For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಮಹಿಮೆ..! ಮಾರುತಿ, ಹುಂಡೈ, ಜಾಗ್ವಾರ್, ಹೊಂಡಾ, ಫೊರ್ಡ್, ಆಡಿ, ಟಾಟಾ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್!!

ಯಾರಿಗುಂಟು ಯಾರಿಗಿಲ್ಲ..! ವಾಹನ ಪ್ರಿಯರಿಗಂತೂ ಸಂತಸದ ಸುದ್ದಿ.. ದೀಪಾವಳಿ ಹಬ್ಬದ ಮುನ್ನವೇ ದೀಪಾವಳಿಯ ಸಂಭ್ರಮ..! ಹಲವು ಪ್ರಮುಖ ಕಂಪನಿಗಳು ಭರ್ಜರಿ ಆಫರ್ ಗಳನ್ನು ಘೋಷಿಸಿವೆ.

By Siddu
|

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(GST) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರು, ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪಾದಕರು ಭಾರೀ ಡಿಸ್ಕೌಂಟ್ ನೀಡಲು ಮುಂದಾಗಿದ್ದಾರೆ.

ಯಾರಿಗುಂಟು ಯಾರಿಗಿಲ್ಲ..! ವಾಹನ ಪ್ರಿಯರಿಗಂತೂ ಸಂತಸದ ಸುದ್ದಿ.. ದೀಪಾವಳಿ ಹಬ್ಬದ ಮುನ್ನವೇ ದೀಪಾವಳಿಯ ಸಂಭ್ರಮ..! ಹಲವು ಪ್ರಮುಖ ಕಂಪನಿಗಳು ಭರ್ಜರಿ ಆಫರ್ ಗಳನ್ನು ಘೋಷಿಸಿದ್ದು, ಯಾವ ಕಂಪನಿಯ ಯಾವ ಕಾರುಗಳ ಮೇಲೆ ಎಷ್ಟು ಡಿಸ್ಕೌಂಟ್ ಇದೆಯೆಂಬುದನ್ನು ನೋಡೋಣ...

ಯಾವ ಕಂಪನಿ ಕಾರುಗಳು?

ಯಾವ ಕಂಪನಿ ಕಾರುಗಳು?

ಜಿಎಸ್ಟಿ ಎಫೆಕ್ಟ್: ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ 40% ಡಿಸ್ಕೌಂಟ್!ಜಿಎಸ್ಟಿ ಎಫೆಕ್ಟ್: ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ 40% ಡಿಸ್ಕೌಂಟ್!

ಮಾರುತಿ ಸುಜುಕಿ

ಮಾರುತಿ ಸುಜುಕಿ

ದೇಶದ ಪ್ರಮುಖ ವಾಹನ ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ವಿವಿಧ ಮಾದರಿಯ ಕಾರುಗಳ ಮೇಲೆ 10-35 ಸಾವಿರದವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ. 25 ಸಾವಿರ ಎಕ್ಸಚೇಂಜ್ ಬೋನಸ್ ಇರುತ್ತದೆ. ಸ್ವಿಪ್ಟ್, ಆಲ್ಟೊ 800, ಆಲ್ಟೊ ಕೆ 10, ವ್ಯಾಗನ್ ಆರ್, ಸೆಲೆರಿಯೊ, ಎರ್ಟಿಗಾ ಮಾಡೆಲ್ ಕಾರುಗಳು ಒಳಗೊಂಡಿವೆ. ಬಲೆನೊ, ಇಗ್ನಿಸ್ ಮತ್ತು ಎಸ್-ಕ್ರಾಸ್, ಸಿಯಾಜ್ ಮತ್ತು ಡಿಜೈರ್ ಮೇಲೆ ಎಕ್ಸಚೆಂಜ್ ಬೋನಸ್ ಇರುವುದಿಲ್ಲ.

