For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಜಾರಿ: ಜನಸಾಮಾನ್ಯರಿಗೇನು ಲಾಭ? ಯಾವುದು ದುಬಾರಿ, ಯಾವುದು ಅಗ್ಗ..?

ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು (ಜಿಎಸ್ಟಿ) ಜಾರಿಗೊಳಿಸಲು ಸರ್ಕಾರ ಸರ್ವ ಪ್ರಯತ್ನ ನಡೆಸುತ್ತಿದ್ದು, ಎಲ್ಲಾ ರಾಜ್ಯಗಳ ವಿಶ್ವಾಸ ಪಡೆಯುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.

By Siddu
|

ಬಹುನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು (ಜಿಎಸ್ಟಿ) ಜಾರಿಗೊಳಿಸಲು ಕೇಂದ್ರ ಸರ್ಕಾರ ಸರ್ವ ಪ್ರಯತ್ನ ನಡೆಸಿದ ಹಿನ್ನೆಲೆಯಲ್ಲಿ, ಎಲ್ಲಾ ರಾಜ್ಯಗಳ ವಿಶ್ವಾಸ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಸರಕು ಮತ್ತು ಸೇವಾ ತೆರಿಗೆ ಬಿಲ್ ಅಥವಾ GST (Goods and Services Tax Bill) ಜುಲೈ 1, 2017ರಿಂದ ಜಾರಿ ಆಗಿದೆ.

 

ಒಂದು ಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವವರೆಗೆ ಅನೇಕ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಆದರೆ ಜಿಎಸ್ಟಿ ಬಿಲ್ ಜಾರಿ ಆದರೆ ಉತ್ಪಾದನೆ, ಮಾರಾಟ ಮತ್ತು ಬಳಕೆ ಮೇಲೆ ಭಾರತದಾದ್ಯಂತ ಏಕರೂಪದ ತೆರಿಗೆಯನ್ನು ಮಾತ್ರ ವಿಧಿಸಲಾಗುವುದು. ಇದರಿಂದಾಗಿ ದೇಶದ ಅಭಿವೃದ್ಧಿಯಲ್ಲಿ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಲ್ಲಿ ತುಂಬಾ ಪ್ರಯೋಜನಕಾರಿ ಆಗಲಿದೆ. ಜಿಎಸ್ಟಿ ಎಫೆಕ್ಟ್: ಜುಲೈ 1ರಿಂದ ಯಾವುದು ದುಬಾರಿ, ಯಾವುದು ಅಗ್ಗ..?

ಜಿಎಸ್ಟಿ ಜಾರಿಯಿಂದ ಜನಸಾಮಾನ್ಯರಿಗೆ ಪ್ರಯೋಜನಗಳೇನು? ಯಾವುದು ದುಬಾರಿ, ಯಾವುದು ಅಗ್ಗವಾಗಲಿದೆ? ಜಿಎಸ್ಟಿ ಜಾರಿ ಯಾವ ಸೇವೆ ಮತ್ತು ಕಂಪನಿಗಳ ಮೇಲೆ ಧನಾತ್ಮಕ ಮತ್ತು ನಕರಾತ್ಮಕ ಪರಿಣಾಮ ಬೀರಲಿದೆ? ಅಸಂಘಟಿತ ಮತ್ತು ಸಂಘಟಿತ ವಲಯಗಳು ಎಷ್ಟು ತೆರಿಗೆ ಪಾವತಿಸಬೇಕು? ಹೀಗೆ ಹಲವಾರು ಸಂಗತಿಗಳನ್ನು ದೀರ್ಘವಾಗಿ ಚರ್ಚಿಸಲಾಗಿದೆ... ಜಿಎಸ್ಟಿ(GST) ಎಂದರೇನು? ಯಾಕೆ ಬೇಕು?

ಗ್ರೀನ್ ಪ್ಲೈ (Greenply)

ಗ್ರೀನ್ ಪ್ಲೈ (Greenply)

ಇದು ಪ್ಲೈವುಡ್, ಕಟ್ಟಿಗೆ ಮಹಡಿ, ಅಲಂಕಾರಿಕ ಕ್ಷೇತ್ರದ ಪ್ರಮುಖ ಕಂಪನಿಯಾಗಿದೆ. ಈ ಕಂಪನಿಯು ಅಸಂಘಟಿತ ವಲಯದಿಂದ ತೀವ್ರ ಪೈಪೋಟಿ ಎದುರಿಸುತ್ತಿದೆ.
ಜಿಎಸ್ಟಿ ಅಂಗೀಕಾರವಾದ ನಂತರ ಅಸಂಘಟಿತ ವಲಯ ತೆರಿಗೆ ಪಾವತಿಸಬೇಕಾಗುತ್ತದೆ. ಇದರಿಂದಾಗಿ ಗ್ರೀನ್ ಪ್ಲೆ ಕಂಪನಿಗೆ ಹೆಚ್ಚು ಲಾಭವಾಗಲಿದ್ದು, ತನ್ನ ಉತ್ಪನ್ನಗಳ ದರವನ್ನು ಹೆಚ್ಚಿಸುವ ಅವಕಾಶ ಇರುತ್ತದೆ.

ಸೆಂಚುರಿ ಪ್ಲೈಬೋರ್ಡ್ಸ್ (ಇಂಡಿಯ ಲಿ.)

ಸೆಂಚುರಿ ಪ್ಲೈಬೋರ್ಡ್ಸ್ (ಇಂಡಿಯ ಲಿ.)

