For Quick Alerts
ALLOW NOTIFICATIONS  
For Daily Alerts

ಮತ್ತೆ ಜಿಯೋ ಧಮಾಕಾ... 'ಧನ್ ಧನಾ ಧನ್' ಭರ್ಜರಿ ಆಫರ್!!

ಜಿಯೋ ಮತ್ತೆ ಮತ್ತೆ ಉಚಿತ, ಅನಿಯಮಿತ ಆಫರ್ ಗಳನ್ನು ಘೋಷಣೆ ಮಾಡಿ ಗ್ರಾಹಕರನ್ನು ಮನರಂಜಿಸುತ್ತಿದೆ.. ಆಕರ್ಷಿಸುತ್ತಿದೆ.!! ಇದಕ್ಕೆ ಕಾರಣಗಳೇನು ಗೊತ್ತೆ ಜಿಯೋ ಘೋಷಣೆ ಮಾಡಿರುವ ಜಿಯೋ ಧನ್ ಧನಾ ಧನ್ ಆಫರ್...

By Siddu
|

ಟೆಲಿಕಾಂ ರಂಗವೇ ಜಿಯೋಮಯ ಆಗುತ್ತಿದೆ ಎಂದರೆ ತಪ್ಪಾಗಲಾರದು. ಅಷ್ಟರಮಟ್ಟಿಗೆ ಜಿಯೋ ದೂರಸಂಪರ್ಕ ಕ್ಷೇತ್ರವನ್ನು ಆಕ್ರಮಿಸುತ್ತಿದೆ.!!
ನಾವು ಜಿಯೋನ ಬಿಟ್ರು ಜಿಯೋ ನಮ್ಮನ್ನ ಬಿಡದು ಎಂಬ ಪರಿಸ್ಥಿತಿ!! ಯಾಕೆಂದರೆ ಜಿಯೋ ಮತ್ತೆ ಮತ್ತೆ ಉಚಿತ, ಅನಿಯಮಿತ ಆಫರ್ ಗಳನ್ನು ಘೋಷಣೆ ಮಾಡಿ ಗ್ರಾಹಕರನ್ನು ಮನರಂಜಿಸುತ್ತಿದೆ.. ಆಕರ್ಷಿಸುತ್ತಿದೆ.!! ಇದಕ್ಕೆ ಕಾರಣಗಳೇನು ಗೊತ್ತೆ ಜಿಯೋ ಘೋಷಣೆ ಮಾಡಿರುವ ಜಿಯೋ ಧನ್ ಧನಾ ಧನ್ ಆಫರ್... ಜಿಯೋ ಎಫೆಕ್ಟ್: ದೇಶದ ಟೆಲಿಕಾಂ ಉದ್ಯಮಕ್ಕೆ ಭಾರೀ ನಷ್ಟ!

 

ಸಮ್ಮರ್ ಸರ್ಪ್ರೈಸ್ ವಿತ್ ಡ್ರಾ

ಸಮ್ಮರ್ ಸರ್ಪ್ರೈಸ್ ವಿತ್ ಡ್ರಾ

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಆದೇಶದ ಹಿನ್ನೆಲೆಯಲ್ಲಿ ಸಮ್ಮರ್ ಸರ್ಪ್ರೈಸ್ ಆಫರ್ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ರಿಲಯನ್ಸ್ ಜಿಯೋ ಕಂಪನಿ ಹೇಳಿದೆ.

ಧನ್ ಧನಾ ಧನ್ ಆಫರ್

ಧನ್ ಧನಾ ಧನ್ ಆಫರ್

ಸರ್ಪ್ರೈಸ್ ಆಫರ್ ಹಿಂಪಡೆದ ನಂತರ ರಿಲಾಯನ್ಸ್ ಈಗ ತನ್ನ 72 ಮಿಲಿಯನ್ ಗ್ರಾಹಕರಿಗೆ ‘ಜಿಯೋ ಧನ್ ಧನಾ ಧನ್' ಎಂಬ ಹೊಸ ಆಫರ್ ನ್ನು ಘೋಷಣೆ ಮಾಡಿದೆ. ಈ ಯೋಜನೆ ಅನ್ ಲಿಮಿಟೆಡ್ ಯೋಜನೆಯೊಂದಿಗೆ ವಿಶೇಷ ಸೇವೆಗಳನ್ನು ನೀಡುತ್ತಿದೆ. ಅಲ್ಲದೇ ಜಿಯೋ ಚಂದಾದಾರರು ಯಾವುದೇ ಅಡೆತಡೆಗಳಿಲ್ಲದೆ ಡಿಜಿಟಲ್ ಲೈಫ್ ನ್ನು ಉತ್ತೇಜಿಸುವ ಗುರಿ ಹೊಂದಿದೆ.

