ಜಿಯೋಗೆ ಸರ್ಜರಿ! ಏರ್ಟೆಲ್, ಐಡಿಯಾ, ವೋಡಾಫೋನ್ ಆಫರ್ಸ್ ಭರ್ಜರಿ!!

ಟೆಲಿಕಾಂ ಕಂಪನಿಗಳ ಮಧ್ಯೆ ದರ ಸಮರ ಹಾಗೂ 4G ಡೇಟಾ ವಾರ್ ಜೋರಾಗಿಯೇ ನಡೆದಿದೆ. ಜಿಯೋ ಧನ್ ಧನಾ ಧನ್ ಆಫರ್ ಘೋಷಣೆ ಮಾಡಿದ ಬೆನ್ನಲ್ಲೆ ಏರ್ಟೆಲ್, ಐಡಿಯಾದಂತಹ ಪ್ರಮುಖ ಕಂಪನಿಗಳು ಭಾರೀ ಆಫರ್ ಗಳನ್ನು ಘೋಷಿಸಿವೆ.

By Siddu
|

ಟೆಲಿಕಾಂ ಕಂಪನಿಗಳ ಮಧ್ಯೆ ದರ ಸಮರ ಹಾಗೂ 4G ಡೇಟಾ ವಾರ್ ಜೋರಾಗಿಯೇ ನಡೆದಿದೆ. ಜಿಯೋ ಧನ್ ಧನಾ ಧನ್ ಆಫರ್ ಘೋಷಣೆ ಮಾಡಿದ ಬೆನ್ನಲ್ಲೆ ಏರ್ಟೆಲ್, ಐಡಿಯಾದಂತಹ ಪ್ರಮುಖ ಕಂಪನಿಗಳು ಭಾರೀ ಆಫರ್ ಗಳನ್ನು ಘೋಷಿಸಿವೆ. ಏನೇ ಆಗಲಿ ಗ್ರಾಹಕರು ಲಾಭ ಪಡೆಯುತ್ತಿದ್ದು, ಎಲ್ಲಾ ಆಫರ್ ಗಳನ್ನು ಆನಂದಿಸುತ್ತಿದ್ದಾರೆ. ಜಿಯೋ ಧಮಾಕಾ..! ಮುಂದಿನ ಒಂದು ವರ್ಷ ಸಂಪೂರ್ಣ ಉಚಿತ!

ಪ್ರಸ್ತುತ ದೇಶದ ಟೆಲಿಕಾಂ ರಂಗದ ಪರಿಸ್ಥಿತಿ ಗಮನಿಸಿದರೆ ಸಮರ್ಥನಾದವನು ಬದುಕುಳಿಯುತ್ತಾನೆ(Survival of the fittest) ಎಂಬ ಮಾತು ನೆನಪಿಗೆ ಬರುತ್ತದೆ.

ಜಿಯೋ ಧನ್ ಧನಾ ಧನ್ ನಂತರ ಏರ್ಟೆಲ್, ಐಡಿಯಾ, ವೋಡಾಫೋನ್ ಗಳು ತಮ್ಮ ಗ್ರಾಹಕರನ್ನು ಉಳಿಸಲು ಹಾಗೂ ಆಕರ್ಷಿಸಲು ಘೋಷಿಸಿರುವ ಆಫರ್ ಗಳು ಯಾವುವು ಎಂಬುದನ್ನು ನೋಡೋಣ...

ಏರ್ಟೆಲ್ ಹಾಲಿಡೇ ಸರ್ಪ್ರೈಸ್ ಆಫರ್

ಏರ್ಟೆಲ್ ಹಾಲಿಡೇ ಸರ್ಪ್ರೈಸ್ ಆಫರ್

ಏಪ್ರಿಲ್ 13ರ ವರೆಗೆ ಲಭ್ಯವಿದ್ದ 10GB ಉಚಿತ ಡೇಟಾ ಆಫರ್ ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ. ಅಂದರೆ ಪ್ರತಿ ತಿಂಗಳು 10GB ಡೇಟಾದಂತೆ ಮೂರು ತಿಂಗಳು 30GB ಡೇಟಾ ಆನಂದಿಸಬಹುದಾಗಿದೆ. ಪೋಸ್ಟ್‌ಪೇಡ್‌ ಗ್ರಾಹಕರು ಮೈ ಏರ್ಟೆಲ್ ಆಪ್ ಬಳಸಿ ಈ ಆಫರ್ ಪಡೆಯಬಹುದು.

ಏರ್ಟೆಲ್ 70GB ಡೇಟಾ!

ಏರ್ಟೆಲ್ 70GB ಡೇಟಾ!