ಹುಂಡೈ

ಹುಂಡೈ

ಹುಂಡೈ ಕಂಪನಿಯ ವಿತರಕರು ವರ್ನಾ, ಇಯಾನ್, 2017 ಗ್ರ್ಯಾಂಡ್ i10, ಎಕ್ಸ್ಸೆಂಟ್, ಎಲೈಟ್ i20 ಮಾದರಿಯ ಕಾರುಗಳ ಮೇಲೆ 15-30 ಸಾವಿರದವರೆಗೆ ಡಿಸ್ಕೌಂಟ್ ನೀಡುತ್ತಿದ್ದಾರೆ. ಸಾಂಟಾ ಫೆ ಮತ್ತು ಕ್ರೆಟಾ ಮೇಲೆ ಕ್ಯಾಶ್ ಬೋನಸ್ ಮತ್ತು ಎಕ್ಸಚೇಂಜ್ ಬೋನಸ್ ಆಫರ್ ಮಾಡುತ್ತಿಲ್ಲ.

ಆಡಿ(Audi)

ಆಡಿ(Audi)

ಆಡಿ ಕಂಪನಿಯು ಜೂನ್ 30 ರವರೆಗೆ ಭಾರತದಲ್ಲಿ ತನ್ನ ಹಲವು ಮಾಡೆಲ್ ಗಳ ಬೆಲೆಯನ್ನು 10 ಲಕ್ಷ ರೂಪಾಯಿಗಳವರೆಗೆ ಕಡಿತಗೊಳಿಸಿದೆ. ಕಂಪನಿಯು A3 ಸೆಡಾನ್ ನಿಂದ A8 ಪ್ರೀಮಿಯಂ ಸೆಡಾನ್ ವ್ಯಾಪ್ತಿವರೆಗಿನ, ಪ್ರಸ್ತುತ 30.5 ಲಕ್ಷ ಮತ್ತು ರೂ .1.15 ಕೋಟಿ ನಡುವೆ ಬೆಲೆಬಾಳುವ ಕಾರುಗಳನ್ನು ಮಾರಾಟ ಮಾಡುತ್ತಿದೆ. ಡೀಲರ್ ಮೂಲಗಳ ಪ್ರಕಾರ, ಭಾರತದಲ್ಲಿ ಮಾರಾಟವಾಗುವ ಆಡಿ ವಾಹನಗಳ ಬೆಲೆಗಳಲ್ಲಿನ ಕಡಿತವು 50,000 ದಿಂದ 1.5 ಲಕ್ಷವರೆಗೆ ಇರಲಿದೆ.

ಮರ್ಸಿಡಿಸ್-ಬೆಂಜ್

ಮರ್ಸಿಡಿಸ್-ಬೆಂಜ್

ಮತ್ತೊಂದೆಡೆ, ಮರ್ಸಿಡಿಸ್ ಬೆಂಝ್ ಜುಲೈ ತಿಂಗಳಲ್ಲಿ ಜಿಎಸ್ಟಿ ಜಾರಿಯಾಗುವ ಹಿನ್ನೆಲೆಯಲ್ಲಿ ಭಾರತದಲ್ಲಿ ಉತ್ಪಾದಿಸುವ ತನ್ನ ವಾಹನಗಳ ಬೆಲೆಯನ್ನು 1.4 ಲಕ್ಷದಿಂದ 7 ಲಕ್ಷ ರೂ. ಗಳಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ. ಸಿಎಲ್ಎ ಸೆಡಾನ್, SUVs GLC, GLS, C-Class, E-class, S-class ಮತ್ತು ಮೇಬ್ಯಾಚ್ S 500 ಹೀಗೆ ಒಂಬತ್ತು ಮಾಡೆಲ್ ಕಾರುಗಳನ್ನು ಭಾರತದಲ್ಲಿ ಉತ್ಪಾದಿಸುತ್ತಿದ್ದು, ಇವು 32 ಲಕ್ಷ ಮತ್ತು ರೂ. 1.87 ಕೋಟಿ (ದೆಹಲಿಯ ಎಕ್ಸ್ ಶೋ ರೂಂ) ನಡುವೆ ಬೆಲೆಬಾಳುತ್ತವೆ.