ಸೆಂಚುರಿ ಪ್ಲೈಬೋರ್ಡ್ಸ್ ಕಂಪನಿ ಗ್ರೀನ್ ಪ್ಲೈ ನಂತೆಯೇ ಲಾಭ ಪಡೆಯಬಲ್ಲ ಇನ್ನೊಂದು ಕಂಪನಿ.
ಅಸಂಘಟಿತ ವಲಯದ ತೀವ್ರ ಪೈಪೋಟಿಗೆ ಸಿಲುಕಿರುವ ಈ ಕಂಪನಿ ಜಿಎಸ್ಟಿ ಜಾರಿ ನಂತರ ಲಾಭ ಪಡೆಯಲಿದೆ. ಈ ಕಂಪನಿ ಪ್ಲೈವುಡ್, ಲ್ಯಾಮಿನೆಟ್ ಹಾಳೆ, ಪೈಬರ್ ಬೋರ್ಡ್, ಮೆರಿನ್ ವುಡ್, ಎಮ್ಡಿಎಫ್ ಬೋರ್ಡ್ ಇತ್ಯಾದಿಗಲನ್ನು ಉತ್ಪಾದಿಸುತ್ತದೆ.

ಫಿನೊಲೆಕ್ಷ ಕೇಬಲ್ಸ್
 

ಫಿನೊಲೆಕ್ಷ ಕೇಬಲ್ಸ್

ಸ್ಥೂಲ ಅಂದಾಜಿನ ಪ್ರಕಾರ ಸುಮಾರು ಶೇ. 40ರಷ್ಟು ಕೇಬಲ್ ಗಳ ವ್ಯವಹಾರ ಅಸಂಘಟಿತ ವಲಯದ ಪಾಲಾಗಿದೆ. ಹೀಗಾಗಿ ಫಿನೊಲೆಕ್ಷ ಕೇಬಲ್ಸ್ ನಂತಹ ಕಂಪನಿಗಳು ಅಸಂಘಟಿತ ವಲಯದೊಂದಿಗೆ ಪೈಪೋಟಿ ಮಾಡುವುದು ಕಷ್ಟವಾಗಿತ್ತು.
ಕೇಬಲ್ ವ್ಯವಹಾರ ಕ್ಷೇತ್ರದಲ್ಲಿ ದಶಕದ ಅನುಭವ ಹೊಂದಿರುವ ಈ ಕಂಪನಿ ಜಿಎಸ್ಟಿ ಜಾರಿ ನಂತರ ಉತ್ತಮ ಪೈಪೋಟಿ ನೀಡಲಿದೆ.

ಪಿವಿಆರ್, ಮಲ್ಟಿಪ್ಲೆಕ್ಷ್

ಪಿವಿಆರ್, ಮಲ್ಟಿಪ್ಲೆಕ್ಷ್

ಇತ್ತೀಚಿನ ದಿನಗಳಲ್ಲಿ ಮನರಂಜನೆಯ ಮೇಲಿನ ತೆರಿಗೆ ತುಂಬಾ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಭರಿಸುವಂತಾಗಿದೆ. ಕಾರಣ ಪಿವಿಆರ್, ಮಲ್ಟಿಪ್ಲೆಕ್ಷ್ ಗಳು ಹೆಚ್ಚು ಟಿಕೇಟ್ ದರವನ್ನು ವಿಧಿಸುತ್ತಿವೆ. ಜಿಎಸ್ಟಿ ಅನುಷ್ಠಾನದಿಂದ ಮಾತ್ರ ಟಿಕೇಟ್ ದರ ಕಡಿಮೆಯಾಗಿಲಿದೆ.
ಜಿಎಸ್ಟಿ ಜಾರಿ ನಂತರ ಷೇರುಗಳು ಉತ್ತಮ ವಹಿವಾಟು ನಡೆಸಲಿವೆ ಎಂದು ಅಂದಾಜಿಸಲಾಗಿದೆ.

ಹಿಂದುಸ್ತಾನ್ ಯುನಿಲಿವರ್

ಹಿಂದುಸ್ತಾನ್ ಯುನಿಲಿವರ್

ಜಿಎಸ್ಟಿ ಮಸೂದೆ ಅಂಗೀಕಾರವಾದರೆ ಹಿಂದುಸ್ತಾನ್ ಯುನಿಲಿವರ್ ತೆರಿಗೆ ಮೇಲೆ ಲಾಭ ಮತ್ತು ವೇರ್ ಹೌಸಿಂಗ್ ವೆಚ್ಚ ಕೂಡ ಕಡಿಮೆ ಆಗಲಿದೆ.
ಕಳೆದ ಅನೇಕ ತ್ರೈಮಾಸಿಕಗಳಿಂದ ಕಂಪನಿಯ ಉತ್ಪನ್ನಗಳಿಗೆ ಯಾವುದೇ ಉತ್ತಮವಾದ ಬೆಡಿಕೆ ಕಂಡುಬಂದಿಲ್ಲ.
ಹಾಗಾಗಿ ಷೇರುಗಳನ್ನು ಖರೀದಿಸುವ ಮುನ್ನ ಮೂಲಭೂತ ಸಂಗತಿಗಳನ್ನು ಗಮನಿಸುವುದು ಉತ್ತಮ.