ಪ್ರಿಪೇಯ್ಡ್ ಗ್ರಾಹಕರು ರೂ. 244 ಯೋಜನೆ ಅಡಿಯಲ್ಲಿ 4G ಸ್ಮಾರ್ಟ್ಫೋನ್ ಮತ್ತು ಸಿಮ್ ಕಾರ್ಡ್ ಹೊಂದಿರುವ ಗ್ರಾಹಕರು ಪ್ರತಿದಿನ 1BG ಡೇಟಾದಂತೆ 70 ದಿನಗಳವರೆಗೆ 70GB ಡೇಟಾ ಬಳಸಬಹುದು. ಇದರ ಜತೆಗೆ ಪ್ರತಿದಿನ 300 ನಿಮಿಷಗಳ ಏರ್ಟೆಲ್ ಟು ಏರ್ಟೆಲ್ ಎಸ್ ಟಿಡಿ ಮತ್ತು ಸ್ಥಳೀಯ ಕರೆಗಳನ್ನು ಒದಗಿಸುತ್ತಿದೆ. ನಂತರದ ಕರೆಗಳಿಗೆ ಪ್ರತಿ ನಿಮಿಷಕ್ಕೆ 10 ಪೈಸೆ ದರವಿರುತ್ತದೆ. ಚಂದಾದಾರರು ಈ ಸೌಲಭ್ಯವನ್ನು ಏಪ್ರಿಲ್ 30 ರವರೆಗೆ ಆಕ್ಟಿವೇಟ್ ಮಾಡಿಕೊಳ್ಳಬಹುದು.

ಏರ್ಟೆಲ್ ರೂ. 399 ಪ್ಲಾನ್

ಏರ್ಟೆಲ್ ರೂ. 399 ಪ್ಲಾನ್

ಈ ಪ್ಯಾಕ್ ಅಡಿಯಲ್ಲಿ, ಬಳಕೆದಾರರು 4G ಸ್ಮಾರ್ಟ್ಫೋನ್ ಮತ್ತು SIM ಕಾರ್ಡ್ ಹೊಂದಿದ್ದರೆ ಮಾತ್ರ ದಿನಕ್ಕೆ 1GB ಡೇಟಾ ಪಡೆಯಬಹುದು. 70 ದಿನಗಳ ಅವಧಿಗೆ 3,000 ನಿಮಿಷ ಉಚಿತ ಕರೆಗಳನ್ನು ಮಾಡುವ ಅವಕಾಶವಿದೆ. 3,000 ನಿಮಿಷ ಉಚಿತ ಕರೆಗಳು ಮುಗಿದ ನಂತರ ಪ್ರತಿ ನಿಮಿಷಕ್ಕೆ 10 ಪೈಸೆ ವಿಧಿಸಲಾಗುತ್ತದೆ. ಏರ್ಟೆಲ್ ನಿಂದ ಏರ್ಟೆಲ್ಗೆ ದಿನಕ್ಕೆ 300 ನಿಮಿಷಗಳ ಮಿತಿವರೆಗೆ ಕರೆ ಮಾಡಬಹುದು. ವಾರಕ್ಕೆ ಗರಿಷ್ಠ ಮಿತಿ 1,200 ನಿಮಿಷ ಆಗಿರುತ್ತದೆ.

ಪ್ರತಿದಿನ 2GB ಡೇಟಾ

ಪ್ರತಿದಿನ 2GB ಡೇಟಾ

ಏರ್ಟೆಲ್ ಗ್ರಾಹಕರು ರೂ. 345 ಪ್ಲಾನ್ ಅಡಿಯಲ್ಲಿ ಈ ಹಿಂದೆ ಪ್ರತಿ ದಿನ ನೀಡಲಾಗುತ್ತಿದ್ದ 1GB ಡೇಟಾ ಹೊರತುಪಡಿಸಿ ಈಗ 2GB ಡೇಟಾ ಒದಗಿಸುತ್ತಿದೆ. ರೂ. 399ರ ಪ್ಲಾನ್ ಅಡಿ ಪಡೆಯಲಾಗುತ್ತಿದ್ದ ಪ್ರಯೋಜನಗಳನ್ನು ಈಗ ಈ ಯೋಜನೆ ಅಡಿಯಲ್ಲಿ ಪಡೆಯಬಹುದು. ಜತೆಗೆ ಹಿಂದಿನ ಪ್ಲಾನ್ ನಲ್ಲಿದ್ದ ಸೀಮಿತ ಮಿತಿಗಳನ್ನು ಈಗ ಸಡಿಲಿಸಲಾಗಿದೆ.

ಐಡಿಯಾ 70GB ಡೇಟಾ ಆಫರ್!

ಐಡಿಯಾ 70GB ಡೇಟಾ ಆಫರ್!

ರೂ. 297 ರೀಚಾರ್ಜ್ ಮಾಡಿದರೆ ಪ್ರತಿದಿನ 1GB ಡೇಟಾ 70 ದಿನಗಳವರೆಗೆ ಪಡೆಯಬಹುದು. ಅಂದರೆ ಒಟ್ದಟು 70GB ಡೇಟಾ ಆನಂದಿಸಬಹುದು. ಬಳಕೆದಾರರು 4G ಸ್ಮಾರ್ಟ್ಫೋನ್ ಮತ್ತು SIM ಕಾರ್ಡ್ ಹೊಂದಿರಬೇಕಾಗುತ್ತದೆ. ಜತೆಗೆ ಪ್ರತಿದಿನ 300 ನಿಮಿಷಗಳು ಉಚಿತ ಕರೆಗಳು ಒಳಗೊಂಡಿರುತ್ತದೆ. ಬೇರೆ ಅಪರೇಟರ್ಸ್ ಗಳೊಂದಿಗೆ ವಾರಕ್ಕೆ 1200 ಉಚಿತ ಕರೆಗಳನ್ನು ಮಾಡಬಹುದು. ತದನಂತರದ ಕರೆಗಳ ಮೇಲೆ ಪ್ರತಿ ನಿಮಿಷಕ್ಕೆ 30 ಪೈಸೆ ವಿಧಿಸಲಾಗುತ್ತದೆ.

