ದೇಶದ ಮೂರನೇ ಅತಿದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಸಂಸ್ಥೆ 'ಬಜಾಜ್ ಆಟೋ' ತನ್ನ ಬೈಕ್ ಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ.
ಯಾರಿಗುಂಟು ಯಾರಿಗಿಲ್ಲ, ಬೈಕ್ ಪ್ರಿಯರಿಗಂತು ಇದು ಸಂತಸದ ಸುದ್ದಿ...! ಜಿಎಸ್ಟಿ ಹಲವು ಕ್ಷೇತ್ರಗಳ ಮೇಲೆ ಭಾರೀ ಪ್ರಭಾವ ಬೀರಿದ್ದು, ಕೆಲ ಕಂಪನಿಗಳು ಈಗಾಗಲೇ ಗೃಹೋಪಯೋಗಿ, ಎಲೆಕ್ಟ್ರಾನಿಕ್, ಕಾರುಗಳ ಮೇಲೆ ಭರ್ಜರಿ ರಿಯಾಯಿತಿಗಳನ್ನು ಘೋಷಣೆ ಮಾಡಿವೆ.
ಇದೀಗ ಗ್ರಾಹಕರು ಬೈಕ್ ಗಳ ಮೇಲೆ ರಿಯಾಯಿತಿ ಪಡೆಯುವ ಸರದಿ..!
ದೇಶದ ಮೂರನೇ ಅತಿದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಸಂಸ್ಥೆ 'ಬಜಾಜ್ ಆಟೋ' ತನ್ನ ಬೈಕ್ ಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ. (ಜಿಎಸ್ಟಿ ಮಹಿಮೆ..! ಕಾರುಗಳ ಮೇಲೆ ಭಾರೀ ಡಿಸ್ಕೌಂಟ್)
ಡಿಸ್ಕೌಂಟ್ ಎಷ್ಟು?
ಬಜಾಜ್ ಸಂಸ್ಥೆ ತನ್ನ ಮೋಟಾರ್ ಬೈಕ್ ಗಳ ಮೇಲೆ ರೂ. 4,500ರ ವರೆಗೆ ಡಿಸ್ಕೌಂಟ್ ಘೋಷಿಸಿದೆ. ಬೈಕ್ ಮಾಡೆಲ್ ಮತ್ತು ರಾಜ್ಯಗಳನ್ನು ಆಧರಿಸಿ ರಿಯಾಯಿತಿ ಮತ್ತು ಉಳಿತಾಯದ ಪ್ರಮಾಣ ನಿರ್ಧಾರವಾಗಲಿದೆ ಎಂದು ಕಂಪನಿ ಹೇಳಿದೆ.
ಬುಕಿಂಗ್ ಆಫರ್ ಅವಧಿ
ಗ್ರಾಹಕರು ಜೂನ್ 14 ರಿಂದ 30ರ ನಡುವಿನ ಅವಧಿಯಲ್ಲಿ ಅಧಿಕೃತ ಬಜಾಜ್ ಆಟೋ ವಿತರಕರಲ್ಲಿ ಉಳಿತಾಯದ ಬಗ್ಗೆ ತಿಳಿದುಕೊಂಡು ಬುಕಿಂಗ್ ಮಾಡಬಹುದು. ರಾಜ್ಯಗಳಿಗೆ ಮತ್ತು ಬೈಕ್ ಮಾಡೆಲ್ ಗಳಿಗನುಸಾರವಾಗಿ ಡಿಸ್ಕೌಂಟ್ ಭಿನ್ನವಾಗಿರಲಿದೆ.
ಆಫರ್ ನೀಡುತ್ತಿರುವ ಮೊದಲ ಕಂಪನಿ
ಜಿಎಸ್ಟಿ ಅನುಷ್ಠಾನದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಉಳಿತಾಯದ ಲಾಭ ಒದಗಿಸುವುದು ಸೂಕ್ತವೆಂದು ಭಾವಿಸಿದ್ದೇವೆ. ಜಿಎಸ್ಟಿ ಅನುಷ್ಠಾನಕ್ಕಿಂತ ಮುಂಚಿತವಾಗಿಯೇ ಗ್ರಾಹಕರಿಗೆ ಆಫರ್ ನೀಡುತ್ತಿರುವ ಮೊದಲ ಕಂಪನಿ ಬಜಾಜ್ ಆಟೋ ಎಂದು ಕಂಪನಿ ಮೂಲಗಳು ತಿಳಿಸಿವೆ.
ಆಫರ್ ಗೆ ಕಾರಣ
ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(goods and services tax) ಜಾರಿ ಬರುತ್ತಿರುವುದರಿಂದ ಅದರ ತತ್ ಕ್ಷಣದ ಪರಿಣಾಮವಾಗಿ ಬಜಾಜ್ ಆಟೋ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಜಿಎಸ್ಟಿ ಅಡಿಯಲ್ಲಿ ದ್ವಿಚಕ್ರ ವಾಹನಗಳ ತೆರಿಗೆ ದರ ಶೇ. 28ಕ್ಕೆ ಕಡಿಮೆಯಾಗಲಿದೆ. ಪ್ರಸ್ತುತ ಶೇ. 30ರಷ್ಟು ತೆರಿಗೆ ದರವಿದೆ. ಜಿಎಸ್ಟಿ ಎಫೆಕ್ಟ್: ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ 40% ಡಿಸ್ಕೌಂಟ್!
More From GoodReturns

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ



Click it and Unblock the Notifications