ರೂ. 309 ಪ್ಲಾನ್
 

ರೂ. 309 ಪ್ಲಾನ್

ಮತ್ತೆ ಮತ್ತೆ ಮೂರು ಮೂರು ತಿಂಗಳ ಅನಿಯಮಿತ ಸೇವೆಗಳು ಜಿಯೋ ನೀಡುತ್ತಲೆ ಇದೆ..! ಅಂದರೆ ಪ್ರಾರಂಭದಲ್ಲಿ ಮೂರು ತಿಂಗಳು, ನಂತರ ಮೂರು ತಿಂಗಳು ಈಗ ಮತ್ತೆ ಮೂರು ತಿಂಗಳು ಅನ್ ಲಿಮಿಟೆಡ್ ಕೊಡುಗೆಗಳನ್ನು ಘೋಷಿಸಿದೆ. 309 ರೂ.ಗಳ ಈ ಪ್ಲಾನ್ ಮೂಲಕ ಮೂರು ತಿಂಗಳು ಉಚಿತ ಸೇವೆಗಳನ್ನು ಒದಗಿಸುತ್ತಿದ್ದು, ಇದು ಅನಿಯಮಿತ ಎಸ್ಎಂಎಸ್, ಕರೆ, ಡೇಟಾ ಒಳಗೊಂಡಿದೆ. ಪ್ರತಿ ದಿನಕ್ಕೆ 4G ವೇಗದ 1GB ಡೇಟಾ ಸಿಗಲಿದೆ. ಒಂದು ಬಾರಿ 309 ರೂ. ರೀಚಾರ್ಜ್ ಮಾಡಿದರೆ ಮೂರು ತಿಂಗಳವರೆಗೆ ಅವಧಿ ಇರಲಿದೆ.

ರೂ. 509 ಅನ್ ಲಿಮಿಟೆಡ್ ಪ್ಲಾನ್

ರೂ. 509 ಅನ್ ಲಿಮಿಟೆಡ್ ಪ್ಲಾನ್

ಜಿಯೋ 309 ರೂ.ಗಳ ಆಫರ್ ಜತೆ 509 ರೂ. ಅನ್ ಲಿಮಿಟೆಡ್ ಪ್ಲಾನ್ ಕೂಡ ಘೋಷಣೆ ಮಾಡಿದೆ. ಇದು ಪ್ರತಿದಿನ ಅತಿಹೆಚ್ಚು ಡೇಟಾ ಬಳಸುವ ಗ್ರಾಹಕರಿಗೆ ಹೆಚ್ಚು ಅನುಕೂಲವಾಗಲಿದೆ. ರೂ. 509 ಅನ್ ಲಿಮಿಟೆಡ್ ಪ್ಲಾನ್ ಮೂರು ತಿಂಗಳ ಉಚಿತ ಅವಧಿಯನ್ನು ಹೊಂದಿದ್ದು, ಅನಿಯಮಿತ ಎಸ್ಎಂಎಸ್, ಕರೆ, ಡೇಟಾ(ಪ್ರತಿ ದಿನ 4G ವೇಗದ 2GB ಡೇಟಾ) ಲಭ್ಯವಿದೆ. ಒಂದು ಬಾರಿ ರೀಚಾರ್ಜ್ ಮಾಡಿದರೆ ಮೂರು ತಿಂಗಳವರೆಗೆ ಈ ಪ್ಲಾನ್ ಆನಂದಿಸಬಹುದು.

ಜಿಯೋ ಫ್ರೈಮ್ ಚಂದಾ ಮಾಡಲು ಆಗದಿದ್ದಲ್ಲಿ?

ಜಿಯೋ ಫ್ರೈಮ್ ಚಂದಾ ಮಾಡಲು ಆಗದಿದ್ದಲ್ಲಿ?

ಒಂದು ವೇಳೆ ಕಾರಣಾಂತರಗಳಿಂದ ಜಿಯೋ ಫ್ರೈಮ್ ಸದಸ್ಯತ್ವ/ಚಂದಾ ಪಡೆಯಲು ಸಾಧ್ಯ ಆಗದ ಇದ್ದರೆ ಚಿಂತಿಸಬೇಕಿಲ್ಲ. ಅಂತ ಗ್ರಾಹಕರೂ ಕೂಡ ರೂ. 408 ಅಥವಾ 608 ರೂ. ಗಳನ್ನು(ಜಿಯೋ ಫ್ರೈಮ್ + ರೀಚಾರ್ಜ್ ದರ) ರೀಚಾರ್ಜ್ ಮಾಡಿ ಮೇಲಿನ ಸೌಲಭ್ಯಗಳನ್ನು ಆನಂದಿಸಬಹುದು. ಜಿಯೋಗೆ ಸವಾಲು! ಬಿಎಸ್ಎನ್ಎಲ್, ಏರ್ಟೆಲ್, ಐಡಿಯಾ ಭರ್ಜರಿ ಆಫರ್!!

ಈ ಯೋಜನೆ ಯಾವಾಗಿನಿಂದ ಲಭ್ಯ?

ಈ ಯೋಜನೆ ಯಾವಾಗಿನಿಂದ ಲಭ್ಯ?