ಮಾರುತಿ/ಸಣ್ಣ ಕಾರುಗಳು

ಮಾರುತಿ/ಸಣ್ಣ ಕಾರುಗಳು

ಮಾರುತಿ ದೇಶದಲ್ಲಿ ಅತಿ ಹೆಚ್ಚು ಸಣ್ಣ ಕಾರುಗಳನ್ನು ತಯಾರಿಸುವ ಕಂಪನಿ. ಜಿಎಸ್ಟಿ ಜಾರಿಯಾದರೆ ತೆರಿಗೆ ಕೂಡ 24% ರಿಂದ 18% ಇಳಿಕೆಯಾಗುತ್ತದೆ. ಉತ್ಪಾದಕರು ಗ್ರಾಹಕರಿಗೆ ಲಾಭವನ್ನು ವರ್ಗಾಯಿಸಿದರೆ ಗ್ರಾಹಕರು ಭರಿಸುವ ತೆರಿಗೆಯಲ್ಲಿ ಇಳಿಕೆಯಾಗುತ್ತದೆ. ಜತೆಗೆ ಕಾರುಗಳ ಬೆಲೆ ಕಡಿಮೆಯಾದರೂ ಅವುಗಳ ಮೇಲೆ ಕಂಪನಿ ಭರಿಸಬೇಕಾದ ತೆರಿಗೆ ಪ್ರಮಾಣದಲ್ಲೂ ಇಳಿಕೆ ಆಗುತ್ತದೆ.

ಐನಾಕ್ಷ್

ಐನಾಕ್ಷ್

ಪಿವಿಆರ್ ನಂತೆಯೇ ಐನಾಕ್ಷ್ ಮನರಂಜನಾ ತೆರಿಗೆಯಲ್ಲೂ ಕೂಡ ಕಡಿತವಾಗಲಿದೆ. ಮನರಂಜನಾ ತೆರಿಗೆ ಕಡಿಮೆ ಆಗುವುದರಿಂದ ಕಂಪನಿ ಉತ್ತಮ ಲಾಭ ಗಳಿಸಲಿದೆ. ಷೇರು ಕಳೆದ ಅನೇಕ ವಾರಗಳಿಂದ ಗಮನಾರ್ಹವಾಗಿ ಉತ್ತೇಜನಗೊಳ್ಳುತ್ತಿದ್ದು, ಈಗ ರೂ. 246 ಕ್ಕೆ ಮಾರಾಟವಾಗುತ್ತಿವೆ.

ಕಡಿಮೆ ಭ್ರಷ್ಟಾಚಾರ

ಕಡಿಮೆ ಭ್ರಷ್ಟಾಚಾರ

ಜಿಎಸ್ಟಿ ಇದೊಂದು ಏಕರೂಪದ ತೆರಿಗೆ ಆಗಿದ್ದು, ವಿವಿಧ ರೀತಿಯ ತೆರಿಗೆಗಳು ಒಂದೇ ನಿಯಮದ ಅಡಿ ಒಳಗೊಳ್ಳುವಂತೆ ಮಾಡುತ್ತದೆ. ನಮ್ಮ ವ್ಯವಸ್ಥೆಯಲ್ಲಿ ದಕ್ಷತೆ ತರುವಲ್ಲಿ ಸಹಾಯಕವಾಗಿದ್ದು, ಭ್ರಷ್ಟಾಚಾರದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುತ್ತದೆ. ಇದು ಜನಸಾಮಾನ್ಯರಿಗೆ ಒಂದು ದೊಡ್ಡ ವರವಾಗಲಿದೆ.

9. ಜಿಎಸ್‌ಟಿ ದರ ನಿರ್ಧಾರ

9. ಜಿಎಸ್‌ಟಿ ದರ ನಿರ್ಧಾರ

ಜಿಎಸ್ಟಿ ಮಂಡಳಿ ನಾಲ್ಕು ಹಂತದ ತೆರಿಗೆ ವ್ಯವಸ್ಥೆಯನ್ನು ಶೇ. 5, 12, 18 ಮತ್ತು 28 ದರಗಳಲ್ಲಿ ಜಾರಿಗೆ ತಂದಿದೆ. ಏಪ್ರಿಲ್‌ 1, 2017ರಿಂದ ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ, ಅಗತ್ಯ ಸರಕುಗಳ ಮೇಲೆ ಕಡಿಮೆ ದರ ಹಾಗೂ ಐಷಾರಾಮಿ ಸರಕುಗಳ ಮೇಲೆ ಜಿಎಸ್ಟಿ ಅಲ್ಲದೆ ಹೆಚ್ಚುವರಿ ತೆರಿಗೆ ವಿಧಿಸಲಾಗುವುದು.

ಹೆಚ್ಚುವರಿ ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ರಾಜ್ಯಗಳ ಆದಾಯ ನಷ್ಟ ಭರ್ತಿಗೆ ಉಪಯೋಗಿಸಲು ನಿರ್ಧರಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರ ನಾಲ್ಕು ಹಂತದ ತೆರಿಗೆ ವ್ಯವಸ್ಥೆ(ಶೇ. 8, 12,18 ಮತ್ತು 26) ದರದಂತೆ ಜಾರಿಗೆ ತರುವಂತೆ ಜಿಎಸ್ಟಿ ಮಂಡಳಿಯಲ್ಲಿ ತನ್ನ ಪ್ರಸ್ತಾವವನ್ನು ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಹಲವು ಪ್ರಯೋಜನಗಳು ಲಭ್ಯವಿವೆ ಎನ್ನುವುದು ತಜ್ಞರ ಅಭಿಮತ.

ಉದ್ಯೋಗ ಸೃಷ್ಟಿ

ಉದ್ಯೋಗ ಸೃಷ್ಟಿ

ಜಿಎಸ್ಟಿ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದ್ದು, ದೇಶದ ಜಿಡಿಪಿಯನ್ನು 2%ರಷ್ಟು ಹೆಚ್ಚಳ ಮಾಡುವಲ್ಲಿ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಇದು ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚು ಸಹಾಯಕವಾಗಲಿದೆ.

