ಜುಲೈ 1ರಿಂದ ಜಿಎಸ್ಟಿ(GST) ಜಾರಿ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (gst) ವ್ಯವಸ್ಥೆಯನ್ನು ಜಾರಿಗೆ ತರಲು ನಡೆದಿರುವ ಪೂರ್ವಭಾವಿ ತಯಾರಿಗಳನ್ನು ಪ್ರಧಾನಿ ಮೋದಿ ಅವರು ಪರಿಶೀಲಿಸಿದ್ದಾರೆ.
News
oi-Siddu
By Siddu
ಸ್ವತಂತ್ರ ಭಾರತದಲ್ಲಿ ಕ್ರಾಂತಿಕಾರಕ ತೆರಿಗೆ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಈಗಾಗಲೇ ಭಾರೀ ತಯಾರಿ ನಡೆದಿದೆ.
ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (good and services tax) ವ್ಯವಸ್ಥೆಯನ್ನು ಜಾರಿಗೆ ತರಲು ನಡೆದಿರುವ ಪೂರ್ವಭಾವಿ ತಯಾರಿಗಳನ್ನು ಪ್ರಧಾನಿ ಮೋದಿ ಅವರು ಪರಿಶೀಲಿಸಿದ್ದಾರೆ.
ಜಿಎಸ್ಟಿ ವ್ಯವಸ್ಥೆ ಜಾರಿ ಕುರಿತು ಮಾಹಿತಿ ಪಡೆದ ಮೋದಿಯವರು, ಪ್ರಚಲಿತ ವಿದ್ಯಮಾನಗಳು, ಸೈಬರ್ ಸುರಕ್ಷತೆಗೆ ಹೆಚ್ಚಿನ ಗಮನ ನೀಡುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಜಿಎಸ್ಟಿ(GST) ಎಂದರೇನು? ಯಾಕೆ ಬೇಕು?
ಒಂದು ದೇಶ, ಒಂದು ತೆರಿಗೆ
ಒಂದು ದೇಶ, ಒಂದು ಮಾರುಕಟ್ಟೆ, ಒಂದು ತೆರಿಗೆ ವ್ಯವಸ್ಥೆ ಜನಸಾಮಾನ್ಯರಿಗೆ ತುಂಬ ಪ್ರಯೋಜನ ಉಂಟುಮಾಡಲಿದೆ ಎಂದು ಮೋದಿ ಹೇಳಿದ್ದು, ಆರ್ಥಿಕತೆಗೆ ಕ್ರಾಂತಿಕಾರಕ ತಿರುವು ನೀಡುವ ಮಹತ್ವದ ವಿದ್ಯಮಾನ ಆಗಲಿದೆ ಎಂದು ಬಣ್ಣಿಸಿದ್ದಾರೆ. ರಾಜಕೀಯ ಪಕ್ಷಗಳು, ಸಾರ್ವಜನಿಕರು, ವ್ಯಾಪಾರ ಮತ್ತು ಉದ್ದಿಮೆ ಹೀಗೆ ಎಲ್ಲರ ಸಂಘಟಿತ ಪ್ರಯತ್ನದಿಂದ ಜಿಎಸ್ಟಿ ಜಾರಿಯಾಗುತ್ತಿದೆ.
ಚರ್ಚೆಯಾದ ಅಂಶಗಳು
ನಿನ್ನೆ ನಡೆದ ಚರ್ಚೆಯಲ್ಲಿ ಜಿಎಸ್ಟಿ ವ್ಯವಸ್ಥೆಯ ಜಾರಿಗೆ ಪೂರಕವಾಗಿ ಹಲವಾರು ಅಂಶಗಳನ್ನು ಮೋದಿಯವರ ಗಮನಕ್ಕೆ ತರಲಾಗಿದ್ದು, ಪರಿಣಾಮಕಾರಿ ಜಾರಿಗಾಗಿ ಅಧಿಕಾರಿಗಳ ತರಬೇತಿ, ಐ.ಟಿ ಮೂಲ ಸೌಕರ್ಯ, ಬ್ಯಾಂಕುಗಳೊಂದಿಗೆ ಸಮನ್ವಯತೆ, ಮಾಹಿತಿ ಸೋರಿಕೆ ಸುರಕ್ಷತೆ, ಸೈಬರ್ ಸುರಕ್ಷತೆ, ನಿಗದಿತ ಸಮಯದೊಳಗಾಗಿ ತೆರಿಗೆ ಪ್ರಕ್ರಿಯೆ, ತೆರಿಗೆದಾರರ ನೋಂದಣಿ ಇತ್ಯತಾದಿ ಪ್ರಮುಖ ಅಂಶಗಳು ಸೇರಿವೆ.