ಇಂದಿನಿಂದ ಧನ್ ಧನಾ ಧನ್ ಪ್ಲಾನ್ ಲಭ್ಯವಿರುತ್ತದೆ. ಸೇವೆಗಳನ್ನು ನಿಲ್ಲಿಸುವುದನ್ನು ತಪ್ಪಿಸಿ ಅವುಗಳನ್ನು ಮುಂದುವರೆಸಲು ಈಗಾಗಲೇ ಅಸ್ತಿತ್ವದಲ್ಲಿರುವ ಜಿಯೋ ಗ್ರಾಹಕರು ಮೊದಲ ರೀಚಾರ್ಜ್ ಮಾಡದೆ ಇದ್ದರೆ ಏಪ್ರಿಲ್ 15, 2017ರ ಒಳಗಾಗಿ ಮಾಡಬೇಕು.

ಪ್ರತಿ ತಿಂಗಳಿಗೆ 103 ಪಾವತಿ

ಪ್ರತಿ ತಿಂಗಳಿಗೆ 103 ಪಾವತಿ

ಜಿಯೋ ಪ್ರೈಮ್ ಮೆಂಬರ್ಶಿಪ್ ಗಾಗಿ ಘೋಷಣೆ ಮಾಡಿದ್ದ ರೂ. 303ಗಳ ಯೋಜನೆ ಬದಲಾಗಿ 309 ರೂ.ಗಳ ಆಫರ್ ಪರಿಚಯಿಸಿದೆ. ಅಂದರೆ ಜಿಯೋ ಗ್ರಾಹಕರು ಪ್ರತಿ ತಿಂಗಳಿಗೆ 103 ರೂಪಾಯಿ ಪಾವತಿಸಿದಂತೆ ಆಗುತ್ತದೆ.

ಟೆಲಿಕಾಂ ಕಂಪನಿಗಳಿಗೆ ನಡುಕ!

ಟೆಲಿಕಾಂ ಕಂಪನಿಗಳಿಗೆ ನಡುಕ!

ಸಮ್ಮರ್ ಸರ್ಪೈಸ್ ಆಫರ್ ನಲ್ಲಿ 303 ರೂ.ಗಳಿಗೆ ಮೂರು ತಿಂಗಳ ಉಚಿತ ಸೇವೆಯನ್ನು ತಡೆಯಲು ಟೆಲಿಕಾಂ ಕಂಪನಿಗಳು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದು, ಕೊನೆಗೆ ಟ್ರಾಯ್ ಮೇಲೆ ಒತ್ತಡ ತಂದು ಸಮ್ಮರ್ ಸರ್ಪೈಸ್ ಆಫರ್ ಹಿಂಪಡೆಯುವಂತೆ ಮಾಡಿದ್ದವು. ಆದರೆ ಜಿಯೋ 'ಧನ್ ಧನಾ ಧನ್' ಆಫರ್ 'ಧನ್ ಧನಾ ಧನ್ ಆಫರ್ ನೀಡಿ ಟೆಲಿಕಾಂ ಲೋಕವನ್ನೇ ನಡುಗಿಸಿದೆ.

ಜಿಯೋ ತಡೆಯೋರು ಯಾರು ಇಲ್ಲ!

ಜಿಯೋ ತಡೆಯೋರು ಯಾರು ಇಲ್ಲ!

ಈ ಹಿಂದೆ ಪ್ರಮುಖ ಟೆಲಿಕಾಂ ಕಂಪನಿಗಳು ಹಾಗೂ ಟ್ರಾಯ್ ಜಿಯೋವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಾ ಬಂದರೂ ಜಿಯೋ ಮಾತ್ರ ಜಯಶಾಲಿ ಆಗುತ್ತಲೇ ಇದೆ. ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಬೆನ್ನಲ್ಲೇ ಇದೀಗ ಮತ್ತೊಂದು ಸೂಪರ್ ಆಫರ್ ಘೋಷಣೆ ಮಾಡಿದೆ. ಈ ಮೂಲಕ ಯಾರೆ ತನ್ನ ದಾರಿಗೆ ಅಡ್ಡ ಬಂದರು ವೇಗಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎಂಬುದನ್ನು ಮತ್ತೆ ಸಾರಿ ಹೇಳಿದೆ.

ಭಾರತಕ್ಕೆ ಜಾಗತಿಕ ಡಿಜಿಟಲ್ ನಾಯಕತ್ವ

ಭಾರತಕ್ಕೆ ಜಾಗತಿಕ ಡಿಜಿಟಲ್ ನಾಯಕತ್ವ

ಜಿಯೋ 'ಸಮ್ಮರ್ ಆಫರ್'! ಮತ್ತೆ 3 ತಿಂಗಳು ಉಚಿತ ಕೊಡುಗೆ ಮುಂದುವರಿಕೆ!!ಜಿಯೋ 'ಸಮ್ಮರ್ ಆಫರ್'! ಮತ್ತೆ 3 ತಿಂಗಳು ಉಚಿತ ಕೊಡುಗೆ ಮುಂದುವರಿಕೆ!!

English summary

Reliance Jio announces new Dhan Dhana Dhan offer

Reliance Jio on Tuesday announced its Dhan Dhana Dhan offer under which it will offer customers three months of unlimited data and free calls for a one-time recharge of Rs 309.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X