11. ವಿದೇಶಿ ಬಂಡವಾಳ ಹೆಚ್ಚಳ

11. ವಿದೇಶಿ ಬಂಡವಾಳ ಹೆಚ್ಚಳ

ದೇಶದಲ್ಲಿ ಏಕರೂಪ ತೆರಿಗೆ ವ್ಯವಸ್ಥೆ ಅನುಷ್ಠಾನಗೊಳ್ಳುವುದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಲಿದ್ದು, ಉತ್ತೇಜನಗೊಳ್ಳಲಿವೆ. ಜತೆಗೆ ಮುಖ್ಯವಾಗಿ ವಿದೇಶಿ ಬಂಡವಾಳ ಹರಿದು ಬರಲಿದೆ. ಜಿಎಸ್ಟಿ ಜಾರಿಯಾದರೆ ಸೇವಾ ತೆರಿಗೆ, ಅಬಕಾರಿ ಸುಂಕ, ಮೌಲ್ಯ ವರ್ಧಿತ ತೆರಿಗೆ(ವ್ಯಾಟ್) ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ 12ಕ್ಕೂ ಹೆಚ್ಚು ತೆರಿಗೆಗಳು ರದ್ದಾಗಲಿವೆ.

12. ಸಿಬಿಇಸಿ ಭವಿಷ್ಯ

12. ಸಿಬಿಇಸಿ ಭವಿಷ್ಯ

ಜಿಎಸ್ಟಿ ಜಾರಿಗೆಯಿಂದ ರಾಜ್ಯಗಳ ನಡುವೆ ಅಡೆತಡೆ ಇಲ್ಲದೆ ಸುಲಭ ವ್ಯಾಪಾರ ಮತ್ತು ವಹಿವಾಟು ನಡೆಯಲಿದೆ. ಜತೆಗೆ ಅನೇಕ ಬಾರಿ ತೆರಿಗೆ ಕಟ್ಟುವ ಹೊರೆ ತಪ್ಪಲಿದೆ. ತಂತ್ರಜ್ಞಾನ ಬಳಕೆಯಿಂದ ತೆರಿಗೆ ಇಲಾಖೆ ಅಧಿಕಾರಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಬೀಳಲಿದೆ. ಇಡಿ ತೆರಿಗೆ ವ್ಯವಸ್ಥೆ ಅತ್ಯಂತ ಸರಳಗೊಳ್ಳಲಿದ್ದು ಗ್ರಾಹಕರ ಅನುಭೋಗ ಪ್ರಮಾಣ ಹೆಚ್ಚಲಿದೆ ಎಂದು ಕೇಂದ್ರಿಯ ಅಬಕಾರಿ ಮತ್ತು ಸುಂಕ ಮಂಡಳಿ(ಸಿಬಿಇಸಿ) ಹೇಳಿದೆ.

13. ಪರಿಷ್ಕೃತ ಅಂಶಗಳು

13. ಪರಿಷ್ಕೃತ ಅಂಶಗಳು

 1. ಶೇ. ಒಂದರಷ್ಟು ಹೆಚ್ಚು ತೆರಿಗೆ ವಿಧಿಸಲು ರಾಜ್ಯಗಳಿಗೆ ಅವಕಾಶ ಇಲ್ಲ.
2. ಕೇಂದ್ರ ಮತ್ತು ರಾಜ್ಯಗಳು ಗಾಹೂ ರಾಜ್ಯಗಳ ನಡುವಣ ವರಮಾನ ಹಂಚಿಕೆ ವಿವಾದ ಪರಿಹಾರಕ್ಕೆ ಜಿಎಸ್ಟಿ ಮಂಡಳಿ ರಚನೆ
3. ಜಿಎಸ್ಟಿ ಜಾರಿಗೆ ಬಂದು ಐದು ವರ್ಷಗಳವರೆಗೆ ರಾಜ್ಯಗಳಿಗೆ ಆಗುವ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಲಿದೆ.
4. ಕೇಂದ್ರ ಜಿಎಸ್ಟಿ ಮತ್ತು ಸಮಗ್ರ ಜಿಎಸ್ಟಿಯನ್ನು ನಿಯಮಾನುಸಾರ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆ ಮಾಡಲಾಗುವುದು.
5. ಜಿಎಸ್ಟಿಯಲ್ಲಿ ರಾಜ್ಯಗಳ ಪಾಲು ಭಾರತ ಸರ್ಕಾರದ ಸಂಚಿತ ನಿಧಿಯ ಭಾಗ ಆಗಿರುವುದಿಲ್ಲ.
6. ಮಸೂದೆಯಲ್ಲಿ ವರಮಾನ ಹಂಚಿಕೆ ವಿವರಿಸುವ ಕಲಂ 12ರಲ್ಲಿ ಸಮಗ್ರ ಜಿಎಸ್ಟಿ ಎಂಬ ಪದ ಬಳಕೆಯೇ ಇರುವುದಿಲ್ಲ. ಅದರ ಬದಲಿಗೆ ಅಂತರರಾಜ್ಯ ವ್ಯಾಪಾರ ಅಥವಾ ವಹಿವಾಟಿನನಲ್ಲಿ ಪೂರೈಕೆಯ ಮೇಲೆ ಹೇರಲಾಗುವ ಸರಕು ಮತ್ತು ಸೇವೆಗಳ ತೆರಿಗೆ ಎಂಬ ಅಂಶವನ್ನು ಸೇರಿಸಲಾಗಿದೆ.