ಜಾಗ್ವಾರ್

ಜಾಗ್ವಾರ್

ಟಾಟಾ ಮೋಟಾರ್ಸ್ ಸ್ವಾಮ್ಯದ ಜಾಗ್ವಾರ್ ಲ್ಯಂಡ್ ರೋವರ್(JLR) ಆಯ್ದ ಮಾದರಿಗಳ ಬೆಲೆಯನ್ನು 10.9 ಲಕ್ಷ ರೂ.ಗೆ ತಗ್ಗಿಸಿದೆ. ಜುಲೈನಲ್ಲಿ ಜಿಎಸ್ಟಿ ಅಡಿಯಲ್ಲಿ ಹೊಸ ತೆರಿಗೆ ದರಗಳ ಲಾಭವನ್ನು ನೀಡಿದೆ.
ರಾಜ್ಯದಿಂದ ರಾಜ್ಯಕ್ಕೆ ಡಿಸ್ಕೌಂಟ್ ವ್ಯತ್ಯಾಸವಾಗಲಿದ್ದು, ಜಾಗ್ವಾರ್ XE ಸೆಡಾನ್ ಮೇಲೆ ರೂ. 2 ಲಕ್ಷದಿಂದ 5.7 ಲಕ್ಷದವರೆಗೆ ಮತ್ತು ಜಾಗ್ವಾರ್ XJ ಮೇಲೆ ರೂ. 4 ಲಕ್ಷದಿಂದ 10.9 ಲಕ್ಷದವರೆಗೆ ಪ್ರಯೋಜನ ಸಿಗಲಿದೆ. ಲ್ಯಾಂಡ್ ರೋವರ್ ಮಾಡೆಲ್ಗಳಲ್ಲಿ- ಡಿಸ್ಕವರಿ ಸ್ಪೋರ್ಟ್ ಮತ್ತು ರೇಂಜ್ ರೋವರ್ ಇವೊಕ್ ಮೇಲೆ ರೂ. 3.3 ಲಕ್ಷದಿಂದ ರೂ. 7.5 ಲಕ್ಷಕ್ಕೆ ಪ್ರಯೋಜನ ಸಿಗಲಿದೆ. ಪ್ರಸ್ತುತ ಈ ಮಾಡೆಲ್ ಗಳ ಬೆಲೆ 37.25 ಲಕ್ಷ ಮತ್ತು 1.02 ಕೋಟಿ (ದೆಹಲಿಯ ಎಕ್ಸ್ ಶೋ ರೂಂ) ನಡುವೆ ಇದೆ.

ಹೊಂಡಾ

ಹೊಂಡಾ

ಹೊಂಡಾ ವಿತರಕರು ಬ್ರಿಯೋ, ಅಮೇಜ್, ಜಾಝ್ ಮತ್ತು BRVಗಳಂತಹ ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದ್ದು, WRV ಮತ್ತು 2017 ಹೋಂಡಾ ಸಿಟಿ ಮೇಲೆ ಯಾವುದೇ ರಿಯಾಯಿತಿಗಳಿಲ್ಲ. ವಿತರಕರು 20-25 ಸಾವಿರದವರೆಗೆ ಎಕ್ಸಚೇಂಜ್ ಬೋನಸ್ ಮತ್ತು ನಗದು ರಿಯಾಯಿತಿಗಳನ್ನು ನೀಡುತ್ತಿದ್ದಾರೆ.

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್ ವಿತರಕರು ಬೋಲ್ಟ್(bolt) ಮತ್ತು ಝೆಸ್ಟ್(zest)ಗಳ ಮೇಲೆ 20 ರಿಂದ 25 ಸಾವಿರವರೆಗೆ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಹೊಸದಾಗಿ ಬಿಡುಗಡೆಯಾದ ಟೈಗರ್ ಮತ್ತು ಟಿಯಾಗೊ ಮೇಲೆ ಯಾವುದೇ ರಿಯಾಯಿತಿ ನೀಡುತ್ತಿಲ್ಲ.

ಫೋರ್ಡ್

ಫೋರ್ಡ್

ಫೋರ್ಡ್ ವಿತರಕರು ಫಿಗೊ, ಸೆಡಾನ್, ಆಸ್ಪೈರ್ ಮತ್ತು ಇಕೋಸ್ಪೋರ್ಟ್ ಮಾಡೆಲ್ ಗಳ ಮೇಲೆ ನಗದು ರಿಯಾಯಿತಿ 10,000 ರೂ. ಮತ್ತು ಎಕ್ಸಚೇಂಜ್ ಬೋನಸ್ ರೂ. 15 ಸಾವಿರ ರಿಯಾಯಿತಿಯನ್ನು ನೀಡುತ್ತಿದ್ದಾರೆ.