ಐಡಿಯಾ ರೂ. 447 ಆಫರ್

ಐಡಿಯಾ ರೂ. 447 ಆಫರ್

ಐಡಿಯಾ ಗ್ರಾಹಕರು ರೂ. 447 ರೀಚಾರ್ಜ್ ಮಾಡಿಕೊಂಡರೆ ಪ್ರತಿದಿನ 1GB ಡೇಟಾ ಮತ್ತು ಬೇರೆ ಯಾವುದೇ ನೆಟ್ವರ್ಕ್ ಗಳೊಂದಿಗೆ 70 ದಿನಗಳ ಅವಧಿಗೆ 3,000 ನಿಮಿಷಗಳ ವರೆಗೆ ಉಚಿತ ಕರೆಗಳನ್ನು ಮಾಡಬಹುದು. 3,000 ನಿಮಿಷಗಳ ನಂತರದ ಕರೆಗಳ ಮೇಲೆ ಪ್ರತಿ ನಿಮಿಷಕ್ಕೆ 30 ಪೈಸೆ ವಿಧಿಸಲಾಗುತ್ತದೆ.

ಜಿಯೋ ಧನ್ ಧನಾ ಧನ್ ಆಫರ್

ಜಿಯೋ ಧನ್ ಧನಾ ಧನ್ ಆಫರ್

ರಿಲಾಯನ್ಸ್ ಜಿಯೋ ಈಗ ತನ್ನ 72 ಮಿಲಿಯನ್ ಗ್ರಾಹಕರಿಗೆ ‘ಜಿಯೋ ಧನ್ ಧನಾ ಧನ್' ಎಂಬ ಹೊಸ ಆಫರ್ ನ್ನು ಘೋಷಣೆ ಮಾಡಿದೆ. ಈ ಯೋಜನೆ ಅನ್ ಲಿಮಿಟೆಡ್ ಯೋಜನೆಯೊಂದಿಗೆ ವಿಶೇಷ ಸೇವೆಗಳನ್ನು ನೀಡುತ್ತಿದೆ. ಅಲ್ಲದೇ ಜಿಯೋ ಚಂದಾದಾರರು ಯಾವುದೇ ಅಡೆತಡೆಗಳಿಲ್ಲದೆ ಡಿಜಿಟಲ್ ಲೈಫ್ ನ್ನು ಉತ್ತೇಜಿಸುವ ಗುರಿ ಹೊಂದಿದೆ. 309 ರೂ.ಗಳ ಈ ಪ್ಲಾನ್ ಮೂಲಕ ಮೂರು ತಿಂಗಳು ಉಚಿತ ಸೇವೆಗಳನ್ನು ಒದಗಿಸುತ್ತಿದ್ದು, ಇದು ಅನಿಯಮಿತ ಎಸ್ಎಂಎಸ್, ಕರೆ, ಡೇಟಾ ಒಳಗೊಂಡಿದೆ. ಪ್ರತಿ ದಿನಕ್ಕೆ 4G ವೇಗದ 1GB ಡೇಟಾ ಸಿಗಲಿದೆ. ಒಂದು ಬಾರಿ 309 ರೂ. ರೀಚಾರ್ಜ್ ಮಾಡಿದರೆ ಮೂರು ತಿಂಗಳವರೆಗೆ ಅವಧಿ ಇರಲಿದೆ. ಮತ್ತೆ ಜಿಯೋ ಧಮಾಕಾ... 'ಧನ್ ಧನಾ ಧನ್' ಭರ್ಜರಿ ಆಫರ್!!

ವೋಡಾಫೋನ್ ಆಫರ್

ವೋಡಾಫೋನ್ ಆಫರ್

ವೋಡಾಫೋನ್ ಗ್ರಾಹಕರು ರೂ. 352 ರೀಚಾರ್ಜ್ ಮಾಡಿದರೆ ಪ್ರತಿದಿನ 1GB ಡೇಟಾ 56 ದಿನಗಳವರೆಗೆ ಆನಂದಿಸಬಹುದು. ಇದರ ಜತೆಗೆ ಅನಿಯಮಿತ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳನ್ನು ಒದಗಿಸುತ್ತದೆ. 

English summary

Airtel, Vodafone, Idea counter Reliance Jio with these offers

Reliance Jio is continuing to offer discounted services under the Jio Dhan Dhana Dhan offer, and Airtel, Vodafone and Idea - country’s three biggest telecom operators - have launched data-heavy plans and offers of their own in a bid to retain their customers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X