ಯಾವುದು ದುಬಾರಿ, ಯಾವುದು ಅಗ್ಗ..?

ಯಾವುದು ದುಬಾರಿ, ಯಾವುದು ಅಗ್ಗ..?

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿ ಬಂದ ನಂತರ ದಿನನಿತ್ಯ ಬಳಕೆಯ ಸರಕುಗಳು, ಹಣಕಾಸು ಸೇವೆಗಳು, ಚಿನ್ನ, ಹೋಟೆಲ್, ವಿದ್ಯುತ್, ಪ್ರಯಾಣ ಹಾಗೂ ಮನರಂಜನಾ ಸೇವೆಗಳ ಮೇಲೆ ಯಾವ ಪರಿಣಾಮ ಬೀರಲಿದೆ? ಯಾವ ತೆರಿಗೆ ದರಗಳು ಹೆಚ್ಚಾಗಲಿದೆಯೇ ಅಥವಾ ಕಡಿಮೆಯಾಗಲಿದೆಯೇ, ಯಾವುದಕ್ಕೆ ಎಷ್ಟು ದರ ವಿಧಿಸಲಾಗುತ್ತಿದೆ ಹೀಗೆ ಹಲವು ಗೊಂದಲಗಳಿರಬಹುದು.
ಜಿಎಸ್ಟಿ ಯಾವ ಯಾವ ಸೇವೆಗಳ ಮೇಲೆ ಧನಾತ್ಮಕ ಮತ್ತು ನಕರಾತ್ಮಕ ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ...

ಸಿನೆಮಾ
ರೂ. 100 ಮತ್ತು ಅದಕ್ಕಿಂತ ಕಡಿಮೆ ಮೊತ್ತದ ಸಿನೆಮಾ ಟಿಕೆಟ್ ಗಳ ಮೇಲೆ ಶೇ. 18ರಷ್ಟು ತೆರಿಗೆ ದರ ವಿಧಿಸಲಾಗಿದೆ. ರೂ. 100 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಟಿಕೇಟ್ ಗಳ ಮೇಲೆ ಶೇ. 28ರಷ್ಟು ತೆರಿಗೆ ದರ ನಿಗದಿಪಡಿಸಲಾಗಿದೆ.

ಡಿಟಿಎಚ್, ಕೇಬಲ್ ಸೇವೆ

ಡಿಟಿಎಚ್, ಕೇಬಲ್ ಸೇವೆ

ಡಿಟಿಎಚ್ ಮತ್ತು ಕೇಬಲ್ ಸೇವೆಗಳ ದರ ಕೊಂಚ ಕಡಿಮೆಯಾಗಲಿದ್ದು, ಶೇ. 18ರಷ್ಟು ನಿಗದಿಪಡಿಸಲಾಗಿದೆ.
ಪ್ರಸ್ತುತ, ರಾಜ್ಯಗಳಲ್ಲಿ ಮನರಂಜನಾ ತೆರಿಗೆಗಳು ಶೇ.10-30 ರ ವ್ಯಾಪ್ತಿಯಲ್ಲಿವೆ.

ರೆಸ್ಟೊರೆಂಟ್, ಡಾಬಾ

ರೆಸ್ಟೊರೆಂಟ್, ಡಾಬಾ

ಜುಲೈನಿಂದ ಪಂಚಾತಾರಾ ಹೋಟೆಲ್ ಗಳಲ್ಲಿ ಶೇ. 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ನಾನ್ ಎಸಿ(Non-AC) ರೆಸ್ಟೊರೆಂಟ್ ಗಳಲ್ಲಿ ಶೇ. 12, ಎಸಿ ಇರುವ ಹೋಟೆಲ್ ಗಳಲ್ಲಿ ಶೇ. 18ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಹೋಟೆಲ್ ಗಳಲ್ಲಿ ಶೇ. 18ರಷ್ಟು ತೆರಿಗೆ ಇದ್ದರೂ, ಬೇರೆ ಬೇರೆ ರೆಸ್ಟೊರೆಂಟ್ ಗಳಲ್ಲಿ ವಿಭಿನ್ನ ಸೇವಾ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.

ಕ್ರಿಕೆಟ್

ಕ್ರಿಕೆಟ್

ಐಪಿಎಲ್ ನಂತಹ ಕ್ರಿಡಾಕೂಟಗಳು ಶೇ. 28ರಷ್ಟು ತೆರಿಗೆ ದರ ಆಕರ್ಷಿಸುತ್ತಿದ್ದು, ಪ್ರಸ್ತುತ ದರ ಶೇ. 20ರಷ್ಟಿದೆ. ಇದರಿಂದಾಗಿ ಟಿಕೆಟ್ ದರಗಳು ಹೆಚ್ಚಾಗಲಿದೆ. ಸರ್ಕಸ್, ರಂಗಭೂಮಿ, ಜಾನಪದ ನೃತ್ಯ, ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ನಾಟಕ ಮನರಂಜನೆಗಳ ಮೇಲೆ ಶೇ. 18ರಷ್ಟು ತೆರಿಗೆ ದರ ವಿಧಿಸಲಾಗಿದೆ. ಇದು ಪ್ರಸ್ತುತ ತೆರಿಗೆ ದರಕ್ಕಿಂತ ಕಡಿಮೆಯಿರುತ್ತದೆ.