ವೋಕ್ಸ್ವ್ಯಾಗನ್

ವೋಕ್ಸ್ವ್ಯಾಗನ್

ವೋಕ್ಸ್ವ್ಯಾಗನ್ ವಿತರಕರು ಪೋಲೋ, ಅಮಿಯೋ ಮತ್ತು ವೆಂಟೊ ಕಾರುಗಳ ಮೇಲೆ 30,000 - 40,000 ರವರೆಗೆ ರಿಯಾಯಿತಿ ನೀಡುತ್ತಿದ್ದಾರೆ. ಇರುತ್ತದೆ. ಹೊಸದಾಗಿ ಬಿಡುಗಡೆಯಾದ ಟೈಗನ್(tiguan) ಮೇಲೆ ಯಾವುದೇ ರಿಯಾಯಿತಿ ಇಲ್ಲ.

40% ಡಿಸ್ಕೌಂಟ್

40% ಡಿಸ್ಕೌಂಟ್

ಈಗಾಗಲೇ ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನ ಕಂಪನಿಗಳು ಶೇ. 40ರಷ್ಟು ಭಾರೀ ರಿಯಾಯಿತಿಯನ್ನು ಘೋಷಿಸಿವೆ. ಎಲೆಕ್ಟ್ರಾನಿಕ್ ಕಂಪನಿಗಳಾದ ಸ್ಯಾಮ್ಸಂಗ್, ಹಿಟಾಚಿ, ಪ್ಯಾನಾಸಾನಿಕ್, ವೀಡಿಯೋಕಾನ್ ನಂತಹ ಪ್ರಮುಖ ಕಂಪನಿಗಳು ರಿಯಾಯಿತಿಗಳನ್ನು ನೀಡಲು ಮುಂದಾಗಿದ್ದು, ರೆಫ್ರಿಜರೇಟರ್, ಏರ್ ಕಂಡಿಷನರ್ಸ್, ಟೆಲಿವಿಷನ್ ಸೆಟ್ ಗಳು ಮತ್ತು ವಾಷಿಂಗ್ ಮೆಷಿನ್ ಮೇಲೆ ಅವುಗಳ ಬೆಲೆಗಳಿಗೆ ಅನುಗುಣವಾಗಿ ಚಿಲ್ಲರೆ ವ್ಯಾಪಾರಿಗಳು ಬೆಲೆ ಕಡಿತಗೊಳಿಸುತ್ತಿದ್ದಾರೆ.

ರಿಯಾಯಿತಿ ಏಕೆ?

ರಿಯಾಯಿತಿ ಏಕೆ?

ಪ್ರಸ್ತುತ ಇಡೀ ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯದ್ದೆ ಚರ್ಚೆ ಜೋರಾಗಿದ್ದು, ಜಿಎಸ್ಟಿ ಪರಿಣಾಮಗಳ ಮಹಿಮೆ ಅನೇಕ ಕ್ಷೇತ್ರಗಳಿಗೆ ತಟ್ಟಿದೆ. ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(gst) ಜಾರಿ ಬರುತ್ತಿರುವುದರಿಂದ ವಾಹನ, ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ಉತ್ಪನ್ನಗಳನ್ನು ಡಿಸ್ಕೌಂಟ್ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಿವೆ. ಹಳೆಯ ದಾಸ್ತಾನುಗಳನ್ನು ಖಾಲಿ ಮಾಡಿ ಆ ಮೂಲಕ ಆಗಬಹುದಾದ ನಷ್ಟವನ್ನು ಕಡಿಮೆ ಮಾಡಿಕೊಳ್ಳುವುದು ಕಂಪನಿಗಳ ಉದ್ದೇಶ.

English summary

GST Impact: Maruti Suzuki, Audi, JLR, Isuzu offer heavy discounts in June

The Goods and Service Tax (GST) will come into effect from July 1, and with the changes in the tax regime, car-makers are offering heavy discounts to lure customers into buying a new car before the deadline.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X