ದಿನನಿತ್ಯ ಬಳಕೆ ಸರಕುಗಳು

ದಿನನಿತ್ಯ ಬಳಕೆ ಸರಕುಗಳು

ಮಸಾಲೆ ಪದಾರ್ಥಗಳು, ಅಕ್ಕಿ, ಗೋದಿ, ಟೀ, ಮೊಸರು, ಮಜ್ಜಿಗೆ, ಅಡುಗೆ ಅನಿಲ(ಎಲ್ಪಿಜಿ), ನೋಟ್‌ಬುಕ್‌, ಇನ್ಸುಲಿನ್, ಅಗರಬತ್ತಿ, ಹಾಲಿನ ಪುಡಿ, ಬ್ರಾಂಡ್ ರಹಿತ ನೈಸರ್ಗಿಕ ಜೇನು ಹೀಗೆ ಹಲವು ದಿನಿತ್ಯದ ವಸ್ತುಗಳ ಬೆಲೆಗಳು ಕಡಿಮೆಯಾಗಲಿವೆ. ಶೇಂಗಾ ಎಣ್ಣೆ, ಪಾಮ್ ಎಣ್ಣೆ, ಸೂರ್ಯಕಾಂತಿ ಎಣ್ಣೆ, ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಸಕ್ಕರೆ, ಬೆಲ್ಲ, ಸಕ್ಕರೆ ಮಿಠಾಯಿ, ನೂಡಲ್ಸ್, ಹಣ್ಣು-ತರಕಾರಿ, ಉಪ್ಪಿನಕಾಯಿ, ಸಾಸ್ ಹೀಗೆ ಅನೇಕ ವಸ್ತುಗಳು ಜಿಎಸ್ಟಿ ಕಡಿಮೆ ದರದ ಪಟ್ಟಿಯಲ್ಲಿವೆ. ಇನ್‌ಸ್ಟಂಟ್‌ ಫುಡ್‌ ಮಿಕ್ಸಸ್, ಮಿನಿರಲ್ ವಾಟರ್, ಐಸ್, ಸಿಮೆಂಟ್, ಕಲ್ಲಿದ್ದಲು, ಪಡಿತರ ಪದಾರ್ಥಗಳಾದ ಸೀಮೆಎಣ್ಣೆ, ಟೂಥ್ ಪೇಸ್ಟ್, ಕೇಶ ತೈಲ, ಎಕ್ಸ್‌ರೇ ಫಿಲ್ಮ್ಸ್‌, ಹತ್ತಿ ಬಟ್ಟೆ ಅಗ್ಗವಾಗಲಿವೆ. ಜತೆಗೆ ರೂ. 500ವರೆಗಿನ ಪಾದರಕ್ಷೆ ಮತ್ತು ಹೆಲ್ಮೇಟ್ ಕೂಡ ಅಗ್ಗವಾಗಲಿವೆ. ದಿನನಿತ್ಯ ಬಳಕೆಯ ಸರಕುಗಳು ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಡಿ ಬಹುತೇಕ ಅಗ್ಗವಾಗಲಿವೆ.

ಹಣಕಾಸು ಸೇವೆ ದುಬಾರಿ

ಹಣಕಾಸು ಸೇವೆ ದುಬಾರಿ

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜಾರಿಗೆ ಬರುತ್ತಿದ್ದಂತೆ ಹಣಕಾಸು ಸೇವೆಗಳು ದುಬಾರಿಯಾಗಲಿವೆ. ಇದರಲ್ಲಿ ಮುಖ್ಯವಾಗಿ ಬ್ಯಾಂಕಿಂಗ್‌, ದೂರಸಂಪರ್ಕ ಮತ್ತು ವಿಮಾ ಸೇವೆಗಳು ಒಳಗೊಂಡಿವೆ. ಹಣಕಾಸು, ಕ್ರೆಡಿಟ್‌ ಕಾರ್ಡ್‌, ವಿಮೆ ಮತ್ತು ದೂರಸಂಪರ್ಕ ಸೇವೆಗಳ ಮೇಲೆ ಶೇ. 18ರಷ್ಟು ತೆರಿಗೆ ವಿಧಿಸಲಾಗಿದೆ. ಪ್ರಸ್ತುತ ಹಣಕಾಸು ಸೇವೆಗಳ ಮೇಲೆ ಶೇ. 15ರಷ್ಟು ಸೇವಾ ತೆರಿಗೆ ಇದೆ. ಈಗಾಗಲೇ ತೆರಿಗೆ ಹೆಚ್ಚಳದ ಬಗ್ಗೆ ಸಂಬಂಧಪಟ್ಟ ಹಣಕಾಸು ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಸಂದೇಶಗಳ ಮೂಲಕ ಮಾಹಿತಿಗಳನ್ನು ರವಾನಿಸುತ್ತಿವೆ.

ಚಿನ್ನ ತುಟ್ಟಿ

ಚಿನ್ನ ತುಟ್ಟಿ

ಜಿಎಸ್ಟಿ(GOODS AND SERVICES TAX) ಮಂಡಳಿ ಚಿನ್ನದ ಮೇಲಿನ ದರಗಳನ್ನು ಪರಿಷ್ಕರಿಸಿದ್ದು, ಜಿಎಸ್ಟಿಯಲ್ಲಿ ಶೇ. 3ರಷ್ಟು ತೆರಿಗೆ ದರ ನಿಗದಿ ಪಡಿಸಿದೆ. ಆದರೆ ಪ್ರಸ್ತುತ ಚಿನ್ನದ ಮೇಲೆ ಶೇ. 2ರಷ್ಟು ತೆರಿಗೆ ಇದೆ. ಶೇ. 3 ರಷ್ಟು ತೆರಿಗೆ ದರ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ಏರಿಕೆಯಾಗುವುದು ಸಹಜ. ಇದು ಪ್ರತಿ ಗ್ರಾಂಗೆ ಅಂದಾಜು 30-70 ರೂಪಾಯಿವರೆಗೂ ಬೆಲೆ ಏರಿಕೆಯಾ

ವಾಹನ ಉದ್ಯಮ

ವಾಹನ ಉದ್ಯಮ

ಜಿಎಸ್ಟಿ ಹೊಸ ನಿಯಮ ವಾಹನ ಉದ್ಯಮದಾರರಿಗೆ, ಗ್ರಾಹಕರಿಗೆ ಸಿಹಿಕಹಿಗಳೆರಡರ ಅನುಭವ ನೀಡಲಿದೆ ಎನ್ನುವುದು ತಜ್ಞರ ಅಭಿಮತ.
ಜುಲೈ 1ರಿಂದ ಜಿಎಸ್ಟಿ ಜಾರಿ ನಂತರ ಐಷಾರಾಮಿ ಕಾರುಗಳು, ಎಸ್‌ಯುವಿಗಳ ಬೆಲೆಗಳು ಇಳಿಕೆ ಕಂಡರೆ, ಸಣ್ಣ ಪ್ರಯಾಣಿಕ ವಾಹನಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಲಿದೆ. ಹೈಬ್ರಿಡ್‌ ಕಾರುಗಳು ಬೆಲೆ ಕೊಂಚ ಹೆಚ್ಚಾಗಲಿದೆ.

ಸಿಮೆಂಟ್ ಉದ್ಯಮ

ಸಿಮೆಂಟ್ ಉದ್ಯಮ

ಜಿಎಸ್ಟಿ ಜಾರಿ ಸಿಮೆಂಟ್ ತಯಾರಿಕಾ ಉದ್ಯಮ ವಲಯಕ್ಕೆ ಹಾಗೂ ಗ್ರಾಹಕರಿಗೆ ಸ್ವಲ್ಪ ಪ್ರಮಾಣದಲ್ಲಿ ಲಾಭದಾಯಕ ಎನಿಸಲಿದೆ.
ಪ್ರಸ್ತುತ ಸಿಮೆಂಟ್ ಮೇಲೆ ಶೇ. 29-31ರವರೆಗೆ ತೆರಿಗೆ ವಿಧಿಸಲ್ಪಡುತ್ತಿದ್ದು, ಜುಲೈ 1ರಿಂದ ಶೇ. 28ಕ್ಕೆ ಇಳಿಕೆ ಆಗಲಿದೆ.

ರಿಯಲ್‌ ಎಸ್ಟೇಟ್‌ ಉದ್ಯಮ

ರಿಯಲ್‌ ಎಸ್ಟೇಟ್‌ ಉದ್ಯಮ

ನೂತನ ಜಿಎಸ್ಟಿ ನಿಯಮಗಳಡಿಯಲ್ಲಿ ಲಭ್ಯವಿರುವ ಇನ್‌ಪುಟ್‌ ತೆರಿಗೆ ಕ್ರೆಡಿಟ್‌ನಿಂದಾಗಿ ರಿಯಲ್‌ ಎಸ್ಟೇಟ್‌ ಉದ್ಯಮಕ್ಕೆ ಪ್ರಯೋಜನವಾಗುವ ಸಾಧ್ಯತೆ ಇದೆ. ಪ್ರಸ್ತುತ ಶೇ. 11-18ರವರೆಗೆ ತೆರಿಗೆ ಇದ್ದು, ತೆರಿಗೆ ಪ್ರಮಾಣ ಗುತ್ತಿಗೆ ಸ್ವರೂಪ ಮತ್ತು ಕಾಮಗಾರಿಯಲ್ಲಿ ಬಳಸುವ ಸರಕುಗಳ ಮೇಲಿನ ಸೇವಾ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಜಿಎಸ್ಟಿ ಅಡಿಯಲ್ಲಿ ಇಡೀ ಗುತ್ತಿಗೆಗೆ ಶೇ. 18ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಪ್ರಸ್ತುತ, ಬಿಲ್ಡರ್ ಗಳು ಪಾವತಿಸುತ್ತಿರುವ ತೆರಿಗೆಗಳು ಹೀಗಿವೆ:
- ಕಚ್ಚಾ ಸಾಮಗ್ರಿ ಮತ್ತು ಅಬಕಾರಿ: 12.5%
- ನಿರ್ಮಾಣ ವಸ್ತುಗಳ ಮೇಲೆ ವ್ಯಾಟ್:
12.5-14.5%
- ನಿರ್ಮಾಣದ ಮೇಲಿನ ಸೇವಾ ತೆರಿಗೆ: 4.5%
- ಕಾಂಪೊಜಿಷನ್ ಯೋಜನೆಯ ಅಡಿಯಲ್ಲಿ ವ್ಯಾಟ್: 1-2%

ಫ್ಯಾಷನ್

ಫ್ಯಾಷನ್

ಬಟ್ಟೆಗಳೆಂದರೆ ಎಲ್ಲರಿಗೂ ಇಷ್ಟ. ಹಾಗಂತ ಹೆಚ್ಚೆಚ್ಚು ಬಟ್ಟೆ ಖರೀದಿಸಿದರೆ ಹೆಚ್ಚು ತೆರಿಗೆ ಗ್ಯಾರಂಟಿ. ಪ್ಯಾಷನ್ ಕ್ಷೇತ್ರ ಸಿಹಿಕಹಿಗಳ ಅನುಭವ ನೀಡಲಿದೆ. ರೂ. 1000 ಕ್ಕಿಂತ ಕಡಿಮೆ ಬೆಲೆಯ ಬಟ್ಟೆಗಳ ಮೇಲೆ ಶೇ. 5ರಷ್ಟು ಮತ್ತು ರೂ. 1000ಕ್ಕಿಂತ ಹೆಚ್ಚಿನ ಬೆಲೆಯ ಜವಳಿ ಉತ್ಪನ್ನಗಳ ಮೇಲೆ ಶೇ. 12ರಷ್ಟು ತೆರಿಗೆ ನಿಗದಿ ಪಡಿಸಲಾಗಿದೆ.

ದೂರಸಂಪರ್ಕ ಸೇವೆ

ದೂರಸಂಪರ್ಕ ಸೇವೆ

ಜಿಎಸ್ಟಿ ಜಾರಿ ನಂತರ ದೂರಸಂಪರ್ಕ ಸೇವೆಗಳು ದುಬಾರಿಯಾಗಲಿದೆ. ಪ್ರಸ್ತುತ ಮೊಬೈಲ್‌, ಇಂಟರ್ನೆಟ್ ಸೇವೆಗಳ ಮೇಲೆ ಶೇ. 15ರಷ್ಟು ತೆರಿಗೆ ಇದ್ದು, ಶೇ. 18ಕ್ಕೆ ಹೆಚ್ಚಾಗಲಿದೆ.

ವಿದ್ಯುತ್ ದರ ಯಥಾಸ್ಥಿತಿ

ವಿದ್ಯುತ್ ದರ ಯಥಾಸ್ಥಿತಿ

ವಿದ್ಯುತ್ ದರದ ಮೇಲೆ ಜಿಎಸ್ಟಿ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರತಿ ಯೂನಿಟ್ ಮೇಲೆ ಒಂದೆರಡು ಪೈಸೆಯಷ್ಟು ವ್ಯತ್ಯಾಸ ಆಗಬಹುದು. ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಯಾರೂ ಕೂಡ ಆತಂಕ ವ್ಯಕ್ತಪಡಿಸಿಲ್ಲ. ಅಲ್ಲದೇ ಮುಂದೂಡಬೇಕೆಂದು ಯಾರೂ ಒತ್ತಾಯ ಮಾಡಿಲ್ಲ ಎಂದು ಕೇಂದ್ರ ಇಂಧನ ಸಚಿವ ಪಿಯುಷ್ ಗೋಯಲ್ ಹೇಳಿದ್ದಾರೆ.

ರೈಲು ದರಗಳಲ್ಲಿ ಏರಿಕೆ

ರೈಲು ದರಗಳಲ್ಲಿ ಏರಿಕೆ

ರೈಲು ಪ್ರಯಾಣಿಕರು ಎಸಿ ಮತ್ತು ಪ್ರಥಮ ದರ್ಜೆ ಪ್ರಯಾಣಗಳ ಮೇಲೆ ಸಲ್ಪ ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ. ಜಿಎಸ್ಟಿ ಅನುಷ್ಠಾನದ ನಂತರ ಟಿಕೆಟ್ ಶುಲ್ಕದ ಮೇಲಿನ ಸೇವಾ ತೆರಿಗೆ ಶೇ. 4.5 ರಿಂದ ಶೇ. 5ಕ್ಕೆ ಏರಿಕೆಯಾಗಲಿದೆ. ಎಸಿ ಮತ್ತು ಪ್ರಥಮ ದರ್ಜೆಯ ಪ್ರಯಾಣ ದರಗಳಲ್ಲಿ ಮಾತ್ರ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಹಾಗಾಗಿ ಟಿಕೆಟ್ ದರ ರೂ. 2,000 ಆಗಿದ್ದರೆ, ಮುಂದಿನ ತಿಂಗಳಲ್ಲಿ ಪ್ರಯಾಣಿಕರು ರೂ. 2,010ರಷ್ಟು ಪಾವತಿಸಬೇಕಾಗುತ್ತದೆ.

ಹಕ್ಕುತ್ಯಾಗ

ಹಕ್ಕುತ್ಯಾಗ

ಈ ಲೇಖನವನ್ನು ಖರೀದಿಸಲು, ಇನ್ನೀತರ ಹಣಕಾಸು ಸಾಧನಗಳಲ್ಲಿ ಅಥವಾ ಭದ್ರತೆಗಳಲ್ಲಿ ಮಾರಾಟ ಮಾಡಲು ಆಗುವುದಿಲ್ಲ. ಈ ಲೇಖನದ ಮಾಹಿತಿ ಆಧಾರದಲ್ಲಿ ಉಂಟಾಗುವ ನಷ್ಟ ಅಥವಾ ಹಾನಿಗೆ ಸಂಬಂಧಿಸಿದಂತೆ ಗ್ರೇನಿಯಂ ಇನ್ಫರ್ಮೇಶನ್ ಟೆಕ್ನಾಲೋಜಿಸ್ ಪ್ರೈ.ಲಿ, ಅದರ ಅಂಗಸಂಸ್ಥೆಗಳು ಮತ್ತು ಸಹವರ್ತಿಗಳು ಜವಾಭ್ಧಾರಿ ಆಗಿರುವುದಿಲ್ಲ.

English summary

GST effect: What are the benefits? What's expensive and what's cheaper?

If GST becomes a reality, a few companies that face fierce competition from the unorganized sector would benefit. This is because the unorganized sector would have to start paying taxes. Here are 7 companies that would benefit.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X